- ರಾಘವೇಂದ್ರ ಅಡಿಗ ಎಚ್ಚೆನ್.
2025ನೇ ವರ್ಷ ಅಂತ್ಯವಾಗಲು ಇನ್ನು ಕೆಲವೇ ದಿನಗಳಿದೆ. ಈ ಹೊತ್ತಿನಲ್ಲಿ ಈ ವರ್ಷ ಬಿಡುಗಡೆ ಆಗಿ ಸಾಕಷ್ಟು ಸದ್ದು ಮಾಡಿದ ಹಾಡುಗಳ ಕುರಿತಂತೆ ಒಂದು ಅವಲೋಕನ ಇಲ್ಲಿದೆ. ಈ ವರ್ಷ ಡಿಜಿಟಲ್ ಜಗತ್ತನ್ನು ಆಳಿದ ಟಾಪ್ ಹತ್ತು ಕನ್ನಡ ಸಿನಿಮಾ ಹಾಡಿನ ಕುರಿತಂತೆ ಇಲ್ಲಿ ವಿವರ ಇದೆ.
ಅಬಾಲವೃದ್ಧರಾಗಿ ಈ ವರ್ಷ ಎಲ್ಲರನ್ನು ಅತಿಹೆಚ್ಚು ಸೆಳೆದಿರುವ ಹಾಡು ಅದುವೇ 'ಬ್ಯಾಂಗಲ್ ಬಂಗಾರಿ'.ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ರೂಪದಲ್ಲಿ ಸಾಂಗ್ ವೈರಲ್ ಆದದ್ದಕ್ಕೆ ಲೆಕ್ಕವಿಲ್ಲ ಸಿನಿಮಾ ದೊಡ್ಡದಾಗಿ ಗೆಲ್ಲದೇ ಇದ್ದರೂ ಚರಣ್ ರಾಜ್ ಸಂಗೀತದಲ್ಲಿ ಎಲ್ಲಾ ಹಾಡುಗಳು ಹಿಟ್ ಆಗಿತ್ತು. ನಾಗಾರ್ಜುನ ಶರ್ಮಾ ಸಾಹಿತ್ಯದ ಹಾಡನ್ನು ತಮಿಳು ಗಾಯಕ ಆಂಟೋನಿ ದಾಸನ್ ಹಾಡಿ ಹಿಟ್ ಮಾಡಿದ್ದರು. ಈ ವರ್ಷದ ನಂಬರ್ 1 ಸಾಂಗ್ ಇದೇ ಎನ್ನಲು ಯಾವ ತಕರಾರಿಲ್ಲ.

ಶಶಾಂಕ್ ನಿರ್ದೇಶನದ 'ಬ್ರ್ಯಾಟ್' ಸಿನಿಮಾ ಹಾಡಾದ ಅರ್ಜುನ್ ಜನ್ಯಾ ಸಂಗೀತದಲ್ಲಿ 'ನಾನೇ ನೀನಂತೆ' ಸಾಂಗ್ ಸಿನಿರಸಿಕರ ಮನಗೆದ್ದಿದೆ. . ಸಿದ್ಧ್ ಶ್ರೀರಾಮ್, ಲಹರಿ ಮಹೇಶ್ ಈ ಹಾಡಿಗೆ ದನಿಯಾಗಿದ್ದರು. ಈ ವರ್ಷದ ಟಾಪ್-2 ಹಾಡಾಗಿ ಇದನ್ನು ಗುರುತಿಸಬಹುದು.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ-1' ಸಿನಿಮಾದ ಯಶಸ್ಸು ಜಗತ್ತಿನಾದ್ಯಂತ ಸಿನಿರಂಗದ ದಿಗ್ಗಜರು ಕನ್ನಡ ಸಿನಿಮಾದತ್ತ ನೋಡುವಂತೆ ಮಾಡಿದೆ. ಇದೇ ಸಿನಿಮಾದ ಅಜನೀಶ್ ಲೋಕನಾಥ್ ಸಂಗೀತವಿರುವ 'ಬ್ರಹ್ಮಕಲಶ' ಸಾಂಗ್ ಎಲ್ಲಾ ಭಾಷೆಗಳಲ್ಲಿ ಹಿಟ್ ಆಗಿ ದಾಖಲೆ ಬರೆದಿತ್ತು. ಹಾಗಾಗಿ ಕನ್ನಡ ವರ್ಷನ್ ಹೆಚ್ಚು ವೀವ್ಸ್ ಸಾಧಿಸಿಲ್ಲ. ಆದರೂ ಈ ವರ್ಷದ ಟಾಪ್-3 ಹಾಡು ಇದಾಗಿದೆ.

'ಅಂದೊಂದಿತ್ತು ಕಾಲ' ಸಿನಿಮಾ ಕೂಡ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ಆದರೆ ಚಿತ್ರದ 'ಮುಂಗಾರು ಮಳೆಯಲ್ಲಿ' ಸಖತ್ ವೈರಲ್ ಆಗಿದ್ದು ಗೊತ್ತೇಯಿದೆ. ಧನಂಜನ್ ರಂಜನ್ ಸಾಹಿತ್ಯದ ಹಾಡಿಗೆ ರಾಘವೇಂದ್ರ ವಿ. ಟ್ಯೂನ್ ಹಾಕಿದ್ದರು. ಸಿದ್ಧ್ ಶ್ರೀರಾಮ್ ಗಾಯನದಲ್ಲಿ ಸಾಂಗ್ ಕೇಳುಗರನ್ನು ಮೈಮರೆಯುವಂತೆ ಮಾಡಿದ್ದು ಸುಳ್ಳಲ್ಲ.
ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ ಈ ವರ್ಷ ತೆರೆಗೆ ಬರ್ತಿಲ್ಲ. ಆದರೆ ಚಿತ್ರದ 2 ಹಾಡುಗಳು ಈಗಾಗಲೇ ಹಿಟ್ ಆಗಿದೆ. ಅರ್ಜುನ್ ಜನ್ಯಾ ಸಂಗೀತದಲ್ಲಿ 'ಶಿವನೆ ನಿನ್ ಆಟ' ಸಾಂಗ್ ಪದೇ ಪದೆ ಗುನುಗುವಂತೆ ಮಾಡಿದೆ. ಮಂಜುನಾಥ್ ಬಿಎಸ್ ಸಾಹಿತ್ಯ ಬರೆದಿರುಬ ಹಾಡನ್ನು ಪ್ರೇಮ್ ಹಾಗೂ ಕೈಲಾಶ್ ಖೇರ್ ಹಾಡಿರುವುದು ವಿಶೇಷ.

ರಾಜ್. ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಈ ವರ್ಷದ ಮತ್ತೊಂದು ಅದ್ಭುತ ಹಿಟ್ ಸಿನಿಮಾ ಅತ್ಯಂತ ಕಡಿಮೆ ವೆಚ್ಚದ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಸುಮೇದ್ .ಕೆ ಸಂಗೀತದ ಈ ಚಿತ್ರದ ಬಂದರೋ ಬಂದರೋ ಭಾವ ಬಂದರೋ ಹಾಡು ಸಾಕಷ್ಟು ವೈರಲ್ ಆಗಿದ್ದಲ್ಲದೆ ರೀಲ್ಸ್ ಗಳಲ್ಲಿ ಸಹ ಜನಪ್ರಿಯವಾಗಿದೆ. ಇದು ಈ ವರ್ಷದ ಟಾಪ್ ಹಾಡುಗಳ ಪಟ್ಟಿ ಸೇರಿದೆ.
ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾದ ಆಲ್ಬಮ್ ಕೂಡ ಹಿಟ್ ಲಿಸ್ಟ್ ಸೇರಿದೆ. ಚಿತ್ರದ ರೊಮ್ಯಾಂಟಿಕ್ ಸಾಂಗ್ ಒಂದೇ ಒಂದು ಸಲ ಸೋತು ಬಿಡು ನೀ ಹಾಡು ಈ ವರ್ಷದ ಒಂದು ಉತ್ತಮ ರೊಮ್ಯಾಂಟಿಕ್ ಹಾಡೆನ್ನಬಹುದು.
'ಕಾಟೇರ' ಖ್ಯಾತಿಯ ತರುಣ್ ಕಿಶೋರ್ ಸುಧೀರ್ ನಿರ್ಮಾಣದ 'ಏಳುಮಲೆ' ಚಿತ್ರದಲ್ಲಿ ರಾಣಾ ಮತ್ತು ಪ್ರಿಯಾಂಕಾ ಆಚಾರ್ ಅಭಿನಯಿಸಿದ್ದು, ಚಿತ್ರ ಸಾಕಷ್ಟು ಮೆಚ್ಚುಗೆ ಗಳಿಸಿಕೊಂಡಿತ್ತು. ಈ ಚಿತ್ರದ ಯಾವಾಗ ಯಾವಾಗ ಹಾಡು ಈ ವರ್ಷದಲ್ಲಿ ಬಂದ ಅತ್ಯುತ್ತಮ ಸಾಹಿತ್ಯವಿರುವ ಹಾಡುಗಳಲಿ ಒಂದು. ನಾಗಾರ್ಜುನ ಶರ್ಮಾ ಸಾಹಿತ್ಯಕ್ಕೆ ಸಿದ್ ಶ್ರೀರಾಮ್ ದನಿಯಾಗಿದ್ದರೆ ಡಿ.ಇ. ಮ್ಮನ್ ಸಂಗೀತ ಸಂಯೋಜಿಸಿದ್ದಾರೆ,ಇದು ಈ ವರ್ಷದ ಟಾಪ್ ಸಾಂಗ್ ಪಟ್ಟಿಯಲ್ಲಿ ಸೇರಿದೆ.
ನಟ ಧನ್ವೀರ್ ಗೌಡ ಅಭಿನಯದ 'ವಾಮನ'. ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿಲ್ಲವಾದರೂ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಅಜನೀಶ್ ಲೋಕನಾಥ್ ಸಂಗೀತವಿರುವ ವಿಜಯ್ ಪ್ರಕಾಶ್ ಹಾಗೂ ಹರ್ಷಿಕಾ ದೇವನಾಥ್ ದನಿಯಾದ ರೊಮ್ಯಾಂಟಿಕ್ ಹಡು 'ಮುದ್ದು ರಾಕ್ಷಸಿ' ಮಾತ್ರ ಎಲ್ಲರ ಮನಸೂರೆಗೊಂಡಿತ್ತು. ವಾಮನ ಸಿನಿಮಾದಲ್ಲಿ ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದರು. ಈ ಹಾಡು ಸಹ ಸಾಕಷ್ಟು ಸಂಖ್ಯೆಯ ರೀಲ್ಸ್ ಆಗಿತ್ತು.
ಇನ್ನು 'ಕಾಂತಾರ-1' ಸಿನಿಮಾದ ಅಜನೀಶ್ ಲೋಕನಾಥ್ ಸಂಗೀತವಿರುವ "ಓ ಕೋಟೆ ಕೊತ್ತಲ" ಹಾಡು ಮತ್ತೊಂದು ಹಿಟ್ ಹಾಡಾಗಿದೆ.
ಇವಷ್ಟೇ ಅಲ್ಲದೆ "ಮಾದೇವ" ಸಿನಿಮಾದ "ಎದೆಲಿ ತಂಗಾಳಿ" , "ಜೂನಿಯರ್ ಸಿನಿಮಾದ " ವೈರಲ್ ವೈಯಾರಿ", ದಿ ಡೆವಿಲ್ ನ ಇದ್ರೆ ನೆಮ್ದಿಯಾಗ್ ಇರ್ಬೇಕ್, ಕೆಡಿ ಸಿನಿಮಾದ ಸೆಟ್ಟಾಗಲ್ಲಾ ಹೋಗೆ ನಂಗೂ ನಿಂಗೂ, ಕಲ್ಟ್ ಸಿನಿಮಾದ ಅಯ್ಯೋ ಶಿವನೆ ಉಡಾಳ ಸಿನಿಮಾದ ಹೊಡಿ ಶಾವಿಗ್ಯಾಗ್ ಮಜ್ಜಿಗಿ, ಹಾಡುಗಳು ಸಹ ವೀಕ್ಷಕರ ಗಮನ ಸೆಳೆದಿದ್ದವು.





