ರಾಘವೇಂದ್ರ ಅಡಿಗ ಎಚ್ಚೆನ್.

ರಾಜ್ಯದ ಸಿನಿಮಾ ಪ್ರೇಕ್ಷಕರಿಗೆ ಟಿಕೆಟ್ ದರದ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ. ಸಿನಿಮಾ ಟಿಕೆಟ್‌ಗಳ ಮೇಲೆ ಶೇ.2ರಷ್ಟು ಹೆಚ್ಚುವರಿ ಸೆಸ್ ವಿಧಿಸುವ ರಾಜ್ಯ ಸರ್ಕಾರದ ನಿರ್ಧಾರ ಸೆಪ್ಟೆಂಬರ್ 30ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಸಿನಿಮಾ ಮಂದಿರಗಳಲ್ಲಿ ಟಿಕೆಟ್ ಖರೀದಿಸುವ ಗ್ರಾಹಕರು ನಿಗದಿತ ಟಿಕೆಟ್ ದರದ ಜತೆಗೆ ಈ ಸೆಸ್ ಪಾವತಿಸಬೇಕಾಗುತ್ತದೆ.

2024ರಲ್ಲಿ ರಾಜ್ಯ ಸರ್ಕಾರ ಮಂಡಿಸಿದ್ದ ‘ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ’ಕ್ಕೆ ಇದೀಗ ಜಾರಿಗೆ ಬರುವ ಹಂತ ಬಂದಿದೆ. ವಿಧೇಯಕಕ್ಕೆ 2024ರ ಸೆಪ್ಟೆಂಬರ್ 23ರಂದು ರಾಜ್ಯಪಾಲರು ಅಂಕಿತ ಹಾಕಿದ್ದರು. ಸೆಪ್ಟೆಂಬರ್ 24ರಂದು ಸರ್ಕಾರದ ವಿಶೇಷ ರಾಜ್ಯಪತ್ರದಲ್ಲಿ ಕಾಯ್ದೆಯನ್ನು ಪ್ರಕಟಿಸಲಾಗಿತ್ತು.

ಸುಮಾರು ಎರಡು ವರ್ಷಗಳ ಬಳಿಕ ಅಧಿನಿಯಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಇದರ ಅನ್ವಯ ಸಿನಿಮಾ ಟಿಕೆಟ್‌ಗಳ ಮೇಲೆ ಶೇ.2ರಷ್ಟು ಸೆಸ್ ವಿಧಿಸಲಾಗುತ್ತದೆ. ಉದಾಹರಣೆಗೆ ₹200 ಮುಖಬೆಲೆಯ ಟಿಕೆಟ್ ಖರೀದಿಸಿದರೆ ಟಿಕೆಟ್ ದರದ ಜತೆಗೆ ₹4 ಹೆಚ್ಚುವರಿ ಸೆಸ್ ಪಾವತಿಸಬೇಕಾಗುತ್ತದೆ.

ಸಿನಿಮಾ ಟಿಕೆಟ್‌ಗಳಿಂದ ಸಂಗ್ರಹವಾಗುವ ಸೆಸ್ ಮೊತ್ತವನ್ನು ಸಿನಿಮಾ ಕಾರ್ಮಿಕರ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಯೋಜನೆಗಳಿಗೆ ಮಾತ್ರ ಬಳಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ