- ರಾಘವೇಂದ್ರ ಅಡಿಗ ಎಚ್ಚೆನ್.

'ಶಕಲಕ ಭುಂ‌ ಭೂಮ್..' ಎಂದು ಆರಂಭವಾದ ಹಾಡು ಸುದ್ದಿಗೋಷ್ಠಿಯ ವೇದಿಕೆಯಲ್ಲಿ ‌ಕಿಚ್ಚು ಹತ್ತಿಸಿತು. ಕಾರಣ ಒಂದು ಕಡೆ ಹಾಡಿನಲ್ಲಿರುವ ಮೋಡಿ ಮತ್ತೊಂದೆಡೆ ಆ ಹಾಡಿಗೆ ಹೆಜ್ಜೆ ಹಾಕಿರುವ ಜೋಡಿ. ನಿರಂಜನ್ ಸುಧೀಂದ್ರ ಮತ್ತು ರಚನಾ ಇಂದರ್ ಹೆಜ್ಜೆ ಹಾಕಿರುವ ಅದ್ಧೂರಿ ಹಾಡಿನ ಅನಾವರಣ ಸಮಾರಂಭ ಈ ಎಲ್ಲದಕ್ಕೂ ಸಾಕ್ಷಿಯಾಯಿತು.

1001695456

ನಿರಂಜನ್ ಮತ್ತು ರಚನಾ ಇಂದರ್ ಮಸ್ತಾಗಿ ಕುಣಿದ ಗೀತೆ ನೋಡಿ ಸ್ಪಾರ್ಕ್ ನಲ್ಲಿ ಖಳನಾಗಿ ನಟಿಸಿರುವ ಪ್ರೇಮ್ ಮೆಚ್ಚಿ ಮಾತನಾಡಿದರು. ನಿರಂಜನ್ ನಮ್ಮ ಕನ್ನಡದ ಪ್ರತಿಭೆ. ಅವರನ್ನು ಪರಭಾಷೆಯವರು ಹೈಜಾಕ್ ಮಾಡುವ ಮೊದಲು, ಕನ್ನಡದ ನಿರ್ಮಾಪಕರು ಉಳಿಸಿಕೊಳ್ಳಬೇಕು. ಈ ಚಿತ್ರದ

1001695465

ನಿರ್ಮಾಪಕರು ಒಂದು ಹಾಲಿವುಡ್ ಸಿನಿಮಾ ಮಾಡುವಷ್ಟು ಜ್ಞಾನ ಮತ್ತು ಶ್ರೀಮಂತಿಕೆ ಇರುವವರು. ಆದರೆ ಕನ್ನಡದ ಯುವ ನಾಯಕನಿಗಾಗಿ ಹತ್ತಾರು ಕೋಟಿ ಹಾಕಿ ಚಿತ್ರ ಮಾಡಿರುವುದನ್ನು ಮೆಚ್ಚಲೇಬೇಕು ಎಂದರು.
ಸ್ಪಾರ್ಕ್ ನಲ್ಲಿ ನಾಯಕ ನಿರಂಜನ್ ಪತ್ರಕರ್ತನ‌ಪಾತ್ರದಲ್ಲಿದ್ದು ನ್ಯಾಯದ ಹೋರಾಟ ನಡೆಸುವ ಪಾತ್ರದಲ್ಲಿ ಪ್ರತ್ಯಕ್ಷಗೊಳ್ಳಲಿದ್ದಾರೆ.
1001695459

ಚಿತ್ರದ ನಾಯಕ‌ ನಿರಂಜನ್ ಮಾತನಾಡಿ, ಹಾಡನ್ನು ಉಪೇಂದ್ರ ಈಗಾಗಲೇ   ಅವರಿಗೆ ತೋರಿಸಿದ ಬಗ್ಗೆ ಹೇಳಿಕೊಂಡರು.‌ "ಹಾಡು ಚಿಕ್ಕಪ್ಪನಿಗೆ ತೋರಿಸಿದೆ. ದೊಡ್ಡ ಸ್ಟಾರ್ ಗೆ ಸಿಗುವಂಥ ಹಾಡು ನಿನಗೆ ಸಿಕ್ಕಿದೆ ಎಂದರು. ನನ್ನ ಅದೃಷ್ಟ ಎಂದುಕೊಂಡಿದ್ದೇನೆ. ಸಚಿನ್ ಅವರು ತುಂಬ ಕ್ರಿಯೇಟಿವ್ ಆಗಿ ಸಂಗೀತ ನೀಡಿದ್ದಾರೆ. ನನ್ನ ವೃತ್ತಿ ಬದುಕಿನಲ್ಲಿ ತುಂಬ ವೇಗವಾಗಿ ಚಿತ್ರೀಕರಣಗೊಂಡಂಥ ಸಿನಿಮಾ ಇದು. ಯಾಕೆಂದರೆ ಇದರ ಹಿನ್ನೆಲೆಯಲ್ಲಿ ಕಾರ್ಪೊರೇಟ್ ನಿರ್ಮಾಪಕರಿರುವುದೇ ಕಾರಣ" ಎಂದರು.

1001695477

ನಿರಂಜನ್‌ಗೆ ಜೋಡಿಯಾಗಿರುವ ರಚನಾ ಇಂದರ್ ಮಾತನಾಡಿ, "ಇದು ನನ್ನ ಮೊದಲ‌ ಕಮರ್ಷಿಯಲ್ ಸಾಂಗ್" ಎಂದರು. ಜೊತೆಗೆ ಫಸ್ಟ್ ಟೈಮ್ ಇಷ್ಟು ಗ್ಲಾಮರಸ್ಸಾಗಿಯೂ ಕಾಣಿಸಿದ್ದೇನೆ ಎಂದರು.

1001695462

ಸ್ಪಾರ್ಕ್ ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಮಾತನಾಡುತ್ತಾ,
"ಇದು ಒಂದು ವರ್ಷದ ಪಯಣ. ನಾನು ಅಂದುಕೊಂಡಿದ್ದನ್ನು ತೆರೆಯ ಮೇಲೆ ಮೂಡಿಸಿರುವ ತೃಪ್ತಿ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರೇಮ್ ಅವರು ನೆಗೆಟಿವ್ ಪಾತ್ರ ಒಪ್ಪಿಕೊಂಡು, ಬೆಂಬಲಿಸಿದ್ದು ನಮಗೆ ಶಕ್ತಿ ನೀಡಿದೆ" ಎಂದರು.

1001695474

ಸ್ಪಾರ್ಕ್ ಚಿತ್ರದ ಈ ಮೊದಲ ಹಾಡು ಸೇರಿದಂತೆ 4 ಹಾಡುಗಳಿಗೆ ಸಂಗೀತ ನೀಡಿದವರು ಸಚಿನ್ ಬಸ್ರೂರು. ತುಂಬ ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಆದರೆ ಈ ಹಾಡು ಬ್ರೇಕ್ ನೀಡಬಹುದೆನ್ನುವ ನಿರೀಕ್ಷೆ ಇವೆ. ಇಲ್ಲಿ ಒಟ್ಟು 4 ಹಾಡುಗಳಿವೆ. ಪ್ರೇಮ್ ಅವರಿಗೂ ಹಾಡು ಇವೆ ಎಂದರು. ಬಳಿಕ‌ ಮಾತನಾಡಿದ ಗೀತ ರಚನೆಕಾರ ಪ್ರಮೋದ್ ಮರವಂತೆ "ಈ‌ ಹಾಡಿನ ಹಿಂದಿ  ಅವತರಣಿಕೆ ಕೂಡ‌ ಇಲ್ಲಿ ನೋಡಿದ್ದೀರಿ. ಹಿಂದಿಯಲ್ಲೂ
ನಾನೇ ಹಾಡುಗಳನ್ನು  ಬರೆದಿದ್ದೇನೆ.‌ ಕನ್ನಡದಲ್ಲಿ ಉತ್ತರ ಕರ್ನಾಟಕದ ಭಾಷೆ ಇದೆ.‌ ಅದು ನನ್ನ ಫೇವರಿಟ್ ಭಾಷಾ ಪ್ರಕಾರಗಳಲ್ಲಿ ಒಂದು ಎಂದರು.

1001695468

ನಟ ಶರಣ್ ಜತೆ ಗಾಯಕಿ ಸಂಗೀತ ರವೀಂದ್ರನಾಥ್ ಸೇರಿ  ಆಲಾಪಿಸಿರುವ ಈ ಗೀತೆಯನ್ನು ವೇದಿಕೆಯಲ್ಲಿ ಸಂಗೀತಾ ಜೊತೆಗೆ ಸಚಿನ್ ಬಸ್ರೂರು ಸೇರಿ ಆಲಾಪಿಸಿದರು.
1001695485

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ