ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿಯರೇ ಮೊದಲ ಗುರು ಎಂಬ ಸುಂದರವಾದ ಗಾದೆ ಮಾತೊಂದು ನಮ್ಮ ಕನ್ನಡದಲ್ಲಿದೆ ಅದಕ್ಕೆ ಪೂರಕವಾಗಿ ಕನ್ನಡ ಮಾಧ್ಯಮದಲ್ಲಿ ಓದಿಯೂ ಸಹಾ ಕರ್ತವ್ಯ ನಿಷ್ಠೆ ಮತ್ತು ಪರಿಶ್ರಮದಿಂದ ವಿಶ್ವವಿಖ್ಯಾತರಾಗಬಹುದು ಎನ್ನುವು

ಕುಂದಾಪುರ ಬಳಿಯ ಹಾಲಾಡಿ ಹತ್ತಿರದ ಹೈಕಾಡಿಯ ನಾಗೇರಿ ಊರಿನ ಹೆಸರಾಂತ ವೈದ್ಯರಾದ ಡಾ. ಸೂರ್ಯನಾರಾಯಣ ಆಚಾರ್ಯರು ಮತ್ತು ಕನ್ನಡದಲ್ಲಿ ಡಾಕ್ಟರೇಟ್ ಮಾಡಿ ಅಧ್ಯಾಪಕಿಯಾಗಿರುವ ಮತ್ತು ದಾಸ ಸಾಹಿತ್ಯದಲ್ಲಿ. ಅಪಾರವಾದ ಸೇವೆ ಸಲ್ಲಿಸಿರುವ ಡಾ. ಅನಸೂಯಾ ದೇವಿ ದಂಪತಿಗಳ ಹಿರಿಯ ಮಗಳಾಗಿ ಶೈಲಜಾ ಆವರ ಜನನವಾಗುತ್ತದೆ. b ಶೈಲಜಾ ಆವರಿಗೆ ಬಂದಿರುತ್ತದೆ. ಬಾಲ್ಯದಿಂದಲೂ ಬಹಳ ಮುದ್ದು ಮುದ್ದಾಗಿದ್ದ ಶೈಲಜಾ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲೇ ಕನ್ನಡಮಾಧ್ಯಮದಲ್ಲೇ ಮುಗಿಸಿ ಆದರಲ್ಲೂ ಬುಡ್ಡಿ ದೀಪದಲ್ಲೇ ಓದಿದ್ದ ಶೈಲಜಾ ಅವರು ವಿದ್ಯುತ್ ದೀಪವನ್ನು ಮೊಟ್ಟಮೊದಲದಾಗಿ ಕಂಡಿದ್ದೇ ಅವರ ಐದನೇ ತರಗತಿಯಲ್ಲಂತೇ. ನಂತರ ಪ್ರೌಢ ಶಿಕ್ಷಣಕ್ಕಾಗಿ ಕುಂದಾಪುರಕ್ಕೆ ಬರುತ್ತಾರೆ. ಇದುವರೆಗೂ 25ಕ್ಕೂ ಹೆಚ್ಚಿನ ಕನ್ನಡ ಪುಸ್ತಕಗಳನ್ನು ಬರೆದಿರುವ ಮತ್ತು ಸ್ವತಃ ಸಂಗೀತಗಾರ್ತಿಯಾಗಿರುವ ಅವರ ತಾಯಿ ಅದಲ್ಲದೇ ತಮ್ಮ ಮೂವರು ತಮ್ಮಂದಿರ ಜೊತೆ ಹುಟ್ಟೂರಿನಲ್ಲಿ ಮಳೆ ನಿಲ್ಲುತ್ತಿದ್ದಂತೆಯೇ ಪ್ರತೀ ವಾರಾಂತ್ಯದಲ್ಲಿ ನೋಡುತ್ತಿದ್ದ ಯಕ್ಷಗಾನದ ಪ್ರಸಂಗಗಳ ಮೂಲಕ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ಕನ್ನದ ಭಾಷೆಯ ಮೇಲೆ ಅಭಿಮಾನ ಮೂಡಿದ್ದರೆ ನಂತರದ ತಮ್ಮ ಪ್ರೌಢ ಶಾಲೆಯಲ್ಲಿ ಅವರ ಕನ್ನಡ ಶಿಕ್ಷಕರಾದ ಶ್ರೀ ರಂಗಪ್ಪಯ್ಯ ಹೊಳ್ಳ ಮತ್ತು ಭಾಸ್ಕರ್ ಹೊಳ್ಳ ಅವರು ಅವರಿಗೆ ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿಸಿದ ಪರಿಣಾಮ ಅವರಿಗೆ ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಹಿಡಿತ ದೊರೆಯಿತು ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ ಒಂದು ಕಡೆ ವಿದ್ಯಾಭೂಷಣರ ಸಂಗೀತದ ಆಲಿಕೆ ಮತ್ತು ಮತ್ತೊಂದು ಕಡೆ ತಾಯಿಯ ಒತ್ತಾಸೆಯಿಂದ ಕನ್ನಡ ಸಾಹಿತ್ಯಗಳ ಓದು ಹೀಗೆ ಓದಿನ ಜೊತೆ ಜೊತೆಯಲ್ಲಿಯೇ ಪಠ್ಯೇತರ ಚಟುವಟಿಕೆಗಳೂ ಮುಂದುವರೆಯುತ್ತದೆ.

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯದಲ್ಲಿ ಓದಿ, ವಿಶ್ವವಿದ್ಯಾಲಯಕ್ಕೆ, ಆರ್ಟ್ಸ್ ವಿಭಾಗದಲ್ಲಿ ತೃತೀಯ ರ್ಯಾಂಕ್ ನೊಂದಿಗೆ ಪದವಿ ಪಡೆದ ನಂತರ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಗಳಿಸುವಾಗಲೇ ತಮ್ಮದೇ ಕಾಲೇಕಿನ ಹಿರಿಯ ವಿದ್ಯಾರ್ಥಿಯಾಗಿದ್ದ ಸಂತೋಷ್ ಅವರ ಪರಿಚಯವಾಗಿ, ಯಾವ ವಿದ್ಯಾಭೂಷಣ ಸ್ವಾಮಿಗಳ ಸಂಗೀತವನ್ನು ಕೇಳಿ ಬೆಳೆದಿದ್ದರೋ ಅದೇ ವಿದ್ಯಾಭೂಷಣರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಠಾಧಿಪತಿಗಳಗಿದ್ದಂತಹ ಸಂಧರ್ಭದಲ್ಲಿ ಅವರದ್ದೇ ಪೌರೋಹಿತ್ಯದಲ್ಲಿ ಅಂತರ್ಜಾತಿ ವಿವಾಹವಾಗುವ ಮೂಲಕ ಅವರ ಬದುಕಿನ ಮತ್ತೊಂದು ಮಜಲು ಆರಂಭವಾಗಿ, ಕರಾವಳಿ ಪ್ರದೇಶದಿಂದ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಬರುವಂತಾಗುತ್ತದೆ.

ಶೈಲಜಾ ಅವರ ಪತಿ ಸಂತೋಷ್ ಮತ್ತು ಅವರ ಕುಟುಂಬದವರೊಬ್ಬರು ಅದಾಗಲೇ ಮಾಧ್ಯಮದಲ್ಲಿ ಉನ್ನತ ಹುದ್ದೆಯಲ್ಲಿದ್ದದ್ದರಿಂದ ಅವರೆಲ್ಲರ ಉತ್ತೇಜನ ಮತ್ತು ಒತ್ತಾಸೆಯಿಂದ ಶೈಲಜಾ ಅವರು 1990ರಲ್ಲಿ ಬೆಂಗಳೂರು ದೂರದರ್ಶನಕ್ಕೆ ವಾರ್ತಾ ವಾಚನಕ್ಕಾಗಿ ಸಂದರ್ಶನಕ್ಕೆ ಹೋದಾಗ, ಅಲ್ಲಿಯವರು ವಾರ್ತಾವಾಚಕಿಯ ಬದಲಾಗಿ ಕಾರ್ಯಕ್ರಮಗಳ ಉದ್ಭೋಷಕಿಯಾಗಿ ಆಯ್ಕೆ ಆಗುವ ಮೂಲಕ ಅವರ ಕಿರುತೆರೆಯ ವೃತ್ತಿ ಜೀವನ ಆರಂಭವಾಗುತ್ತದೆ. ಆರಂಭದ ಮೂರ್ನಾಲ್ಕು ತಿಂಗಳುಗಳ ಕಾಲ ವೃತ್ತಿ ನಿರತ ತರಭೇತಿಯನ್ನು ಪಡೆದು ಉತ್ತಮ ಶರೀರ, ಶಾರೀರದ ಜೊತೆಗೆ ಕನ್ನಡ ಭಾಷೆಯ ಮೇಲಿನ ಹಿಡಿತದ ಜೊತೆ ಉಚ್ಚಾರಣೆಯಲ್ಲಿಯೂ ಬಹಳ ಸ್ಪಷ್ಟತೆ ಇದ್ದ ಕಾರಣ ಕೆಲವೇ ದಿನಗಳಲ್ಲಿ ಕನ್ನಡಿಗರ ಮನಸೂರೆಗೊಳ್ಳುತ್ತಾರೆ.





