ಬಾಲಿವುಡ್ ಹೀರೋಯಿನ್‌ಗಳು ಈಗಲೂ ಸಹ ಬಲು ಶ್ರಮವಹಿಸಿ ಏನೇನೋ ಸಾಹಸ ಮಾಡಿ ಝೀರೋ ಫಿಗರ್‌ನ ಆಸೆ ಪೂರೈಸಿಕೊಳ್ಳುತ್ತಾರೆ. ಆದರೆ ಫ್ಯಾಟ್ ಮಾಡೆಲ್ ಕೀಲಿ ಲೀ ಡೇಲಿ, ಕಾರ್ಟೂನ್ ಕ್ಯಾರೆಕ್ಟರ್ ಜೆಸ್ಸಿಕಾ ರಾಬಿಟ್ ನಂತ ಸೂಪರ್ ಹೀರೋಯಿನ್ ಸ್ಟಾರ್ಮ್‌ಗಳ ಬಳುಕುವ ಬಳ್ಳಿಯಂಥ ದೇಹದಿಂದ ಎಷ್ಟು ಪ್ರಭಾವಿತಳಾದಳೆಂದರೆ, ಹಾಗೇ ಆಗಬೇಕೆಂದು 16 ಇಂಚಿನ ಸೊಂಟ ಹೊಂದಲು, ಅವಳು ತನ್ನ ಸೊಂಟಕ್ಕೆ ಒಂದು ಸ್ಟೀಲ್ ಬಾಂಡ್ ಟೈಟ್ ಕಾರ್ಸೆಟ್ (ಮಹಿಳಾ ಫಿಟಿಂಗ್ ಗಾರ್ಮೆಂಟ್) ಬಳಸಿಕೊಂಡಳು. ಕೇಲಿ ಹೇಳುವುದೆಂದರೆ, ನನಗೆ ಕಾಮಿಕ್ ಪಾತ್ರಗಳ ಸುಂದರ, ಟೈಟ್ ಲೇಸ್ ಯುಕ್ತ ಡ್ರೆಸ್ ಧರಿಸಲು ಆಸೆ. ಆದರೆ ಕಾರ್ಟೂನ್ ಪಾತ್ರಗಳಂಥ ಫಿಗರ್ ಹೊಂದುವುದು ಸುಲಭ ಸಾಧ್ಯವಲ್ಲ. ಹೇಗಾದರೂ ಮಾಡಿ ನಾನು ಅದನ್ನು ಪಡೆದೇ ತೀರುತ್ತೇನೆ ಎನ್ನುತ್ತಾಳೆ.
ನಾನು ಚಿಕ್ಕವಳಾಗಿದ್ದಾಗ ಬಹಳ ಸಂಕೋಚ ಸ್ವಭಾವದವಳು. ಆದರೆ ಕಾರ್ಸೆಟ್ ಟ್ರೇನಿಂಗ್ ನನ್ನ ಈ ಸ್ವಭಾವವನ್ನು ಬದಲಾಯಿಸಿತು. ಯಾವ ರೀತಿ ಕಾಮಿಕ್ ಪಾತ್ರಗಳು ತಮ್ಮ ವರ್ಚಸ್ಸಿನಿಂದ ಜನಪ್ರಿಯತೆ ಪಡೆದೆ ನಾನೂ ಹಾಗೇ ಮಾಡುತ್ತೇನೆ, ಎನ್ನುತ್ತಾಳೆ.
- ಪ್ರತಿನಿಧಿ