– ರಾಘವೇಂದ್ರ ಅಡಿಗ ಎಚ್ಚೆನ್.
ವಿಜಯ್ ರಾಘವೇಂದ್ರ ಅಭಿನಯದ ಕುತೂಹಲಕಾರಿ ಥ್ರಿಲ್ಲರ್ ಚಿತ್ರ ‘FIR 6 to 6’ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿಂದೆ ಪಟ್ಟಾಭಿಷೇಕ ಎಂಬ ಚಿತ್ರವನ್ನು ನಿರ್ಮಿಸಿದ್ದ ಭಾಗ್ಯ ರಮೇಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೆ.ವಿ.ರಮಣರಾಜ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಓಂಜಿ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.
ಸತೀಶ್ ಬಾಬು ಹಾಗೂ ಎಂ.ಎಸ್. ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಈಗಾಗಲೇ ಬಿಡುಗಡೆಯಾಗಿ ಯಶಸ್ವಿಯಾಗಿದ್ದು ಚಿತ್ರ ಇದೇ ತಿಂಗಳ ೨೮ಕ್ಕೆ ಸಿನಿಮಾ ಮಂದಿರಗಳಲ್ಲಿ ಬರಲಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಳ್ಲಲು ಚಿತ್ರತಂಡ ಇತ್ತೀಚೆಗೆ ಪತ್ರಿಕಾಗೋಷ್ಟಿ ಕರೆದಿತ್ತು.
ಈ ವೇಳೆ ನಟ ವಿಜಯ ರಾಘವೇಂದ್ರ ಮಾತನಾಡಿ ಎಫ್.ಐ.ಆರ್.ಭಾಗ್ಯ ರಮೇಶ್ ರಮಣರಾಜ್ ಅವರ ಕನಸು. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ. ಇಡೀ ಚಿತ್ರವನ್ನು ನೈಟ್ ಎಫೆಕ್ಟ್ ನಲ್ಲೇ ಶೂಟ್ ಮಾಡಿದ್ದೇವೆ. ಸುಮಾರು ರಾತ್ರಿ ಈ ಸಿನಿಮಾಗಾಗಿ ಕಷ್ಟಪಟ್ಟಿದ್ದೇವೆ. ನಿರ್ದೇಶಕರು ತುಂಬಾ ಎಫರ್ಟ್ ಹಾಕಿದ್ದಾರೆ. ಕಷ್ಟಪಟ್ಟು ಇಷ್ಟಪಟ್ಟು ಈ ಸಿನಿಮಾ ಮಾಡಿದ್ದೇವೆ. ಈ ಕಥೆಯಲ್ಲಿ ಮೇಜರ್ ಆಗಿರುವುದೇ ಆ್ಯಕ್ಷನ್, ಥ್ರಿಲ್ಲರ್ ಮಂಜು ಅವರ ಜೊತೆ ಆಕ್ಷನ್ ಮಾಡುವುದು ನನ್ನ ಪುಣ್ಯ. ಮಾಸ್ಟರ್ ಯಾರಿಗೂ ತೊಂದರೆ ಕೊಡಲ್ಲ ಬದಲಾಗಿ ಆರಾಮಾಗಿ ಕೆಲಸ ತೆಗೆಸುತ್ತಾರೆ. ಇಲ್ಲಿ ಎಲ್ಲಾ ಪಾತ್ರಗಳೂ ಮುಖ್ಯವಾಗಿದೆ, ನೆಗೆಟಿವ್ ಅಥವಾ ಗ್ರೆ ಶೇಡ್ ನಲ್ಲಿ ಕಾಣಿಸುವ ಪಾತ್ರ ಬಿಗಿಯಾಗಿದ್ದರೆ ಮಾತ್ರ ಪೋಲೀಸ್ ಪಾತ್ರಕ್ಕೆ ಸಹ ತೂಕ ಬರುತ್ತದೆ. ಅಂತಹಾ ಅವಕಾಶ ನನಗೆ ಈ ಚಿತ್ರದಲ್ಲಿ ಸಿಕ್ಕಿದೆ. ಈ ಸಿನಿಮಾದಲ್ಲಿ ಫೈಟ್ ಮಡುತ್ತಲೇ ಸೀನ್ ಮುಂದುವರಿಯುತ್ತದೆ. ಸಿನಿಮಾವನ್ನು ಪ್ರತಿಯೊಬ್ಬರೂ ಸಿನಿಮಾ ಮಂದಿರಕ್ಕೆ ಬಂದು ನೋಡಬೇಕು.ಸಿನಿಮಾ ಮಾಡುವುದೇ ಥಿಯೇಟರ್ ಗಾಗಿ. ಕಮರ್ಷಿಯಲ್ ಸಿನಿಮಾ ಥಿಯೇಟರ್ ಗಾಗಿಯೇ ಮಾಡಿರುತ್ತೇವೆ. ಆದ್ದರಿಂಡ ನಾವು ಮಾಡಿದ ಪ್ರಾಮಾಣಿಕ ಪ್ರಯತ್ನ ನೋಡಿ ಆಶೀರ್ವಾದ ಮಾಡಿ, ಜನರಿಗೆ ಅಭಿರುಚಿ ಬೆಳೆಯಬೇಕಿದೆ ಎಂದರು.
ಚಿತ್ರದ ನಿರ್ಮಾಪಕಿ ಭಾಗ್ಯ ರಮೇಶ್ ಮಾತನಾಡಿ ಈಗಿನ್ನೇನೂ ವಿಶೇಷವಾಗಿ ಹೇಳುವುದಿಲ್ಲ. ಚಿತ್ರ ಇದೇ ೨೮ಕ್ಕೆ ಬಿಡುಗಡೆ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಸಿನಿಮಾ ವೀಕ್ಷಿಸಲಿ ಎಂದರು.
ನಿರ್ದೇಶಕ ರಮಣರಾಜ್ ಅವರು ಈ ಹಿಂದೆ ತೆಲುಗಿನ ಜೆಡಿ ಚಕ್ರವರ್ತಿ ಅವರ ಜೊತೆ ಒಂದು ಚಿತ್ರ ಮಾಡಿದ್ದಾರೆ. ಇದು ಅವರ ಎರಡನೇ ಸಿನಿಮಾ. ಇಡೀ ಸಿನಿಮಾ ಕಥೆ ನಡೆಯುವುದು ಸಂಜೆ 6ರಿಂದ ಬೆಳಗಿನ ಜಾವ 6ರವರೆಗೆ ಕಥೆಯನ್ನು ಆಕ್ಷನ್ ಥ್ರಿಲ್ಲಿಂಗ್ ಆಗಿ ಹೇಳಲು ಪ್ರಯತ್ನಿಸಿದ್ದೇವೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿ ನಮ್ಮನ್ನು ಪ್ರೋತ್ಸಾಹಿಸಬೇಕಿದೆ ಎಂದರು/ ಅ;ಲ್ಲದೆ ವಿಜಯ ರಾಘವೇಂದ್ತ್ರ ಅವರ ಕುರುತು ಮಾತನಾಡಿದ ನಿರ್ದೇಶಕ ವಿಜಯ್ ರಾಘವೇಂದ್ರ ಅವರ ಜೊತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವವಾಗಿತ್ತು ಎಂದಿದ್ದಾರೆ.
ನಟರಾದ ಯಶ್ ಶೆಟ್ಟಿ,, ಯಶಾ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ಚಿತ್ರದ ಸಂಕಲನಕಾರ ನಾಗೇಂದ್ರ ಅರಸ್, ನಟ ವಿದ್ಯಾಭರಣ, ಸಂಗೀತ ನಿರ್ದೇಶಕ ಎಂ.ಎಸ್.ತ್ಯಾಗರಾಜ್ ಉಪಸ್ಥಿತರಿದ್ದರು.