- ರಾಘವೇಂದ್ರ ಅಡಿಗ ಎಚ್ಚೆನ್.

ಇಡೀ ಕಾವೇರಿ ಸೀಮೆನೆ ನಮ್ಮದು.... ನಮ್ದು ಚಿ ನಮ್ದು ತು ಯುವಕರ ಸಂಘ.. ಅಪ್ಪಟ ಮಂಡ್ಯ ಶೈಲಿಯ ಮಸ್ತ್ ಡ್ಯಾನ್ಸ್ ಬೀಟ್ ಇರೋ ... ಈ ಹಾಡು ಚಿತು ಚಿತ್ರದ ಟೈಟಲ್ ಹಾಡು.. ಈ ಹಾಡನ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲಾಂಚ್ ಮಾಡಿದ್ದಾರೆ...

ಡಾ. ಕಿರಣ್ ತೋಟಂಬೈಲ್ ಸಂಗೀತ, ಅರಸು ಅಂತಾರೆ ಸಾಹಿತ್ಯವಿರೋ ಈ ಹಾಡನ್ನ ಅಂಟೋನಿ ದಾಸನ್ ಹಾಡಿದ್ದಾರೆ. ಕೇಳೋದಕ್ಕೆ ಕ್ಯಾಚಿಯಾಗಿರೋ ಈ ಹಾಡು ನೋಡದಕ್ಕೂ ಅಷ್ಟೇ ಕಲರ್ ಫುಲ್ಲಾಗಿ‌ ಮೂಡಿ ಬಂದಿದೆ.. ಈ ಹಾಡು ಆಲಾಪನ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ.

ಚಿ.ತು ಯುವಕರ ಸಂಘ ‌ಶರಣ್ ಮತ್ತು ಚಿಕ್ಕಣ್ಣ ಅಭಿನಯಿಸಿದ್ದ ಅಧ್ಯಕ್ಷ ಚಿತ್ರದೊಳಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಕಟ್ಟಿದ ಸಂಘದ ಹೆಸರು ಚಿ.ತು ಯುವಕರ ಸಂಘ. ಅದೇ ಟೈಟಲ್ ನ ಇಟ್ಕೊಂಡು, ಅದೇ ಥೀಮ್ ಅದೇ ಫೀಲಲ್ಲಿ ಮಾಡಿರೋ ಸಿನ್ಮಾ ಚಿತು.

sangha

ಚಿತು ಸಿನಿಮಾವನ್ನ ಶಿವು ರಾಮನಗರ ನಿರ್ದೇಶಿಸಿದ್ದು, ಕಮರೊಟ್ಟುಚೆಕ್ ಪೋಸ್ಟ್ ಖ್ಯಾತಿಯ ಚೇತನ್ ರಾಜ್ ಫಿಲಂಸ್ನ ಚೇತನ್ ರಾಜ್ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಡಾ.ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಸದ್ಯ ಮೊದಲ ಹಾಡು ಬಿಡುಗಡೆ ಮಾಡಿ ಪ್ರಚಾರ ಆರಂಭಿಸಿರೋ ಚಿತು ಚಿತ್ರತಂಡ.. ಇದೇ ವರ್ಷ ಥಿಯೇಟರಿಗೆ ಬರೋ ಯೋಜನೆಯಲ್ಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ