ಶರತ್ ಚಂದ್ರ
ಕನ್ನಡತಿ ಮತ್ತು ಕರ್ಣ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಕಿರಣ್ ರಾಜ್ ಅವರ ಹೊಸ ಚಿತ್ರ 'ಶೇರ್ 'ಚಿತ್ರದ ಟ್ರೈಲರ್ ಇತ್ತೀಚೆಗೆ ಲಾಂಚ್ ಆಗಿದೆ.A2 ಮ್ಯೂಸಿಕ್ ನಲ್ಲಿ ಬಿಡುಗಡೆ ಆಗಿರುವ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ರತ್ನಮಂಜರಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ನಿರ್ದೇಶಕ ಪ್ರಸಿದ್ದ್ ತಮ್ಮ ಎರಡನೇ ಚಿತ್ರ 'ಭರ್ಜರಿ ಗಂಡು' ಮೂಲಕ ಚಾಕ್ಲೆಟ್ ಹೀರೋ ಕಿ ರಣ್ ರಾಜ್ ಅವರಿಗೆ ಮಾಸ್ ಹೀರೋ ಪಟ್ಟ ಕಟ್ಟಿದ್ದರು.ನಿರ್ದೇಶಕ ಪ್ರಸಿದ್ಧ ಅವರ ಪ್ರಕಾರ ಈ ಚಿತ್ರದಲ್ಲಿ ಕಿರಣ್ ರಾಜ್ ಅವರನ್ನು ಈ ಚಿತ್ರದಲ್ಲಿ ನೀವು ಇನ್ನೂ ಪಕ್ಕ ಮಾಸ್ ಕಮರ್ಷಿಯಲ್ ಹೀರೋ ಆಗಿ ನೀವು ನೋಡಬಹುದು ಎಂದು ತಿಳಿಸಿದ್ದಾರೆ.

ಅನಾಥ ಮಕ್ಕಳ ಶೋಷಣೆ, ಸ್ವತಃ ಅನಾಥನಾಗಿರುವ ನಾಯಕ ಅವರ ಪರ ಹೊರಡುವ ನಾಯಕನಾಗಿ ಕಿರಣ್ ರಾಜ್ ಈ ಚಿತ್ರದಲ್ಲಿ ನಟಿಸಿದ್ದಾರೆ.ಚಿತ್ರದ ಟೈಲರ್ ತಾಂತ್ರಿಕವಾಗಿ ರಿಚ್ ಆಗಿದ್ದು, ಪಕ್ಕಾ ಮಾಸ್ ಕಮರ್ಷಿಯಲ್ ಚಿತ್ರ ನೋಡ ಬಯಸುವವರಿಗೆ ಇಷ್ಟವಾಗಬಹುದು.

ಬೀದರ್ ಮೂಲದ ವಕೀಲ ವೃತ್ತಿಯಲ್ಲಿರುವ ಡಾ. ಸುದರ್ಶನ್ ಸುಂದರ್ ರಾಜ್ ತಮ್ಮ ಮಗ ಕ್ರಿಷ್ ರೋಡಿಗ್ರಸ್ ನನ್ನು ಪರಿಚಯಸಲು ನಿರ್ಮಿಸಿದ ಚಿತ್ರವಿದು.ನಾಯಕನಾಗ ಬಯಸಿದ್ದ ಕ್ರಿಸ್ ಗೆ ಪ್ರಸಿದ್ದ್ ಗಿಲ್ಲಿ ಎಂಬ ಒಂದು ಒಳ್ಳೆ ವಿಲನ್ ಕ್ಯಾರೆಕ್ಟರ್ ಬರೆದಿದ್ದು, ಕ್ರಿಸ್ ತನ್ನ ಡೆಡಿಕೇಶನ್ ಮೂಲಕ ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರಂತೆ.

ನಾಯಕಿ ಸುರೇಖಾ ಗೆ ಚಿತ್ರದಲ್ಲಿ ಡುಯಲ್ ಶೇಡ್ ಪಾತ್ರವಿದೆಯಂತೆ. ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಪ್ರಪ್ರಥಮ ಬಾರಿಗೆ ಖಾಕಿ ತೊಟ್ಟಿದ್ದು ರಗಡ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಡಿದ್ದಾರೆ.,ಬರೀ ಗ್ಲಾಮರ್ ಪಾತ್ರ ಮಾಡುತ್ತಿದ್ದ ತನಗೆ ಒಳ್ಳೆಯ ಪಾತ್ರ ನೀಡಿದ ನಿರ್ದೇಶಕರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ತಮ್ಮ ಚಿತ್ರ ಜೀವನದ ಪಯಣದಲ್ಲಿ ಜೊತೆಯಾಗಿರುವ ಚಿತ್ರದ DOP ಕಿಟ್ಟಿ ಕೌಶಿಕ್ಯ ಅ ವರು ನನ್ನ ಚಿತ್ರದ ಎರಡು ಕಣ್ಣುಗಳಿದಂತೆ ಎಂದು ಹೊಗಳಿರುವ ನಿರ್ದೇಶಕರು, ಚಿತ್ರದಲ್ಲಿ ಅವರ ಅದ್ಭುತ ಕ್ಯಾಮೆರಾ ಕೌಶಲ್ಯದ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಈ ಹಿಂದೆ ಪ್ರಸಿದ್ದ್ ನಿರ್ದೇಶನದ ಭರ್ಜರಿ ಗಂಡು ಸಿನಿಮಾ ಕ್ಕೆ ಹಿಟ್ ಹಾಡುಗಳನ್ನು ನೀಡಿರುವ ಗುಮ್ಮಿನೇನಿ ವಿಜಯ್ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ಈಗಾಗಲೇ 'ತಯ್ಯ ತಕ್ಕ ತುಡುಗಿ 'ಐಟಂ ಸಾಂಗ್ ಒಂದು ಮಿಲಿಯನ್ ಗಿಂತಲೂ ಹೆಚ್ಚು ವ್ಯೂಸ್ ಪಡಿದಿದ್ದು ಜನ ಮೆಚ್ಚುಗೆ ಪಡೆದಿದೆ. ವೆಂಕಿ ಅವರ ಸಂಕಲನ, ವಿನೋದ್ ಮಾಸ್ಟರ್ ಅವರ ವಿಭಿನ್ನ ಸಾಹಸ ದೃಶ್ಯಗಳಿವೆ. ರಾಟೆ ಕುಮಾರ್ ಸುದರ್ಶನ್ ಅವರಿಗೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ
ಚಿತ್ರಕ್ಕೆ ಸೆನ್ಸಾರ್ ಮಂಡಳಿ A ಸರ್ಟಿಫಿಕೇಟ್ ನೀಡಿದ್ದು, ಮಂಡಳಿಯ ಸದಸ್ಯರು ನೀಡಿರುವ ತರ್ಕವಿರದ ಕಾರಣಗಳ ಬಗ್ಗೆ ನಿರ್ದೇಶಕರು ಪತ್ರಿಕಾ ಗೋಷ್ಠಿಯಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.KRG ಸಂಸ್ಥೆಯು ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದು ಮೇ ತಿಂಗಳು 'ಶೇರ್ ' ಸಿನಿಮಾ ತೆರೆಯ ಮೇಲೆ ಘರ್ಜಿಸಲಿದೆ.





