ರಾಘವೇಂದ್ರ ಅಡಿಗ ಎಚ್ಚೆನ್.

ಅನಾಯಾಸವಾಗಿ ಅರ್ಧ ಶತಕ ಪೂರೈಸಿದ 2026ರ ಮೊದಲ ಸಿನಿಮಾ ಅಂತ ಖ್ಯಾತಿಗೆ ಒಳಗಾದ *’ಭಾರತಿ ಟೀಚರ್ 7ನೇ ತರಗತಿ’* 50ನೇ ದಿನದ ಸಂಭ್ರಮದ ಸಮಾರಂಭವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಪೂಜ್ಯಾಯ ಫಿಲಂಸ್ ಅಡಿಯಲ್ಲಿ ಉದ್ಯಮಿ *ರಾಘವೇಂದ್ರ ರೆಡ್ಡಿ ಬಂಡವಾಳ* ಹೂಡಿದ್ದು, ಗುರುರಾಜ್ ರೆಡ್ಡಿ ಸಹ ನಿರ್ಮಾಪಕರು. *ಕಥೆ,ಚಿತ್ರಕಥೆ, ಸಂಭಾಷಣೆ,  ಸಾಹಿತ್ಯ, ಸಂಗೀತ ಮತ್ತು ನಿರ್ದೇಶನದ ಜವಬ್ದಾರಿಯನ್ನು ಎಂ.ಎಲ್.ಪ್ರಸನ್ನ* ಹೊತ್ತುಕೊಂಡಿದ್ದಾರೆ. ಸಚಿತ್ ಫಿಲಂಸ್‌ನ ವೆಂಕಟ್ ಗೌಡ ಕ್ರಿಯೇಟಿವ್ ಮುಖ್ಯಸ್ಥರಾಗಿ ಗುರುತಿಸಿಕೊಂಡಿದ್ದಾರೆ. ಹನ್ನೊಂದು ಕೇಂದ್ರಗಳಲ್ಲಿ 25 ದಿವಸ , ಒಂಬತ್ತು ಕೇಂದ್ರಗಳಲ್ಲಿ 500 ದಿವಸ ಮತ್ತು ಇಲ್ಲಿಯವರೆಗೂ ಎರಡು ಲಕ್ಷ ವಿದ್ಯಾರ್ಥಿಗಳು ಚಿತ್ರವನ್ನು ವೀಕ್ಷಿಸಿದ್ದಾರೆ.

IMG-20260319-WA0033

ಡಾ.ವಿ.ನಾಗೇಂದ್ರಪ್ರಸಾದ್, ನಟ ಧರ್ಮಕೀರ್ತಿರಾಜ್, ಮೋಹನ್, ರವಿಗೌಡ, ನಿರ್ದೇಶಕರುಗಳಾದ ಜಡೇಶ್.ಕೆ.ಹಂಪಿ, ಓಂಪ್ರಕಾಶ್ ರಾವ್, ಹಿರಿಯ ಪತ್ರಕರ್ತ,ನಟ ಚಕ್ರವರ್ತಿ ಚಂದ್ರಚೂಡ್, ವೀರಕಪುತ್ರ ಶ್ರೀನಿವಾಸ್ ಮುಂತಾದವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡದ ಕೆಲಸವನ್ನು ಶ್ಲಾಘಿಸಿದರು.

IMG-20260319-WA0034

ಶಿಕ್ಷಕರಾಗಿ ಸಿಹಿಕಹಿಚಂದ್ರು, ಟೈಟಲ್ ರೋಲ್‌ದಲ್ಲಿ ಕು.ಯಶಿಕಾ, ಗೋವಿಂದೇಗೌಡ, ಅಶ್ವಿನ್‌ಹಾಸನ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾ ಅಂಚನ್, ಬೆನಕಾ ನಂಜಪ್ಪ, ರೋಹಿತ್‌ರಾಘವೇಂದ್ರ, ಸೌಜನ್ಯಸುನಿಲ್, ಎಂ.ಜೆ.ರಂಗಸ್ವಾಮಿ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಎಂ.ಬಿ.ಹಳ್ಳಿಕಟ್ಟಿ, ಸಂಕಲನ ಸುಜಿತ್‌ನಾಯಕ್, ವಾದ್ಯ ಸಂಯೋಜನೆ ಕೆ.ಎಂ.ಇಂದ್ರ, ನೃತ್ಯ ಕಂಬಿರಾಜ್, ಕಾರ್ಯಕಾರಿ ನಿರ್ಮಾಪಕ ದರ್ಶನ್‌ಗೌಡ ಅವರದಾಗಿದೆ.

IMG-20260319-WA0032

ಡಾ.ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, ಭವಿಷ್ಯದಲ್ಲಿ ಶತದಿನ, ಸಿಲ್ವರ್ ಜುಬ್ಲಿ ಸಂಭ್ರಮದ ದಿನಗಳನ್ನು ನೋಡುವಂತ ಸಾಧ್ಯತೆಗಳು ತುಂಬ ಕಡಿಮೆ ಇದೆ. ಅಂತ ಒಂದು ದೊಡ್ಡ ಪೈಪೋಟಿ ಯುಗದಲ್ಲಿ ಕಾಲಿಟ್ಟು ಆಗಿದೆ. ಸೂಪರ್ ಸ್ಟಾರ್ ಚಿತ್ರಗಳೇ 20-30 ದಿವಸ ಕಾಣೋದು ಕಷ್ಟ. ಇಂಥ ಸಂದರ್ಭದಲ್ಲಿ ಕನ್ನಡ ಪರ, ಮುಂದಿನ ಪೀಳಿಗೆಗೆ ಕಿವಿಮಾತು ಹೇಳುವಂತ, ಕನ್ನಡ ಧ್ವನಿಯಾಗಿ, ಸ್ಪಷ್ಟವಾಗಿ ಚಿತ್ರದಲ್ಲಿ ತೋರಿಸಲಾಗಿದೆ. ಒಳ್ಳೆಯ ಅಂಶಗಳನ್ನು ಒಳಗೊಂಡಿರುವ ಚಿತ್ರವನ್ನು ಜನರಿಗೆ ತಲುಪಿಸುವಂತ ಕೆಲಸ ಆಗಬೇಕು. ಅಂತಹುದನ್ನು ಇವರುಗಳು ಮಾಡಿರುವುದು  ಶ್ಲಾಘನೀಯ. ಇಂತಹ ಪ್ರಯತ್ನಗಳು ಮತ್ತೆ ಮತ್ತೆ ಆಗಬೇಕು. ಚಿತ್ರ ನೋಡಿದ್ದೇನೆ. ಎಲ್ಲಾ ಪಾತ್ರಗಳ ಪೋಷಣೆಯನ್ನು ಆನಂದಿಸಿದ್ದೇನೆ ಎಂದರು.

IMG-20260319-WA0031

ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾಗಿರೋದು ನನ್ನ ಸೌಭಾಗ್ಯ ಅಂತ ಭಾವಿಸಿದ್ದೇನೆ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ, ಇಷ್ಟು ದೊಡ್ಡ ರೋಲ್ ಸಿಕ್ಕಿರೋದು ಇದೇ ಮೊದಲು. ಇಂತಹ ಪಾತ್ರ ನಿಭಾಯಿಸುತ್ತೇನೆ ಎನ್ನುವ ನಂಬಿಕೆ ಇರಲಿಲ್ಲ. ನಿರ್ದೇಶಕರು ನನ್ನ ಮೇಲೆ ಭರವಸೆ ಇಟ್ಟುಕೊಂಡಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. ಇಡೀ ಪಯಣದಲ್ಲಿ ಸಿನಿಮಾ ಬಿಟ್ಟು ಬೇರೇನೂ ಚರ್ಚೆ ನಡೆದೇ ಇಲ್ಲ. ಎಲ್ಲರ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ ಎಂದು ಸಿಹಿಕಹಿ ಚಂದ್ರು ಸಂತಸ ಹಂಚಿಕೊಂಡರು.
*’ಭಾರತಿ ಟೀಚರ್’* ಗೆದ್ದ ಖುಷಿಯಲ್ಲಿ ತಂಡದವರ ಮುಖದಲ್ಲಿ ಸಂತಸ ತಾಂಡವವಾಡುತ್ತಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ