-ಶರತ್ ಚಂದ್ರ
‌‌‌   ಅಮ್ಮಾ ಎಂಟರ್‌ ಪ್ರೈಸಸ್ ಮೂಲಕ ಕೋಟೆನಾಡು ಚಿತ್ರದುರ್ಗದ ಹೆಚ್.ಆನಂದಪ್ಪ ಅವರು ಬಿಗ್ ಬಜೆಟ್ ನಲ್ಲಿ ನಿರ್ಮಿಸಿರುವ ಮೆಜೆಸ್ಟಿಕ್-2 ಚಿತ್ರದ 'ನಾಯಕ ನಾನೇ' ಎಂಬ ಮೊದಲ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಚಿತ್ರಕ್ಕೆ  ರಾಮು ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಯುವನಟ ಭರತ್ ಕುಮಾರ್, ಸಂಹಿತಾ ವಿನ್ಯಾ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಸಾಂಗ್ ರಿಲೀಸ್ ಮಾಡಿ, ಈ ಟೈಟಲ್ ಅದ್ಭುತವಾಗಿದೆ. ಇದರಿಂದ ಲಾಂಚ್ ಆದವರು ಎತ್ತರಕ್ಕೆ ಹೋಗಿದ್ದಾರೆ. ಅದೇರೀತಿ ಶಿಲ್ಪಾ ಶ್ರೀನಿವಾಸ್ ಅವರ ಮಗ ಭರತ್ ಕೂಡ ಬೆಳೆಯಲಿ. ನಿರ್ಮಾಪಕರಿಗೆ ಒಳ್ಳೇ ಲಾಭ ಬರಲಿ ಎಂದರು.
      ನಂತರ ಮಾತನಾಡಿದ ನಿರ್ಮಾಪಕ ಹೆಚ್. ಆನಂದಪ್ಪ, ಚಿತ್ರರಂಗ ನನಗೆ ಬಹಳ ಹೊಸದು. 20 ವರ್ಷಗಳಿಂದ ರುದ್ರೇಶ್ ಒತ್ತಾಯಿಸುತ್ತಿದ್ದ. ಆತನಿಂದ   ಪಿಂಕ್ ನೋಟ್ ಸಿನಿಮಾ ಪ್ರಾರಂಭಿಸಿದೆ. ಇದು  ಎರಡನೇ ಚಿತ್ರ. ಶೃತಿ ಮೇಡಂ ಅವರು ನಾಯಕನ ತಾಯಿ ಪಾತ್ರವನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಅವರ ಬೇರೆ ಚಿತ್ರಗಳಿಗಿಂತ ಹತ್ತುಪಟ್ಟು ಅಳಿಸುತ್ತಾರೆ.ಎಲ್ಲ ಕಲಾವಿದರು, ಟೆಕ್ನೀಷಿಯನ್ಸ್ ಹೊಂದಾಣಿಕೆಯಿಂದ ಕೆಲಸ ಮಾಡಿದ್ದರಿಂದಲೇ ಸಿನಿಮಾ ಇಷ್ಟು ಅದ್ಭುತವಾಗಿ ಬಂದಿದೆ. ಬೆಂಗಳೂರು, ಚಿತ್ರದುರ್ಗದ ಮರುಘಾ ಮಠ  ಮುಂತಾದೆಡೆ ಚಿತ್ರೀಕರಿಸಿದ್ದು, ಶೂಟಿಂಗ್ ನಲ್ಲಿ ನಾನೇ ಜೊತೆ ಇದ್ದು ನೋಡಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ಎಂದರು.
 ಭರತ್ ತಂದೆ ಶಿಲ್ಪಾ ಶ್ರೀನಿವಾಸ್ ಮಾತನಾಡಿ ನನ್ನ ಮಗನಿಗಾಗಿ ನಿರ್ಮಾಪಕ  ಆನಂದಪ್ಪ ಅವರನ್ನು ಆ ದೇವರೇ ಕಳಿಸಿದ್ದಾನೆ. ಅವರಿಗೆ ಒಳ್ಳೆದಾಗಲಿ ಎಂದರು.
ಸಂಗೀತ ನಿರ್ದೇಶಕ ವಿನು ಮನಸು ಮಾತನಾಡಿ ಚಿತ್ರದಲ್ಲಿ ೫ ಹಾಡುಗಳಿವೆ. ನಾಡು ನುಡಿ ಬಗ್ಗೆ, ತಾಯಿ ಸೆಂಟಿಮೆಂಟ್, ಲವ್ ಸಾಂಗ್, ಐಟಂ ಹೀಗೆ ಎಲ್ಲಾ ಜಾನರ್ ಹಾಡಲ್ಲಿದೆ ಎಂದರು.
   ಹಿರಿಯನಟಿ ಶೃತಿ ಮಾತನಾಡುತ್ತ ಭರತ್ ನಾಯಕನ ಜವಾಬ್ದಾರಿಯನ್ನು ತುಂಬಾ ಶೃದ್ದೆಯಿಂದ ನಿಭಾಯಿಸಿದ್ದಾರೆ. ಆತನ ತಾಯಿಯಾಗಿ ನಾನು ಅಭಿನಯಿಸಿದ್ದು, ನಿರ್ದೇಶಕ ರಾಮು ಹೃದಯಕ್ಕೆ ಹತ್ತಿರವಾಗುವ ಸಂಭಾಷಣೆಗಳನ್ನು ಬರೆದಿದ್ದಾರೆ. ಈ ಟೈಟಲ್ ಗೆ  ದೊಡ್ಡ ಇತಿಹಾಸವಿದೆ. ಅದು ಈ ಸಿನಿಮಾದಿಂದ ಮತ್ತೊಮ್ಮೆ ಮರುಕಳಿಸಲಿ ಎಂದರು.
    ನಿರ್ದೇಶಕ ರಾಮು ಮಾತನಾಡಿ ನನ್ನ ಮೊದಲ ಆಡಿಯೋ ಲಾಂಚ್ ಆಗ್ತಿದೆ. 20-30 ವರ್ಷ ತುಂಬಾ ಕಷ್ಟಪಟ್ಟಿದ್ದೇನೆ. ಒಬ್ಬ ಪ್ರೊಡ್ಯೂಸರ್ ಗೆ  ಒಪ್ಪಿಸೋದು ಸುಲಭವಲ್ಲ. ನನ್ನ ಸಬ್ಜೆಕ್ಟ್ ಕೇಳಿ ಅವಕಾಶ ಕೊಟ್ಟಿದ್ದು ಆನಂದಪ್ಪ ಅವರು. ನಾನು ಏನು ಕೇಳಿದೆನೋ ಅದೆಲ್ಲವನ್ನೂ ಒದಗಿಸಿಕೊಟ್ಟು ಸಹಕರಿಸಿದ್ದಾರೆ. ಮೊದಲ ಚಿತ್ರಕ್ಕೇ ಇಂಥ ನಿರ್ಮಾಪಕರು ಸಿಕ್ಕಿದ್ದು ನನ್ನ ಅದೃಷ್ಟ ಎಂದು ಹೇಳಿದರು.
  ನಾಯಕ ಭರತ್ ಮಾತನಾಡಿ ಈಗ ಬೆಂಗಳೂರಲ್ಲಿ ಏನೇನೆಲ್ಲ ನಡೀತಿದೆ ಅದನ್ನು ಚಿತ್ರದಲ್ಲಿ  ತೋರಿಸಿದ್ದೇವೆ.  ಈ ಹಾಡನ್ನು 7 ಜನ ಸಿಂಗರ್ಸ್ ಹಾಡಿದ್ದಾರೆ. ಸಿನಿಮಾ ಕೂಡ ಅದ್ಭುತವಾಗಿ ಬಂದಿದೆ.
6 ಫೈಟ್ ಬೇರೆ ಥರನೇ ಇದೆ. ಇದು ಮೆಜೆಸ್ಟಿಕ್ ನಲ್ಲೇ ಹುಟ್ಟಿಬೆಳೆದ ಹುಡುಗನ‌ ಕಥೆ. ನನ್ನ ಪಾತ್ರಕ್ಕೆ 2 ಶೇಡ್ಸ್ ಇದೆ. ಮೆಜೆಸ್ಟಿಕ್ ಅಂಡರ್ ಪಾಸ್, ಬಸ್ ಸ್ಟಾಪ್ ನಲ್ಲೂ ಶೂಟ್ ಮಾಡಿದ್ದೇವೆ ಎಂದರು.
 ನಾಯಕಿ  ಸಂಹಿತಾ ವಿನ್ಯಾ ಮಾತನಾಡಿ ಸಾಂಗ್ ತುಂಬಾ ಚೆನ್ನಾಗಿ ಬಂದಿದೆ.  ಸಿನಿಮಾಗೆ ಎಲ್ಲರೂ ಸಪೋರ್ಟ್ ಮಾಡಿದ್ದಾರೆ. ಮಿಡಲ್ ಕ್ಲಾಸ್ ಹುಡುಗಿ ಪಾತ್ರ ನನ್ನದು ಎಂದರು.
ಈಗಿನ ಮೆಜೆಸ್ಟಿಕ್ ಏರಿಯಾ ಹೇಗಿದೆ,  ಅಲ್ಲಿ ನಡೆಯುವ ದಂಧೆಗಳು, ಅಕ್ರಮ ಚಟುವಟಿಕೆಗಳು  ಅಲ್ಲದೆ ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನು  ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯ ಮೂಲಕ   ಮೆಜೆಸ್ಟಿಕ್-2 ಚಿತ್ರದಲ್ಲಿ ನಿರ್ದೇಶಕ ರಾಮು ಹೇಳಹೊರಟಿದ್ದಾರೆ.
ಸಾಮಾನ್ಯ ಜನರಿಗೆ ಗೊತ್ತಿಲ್ಲದಂಥ ಅನೇಕ  ಚಟುವಟಿಕೆಗಳನ್ನು ಮೆಜೆಸ್ಟಿಕ್-2 ಅನಾವರಣಗೊಳಿಸಲಿದೆ.
    ಛಾಯಾಗ್ರಾಹಕರಾಗಿ ವೀನಸ್ ಮೂರ್ತಿ, ಅಸೋಸಿಯೇಟ್ ಡೈರೆಕ್ಟರ್ ಆಗಿ  ವಿಜಯಕುಮಾರ್, ಸಾಹಸ ನಿರ್ದೇಶಕರಾಗಿ ಚಿನ್ನಯ್ಯ ಕೆಲಸ ಮಾಡಿದ್ದಾರೆ.
    ಈ ಚಿತ್ರಕ್ಕೆ ಮೆಜಸ್ಟಿಕ್, ರಾಮೋಹಳ್ಳಿ, ಹೆಚ್.ಎಂ.ಟಿ., ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್.ಟಿ.ನಗರದ ನಿಸರ್ಗ ಹೌಸ್ ಸೇರಿದಂತೆ ಬಹುತೇಕ  ಬೆಂಗಳೂರು ಸುತ್ತಮುತ್ತ  ಚಿತ್ರೀಕರಣ ನಡೆಸಲಾಗಿದೆ. ವಿಶೇಷವಾಗಿ ಕನಸಿನ ರಾಣಿ ಮಾಲಾಶ್ರೀ ಅಭಿನಯದ ಹೀರೋ ಇಂಟ್ರಡಕ್ಷನ್ ಸಾಂಗನ್ನು  ಆರ್.ಎಸ್. ಗೌಡ ಅವರ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ