ರಾಘವೇಂದ್ರ ಅಡಿಗ ಎಚ್ಚೆನ್.

ಪ್ರೇಕ್ಷಕರ ಕಾಯುವಿಕೆ ಕೊನೆಗೊಂಡಿದೆ. ಈ ಸಾಲಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘ಕೆಡಿ: ದಿ ಡೆವಿಲ್​​​’ನ ಟೀಸರ್ ಅನಾವರಣಗೊಂಡಿದೆ. ಮುಂಬೈನಲ್ಲಿ ಗ್ರ್ಯಾಂಡ್​​ ಟೀಸರ್​ ರಿಲೀಸ್​​ ಈವೆಂಟ್​ ನಡೆದಿದ್ದು, ಸ್ಟಾರ್​ ನಟರ ಸಿನಿಮಾ ತನ್ನ ಟೀಸರ್​ ಮೂಲಕ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ ಅದ್ಧೂರಿ ಮೇಕಿಂಗ್, ಆ್ಯಕ್ಷನ್​​, ಒಳ್ಳೆ ಕಂಟೆಂಟ್​ ಹೊಂದಿರುವ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ನಿರ್ಮಾಣಗೊಳ್ಳುತ್ತಿವೆ. ಪ್ಯಾನ್​ ಇಂಡಿಯಾ ಮಟ್ಟದಲ್ಲೇ ಹಲವು ಚಿತ್ರಗಳು ಬಿಡುಗಡೆ ಆಗೋ ಮೂಲಕ ಭಾರತದ ಕೋಟ್ಯಂತರ ಪ್ರೇಕ್ಷಕರನ್ನು ಮನರಂಜಿಸುತ್ತಿವೆ. ಅದರಂತೆ ‘ಕೆಡಿ’ ಕೂಡಾ ದೇಶದ ಮೂಲೆ ಮೂಲೆಗಳ ಸಿನಿಪ್ರಿಯರನ್ನು ತಲುಪಲು ಮುಂದಾಗಿದ್ದು, ಮೊದಲ ಹೆಜ್ಜೆಯಾಗಿ ಇಂದು ಮುಂಬೈನಲ್ಲಿ ಅದ್ಧೂರಿ ಟೀಸರ್​ ಲಾಂಚ್​ ಈವೆಂಟ್​ ನಡೆದಿದೆ. ನಿರ್ದೇಶಕ ಪ್ರೇಮ್​, ನಾಯಕ ನಟ ಧ್ರುವ ಸರ್ಜಾ, ನಟಿ ರೀಷ್ಮಾ ನಾಣಯ್ಯ ಸೇರಿ ತಂಡ ಕಾರ್ಯಕ್ರಮದಲ್ಲಿ ಉಪಸ್ಥಿತವಿತ್ತು.

20250710_151912

ಸಿನಿಮಾ ತನ್ನ ಸ್ಟಾರ್ ಕಾಸ್ಟ್​​ ಮತ್ತು ಸ್ಟಾರ್​ ಡೈರೆಕ್ಟರ್​​ ಸಲುವಾಗಿ ಸಖತ್​ ಸದ್ದು ಮಾಡುತ್ತಿದೆ. ಪ್ರೇಮ್​ ಆ್ಯಕ್ಷನ್​ ಕಟ್​ ಹೇಳುತ್ತಿರೋ ಚಿತ್ರದಲ್ಲಿ ಧ್ರುವ ಸರ್ಜಾ ಮುಖ್ಯಭೂಮಿಕೆಯಲ್ಲಿದ್ದರೆ, ಬಾಲಿವುಡ್​ ಖಳ ನಾಯಕ ಸಂಜಯ್​ ದತ್​ ಮತ್ತು ಬಾಲಿವುಡ್​ ಬೆಡಗಿ ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ಧ್ರುವ ಸರ್ಜಾ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದ್ದು, ಇಂದು ಮುಂಬೈನಲ್ಲಿ ಪಂಚ ಭಾಷೆಗಳಲ್ಲಿ ಟೀಸರ್​ ರಿಲೀಸ್​ ಆಗಿದೆ.

1200-675-24558811-thumbnail-16x9-newssssssssssssssssdtgdf

ನಿಮಿಷ 11 ಸೆಕೆಂಡುಗಳುಳ್ಳ ಟೀಸರ್​ ಭರ್ಜರಿ ಆ್ಯಕ್ಷನ್​​, ರಕ್ತಸಿಕ್ತ ದೃಶ್ಯಗಳಿಂದ ಕೂಡಿದೆ. ‘ಅವರಿಬ್ಬರದ್ದು ರಕ್ತ ಸಂಬಂಧ, ಆದ್ರೆ ಆ ರಕ್ತ ಹರಿತಿದ್ದದ್ದು ಮೈಯಲ್ಲಲ್ಲ….’ ಅನ್ನೋ ಡೈಲಾಗ್​​ ಕಂಪ್ಲೀಟ್​ ಮಾಸ್​​ ಸಿನಿಮಾದ ಒಂದು ಝಲಕ್​ ಕೊಟ್ಟಿದೆ. ಕೊನೆಗೆ, ಕಂಪ್ಲೈಟ್​​ ಕೊಡೋಕೆ ಬಂದಿದ್ದೀನಿ ಸರ್​, ಬರ್ಕೋ.. ತಲೆ ಸಿಕ್ಕಿದೆ, ಬಾಡಿ ಸಿಕ್ಕಿಲ್ಲ ಅನ್ನೋ ಡೈಲಾಗ್​ನೊಂದಿಗೆ ಟೀಸರ್​ ಮುಕ್ತಾಯಗೊಂಡಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಎಂದು ಟೀಸರ್​ ಕೊನೆಯಲ್ಲಿ ತಿಳಿಸಲಾಗಿದೆ.

20250710_152014

ಟೀಸರ್​ ರಿಲೀಸ್​​ಗೂ ಮುನ್ನ ಮಾತನಾಡಿದ್ದ ನಟಿ ರೀಷ್ಮಾ ನಾಣಯ್ಯ, ಫೈನಲಿ ಇಂದು ನಮ್ಮ ಕೆಡಿ ಟೀಸರ್​​ ರಿಲೀಸ್​​ ಆಗುತ್ತಿದ್ದು, ಉತ್ಸುಕಳಾಗಿದ್ದೇನೆ. ನಾನೂ ಕೂಡಾ ಇನ್ನೂ ಟೀಸರ್​ ನೋಡಿಲ್ಲ. ಮಧ್ಯಾಹ್ನ 12:30ಕ್ಕೆ ಎಲ್ಲರೂ ಒಟ್ಟಿಗೆ ನೋಡೋಣ. ನಿಮಗೆಲ್ಲರಿಗೂ ಟೀಸರ್​ ಇಷ್ಟವಾಗುತ್ತದೆ ಎಂದು ನಂಬಿದ್ದೇನೆ. ನಿಮ್ಮ ಪ್ರೀತಿ-ಆಶೀರ್ವಾದ ನನ್ನ ಇಡೀ ಟೀಮ್​ ಮೇಲಿರಲಿ ಎಂದು ಕೇಳಿಕೊಂಡಿದ್ದರು. ಕೆವಿಎನ್ ಪ್ರೊಡಕ್ಷನ್ಸ್​​ನ ವೆಂಕಟ್​ ಕೆ ನಾರಾಯಣ್​​ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ