ಜಾಗೀರ್ದಾರ್*

ಬೆಳ್ಳಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿರುವ ರಾಘು ಶಿವಮೊಗ್ಗ ನಿರ್ದೇಶಿಸಿರುವ ಮೂರನೇ ಸಿನಿಮಾ ದಿ ಟಾಸ್ಕ್ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ನವೆಂಬರ್ 21ಕ್ಕೆ ತೆರೆಗೆ ಎಂಟ್ರಿ ಕೊಡಲಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಜಿಟಿ‌ ಮಾಲ್‌ನಲ್ಲಿ ಜರುಗಿದೆ. ಕಾರ್ಯಕ್ರಮದಲ್ಲಿ ADGP ಎಂ ಚಂದ್ರಶೇಖರ್, ಲಹರಿ ಸಂಸ್ಥೆಯ ಲಹರಿ ವೇಲು, ವಿಷ್ಣು ಸೇನೆಯ ವೀರಕಪುತ್ರ ಶ್ರೀನಿವಾಸ್ ,‌ ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗೂ ಬಹದ್ದೂರ್ ಚೇತನ್ ಭಾಗಿಯಾಗಿ ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದರು.

task1

ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ಎಂ ಚಂದ್ರಶೇಖರ್,

ಟಾಸ್ಕ್ ಅಂದರೆ ಆಪರೇಷನ್, ಮಿಷನ್. ಇದನ್ನು ಯುನಿಫಾರ್ಮ್ ಸರ್ವೀಸ್ ನಲ್ಲಿ ಇದನ್ನು ಬಳಸುತ್ತಾರೆ. ಯಾವುದೇ ಒಂದು ಸಿನಿಮಾದಲ್ಲಿ ಮೆಸೇಜ್ ಇರಬೇಕು. ಇದರಿಂದ ಸಮಾಜದಲ್ಲಿ ಪ್ರಭಾವ ಜಾಸ್ತಿ ಇರುತ್ತದೆ. ಕೇವಲ ಎಂಟರ್ಟೈನ್ಮೆಂಟ್ ಅಲ್ಲದೇ ಒಂದು ಮೆಸೇಜ್ ಇರುವ ಸಿನಿಮಾ ದಿ ಟಾಸ್ಕ್. ಒಂದು ಸಿನಿಮಾ ಮಾಡಲು ಸಾಕಷ್ಟು ಕಷ್ಟ ಇರುತ್ತದೆ. ಇಬ್ಬರು ನಾಯಕರಿಗೆ ಒಳ್ಳೆಯದಾಗಲಿ. ಟೀಸರ್ ಚೆನ್ನಾಗಿದೆ. ಒಳ್ಳೆ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಒಳ್ಳೆ ತಾರಾ ಬಳಗ ಇದೆ ಎಂದರು.
ಪವನ್ ಒಡೆಯರ್ ಮಾತನಾಡಿ, ಟೀಸರ್ ಪ್ರಾಮಿಸಿಂಗ್ ಆಗಿದೆ. ಇಬ್ಬರು ನಾಯಕರು ಸ್ಕ್ರೀನ್‌ನಲ್ಲಿ ಚೆನ್ನಾಗಿ ಕಾಣಿಸುತ್ತಾರೆ. ಬರವಣಿಗೆ, ಸಿನಿಮಾ ಮೇಕಿಂಗ್ ಗೆ ರಾಘು ಸರ್ ಒತ್ತು‌ ನೀಡುತ್ತಾರೆ. ಚಿತ್ರರಂಗಕ್ಕೆ ಮಕ್ಕಳು ಹೋಗ್ತಾರೆ ಎಂದರು ತಂದೆ ತಾಯಿ ಬೇಡ ಎನ್ನುತ್ತಾರೆ. ಈ ವಿಚಾರದಲ್ಲಿ ರಾಜೇಶ್ ಸರ್ ಮಗ ಅದೃಷ್ಟ ಮಾಡಿದ್ದಾರೆ. ಅವರ ತಂದೆ ಮಗನ ಸಿನಿಮಾ ಕನಸಿಗೆ ಸಾಥ್ ಕೊಟ್ಟಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ದಿ ಟಾಸ್ಕ್ ಚಿತ್ರ ಸೂಪರ್ ಹಿಟ್ ಆಗಲಿ ಎಂದರು.

ಚೇತನ್ ಕುಮಾರ್ ಮಾತನಾಡಿ, ಟೀಸರ್ ನೋಡಿದ್ರೆ ಟೆರಿಫಿಕ್ ಆಗಿದೆ. ಕಥೆ ನೀವು ಗೆಸ್ ಮಾಡಿ ಎಂದು ಡೈರೆಕ್ಟರ್ ಟಾಸ್ಕ್ ಕೊಟ್ಟಿದ್ದಾರೆ. ಇಬ್ಬರು ಹೀರೋಗಳನ್ನು ನೋಡಿದ್ರೆ ಎರಡು ಹುಲಿಗಳನ್ನು ನೋಡಿದ ರೀತಿ ಆಗುತ್ತದೆ. ರಾಘು ಶಿವಮೊಗ್ಗ ಅಭಿನಯ ಎಷ್ಟೋ ನೈಜವಾಗಿ ಇರುತ್ತದೆಯೋ ಅವರು ಆಯ್ಕೆ ಮಾಡಿಕೊಳ್ಳುವ ಕಥೆ ಕೂಡ ನೈಜವಾಗಿ ಇರುತ್ತದೆ. ಕಥೆ ಮೇಲೆ ನಿರೀಕ್ಷೆ ಇದೆ. ಅವರು ಯಾವುದೇ ಸಿನಿಮಾ ಮಾಡಿದರೂ ಕೊನೆ ಸೀನ್ ತನಕ ಹೋಲ್ಡ್ ಮಾಡಿ ಇಡುತ್ತಾರೆ. ಟೆಕ್ನಿಕಲ್ ಟೀಂ ಸ್ಟ್ರಾಂಗ್ ಆಗಿದೆ. ಒಳ್ಳೆ ಕಲಾ ಬಳಗ ಚಿತ್ರದಲ್ಲಿದೆ ಎಂದರು.

task2

ಸಿಂಪಲ್ ಸುನಿ ಮಾತನಾಡಿ, ಜಯಸೂರ್ಯ ಮಿಸ್ಟರ್ ಸ್ಯಾಂಡಲ್ ವುಡ್. ಸಾಗರ್ ಪೆಂಟಗನ್ ಸಿನಿಮಾ ಬಳಿಕ ದಿ ಟಾಸ್ಕ್ ನಟಿಸಿದ್ದಾರೆ. ರಾಘು ಸರ್ ಡೈರೆಕ್ಟರ್ ಆಗುವ ಮುಂಚೆಯೇ ಇಂಡಸ್ಟ್ರಿಗೆ ಗೊತ್ತಿತ್ತು. ಅವರ ಶಾರ್ಟ್ ಮೂವೀ ಸ್ಟೇಟ್ ಅವಾರ್ಡ್ ತೆಗೆದುಕೊಂಡವರು.‌ ಅವರ ಚೂರಿ ಕಟ್ಟೆ ಮೂವೀ ಒಳ್ಳೆ ಕಲ್ಟ್ ಸಿನಿಮಾ. ಇದೀಗ ಟಾಸ್ಕ್ ಚಿತ್ರಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ