ಅಸಲಿ ಯಾ ನಕಲಿ :  ಶಬ್ದದ ಬಳಕೆ ಈಗ ಅತಿ ಮಾಮೂಲಿ ಆಗಿಹೋಗಿದೆ. ಏಕೆಂದರೆ ವಿಶ್ವದೆಲ್ಲೆಡೆಯ ಮಾಹಿತಿ ರೆಡಿಮೇಡ್‌ ಆಗಿ ಇದೀಗ ನಿಮ್ಮ ಕೈಗಳಲ್ಲಿ ಅತ್ಯಾಧುನಿಕ ಟೆಕ್ನಾಲಜಿಯಾಗಿ ಕ್ಷಣ ಮಾತ್ರದಲ್ಲಿ ಲಭ್ಯ ಎಂದಾಗಿ ಹೋಗಿದೆ. ಇದರ ಅರ್ಥ, ಎಲ್ಲಾ ಜನಸಾಮಾನ್ಯರೂ ಇದರ ಬಳಕೆಯಿಂದ ಅತಿ ಬುದ್ಧಿವಂತರಾಗಿ ಹೋಗುತ್ತಾರೆ ಅಂತಲ್ಲ. ಬದಲಿಗೆ ನಿಮಗೆ ಯಾವಾಗ ಬೇಕೋ, ಹೇಗೆ ಬೇಕೋ ಅಂಥ ಫೋಟೋ, ಅಗತ್ಯದ ಫೋನ್‌ ನಂಬರ್‌, ವಿಡಿಯೋ, ದಸ್ತಾವೇಜು, ಇಮೇಲ್ ‌ಇತ್ಯಾದಿಗಳನ್ನು ಕರಾರುವಾಕ್ಕಾಗಿ ನೀಡುತ್ತದೆ. ಜೊತೆಗೆ, ಆ ಮಾಹಿತಿ ಎಷ್ಟು ಮಾತ್ರ ಅಸಲಿ ಯಾ ನಕಲಿ ಎಂದೂ ಹೇಳಬಲ್ಲದು. ಯಾರೋ ಒಬ್ಬ ನಿಮಗೆ ಫೋನ್‌ ಮಾಡಿ ಫ್ಲರ್ಟ್‌ ಮಾಡುತ್ತಿದ್ದರೆ ಅಥವಾ ನಿಮ್ಮಿಂದ ಪರ್ಸನಲ್ ಮಾಹಿತಿ ಪಡೆದು ಬ್ಯ್ಲಾಕ್‌ ಮೇಲಿಂಗ್‌ ಗೆ ಇಳಿದರೆ, ಅಂಥವುಗಳ ಸುಳಿವು ನೀಡಬಲ್ಲದು! ಗನ್‌ ಬ್ಲಡ್‌ ಎಂಬ ಕಂಪನಿ ಇಂಥ ಒಂದು ಕ್ಯಾರೆಕ್ಟರ್‌ ತಯಾರಿಸಿದೆ, ಅದು ಹೊಸ ಹೊಸ ರಾಗಗಳಲ್ಲಿ ಸಂಗೀತ ಸುಧೆ ಹರಿಸಬಲ್ಲದು, ಹಾಡಿನಲ್ಲಿ ಹೊಸ ಬಗೆಯ ಸಾಹಿತ್ಯ ನೀಡಬಲ್ಲದು.... ಇರಿ ಇರಿ.... ಹಿಗ್ಗಿ ಹೋಗದಿರಿ, ಇವೆಲ್ಲ ಈ ಲೋಕದ ಇನ್ನಾವುದೋ ಮೂಲೆಯೊಂದರಲ್ಲಿ ಬಳಸಲ್ಪಟ್ಟಿದ್ದೇ, ಅಂದರೆ ಕದ್ದ ಮಾಲು! ಹಾಗಾಗಿ ಬಳಸುವಾಗ ಏಮಾರದಿರಿ.

women-s-national-team

ಧೈರ್ಯ ಕಳೆದುಕೊಳ್ಳಬೇಡಿ : ನಿಮ್ಮ ದೇಹದ ಒಂದು ಭಾಗ ಕೆಲಸ ಮಾಡುತ್ತಿಲ್ಲ ಎಂದರೆ, ಹೆದರದಿರಿ! ಅಂಥವರೂ ಸಹ ಈಗ ಫುಟ್‌ ಬಾಲ್ ‌ಯಾ ಸಾಕರ್‌ ನಂಥ ಆಟ ಆಡಬಲ್ಲರು. ಮೇಲಿನ ಈ ತಂಡ ಇದನ್ನೇ ತೋರಿಸುತ್ತಿದೆ, ಅಮೆರಿಕಾದ ನ್ಯಾಶನಲ್ ಆ್ಯಂಪ್ಯುಟರಿ ಟೂರ್ನಮೆಂಟ್‌ ನಲ್ಲಿ ಭಾಗವಹಿಸಿ, ತಮ್ಮ ಕ್ರೆಚಸ್‌ ಜೊತೆ ಗೆಲುವು ಸಾಧಿಸಿದ್ದಾರೆ! ನಮ್ಮ ದೇಹ ಹೇಗೇ ಇರಲಿ, ಅದರ ಲಿಮಿಟ್‌ ನಲ್ಲಿ ನಾವು ಖಂಡಿತಾ ಏನಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.

nantucket-s-annual-july-4th-wat

ಮೋಜುಮಸ್ತಿಗೆ ಸಮನುಂಟೆ? : ಹೋಳಿ ಹಬ್ಬದ ಮಜಾ ಇರುವುದೇ, ಪರಿಚಿತ ಅಪರಿಚಿತರ ಮೇಲೆ ಬಣ್ಣ ಎರಚಾಡುವುದರಲ್ಲಿ! ಇದೇ ಹಬ್ಬವನ್ನು ವಿದೇಶದ ಮಂದಿ ಬೇರೆ ಬೇರೆ ರೀತಿಯಲ್ಲಿ ಆಚರಿಸಿ ಮಜಾ ಪಡೆಯುತ್ತಿದ್ದಾರೆ. ಅಮೆರಿಕಾದ ಎಷ್ಟೋ ನಗರಗಳಲ್ಲಿ ಕಳೆದ ಜುಲೈ 4 ರಂದು, ಪರಸ್ಪರರ ಮೇಲೆ ನೀರೆರಚಿ ಇಂಥ ಸಂಭ್ರಮಾಚರಣೆಯ ಮೋಜುಮಸ್ತಿಯಲ್ಲಿ ಜನ ಮಿಂದೆದ್ದರು. ಭಾರತದಲ್ಲಿ ಇತ್ತೀಚೆಗೆ ಇಂಥ ಕಡಿಮೆ ಆಗುತ್ತಿದೆ. ಹಿಂದೂಮುಸ್ಲಿಂ ವೈಷಮ್ಯ ಅಥವಾ ದಲಿತರು ಉಚ್ಚ ಜಾತಿಯವರ ನಡುವಿನ ಸಂಘರ್ಷದಿಂದ, ಇಲ್ಲಿ ಮೋಜು ಹೋಗಿ ಇಲ್ಲದ ಗೋಜು ಶುರುವಾಗುವುದೇ ಹೆಚ್ಚು.

good-giveaway

ಪ್ರಶಂಸನೀಯ ಪ್ರಯತ್ನ : ವೀ ಗ್ರೋ ಲಾಸ್‌ ಆ್ಯಂಗಲ್ಸ್, ಹೇಳಿಕೊಳ್ಳುವಂಥದ್ದೇನೂ ಗ್ರೋ ಮಾಡುತ್ತಿಲ್ಲ. ಇದೊಂದು  ಅಂತಾರಾಷ್ಟ್ರೀಯ ಸಮಾಜಸೇವೆ ಸಂಸ್ಥೆ ಆಗಿದ್ದು, ಅಲ್ಲಿನ ಅನುಕೂಲಸ್ಥರೆಲ್ಲ ಸೇರಿ ಕಟ್ಟಿದ ಈ ಸಂಸ್ಥೆ, ಆ ನಗರದ ಹಸಿವಿನಿಂದ ಕಂಗೆಟ್ಟವರಿಗೆ ಆಹಾರ ಒದಗಿಸುವ ಕೆಲಸ ಮಾಡುತ್ತಿದೆ. ಭಾರತದಲ್ಲಿ ವ್ಯತ್ಯಾಸ ಎಂದರೆ, ಅನಗತ್ಯವಾಗಿ ಪುರೋಹಿತರಿಗೆ ದಾನದಕ್ಷಿಣೆ ನೀಡಲಾಗುತ್ತದೆ, ಅಲ್ಲಿ ತೀರಾ ಸೂರು ಸಹ ಇಲ್ಲದವರಿಗೆ. ಇದಕ್ಕಾಗಿ ಅಲ್ಲಿ ಹಣ ಸಂಗ್ರಹಣೆ, ದಾನಿಗಳನ್ನು ಹುಡುಕುವುದು ತೀರಾ ಕಷ್ಟವೇನಲ್ಲ. ಅಮೆರಿಕಾ ಮಂದಿ ಪರಸ್ಪರ ಅರಿತು ಬಾಳುವರು, ಸಹಾಯಕ್ಕೆ ಹಿಂಜರಿಯರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ