- ರಾಘವೇಂದ್ರ ಅಡಿಗ ಎಚ್ಚೆನ್.

ಸಂಜು ವೆಡ್ಸ್ ಗೀತಾ – 2 ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್, ನಟ ಶ್ರೀನಗರ ಕಿಟ್ಟಿ ಅವರು ದೂರು ಕೊಟ್ಟಿದ್ದಾರೆ. ಫಿಲ್ಮ್ ಚೇಂಬರ್‌ಗೆ ದೂರು ಕೊಟ್ಟ ನಿರ್ದೇಶಕ ನಾಗಶೇಖರ್, ರಮ್ಯಾ, ತಮನ್ನಾ ಎಲ್ಲರಿಗೂ ನಾನು ಸಿನಿಮಾ ಮಾಡಿದ್ದೀನಿ. ಆದ್ರೆ ಇಂತಹ ಸಮಸ್ಯೆ ಯಾವ ನಟಿಯೂ ಕೊಟ್ಟಿಲ್ಲ ಎಂದಿದ್ದಾರೆ.
ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ರಿಲೀಸ್ ಆಗುವ ಮುನ್ನ ಮತ್ತು ನಂತರ ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಚಾರಕ್ಕೆ ರಚಿತಾ ಭಾಗಿಯಾಗಿಲ್ಲ. ಹಾಗಾಗಿ ನಟಿಯ ನಡೆಯ ವಿರುದ್ಧ ಚಿತ್ರತಂಡ ತಿರುಗಿ ಬಿದ್ದಿದೆ.
ನಮ್ಮ ಚಿತ್ರದ ನಾಯಕಿಯಾಗಿರುವ ರಚಿತಾ ರಾಮ್‌ ಅವರು ನಮ್ಮ ಸಿನಿಮಾ ಪ್ರಮೋಷನ್‌ಗೆ ಬರ್ತಿಲ್ಲ. ಈ ಹಿಂದೆಯೂ ಇದೇ ವಿಚಾರವಾಗಿ ಮನವಿ ಮಾಡಿದ್ದೆವು. ಆ ಮನವಿಗೂ ರಚಿತಾ ರಾಮ್‌ ಪುರಸ್ಕರಿಸಲಿಲ್ಲ. ಇನ್ನು ರಾಕ್‌ಲೈನ್‌ ವೆಂಕಟೇಶ್‌ ಅವರಿಗೂ ಈ ವಿಚಾರ ತಿಳಿಸಿದ್ವಿ. ಅವರು ಕೂಡ ಮಾತನಾಡಿ ವಿಫಲರಾಗಿದ್ದಾರೆ. ಪ್ರಮೋಷನ್‌ ಸಮಯದಲ್ಲಿ ರಚಿತಾ ರಾಮ್‌ ಅವರು ನಮ್ಮೊಂದಿಗೆ ಇರುವುದು ಧರ್ಮವಾಗಿತ್ತು. ಆದರೆ ಅವರು ಈವರೆಗೂ ನಮ್ಮ ಯಾವ ಮನವಿಗೂ ಸ್ಪಂದಿಸಲಿಲ್ಲ. ಅವರಿಂದ ಯಾವ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿಲ್ಲ, ಯಾವ ಪ್ರಮೋಷನ್‌ಗೂ ಬಂದಿಲ್ಲ. ಹಾಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂತಹ ಕಲಾವಿದರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶಿವಣ್ಣ, ಉಪೇಂದ್ರ, ಸುದೀಪ್ ಅಂತಹವರೇ ಈ ಸಿನಿಮಾವನ್ನು ಬೆಂಬಲಿಸಿದ್ದಾರೆ. ನಾವು ಪೇಮೆಂಟ್ ಕಮ್ಮಿ ಕೊಟ್ಟಿಲ್ಲ. ಹೀಗಾಗಿ ನಟಿ ರಚಿತಾ ರಾಮ್ ವಿರುದ್ಧ ಹಾಗೂ ಕನ್ನಡ ಸಿನಿಮಾಗೆ ಥಿಯೇಟರ್ ಸಮಸ್ಯೆ ಕುರಿತು ನಿರ್ದೇಶಕ ನಾಗಶೇಖರ್ ಮತ್ತು ನಟ ಶ್ರೀನಗರ ಕಿಟ್ಟಿ ಫಿಲ್ಮ್ ಚೇಂಬರ್ಗೆ ಕಂಪ್ಲೇಂಟ್ ಕೊಟ್ಟಿದ್ದಾರೆ.

WhatsApp-Image-2025-06-17-at-7.37.42-PM-768x642

ಕನ್ನಡ ಸಿನಿಮಾಗೆ ಬೆಳಗ್ಗೆ 9.30ಕ್ಕೆ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
‘ಇಲ್ಲಿಯ ತನಕ ಏನೂ ಸಮಸ್ಯೆ ಇಲ್ಲ. ನಾವು ಕೇಳಿದ ಸಮಯಕ್ಕೆ ಶೋ ಕೊಟ್ಟಿದ್ದಾರೆ. ಆದರೆ ನಾಡಿದ್ದು ಧನುಷ್, ಆಮಿರ್ ಖಾನ್ ಮುಂತಾದ ನಟರ ಸಿನಿಮಾಗಳು ಬಂದಾಗ ನಮ್ಮ ಸಿನಿಮಾಗೆ ಪ್ರೈಂ ಶೋಗಳನ್ನು ಬಿಟ್ಟು ಬೇರೆ ಸಮಯ ಕೊಡುತ್ತಾರೆ. ನಮಗೆ ಮಾರ್ನಿಂಗ್ ಶೋ ಕೊಡುತ್ತಾರೆ. ಬೆಳಗ್ಗೆ 9.30ಕ್ಕೆ ಶೋ ಕೊಟ್ಟರೆ ಜನ ಇನ್ನೂ ಎದ್ದಿರುವುದಿಲ್ಲ. ಆಗ ಯಾರು ಚಿತ್ರಮಂದಿರಕ್ಕೆ ಬರುತ್ತಾರೆ? ಹಾಗಾಗಿ ನಮಗೆ ಮೇಜರ್ ಶೋಗಳನ್ನು ಕೊಡಿ ಎಂಬುದು ನಮ್ಮ ಡಿಮ್ಯಾಂಡ್’ ಎಂದು ಶ್ರೀನಗರ ಕಿಟ್ಟಿ ಹೇಳಿದ್ದಾರೆ.
ಥಗ್ ಲೈಫ್ರಿಲೀಸ್ ಆದರೂ ನೋಡಬೇಡಿ
ಕಮಲ್ ಹಾಸನ್  ನಟನೆಯ ‘ಥಗ್ ಲೈಫ್’ ಸಿನಿಮಾ ಅನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅನುವು ಮಾಡಿಕೊಡಬೇಕು ಎಂದು ಸುಪ್ರೀಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಮುಂದಿನ ವಾರ ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ನಟ ಶ್ರೀನಗರ ಕಿಟ್ಟಿ, ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗಲಿದೆಯಂತೆ ಆದರೆ ಯಾವ ಕನ್ನಡಿಗರೂ ಆ ಸಿನಿಮಾ ನೋಡಬೇಡಿ ಎಂದು ಕರೆ ನೀಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ