ಚಿತ್ರರಂಗವೇ ಹಾಗೆ ಅನ್ಸುತ್ತೆ. ನೂರಾರು ನಟಿಯರು.. ನೂರಾರು ನಟರು.. ಸಾವಿರಾರು ಮಂದಿ ಕೆಲಸ ಮಾಡುವ ಈ ಬಣ್ಣದ ಲೋಕದಲ್ಲಿ ಯಾರು ಅದೇನು ನೋವು ಅನುಭವಿಸಿರುತ್ತಾರೋ ಅವರಿಗೆ ಮಾತ್ರ ಗೊತ್ತಿರುತ್ತೆ. ಆದ್ರೆ, ಆ ನೋವಿನ ಸತ್ಯಗಳು ಆ ಹೊತ್ತಿನಲ್ಲಿ ಬಹಿರಂಗವಾಗದೇ ಇದ್ರೂ ಬಹುದಿನಗಳ ನಂತರ ಬಯಲಾಗದೇ ಇರದು. ಅಂತಹ ಕಟುಸತ್ಯವೊಂದನ್ನು ನಟಿ ಶ್ವೇತಾ ಬಸು ಹೊರಹಾಕಿದ್ದಾರೆ.
ತೆಲುಗು ಹಾಗೂ ತಮಿಳಿನ ಕೆಲ ಸಿನಿಮಾಗಳಲ್ಲೂ ನಟಿಸಿರುವ 34 ವರ್ಷದ ಬಾಲಿವುಡ್ ನಟಿ ಶ್ವೇತಾ ಬಸು ಪ್ರಸಾದ್ ಬಹುಬೇಡಿಕೆಯ ನಟಿಯಾಗಿದ್ದಾರೆ. ‘ಮಕಡೀ’ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದ ಶ್ವೇತಾ ಬಸು, ತೆಲುಗಿನಲ್ಲಿ ‘ಕೊತ್ತ ಬಂಗಾರು ಲೋಕಂ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು.
ಸ್ಕೂಲ್ ಸ್ಟೂಡೆಂಟ್ಸ್ ಲವ್ ಸ್ಟೋರಿಯನ್ನ ಹೊಂದಿದ್ದ ಈ ಚಿತ್ರದಲ್ಲಿ ಶ್ವೇತಾ ಅತ್ಯದ್ಭುತ ಅಭಿನಯ ನೀಡುವ ಮೂಲಕ ಜನಮನ್ನಣೆ ಗಳಿಸಿದ್ದರು. ಜೊತೆಗೆ ಚಿತ್ರವೂ ಕೂಡ ಸೂಪರ್ ಹಿಟ್ ಆಗಿತ್ತು. ಬಳಿಕ ಕೆಲ ತೆಲುಗು ಮೂವಿಗಳಲ್ಲಿ ನಟಿಸಿದರೂ ಕೂಡ ಅದ್ಯಾಕೋ ಶ್ವೇತಾಗೆ ಟಾಲಿವುಡ್ ಹಿಡಿಸಲಿಲ್ಲ.
2022ರಲ್ಲಿ ‘ಇಂಡಿಯಾ ಲಾಕ್ಡೌನ್, ಕಾಮೆಡಿ ಕಪಲ್, ಸೀರಿಯಸ್ ಮೆನ್, ತೆಲುಗಿನಲ್ಲಿ ರಾರಾ, ರೈಡ್, ಕಾಲಾವರ್ ಕಿಂಗ್, ಚಂದಮಾಮ, ತಾಷ್ಕೆಂಟ್ ಫೈಲ್ಸ್, ಶುಕ್ರಾನು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಶ್ವೇತಾ ಬಸು ಸ್ವಲ್ಪ ಬೋಲ್ಡ್ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್ನಲ್ಲಿ ‘ಊಪ್ಸ್ ಅಬ್ ಕ್ಯಾ’ ಅನ್ನೋ ಚಿತ್ರದಲ್ಲೂ ಕೂಡ ನಟಿಸಿದ್ದು ತೆಲುಗು ಚಿತ್ರರಂಗದಲ್ಲಿ ತಮಗಾದ ಕೆಟ್ಟ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ತೆಲುಗು ಚಿತ್ರರಂಗದಲ್ಲಿ ನಟಿಸುವಾಗ ಒಂದು ಸಿನಿಮಾ ತಂಡದಿಂದ ತೀವ್ರ ನಿಂದನೆಗೆ ಶ್ವೇತಾ ಬಸು ಒಳಗಾಗಿದ್ದರಂತೆ.
ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಶ್ವೇತಾ ಬಸು, ತೆಲುಗು ಚಿತ್ರರಂಗದ ಸೆಟ್ಗಳಲ್ಲಿ ಶ್ವೇತಾ ಬಸು ಪದೇ ಪದೆ ನಿಂದನೆ, ಮೂದಲಿಕೆ ಅನುಭವಿಸಿದ್ದರಂತೆ. ಶ್ವೇತಾ ಬಸು ಹೇಳಿರುವಂತೆ, ‘ನಾನು ಹೆಚ್ಚು ಎತ್ತರ ಇಲ್ಲದ ಕಾರಣ ಪದೇ ಪದೇ ನಾನು ನಿಂದನೆ ಕೇಳಬೇಕಾಗಿತ್ತು, ನಾನು ಕುಳ್ಳ ಇದ್ದೆ.
ನನ್ನೊಟ್ಟಿಗೆ ನಟಿಸುವ ನಟರು ಎತ್ತರ ಇರುತ್ತಿದ್ದರು. ನನಗೆ ಸರಿಯಾಗಿ ತೆಲುಗು ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೂ ಸಹ ಸಾಕಷ್ಟು ಬೈಸಿಕೊಂಡಿದ್ದೇನೆ. ಒಂದು ಸಿನಿಮಾ ಸೆಟ್ನಲ್ಲಿ ನನ್ನ ಸಹನಟನಿಗೂ ತೆಲುಗು ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಆದರೆ, ಚಿತ್ರತಂಡದವರು ನನ್ನನ್ನು ಬೈಯ್ಯುತ್ತಿದ್ದರು, ಆತನಿಗೆ ಏನೂ ಹೇಳುತ್ತಿರಲಿಲ್ಲ. ಒಂದು ತೆಲುಗು ಸಿನಿಮಾದಲ್ಲಿ ಮಾತ್ರ ನಾನು ಈ ಸಮಸ್ಯೆಯನ್ನು ಎದುರಿಸಿದೆ’ ಎಂದಿದ್ದಾರೆ ಶ್ವೇತಾ ಬಸು.
ಸದ್ಯ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸಲು ಬಾಲಿವುಡ್ ನಟ, ನಟಿಯರು ಸಾಲುಗಟ್ಟಿ ನಿಂತಿದ್ದಾರೆ. ಇಂಥಾ ಹೊತ್ತಿನಲ್ಲಿ ಬಾಲಿವುಡ್ ನಟಿ ಶ್ವೇತಾ ಬಸು ತೆಲುಗು ಚಿತ್ರರಂಗದ ಬಗ್ಗೆ ಈ ಆರೋಪ ಮಾಡಿರುವುದು ಅಚ್ಚರಿ ಮೂಡಿಸಿದೆ. ಇನ್ನು 2014ರಲ್ಲಿ ಹೈದ್ರಾಬಾದ್ನ ಹೋಟೆಲ್ವೊಂದರಲ್ಲಿ ನಟಿ ಶ್ವೇತಾ ಅವರನ್ನು ವ್ಯಭಿಚಾರ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿತ್ತು.