ಬೋಲ್ಡ್ ಅಂಡ್ಬ್ಯೂಟಿಫುಲ್

ಕನ್ನಡದ ಹುಡುಗಿಯರು ಅಂದಾಕ್ಷಣ ಮೂಗು ಮುರಿಯುತ್ತಿದ್ದ ಕಾಲ ಒಂದಿತ್ತು. ಆದರೀಗ ಎಲ್ಲ ಉಲ್ಟಾ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಕನ್ನಡದ ಹುಡುಗಿಯರದೇ ದರ್ಬಾರು. ಸುಕೃತಾ ವಾಗ್ಲೆ ದಿಟ್ಟ ಬೆಡಗಿ, `ಜಟ್ಟಿ' ಚಿತ್ರದಲ್ಲಿ ಯಾರೂ ಮಾಡದಂಥ ಪಾತ್ರ ನಿರ್ವಹಿಸಿ ಹೊಗಳಿಸಿಕೊಂಡಿದ್ದಳು. ಸುಕೃತಾಳಿಗೆ ಚಾಲೆಂಜಿಂಗ್‌ ಪಾತ್ರಗಳನ್ನು ಒಪ್ಪಿಕೊಳ್ಳುದರಲ್ಲಿ ಹೆಚ್ಚು ಖುಷಿಯಂತೆ. `ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ಸುಕೃತಾ ಕಾಳಿ ಪಾತ್ರ ವಹಿಸಿ ಹಳ್ಳಿ ಹುಡುಗಿಯಾಗಿಯೂ ಬೋಲ್ಡಾಗಿ ನಟಿಸಿದ್ದಳು. ಎಲ್ಲರ ಪ್ರಶಂಸೆಗೆ ಒಳಗಾಗಿರುವ ಸುಕೃತಾಳಿಗೆ ಈ ಚಿತ್ರದ ನಂತರ ಸಾಕಷ್ಟು ಬೋಲ್ಡ್ ಪಾತ್ರಗಳು ಹರಿದು ಬಂದರೂ ಆಶ್ಚರ್ಯವಿಲ್ಲ.

ರೇ..... ಲಕ್ಕಿಯಾಯ್ತು

ಕೂರ್ಗಿ ಹುಡುಗಿ ಹರ್ಷಿಕಾ ಪೂಣಚ್ಚ ತನ್ನ ಪ್ರತಿಭೆಯನ್ನು, ಲುಕ್‌ನ್ನು ಬಂಡವಾಳವಾಗಿಟ್ಟುಕೊಂಡು ಬಂದಂಥ ಬೆಡಗಿ. ಯಾವುದೇ ಪಾತ್ರ ಕೊಡಲಿ ಅಚ್ಚುಕಟ್ಟಾಗಿ ನಿರ್ವಹಿಸುವ ಹರ್ಷಿಕಾ ಸೂಪರ್‌ ಮಾಡೆಲ್ ‌ಕೂಡಾ ಆಗಿದ್ದಾಳೆ. `ತಮಸ್ಸು' ಚಿತ್ರದಲ್ಲಿ ತಂಗಿ ಪಾತ್ರ ವಹಿಸಿದ್ದ ಹರ್ಷಿಕಾಳಿಗೆ ರಾಜ್ಯ ಪ್ರಶಸ್ತಿ ಕೂಡಾ ಸಿಕ್ಕಿತ್ತು. ಸಿನಿಮಾಗಳಲ್ಲಿ ನಟಿಸಿಕೊಂಡೇ ವಿದ್ಯಾಭ್ಯಾಸದತ್ತ ಗಮನಹರಿಸುತ್ತಿದ್ದ ಹರ್ಷಿಕಾ ಅಲ್ಲಿಯೂ ಸೈ ಎನಿಸಿಕೊಂಡಳು. ಇತ್ತೀಚೆಗೆ ತನ್ನನ್ನು ತಾನು ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಹರ್ಷಿಕಾಳಿಗೆ `ರೇ...' ಚಿತ್ರ ಅದೃಷ್ಟ ತಂದುಕೊಟ್ಟಿತು. ಸುನೀಲ್ ಕುಮಾರ್‌ ದೇಸಾಯಿ ಅವರ ನಿರ್ದೇಶನದಲ್ಲಿ ಹರ್ಷಿಕಾ ಪ್ರತಿಭೆ ಇನ್ನಷ್ಟು ಬೆಳಕಿಗೆ ಬಂದಿತು. ಈಗ ಹರ್ಷಿಕಾ ಮತ್ತೆ ಬಿಝಿಯಾಗಿದ್ದಾಳೆ.

ಟ್ವಿಸ್ಟ್ ಕೊಡೋ ಕಾರು

ಸಿನಿಮಾದಲ್ಲಿ ಎಲ್ಲ ಪಾತ್ರಗಳೂ ಪ್ರಮುಖವಾಗಿರುತ್ತವೆ. ಪ್ರಾಣಿಗಳು, ವಸ್ತುಗಳು, ಹೀಗೆ ಒಂದಲ್ಲ ಒಂದು ರೀತಿ ಬಳಕೆಯಾಗುತ್ತವೆ. ಆದರೆ ನಾಲ್ಕು ಚಕ್ರದ ಕಾರು ನಾಯಕ ನಾಯಕಿಯ ಜೊತೆ ಜೊತೆಯಲ್ಲೇ ಪಾತ್ರವಾಗಿರುವುದು ಬಹಳ ವಿರಳ. ಹೀಗೊಂದು ಕಾರು ಬಳಕೆಯಾಗಿರೋದು `ಸಿಂಪಲ್ಲಾಗ್‌ ಇನ್ನೊಂದ್‌ ಲವ್ ಸ್ಟೋರಿ' ಚಿತ್ರದಲ್ಲಿ. ಕೆಂಪು ಬಣ್ಣದ ಕಾರು ಇಡೀ ಚಿತ್ರದ ತುಂಬಾ ಕಾಣಿಸಿಕೊಂಡಿರೋದು ವಿಶೇಷ. ಕಾರುಗಳನ್ನು ಕಂಡರೆ ಹುಡುಗರಿಗೆ ಎಲ್ಲಿಲ್ಲದ ಕ್ರೇಝ್. ಮಾತನಾಡದ ಈ ಕಾರು ಏನೇನು ಮಾಡುತ್ತದೆ ಎಂಬುದನ್ನು ನಿರ್ದೇಶಕರು ಅಚ್ಚುಕಟ್ಟಾಗಿ ಹೆಣೆದುಕೊಟ್ಟಿದ್ದಾರೆ. ಕಾರಿಗೆ ತಕ್ಕಂತೆ ಚಿನಕುರಳಿಯಂತೆ ಮಾತನಾಡುವ ಚಿಕ್ಕ ಹುಡುಗ ಹೇಮಂತ್‌ ಕಾರಿನಂತೆ ವೇಗವಾಗಿ ಸಾಗುತ್ತಾನೆ. ಈ ಬಾಲನಟನಿಗೆ ಬೇಡಿಕೆ ಹೆಚ್ಚಾದರೂ ಆಶ್ಚರ್ಯವಿಲ್ಲ.

ಕಲೆಗೆ ಬೆಲೆ ಕೊಡಿ

ತುಪ್ಪದ ಹುಡುಗಿ ಎಂದೇ ಜನಪ್ರಿಯವಾಗಿರುವ ರಾಗಿಣಿ ನೃತ್ಯದಲ್ಲಿ ಜೊತೆಗಾತಿಯಾಗಿ ನರ್ತಿಸಿದ್ದ ಶೃತಿ ಹರಿಹರನ್‌ಳನ್ನು ಗುರುತಿಸಿದ್ದು ಪವನ್‌ ಕುಮಾರ್‌. `ಲೂಸಿಯಾ' ನಂತರ ಶೃತಿಕಾಳ ಬದುಕೇ ಬದಲಾಯ್ತು. ಉತ್ತಮ ನೃತ್ಯಪಟು, ಕಲಾವಿದೆ, ವಿದ್ಯಾವಂತೆ ಆಗಿರುವ ಶೃತಿ ಒಳ್ಳೆ ಪಾತ್ರಗಳಿಗಾಗಿ ಸದಾ ಹುಡುಕಾಡುತ್ತಿರುತ್ತಾಳೆ. `ರಾಟೆ' ಚಿತ್ರದಲ್ಲಿ ಸಹಜ ಅಭಿನಯ ನೀಡಿದ್ದ ಶೃತಿ ಈಗ `ಮಾದವ ಮತ್ತು ಮಾನಸಿ' ಚಿತ್ರದಲ್ಲೂ ಗಮನಾರ್ಹ ಪಾತ್ರ ವಹಿಸುತ್ತಿದ್ದಾಳೆ ಕಲೆಗೆ ಬೆಲೆ ಸಿಗಬೇಕು ಎಂದು ಬಯಸುವ ಶೃತಿ ನಟಿಯಾಗುವುದರ ಜೊತೆ ಒಳ್ಳೆಯ ನೃತ್ಯ ಸಂಯೋಜಕಿಯಾಗಿಯೂ ಹೆಸರು ಮಾಡಬೇಕೆಂದು ಬಯಸುತ್ತಾಳೆ. ಶರಣ್‌ ಜೋಡಿಯಾಗಿ `ಜೈ ಮಾರುತಿ 800' ಚಿತ್ರ ರಿಲೀಸ್‌ಗೆ ರೆಡಿಯಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ