ಗುಂಡ : ನಿನ್ನ ಹೆಂಡತಿಗೆ ರೋಸ್ ಕೊಡು.
ತಿಮ್ಮ : ಯಾಕೆ?
ಗುಂಡ : ಶಿಕ್ಷಕರ ದಿನಾಚರಣೆ ಕಣಪ್ಪ.
ತಿಮ್ಮ : ಗೊತ್ತು, ನನ್ನ ಹೆಂಡತಿ ಟೀಚರ್ ಅಲ್ವಲ್ಲ!
ಗುಂಡ : ಅದು ನನಗೂ ಗೊತ್ತು! ನಿನ್ನ ಹೆಂಡತಿಯಿಂದ ನೀನು ಪಾಠ ಕಲಿತಷ್ಟು ಬೇರೆ ಯಾರಿಂದಲೂ ಕಲಿತಿರಲು ಸಾಧ್ಯವೇ ಇಲ್ಲ!
ಟೀಚರ್ : ನೋಡಿ ಸ್ಟೂಡೆಂಟ್ಸ್.... ನೀವು ಯಾರೂ ನನ್ನ ತರಗತಿಯಲ್ಲಿ ನಿದ್ದೆ ಮಾಡಲು ಸಾಧ್ಯವಿಲ್ಲ.
ಸೀನ : ಗೊತ್ತಿದೆ ಮೇಡಂ. ಆದರೆ.....?
ಟೀಚರ್ : ಏನು ಆದರೆ.....?
ಸೀನ : ನೀವು ಸ್ವಲ್ಪ ಮೆತ್ತಗೆ ಪಾಠ ಮಾಡಿದರೆ, ಹಿಂದಿನ ಬೆಂಚಿನವರಾದ ನಾವು ಸ್ವಲ್ಪ ಹಾಯಾಗಿ ಗೊರಕೆ ಹೊಡೆಯಬಹುದು.
ಟೀಚರ್ : ಇವತ್ತು ಬೆಳಗ್ಗೆ ಅರ್ಧ ದಿನ ಮಾತ್ರ ಕ್ಲಾಸಸ್ ಇರುತ್ತೆ, ಯಾಕಂದ್ರೆ ಇವತ್ತು ಟೀಚರ್ಸ್ ಡೇ!
ವಿದ್ಯಾರ್ಥಿಗಳು : ಹುರ್ರೇ..... ಟೀಚರ್ಸ್ ಡೇ ಪ್ರತಿ ತಿಂಗಳೂ ಬಂದ್ರೆ ಚೆನ್ನಾಗಿರುತ್ತದೆ!
ಟೀಚರ್ : ಲಂಚ್ ಅವರ್ ಮುಗಿದ ಮೇಲೆ ಮಧ್ಯಾಹ್ನದ ಕ್ಲಾಸೆಸ್ ಎಂದಿನಂತೆ ಇರುತ್ತದೆ.
ವೆಂಕ : ಟೀಚರ್ಸ್ ಗೆ ಕೊಡುತ್ತಿರುವ ಸಂಬಳ ಜಾಸ್ತಿ ಆಯ್ತು ಅಂತ ಮಕ್ಕಳ ಪೋಷಕರಿಗೆ ಅನಿಸುವುದು ಯಾವಾಗ?
ನಾಣಿ : ದಸರಾ, ಕ್ರಿಸ್ಮಸ್ ರಜೆ ಮತ್ತು ಬೇಸಿಗೆಯ ಸುದೀರ್ಘ ರಜೆ ಬಂದಾಗ!
ಕೆಲವು ಮಕ್ಕಳು ತಮ್ಮ ಕ್ಲಾಸ್ ಟೀಚರ್ ಬಗ್ಗೆ ಪ್ರಿನ್ಸಿಪಾಲ್ ರಿಗೆ ದೂರು ನೀಡುತ್ತಾರೆ.
ಪ್ರಿನ್ಸಿಪಾಲ್ : ಮಕ್ಕಳೇ, ಏನು ನಿಮ್ಮ ಸಮಸ್ಯೆ?
ಮಕ್ಕಳು : ನಮ್ಮ ಕ್ಲಾಸ್ ಟೀಚರ್ ಬಗ್ಗೆ ಕಂಪ್ಲೇಂಟ್ ಮಾಡಬೇಕಿತ್ತು.
ಪ್ರಿನ್ಸಿಪಾಲ್ : ಏನದು?
ಮಕ್ಕಳು : ನಮ್ಮ ಟೀಚರ್ ಗೆ ಏನೂ ಗೊತ್ತಿಲ್ಲ ಸಾರ್. ಎಲ್ಲದಕ್ಕೂ ನಮಗೇ ಆ್ಯನ್ಸರ್ ಹೇಳಿ.... ಆ್ಯನ್ಸರ್ ಹೇಳಿ.... ಮಗ್ಗಿ ಹೇಳಿ.... ಅಂತೆಲ್ಲ ಪೀಡಿಸುತ್ತಲೇ ಇರುತ್ತಾರೆ!
ಸೀನ : ಲೋ, ಬೇಗ ನನಗೆ ಉರ್ಲ್ ಕಳಿಸಿಕೊಡೋ!
ನಾಣಿ : ಯಾಕೋ....? ಏನಾಯ್ತು ನಿನಗೆ? ಮದುವೆ ಆಗಿ 10 ವರ್ಷ ಆಗಿದೆ ಅಷ್ಟೆ, ಇಷ್ಟು ಬೇಗ ಉರುಲು ಹಾಕಿಕೊಳ್ಳುವಂಥದ್ದು ಏನಾಯಿತಪ್ಪ ನಿನಗೆ.....?
ಸೀನ : ಬಾಯಿ ಮುಚ್ಚಿಕೊಂಡು ನನಗೆ ಉರ್ಲ್ ಕಳಿಸು, ಅಂದ್ರೆ ಮೇಲ್ ಮಾಡು ಅಂತಿದ್ದೀನಿ. ನಾನು ಎಂಪಿ3 ಡೌನ್ ಲೋಡ್ ಮಾಡಿಕೊಳ್ಳಬೇಕು, ನಿನ್ನ ಹೊಸ ವೆಬ್ ಸೈಟ್ ನ ಉರ್ಲ್ ಕಳಿಸು.
ನಾಣಿ : ಅಯ್ಯೋ ಮಂಗ! ಅದು ಉರ್ಲ್ ಅಲ್ಲ ಕಣೋ, ್ತ್ಯ್ಸ್ರ... ನಿನ್ನ ಮುಸುಡಿಗೆ ಅರ್ಥ ಆಯ್ತಾ!
ಮೋಹನ್ ಗುಂಡು ಪಾರ್ಟಿ ಮುಗಿಸಿಕೊಂಡು ತಡರಾತ್ರಿ 2 ಗಂಟೆಗೆ ಮನೆ ತಲುಪಿದ. ಮರು ದಿನ ಅವನು ದವಡೆ ಊದಿಸಿಕೊಂಡು ಆಫೀಸಿಗೆ ಬಂದಾಗ, ಸಹೋದ್ಯೋಗಿ ರಾಜೇಶ್ ಅದೇ ವಿಚಾರಾಗಿ ಅವನನ್ನು ಪ್ರಶ್ನಿಸಿದ.
ಅದಕ್ಕೆ ಉತ್ತರಿಸಿದ ಮೋಹನ್, ``ಇಲ್ಲ... ಇಲ್ಲ... ಅಂಥ ವಿಶೇಷ ಏನೂ ಇಲ್ಲ. ಮೇಲಿನ 2 ಹಲ್ಲು ಮೊನ್ನೆ ಗಾಡಿಯಿಂದ ಕೆಳಗೆ ಬಿದ್ದಾಗಲೇ ಮುರಿದು ಹೋಗಿತ್ತು!'' ಎಂದ.
ಪ್ರಕಾಶ್ ಒಂದು ಹೊಸ ಕಾರ್ ಖರೀದಿಸಿದ. ಹೆಂಡತಿಗೆ ಆ ವಿಚಾರವನ್ನು ಒಂದು ಸರ್ ಪ್ರೈಸ್ ಆಗಿ ಹೇಳೋಣ ಎಂದು ನಿರ್ಧರಿಸಿದ. ಹೀಗಾಗಿ ಮನೆಗೆ ಬಂದೊಡನೆ ಹೆಂಡತಿಗೆ ಕೂಗಿ ಹೇಳಿದ, ``ಡಾರ್ಲಿಂಗ್, ನಿನ್ನ ಹಲವು ವರ್ಷಗಳ ಕನಸು ನನಸಾಗಿದೆ.... ಬೇಗ ಬಂದು ನೋಡು!''





