- ರಾಘವೇಂದ್ರ ಅಡಿಗ ಎಚ್ಚೆನ್.

ಈ ಹಿಂದೆ ನಮೋ ಭೂತಾತ್ಮ, ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಯ ಡೀಲ್‌ ರಾಜಾ, ಕೋಣದಂಥ ವಿಭಿನ್ನ ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ
ನಟ, ಸೆನ್ಸೆಷನಲ್ ಸ್ಟಾರ್ ಕೋಮಲ್ ಕುಮಾರ್ ಅವರು ಬಹಳ ದಿನಗಳ ನಂತರ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
ಡಿಎಎಲ್‌ ಎಲ್‌ ಬಿ ಚಿತ್ರದ ಮುಹೂರ್ತ ಸಮಾರಂಭ ಗುರುವಾರ
ನೆರವೇರಿದೆ.  ಸಿದ್ದು ಅವರು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮುರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.
ವಿಜಯನಗರದ ಆದಿಚುಂಚನಗಿರಿ ಮಠದ ಆವರಣದಲ್ಲಿ ಈ ಹೊಸ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಕೋಮಲ್‌ ಕುಮಾರ್ ಅಭಿನಯದ ತೆನಾಲಿ ಡಿಎಎಲ್ ಎಲ್‌ ಬಿ ಚಿತ್ರಕ್ಕೆ ಸಹೋದರ, ಹಿರಿಯ ನಟ ಜಗ್ಗೇಶ್ ಅವರು ಕ್ಲಾಪ್
ಶಾ ಓದಿಕೊಂಡಿರುವ ಕೋಮಲ್‌ ಕುಮಾ‌ ಇದೀಗ ಸಿನಿಮಾದಲ್ಲೂ ಕರಿ ಕೋಟು ಹಾಕಿದ್ದಾರೆ.
ಕೋಮಲ್ ಕುಮಾರ್ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾ ತೆನಾಲಿ
ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಮಹಾಸ್ವಾಮೀಜಿ ಅವರೂ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇನ್ನು ತನಾಲಿ ಡಿಎಎಲ್‌ಎಲ್‌ ಬಿ ಚಿತ್ರದ ಟೈಟಲ್ಲೇ ಹೇಳುವ ಹಾಗೆ ನಾಯಕ ಕೋಮಲ್ ಕುಮಾರ್ ಈ ಸಿನಿಮಾದಲ್ಲಿ ಒಬ್ಬ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಿಜ ಜೀವನದಲ್ಲೂ ಲಾಯರ್ ಆಗಬೇಕಿದ್ದ ತಮ್ಮ ಕೋಮಲ್ ಗೆ ಜಗ್ಗೇಶ್‌ರಿಂದ  ಕರಿ‍' ಕೋಟು ಗಿಫ್ಟ್
ಚಿತ್ರದ ಮುಹೂರ್ತದ ನಂತರ ಸಹೋದರ ನಟ ಜಗ್ಗೇಶ್ ಅವರು ತಮ್ಮ ಕೋಮಲ್‌ಗೆ ಕಪ್ಪು ಕೋಟನ್ನು ಗಿಫ್ಟ್ ಆಗಿ ನೀಡಿದರು. ನಂತರ ಮಾತನಾಡಿದ ನಟ ಜಗ್ಗೇಶ್, ಆತ ನಿಜ ಜೀವನದಲ್ಲೂ ವಕೀಲಿ ಓದಿಕೊಂಡಿದ್ದಾನೆ, ಆತ ಸಿನಿಮಾರಂಗದ ಕಡೆ ಬರೆದಿದ್ದರೆ ಒಳ್ಳೇ ಲಾಯರ್ ಆಗಿದ್ದ, ಕೋಟಿ ಹಾಕಿ ಮಾಡಿದರಷ್ಟೇ ಸಿನಿಮಾ ಅಲ್ಲ, ಎಲ್ಲ ಚಿತ್ರಗಳನ್ನೂ ನೋಡಿ ಉಳಿಸಬೇಕು, ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಇದಾಗಿದೆ ಎಂದು ತಮ್ಮನ ಸಿನಿಮಾಗೆ ಶುಭ ಹಾರೈಸಿದರು.
ನಂತರ ನಾಯಕನಟ ಕೋಮಲ್ ಕುಮಾರ್‌ ಮಾತನಾಡಿ, 'ಲಾಯರ್ ಆಗಬೇಕು ಎನ್ನುವುದು ನನ್ನ ತಂದೆಯ ಕನಸಾಗಿತ್ತು. ಈಗ ನನ್ನ ತಂದೆ ಸಮಾನರಾದ ನಮಗೆ ಕರಿಕೋಟನ್ನು ಕೊಟ್ಟಿದ್ದಾರೆ, ರಿಯಲ್ ಆಗಿ ಆಗದಿದ್ದ ಕೆಲಸವನ್ನು ರೀಲ್‌ನಲ್ಲಿ ನೆರವೇರಿಸುತ್ತಿದ್ದೇನೆ, ಚಿತ್ರದಲ್ಲಿ ಇದೇ ಕರಿಕೋಟು ಧರಿಸಿ ಆಕ್ಸ್ ಮಾಡುತ್ತಿದ್ದೇನೆ' ಎಂದು ಹೇಳಿದರು.
ತೆನಾಲಿ ಡಿಎಎಲ್‌ಎಲ್‌ಬಿ ಚಿತ್ರದಲ್ಲಿ ಕೋಮಲ್ ಮ ನಾಯಕಿಯಾಗಿ ಕಾಜಲ್‌ ಕುಂದ‌
ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲಬಾರಿಗೆ ಕೋಮಲ್
ಅವರ ಜೊತೆ ನಾಯಕಿಯಾಗಿ ನಟಿಸುತ್ತಿದ್ದೇನೆ, ಪಾತ್ರದ ಬಗ್ಗೆ ಈಗಲೇ ಜಾಸ್ತಿ ಹೇಳಲು ಸಾಧ್ಯವಿಲ್ಲ' ಎಂದು ಹೇಳಿದರು.
ಇನ್ನು ಈ ಸಿನಿಮಾದಲ್ಲಿ ಮತ್ತೋರ್ವ ನಟಿ ಅಕ್ಷಿತಾ ಬೋಪಯ್ಯ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಸಿದ್ದುವ ಸಿದ್ದು ಸೇರಿದಂತೆ ಸಂತೋಷ್ ಮಾಯಪ್ಪ, ಪ್ರದೀಪ್‌ ಕುಮಾರ್ ಮಹಾಲಿಂಗಯ್ಯ, ರೇಣುಕಾ ಪ್ರಸಾದ್ ಅವರುಗಳು ಬಂಡವಾಳ ಹಾಕಿದ್ದಾರೆ. ರಿತ್ವಿಕ್ ಮುರಳಿಧರನ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ಉದಯ್‌ ಲೀಲಾ ಅವರ ಕ್ಯಾಮೆರಾ ವರ್ಕ್ ತೆನಾಲಿ ಡಿಎಎಲ್‌ಎಲ್‌ಬಿ ಚಿತ್ರಕ್ಕಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ