– ರಾಘವೇಂದ್ರ ಅಡಿಗ ಎಚ್ಚೆನ್.

ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಟ್ಟಿದೆ. ಸದ್ಯಕ್ಕೆ ಕದನ ವಿರಾಮ ಘೋಷಿಸಲಾಗಿದ್ದರೂ ಕೂಡ ಪರಿಸ್ಥಿತಿ ಶಮನ ಆಗಿಲ್ಲ. ಭಯೋತ್ಪಾದನೆಗೆ ಪಾಕ್ ಬೆಂಬಲ ನೀಡುತ್ತಿದೆ ಎಂಬುದು ಈಗ ಗೌಪ್ಯವಾಗಿ ಉಳಿದಿಲ್ಲ. ಪಾಪಿ ಪಾಕಿಸ್ತಾನಕ್ಕೆ ಕೆಲವು ದೇಶಗಳು ಬೆಂಬಲ ಸೂಚಿಸುತ್ತಿವೆ. ಟರ್ಕಿ ಮತ್ತು ಅಜರ್​ವೈಜಾನ್ ದೇಶಗಳು ಕೂಡ ಪಾಕಿಸ್ತಾನದ ಜೊತೆ ನಿಂತಿವೆ. ಈ ದೇಶಗಳಿಗೆ ಪಾಠ ಕಲಿಸಲು ಭಾರತ ನಿರ್ಧರಿಸಿದೆ. ಟರ್ಕಿ ಮತ್ತು ಅಜರ್​ಬೈಜಾನ್​ಗೆ ಬ್ಯಾನ್ ಬಿಸಿ ಮುಟ್ಟಿಸಲು ಭಾರತೀಯ ಚಿತ್ರರಂಗ ಕೂಡ ತೀರ್ಮಾನಿಸಿದೆ.
ಟರ್ಕಿ ಮತ್ತು ಅಜರ್​ಬೈಜಾನ್​ಗೆ ದೇಶಗಳಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಆದರೆ ಪಾಕಿಸ್ತಾನಕ್ಕೆ ಈ ದೇಶಗಳು ಬೆಂಬಲ ನೀಡಿದ್ದರಿಂದ ಅಲ್ಲಿಗೆ ಪ್ರವಾಸ ಮಾಡುವುದನ್ನು ಭಾರತೀಯರು ನಿಲ್ಲಿಸಿದ್ದಾರೆ. ಈಗಾಗಲೇ ಈ ದೇಶಗಳಿಗೆ ಪ್ರವಾಸಕ್ಕೆ ತೆರಳಬೇಕು ಎಂದು ನಿರ್ಧರಿಸಿದ್ದ ಲಕ್ಷಾಂತರ ಜನರು ಟ್ರಿಪ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ಚಿತ್ರರಂಗದವರು ಕೂಡ ಕ್ರಮಕ್ಕೆ ಮುಂದಾಗಿದ್ದಾರೆ.

20250514_231913

‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್’ (FWICE) ಕಡೆಯಿಂದ ಭಾರತೀಯ ಚಿತ್ರರಂಗದ ನಿರ್ಮಾಪಕರಿಗೆ ಪತ್ರ ಬರೆಯಲಾಗಿದೆ. ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಟರ್ಕಿ ಜೊತೆ ಚಿತ್ರರಂಗದವರು ಯಾವುದೇ ನಂಟು ಇಟ್ಟುಕೊಳ್ಳುವುದು ಬೇಡ. ಟರ್ಕಿಯಲ್ಲಿ ಸಿನಿಮಾದ ಶೂಟಿಂಗ್ ಮಾಡುವುದು ಬೇಡ ಎಂದು ನಿರ್ಮಾಪಕರನ್ನು ಒತ್ತಾಯಿಸಲಾಗಿದೆ. ಸಿನಿಮಾಗಿಂತಲೂ ದೇಶವೇ ಮುಖ್ಯ. ಟರ್ಕಿಯ ಜೊತೆ ಚಿತ್ರರಂಗ ನಂಟು ಇಟ್ಟುಕೊಂಡರೆ ಇದರಿಂದ ಭಾರತದ ಭದ್ರತೆ ತೊಂದರೆ ಆಗುತ್ತದೆ. ಈ ಸಂದರ್ಭದಲ್ಲಿ ಟರ್ಕಿಯನ್ನು ಬಹಿಷ್ಕರಿಸಬೇಕು ಎಂದು ಎಲ್ಲ ನಿರ್ಮಾಪಕರಿಗೆ, ನಿರ್ದೇಶಕರಿಗೆ ಹಾಗೂ ಕಲಾವಿದರಿಗೆ ಒತ್ತಾಯಿಸುತ್ತೇವೆ’ ಎಂದು FWICE ಪತ್ರ ಬರೆದಿದೆ. ಈಗಾಗಲೇ ಪಾಕ್ ಕಲಾವಿದರನ್ನು ಹಾಗೂ ತಂತ್ರಜ್ಞರನ್ನು ಭಾರತೀಯ ಚಿತ್ರರಂಗದಿಂದ ಹೊರಗೆ ಇಡಲಾಗಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ