`ಜೋಶ್‌' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಉದಯಿಸಿದ ನಟಿ ನಿತ್ಯಾ ಮೆನನ್‌. ಆದರೆ ಮಿಂಚಿದ್ದು ಮಲೆಯಾಳಂ, ತಮಿಳು ಚಿತ್ರಗಳಲ್ಲಿ. ಮಣಿರತ್ನಂ ಅವರ `ಕಣ್ಮಣಿ' ಚಿತ್ರದಲ್ಲಿ ನಟಿಸಿ ಇನ್ನಷ್ಟು ಜನಪ್ರಿಯಳಾದ ನಿತ್ಯಾಳ ಅಭಿನಯವನ್ನು ಕನ್ನಡದ `ಮೈನಾ' ಚಿತ್ರದಲ್ಲೂ ಹೊಗಳಲಾಗಿತ್ತು. ನಾಯಕಿ ಅಷ್ಟೇ ಅಲ್ಲ ಉತ್ತಮ ಗಾಯಕಿಯೂ ಆಗಿರುವ ನಿತ್ಯಾ ಮೆನನ್‌ ಈಗ ಸುದೀಪ್ ಅವರಿಗೆ ಜೋಡಿಯಾಗಿ `ಕೋಟಿಗೊಬ್ಬ-2' ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಇದೊಂದು ದೊಡ್ಡ ಪ್ರಾಜೆಕ್ಟ್. ನಿತ್ಯಾ ಕೇರಳದ ಹುಡುಗಿಯಾದರೂ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬಲ್ಲಳು. ಹಾಗಾಗಿ `ಕೋಟಿಗೊಬ್ಬ-2' ಚಿತ್ರಕ್ಕಾಗಿ ತನ್ನ ಪಾತ್ರಕ್ಕೆ ತಾನೇ  ಧ್ವನಿ ಕೊಡುವುದಾಗಿ ಹೇಳಿದ್ದಾಳೆ. ಸುದೀಪ್‌-ನಿತ್ಯಾ ಜೋಡಿ ತೆರೆ ಮೇಲೆ ಜಾದೂ ಮಾಡುವುದಂತೂ ಖಂಡಿತ.

ಸೆಂಚುರಿ ನಟ

ಕನ್ನಡದ ಪ್ರತಿಭಾವಂತ ನಟ, ನಿರ್ದೇಶಕ ರಮೇಶ್‌ ಅರವಿಂದ್‌ ಸಿನಿಮಾರಂಗಕ್ಕೆ ಬಂದು ಮೂವತ್ತು ವರ್ಷಗಳು ತುಂಬಿವೆ. ಇವರ ನೂರನೇ ಚಿತ್ರ `ಪುಷ್ಪಕ ವಿಮಾನ' ಆಗಲಿದೆ. ಈಗಾಗಲೇ ಈ ಚಿತ್ರದ ಟೀಸರ್‌ ಸಾಕಷ್ಟು ಕುತೂಹಲ ಮೂಡಿಸಿದೆ. `ಸುಂದರ ಸ್ವಪ್ನಗಳು' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ರಮೇಶ್‌ ನಟನಾಗಿ, ನಿರ್ದೇಶಕನಾಗಿ ಸೈ ಎನಿಸಿಕೊಂಡರು. ನೂರು ಚಿತ್ರಗಳಾದವು ಎನ್ನುವುದೇ ನನಗೆ ಗೊತ್ತಿರಲಿಲ್ಲ. ನನ್ನ ಸ್ನೇಹಿತರಿಂದ ಗೊತ್ತಾಯಿತು. ನಿಜಕ್ಕೂ ಆಶ್ಚರ್ಯವಾಯ್ತು. ಹಾಗೆಯೇ ಖುಷಿಯೂ ಆಯ್ತು. `ಪುಷ್ಪಕ ವಿಮಾನ' ನನ್ನ ನೂರನೆಯ ಚಿತ್ರವಾಗಲಿದೆ. ಜವಾಬ್ದಾರಿ ಹೆಚ್ಚಾಗಿದೆ. ಎಂಥದ್ದೇ ಪಾತ್ರವಿರಲಿ ನಿರ್ವಹಿಸಿ ಸೈ ಎನಿಸಿಕೊಂಡಿರುವ ರಮೇಶ್‌ ಕಿರುತೆರೆಯಲ್ಲೂ  ಸಹ ಸ್ಟಾರ್‌ ಎನಿಸಿಕೊಂಡಿದ್ದಾರೆ. ಅವರ ಈ ನೂರರ ಸಂಭ್ರಮಕ್ಕೆ ನಮ್ಮ ಕಡೆಯಿಂದ ಒಂದು ಕಂಗ್ರಾಟ್ಸ್!

ಮಕ್ಕಳ ಚಿತ್ರಕ್ಕೆ ಗೌರವ

ನಾಗರಾಜ ಕೋಟೆ ನಿರ್ದೇಶನದ `ಬಾನಾಡಿ' ಚಿತ್ರ ಹಲವು ಅಂತಾರಾಷ್ಟ್ರೀಯ ಸಿನಿಮೋತ್ಸವಗಳ ಗೌರವಕ್ಕೆ ಪಾತ್ರವಾಗುತ್ತಿದೆ. ಹೈದರಾಬಾದಿನಲ್ಲಿ ನಡೆದ 19ನೇ ಮಕ್ಕಳ ಚಿತ್ರೋತ್ಸವದಲ್ಲಿ ಭಾಗವಹಿಸಿತ್ತು. ಮಂಗಳೂರಿನಲ್ಲಿ ನಡೆದ ಮಕ್ಕಳ ಚಲನ ಚಿತ್ರೋತ್ಸವಕ್ಕೂ ಆಯ್ಕೆಯಾಗಿತ್ತು. ಈಗ ಲಕ್ನೋದಲ್ಲಿ ನಡೆಯಲಿರುವ ಮಕ್ಕಳ ಚಲನ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದೆ, ನಿಜಕ್ಕೂ ಹೆಮ್ಮೆಯ ಸಂಗತಿ. ಮಕ್ಕಳಿಗೆ ಈ ನನ್ನ ಚಿತ್ರವನ್ನು ತಲುಪಿಸಬೇಕೆಂಬುದು ನನ್ನ ಗುರಿಯಾಗಿತ್ತು. ಅದೀಗ ಸಫಲವಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ನಾಗರಾಜ್‌ ಕೋಟೆ. ಧೃತಿ, ದತ್ತಣ್ಣ, ನಟರಾದ ರಾಜೇಶ್‌, ರಮೇಶ್‌ ಪಂಡಿತ್‌ ಮುಂತಾದ ಕಲಾವಿದರ ಬಳಗ ಈ ಚಿತ್ರಕ್ಕಿದೆ. ಕಾರ್ತಿಕ್‌ ಶರ್ಮ ಸಂಗೀತ ಸಂಯೋಜಿಸಿದ್ದಾರೆ.

ದಂಡುಪಾಳ್ಯಕ್ಕೆ ಎಂಟ್ರಿ

`ದಂಡುಪಾಳ್ಯ' ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿತು. ಇದೀಗ `ದಂಡುಪಾಳ್ಯ-2' ತಯಾರಾಗುತ್ತಿದೆ. ಪೂಜಾ ಗಾಂಧಿ ಫೋಟೋಗಳನ್ನು ನೋಡಿದವರು ಹುಬ್ಬೇರಿಸಿದ್ದಾರೆ. ಶ್ರೀನಿವಾಸ್‌ ರಾಜು ಈ ಚಿತ್ರದ ಎರಡನೇ ಭಾಗವನ್ನು ನಿರ್ದೇಶಿಸುತ್ತಿದ್ದಾರೆ. ಹೊಸ ಸುದ್ದಿ ಏನಪ್ಪ ಅಂದ್ರೆ ಶೃತಿ ಇದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಶೃತಿ ಪತ್ರಕರ್ತೆ ಪಾತ್ರದಲ್ಲಿ `ದಂಡುಪಾಳ್ಯ-2' ಚಿತ್ರಕ್ಕೆ ಎಂಟ್ರಿ ಕೊಡಲಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಶೃತಿ, ಪೂಜಾ ಸರಸವಿರಸ, ಜಗಳ ಪ್ರೀತಿ ಎಲ್ಲವನ್ನೂ ಕಂಡಂಥ ಪ್ರೇಕ್ಷಕರಿಗೆ ಇವರಿಬ್ಬರನ್ನು ಒಟ್ಟಿಗೆ ತೆರೆ ಮೇಲೆ ನೋಡುವುದಕ್ಕೆ ಅವಕಾಶ ಸಿಕ್ಕಂತಾಗಿದೆ. ವಿಶೇಷವೆಂದರೆ ತೆರೆ ಮೇಲೆ ಕೂಡಾ ಇವರಿಬ್ಬರದೂ ತದ್ವಿರುದ್ಧ ಪಾತ್ರಗಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ