ಜಾಗೀರ್ದಾರ್*

ಭಾರತದ ಪ್ರಮುಖ ಸ್ವದೇಶಿ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ zee5 ಮತ್ತೊಂದು ಹೊಸ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದೆ. ಮಲಯಾಳಂ ಹಾರರ್ ಕಾಮಿಡಿ‌ ಸಿನಿಮಾ ಸುಮತಿ ಒಲವು ಇದೇ ತಿಂಗಳ 26ರಿಂದ zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕನ್ನಡ, ತೆಲುಗು ,ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ವೀಕ್ಷಣೆ‌ ಮಾಡಬಹುದು.

ವಿಷ್ಣು ಶಶಿಶಂಕರ್ ಸುಮತಿ ಒಲವು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಅರ್ಜುನ್ ಅಶೋಕನ್, ಗೋಕುಲ್ ಸುರೇಶ್, ಸೈಜು ಕುರುಪ್, ಬಾಲು ವರ್ಗೀಸ್, ಮಾಳವಿಕಾ ಮನೋಜ್ ಮತ್ತು ಶಿವಡ ಸೇರಿದಂತೆ ಪ್ರತಿಭಾನ್ವಿತ ತಾರಾಬಳಗವಿದೆ. ಸುಮತಿ ಎಂಬ ಗರ್ಭಿಣಿ ಕೊಲೆ ಬಳಿಕ ನಡೆಯುವ ಹಾರರ್ ಕಥೆಗೆ ಕಾಮಿಡಿ ಟಚ್ ಕೊಟ್ಟು ಸಿನಿಮಾವನ್ನು ಕಟ್ಟಿಕೊಡಲಾಗಿದೆ.

sumathi 1

Zee5ನಲ್ಲಿ ಸ್ಟ್ರೀಮಿಂಗ್ ಆಗಿರುತ್ತಿರುವ ಸುಮತಿ ಒಲವು ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ವಿಷ್ಣು ಶಶಿಶಂಕರ್, ‘ಸುಮತಿ ಒಲವು ಸಿನಿಮಾ ಕೇರಳದ ಜಾನಪದದಲ್ಲಿ ಬೇರೂರಿದ್ದು, ಅದನ್ನು ಇಂದಿನ ಸಮಕಾಲೀನ ಪ್ರೇಕ್ಷಕರಿಗಾಗಿ ರಚಿಸಲಾಗಿದೆ. ಇದು ಕೇವಲ ಭಯಾನಕತೆಯನ್ನು‌ ಒಳಗೊಂಡಿರದೇ ಮಾನವನ ಭಾವನೆ ಬಗ್ಗೆ ರೂಪಿಸಲಾಗಿದೆ. ಸಿನಿಮಾ ಪುರಾಣ, ನೆನಪು ಹಾಗೂ ನಿಗೂಢತೆಯ ಸುತ್ತ ಸಾಗುತ್ತದೆ. ತಮ್ಮ ಈ ಕಂಟೆಂಟ್ ನ್ನು‌ ಪ್ರೇಕ್ಷಕರಿಗೆ ತಲುಪಿಸಲು zee5 ನಮಗೆ ಪರಿಪೂರ್ಣವಾದ ವೇದಿಕೆ’ ಎಂದರು.

ಶೂಟಿಂಗ್ ಸಮಯದಲ್ಲಿ ತಮಗೆ ಆದ ಅನುಭವ ಹಂಚಿಕೊಂಡ ನಟ ಅರ್ಜುನ್ ಅಶೋಕನ್, ‘zee5 ವಿವಿಧ ಭಾಷೆಗಳ ಪ್ರೇಕ್ಷಕರಿಗೆ ಸಮತಿ ಒಲವು ಸಿನಿಮಾ ಪ್ರದರ್ಶಿಸುತ್ತಿರುವುದು ಸಂತಸ’ ಎಂದು ಹೇಳಿದರು.

ನಟಿ ಮಾಳವಿಕಾ ಮನೋಜ್ ಮಾತನಾಡಿ, ಸುಮತಿ ಒಲವು ಸಿನಿಮಾ ಕೇರಳದ ಸಂಸ್ಕೃತಿ ಜೊತೆಗೆ ಸಸ್ಪೆನ್ಸ್ ತುಂಬಿರುವ ಸಿನಿಮಾ. ಈ ಚಿತ್ರದ ಭಾಗವಾಗಿರುವುದು ಖುಷಿಯಾಗಿದೆ. ಪ್ರತಿಭಾನ್ವಿತ ತಾರಾಬಳಗದ ಜೊತೆ ನಟಿಸಿರುವುದು‌ ರೋಮಾಂಚನಕಾರಿ ಅನುಭವಾಗಿದೆ. Zee5 ಪ್ರೇಕ್ಷಕರ ಪ್ರತಿಕ್ರಿಯೆಗೆ ನಾನು ಕಾತರಳಾಗಿದ್ದೇನೆ ಎಂದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ