- ರಾಘವೇಂದ್ರ ಅಡಿಗ ಎಚ್ಚೆನ್.

ಜೀ ಕನ್ನಡದ ‘ಸರಿಗಮಪ’ ಶೋ ಮೂಲಕ ಫೇಮಸ್ ಆದ ಸುಹಾನಾ ಸೈಯದ್ ಅವರು ಈಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಜೊತೆ ಈ ಮದುವೆ ನೆರವೇರಿದೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಾ ಇದ್ದಾರೆ. ಅವರು ಮಂತ್ರ ಮಾಂಗಲ್ಯ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್ ನಲ್ಲಿ ಸುಹಾನಾ ಸೈಯ್ಯದ್ ಮತ್ತು ನಿತಿನ್ ಪರಸ್ಪರ ಹಾರ ಬದಲಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ವಿವಾಹಕ್ಕೆ ನಿತಿನ್ - ಸುಹಾನಾ ಸೈಯ್ಯದ್‌ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು.
ಸುಹಾನಾ ಅವರು ‘ಸರಿಗಮಪ’ ಶೋಗೆ ತೆರಳಿ ಮಿಂಚಿದರು. ಆ ಬಳಿಕ ‘ಶ್ರೀಕೃಷ್ಣನೇ ಶ್ರೀನಿವಾಸನೇ’ ಭಜನೆ ಹೇಳಿದ್ದರಿಂದ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದರು. ಮುಸ್ಲಿಂ ಧರ್ಮದ ಅನೇಕರು ಅವರ ಈ ಕೆಲಸವನ್ನು ಖಂಡಿಸಿದರು. ಈಗ ಅವರು ಗೆಳೆಯ ನಿತಿನ್ ಜೊತೆ ವಿವಾಹ ಆಗಿದ್ದಾರೆ. ಅವರ ಮಂತ್ರ ಮಾಂಗಲ್ಯ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಗಮನ ಸೆಳೆದಿದೆ.

suhana 1

ಸುಹಾನಾ ಹಾಗೂ ನಿತಿನ್ 16 ವರ್ಷಗಳ ಹಿಂದೆ ಪರಿಚಯ ಆದರು. ಆ ಬಳಿಕ ಇವರ ಮಧ್ಯೆ ಪ್ರೀತಿ ಮೂಡಿತು. ಈ ಮೊದಲು ಸೋಶೀಯಲ್ ಮೀಡಿಯಾದಲ್ಲಿ ಸುಹಾನಾ ಈ ಬಗ್ಗೆ ಮಾಹಿತಿ ನೀಡಿದ್ದರು. ‘ಪ್ರತಿ ಜೀವವೂ ಪ್ರೀತಿಗಾಗಿ ಹುಡುಕಾಡುತ್ತದೆ. ಪ್ರತಿ ಹೃದಯವು ಪ್ರೀತಿಗಾಗಿ ಹಾತೊರೆಯುತ್ತದೆ. ಪ್ರೀತಿಗೆ ಯಾವುದೇ ಮಿತಿಯಿಲ್ಲ. ಅದು ದೂರ, ಅನುಮಾನಗಳು ಮತ್ತು ಭಯಗಳನ್ನು ಮೀರಿದ ಪ್ರಯಾಣ. ಆ ಅಪರಿಮಿತ ಪ್ರೀತಿಗೆ ನಾವು ಸಾಕ್ಷಿಗಳಾಗಿ ನಿಲ್ಲುತ್ತೇವೆ. ಇಂದು, ನಾವು ನಮ್ಮ ರಹಸ್ಯವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಾ ಇದ್ದೇವೆ. ನಿಮ್ಮ ಆಶೀರ್ವಾದವನ್ನು ಕೋರುತ್ತೇವೆ’ ಎಂದು ಸುಹಾನಾ ಬರೆದುಕೊಂಡಿದ್ದರು.
ಸುಹಾನಾ ಹಾಗೂ ನಿತಿನ್ ದಂಪತಿಗೆ ಎಲ್ಲರೂ ಶುಭಕೋರುತ್ತಿದ್ದಾರೆ. ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ