- ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಖ್ಯಾತ ಪೋಷಕ‌ ನಟ ಸುಂದರ್ ರಾಜ್ ನಟನೆಯ 250ನೇ ಚಿತ್ರ ಚಾರ್ಜ್ ಶೀಟ್. ಇದರ ಟೀಸರ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲ ಲಾಂಚ್ ಮಾಡಿ ಶುಭಕೋರಿದ್ದಾರೆ.

ಚಾರ್ಜ್ ಶೀಟ್ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ‌ವಿಶೇಷ ಅತಿಥಿಯಾಗಿ ಆಗಮಿಸಿದ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವರ್ಸಜಾ,

"ಈ ಚಿತ್ರದ ಸಾಂಗ್‌ ನೋಡಿದ ತಕ್ಷಣ ಸಿನಿಮಾ ನೋಡಬೇಕು ಅನಿಸುತ್ತದೆ. ಅಂಕಲ್‌ (ಸುಂದರ್‌ರಾಜ್) ಅವರ ಬಾಂಡಿಲಾಂಗ್ವೆಜ್‌ ನನಗೆ ಗೊತ್ತು. ಅವರು ಏನನ್ನೂ ಗ್ರಾಂಟೆಡ್‌ ಆಗಿ ತಗೊಳ್ಳಲ್ಲ. ಈ ಇಂಡಸ್ಟ್ರಿಯಲ್ಲಿ ಉಳಿಯಬೇಕೆಂದರೆ ಒಂದೇ ದಾರಿ ಅದು ಟ್ಯಾಲೆಂಟ್‌. ಅದು ಇರುವುದಕ್ಕೆನೇ ಅಂಕಲ್‌ ಅವರ ಸಿನಿಮಾ ಇವತ್ತು 250 ನೇ ವರೆಗೆ ತಲುಪಿದೆ. ಕ್ಲೋಸಪ್‌ ಇದ್ದಾಗ ಅವರ ನಟನೆ ಇದನ್ನೆಲ್ಲ ನೋಡಿದಾಗ ವಾಹ್‌ ಅನಿಸುತ್ತದೆ. ಖಂಡಿತವಾಗಲೂ ನಾನು ಈ ಸಿನಿಮಾವನ್ನು ನನ್ನ ಫ್ಯಾಮಿಲಿ ಜೊತೆ ಹೋಗಿ ನೋಡುತ್ತೇನೆ. ಒಂದು ಚಿತ್ರ ಒಂದು ವಿಶನ್‌ ಇಟ್ಕೊಂಡು ಮಾಡಿರುವುದು. ಆ ವಿಶನ್‌ ಗೆ ಜಸ್ಟಿಫಿಕೇಶನ್‌ ಕೊಡುವುದು ಇದೆಯಲ್ಲ ಬಹಳ ಇಂಪಾರ್ಟ್‌ಮೆಂಟ್‌. ನನಗೆ ಅಂಕಲ್‌ ಅವರ ಯಾವ ಸಿನಿಮಾ ಫೆವರೇಟ್‌ ಅಂದರೆ ಉದ್ಭವ. ಅನಂತ್‌ ನಾಗ್‌ ಅವರ ಜೊತೆ ಇವರ ನಟನೆ ಅದ್ಭುತ. ಬಂಗಾರ ಜಿಂಕೆಯಲ್ಲಿ ಎಲ್ಲರೂ ಮಾಡಿದ್ದಾರೆ. ನಮ್ಮ ತಾತ, ಆಂಟಿ ಮಾಡಿದ್ದಾರೆ. ಏನೆಲ್ಲಾ ಮೂವಿಸ್‌ ಮಾಡಿದ್ದಾರೆ. ಲಾಟ್ಸ್‌ ಆಫ್‌ ಲವ್‌, ವಿ ಲವ್‌ ಯು" ಎಂದರು. ಆನಂತರ ಮುಂದುವರಿಯುತ್ತಾ ಈ ವೇದಿಕೆಯಲ್ಲಿ ಅಂಕಲ್‌ ನಮಗೊಂದು ಪ್ರಾಮಿಸ್‌ ಮಾಡಬೇಕು, ನನಗೂ ನಿಮ್ಮ ಸಿನಿಮಾದಲ್ಲಿ ಚಾನ್ಸ್‌ ಕೊಡಬೇಕು. ಯಾವುದಾದರೂ ಚಿಕ್ಕ ಪಾತ್ರವಿದ್ದರೂ ಮಾಡ್ತೀವಿ. ನಮ್ಮ ಅಣ್ಣ ಇದ್ದಿದ್ದರೆ ಭಯಂಕರ ರೇಗಿಸೋನು. ಅಣ್ಣ ಮತ್ತು ನೀವು ಪ್ಲ್ಯಾನ್‌ ಮಾಡಿದ್ದೀರಲ್ವ, ಅದನ್ನು ನಾವು ಟೇಕಾಫ್‌ ಮಾಡೋಣ ಎಂದು ಹೇಳಿದರು

1001571008

ಸುಂದರ್‌ ರಾಜ್‌ ಅವರು ಮಾತನಾಡುತ್ತಾ, ಮುಖ್ಯವಾಗಿ ವಾಣಿಜ್ಯ ಮಂಡಳಿ ಒಂದು ಒಳ್ಳೊಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಿದೆ. ಹೆಣ್ಮಕ್ಕಳೇ ಸ್ಟ್ರಾಂಗ್‌ ಗುರು. ಒತ್ತಡಗಳು ತುಂಬಾ ಇದೆ. ಯಾರಿಗೆ ಇಲ್ಲ. ಎಲ್ಲರಿಗೂ ಇದೆ. ಅದನ್ನೆಲ್ಲ ಬಿಟ್ಟು ಜಯಮ್ಮ ಬಂದಿದ್ದಾರೆ. ಮನಸ್ಸು ತುಂಬಿ ಬಿಟ್ಟಿದೆ. ಫುಲ್‌ ಮೀಲ್ಸ್‌ ಆಗಿದೆ. ನನ್ನ ಕೆರಿಯರ್‌ನಲ್ಲೇ ನಾನು ಇಂತಹ ಒಂದು ಪ್ರೆಸ್‌ಮೀಟ್‌ನ ನೋಡಿಲ್ಲ. ಸಿನಿಮಾ ಒಂದು ಕನಸು. ಎಲ್ಲರೂ ಹೀರೋ ಆಗೋಕೆ ಇಷ್ಟ ಪಡುತ್ತಾರೆ. ನಮ್ಮದು ಒಳ್ಳೆಯ ಬಿಸಿನೆಸ್‌ ಇತ್ತು. ದಿವಸಕ್ಕೆ 5,6 ಸಾವಿರ ವ್ಯಾಪಾರ ಇತ್ತು. ಆದರೆ ನನ್ನ ಆಸೆ ಇದ್ದಿದ್ದು ಕಾಸೇ ಕೊಡದೇ ಇರುವ ರಂಗಭೂಮಿಗೆ ಹೋದೆ ನಾನು. ನಾನು 8,9 ನೇ ಕ್ಲಾಸ್‌ ಓದಿರಬೇಕಾದರೆ, ಡಾಕ್ಟರ್‌ ಮಾಡಬೇಕು ಎನ್ನುವ ಆಸೆ ಇತ್ತು. ಆದರೆ ನಾನು ಆಕ್ಟರ್‌ ಆದೆ. ಈ ಚಾರ್ಚ್‌ಶೀಟ್‌ ಅನ್ನೋದು ನನಗೆ ರೋಮಾಂಚನ ಮಾಡಿತು. ದೇಶಕ್ಕೆ ರಕ್ಷಣೆ ಕೊಡುವವನು ಸೈನಿಕ. ಸ್ಟೇಟ್‌ಗೆ ರಕ್ಷಣೆ ಕೊಡುವವನು ಪೊಲೀಸ್‌. ಇದು ಜೆಪಿ ನಗರದಲ್ಲಿ ನಡೆದಂತಹ ಘಟನೆ ಈ ಸಿನಿಮಾ. ರಾಜ್‌ಕುಮಾರ್‌ ಅವರನ್ನು ನಾನು ನೆನಪು ಮಾಡುತ್ತೇನೆ. 1970 ರವರೆಗೆ 5000 ನೋಡಿರಲಿಲ್ಲ. ಅವರು ಯಾವತ್ತೂ ಕೋಟಿ ರೂ. ತಗೊಂಡವರಲ್ಲ. ಆದರೆ ಕೋಟಿ ಕೋಟಿ ಜನರ ಪ್ರೀತಿ ಗಳಿಸಿದರು. ಈ ಸಿನಿಮಾ ಬಜೆಟ್‌ ಕೇಳಿಲ್ಲ. ಮಾಡಿ ಅಂದೆ ಅಷ್ಟೇ. ನನ್ನ ಗುರುಗಳನ್ನು ನಾನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ತೇನೆ. ಕನ್ನಡ ಸಿನಿಮಾ ಪೈರೆಸಿ ಆಗಬಾರದು. ಅದು ಜೆರಾಕ್ಸ್‌ ಕಾಪಿ ಆಗುತ್ತದೆ. ಒರಿಜಿನಲ್‌ ನೋಡಿ. ನಾವು ಇಂಟರ್ನ್ಯಾಷನಲ್‌ ಮಟ್ಟಕ್ಕೆ ಹೋಗಿದ್ದೀವಿ. ಯಾವುದೇ ವಿಚಾರ ತಗೊಂಡಾಗ ಅದಕ್ಕೆ ಒತ್ತು ಕೊಡಬೇಕು. ಸಿನಿಮಾದಲ್ಲಿ ಯಾವುದೇ ಚಿಕ್ಕ ಪಾತ್ರ ಅಂತ ಇರಲ್ಲ. ವಿಲನ್‌, ಪೋಷಕ, ನಾಯಕ, ತಮಿಳು, ಮಲಯಾಳಂ, ಹಿಂದಿ ಯಲ್ಲಿ ನಟನೆ ಮಾಡಿದ್ದೀನಿ. ಆದರೆ ನಮ್ಮ ನಾಡೇ ನಮಗೆ ಚಂದ‌ ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ