- ರಾಘವೇಂದ್ರ ಅಡಿಗ ಎಚ್ಚೆನ್.

ಲೋಚನ್ ಕಂಬೈನ್ಸ್ ಮೂಲಕ ಲಕ್ಕಿ ಶಂಕರ್ ಅವರು ಕಥೆ ಬರೆದು ನಿರ್ಮಾಣ ಮಾಡಿರುವ, ಹರೀಶ್ ಕುಂದೂರು ಅವರ ನಿರ್ದೇಶನದ ಚಿತ್ರ ವಕ್ರತುಂಡ. ಈ ಚಿತ್ರಕ್ಕೆ ಗ್ಯಾಂಗ್ಸ್ ಆಫ್ ಸುಲ್ತಾನ್ ಕಾಲೋನಿ ಎಂಬ ಅಡಿಬರಹವಿದೆ
ಉಮೇಶ್ B. R. ದಾವಣಗೆರೆ ಅವರು ಸಹ ನಿರ್ಮಾಣವಿರುವ ಈ ಚಿತ್ರದಲ್ಲಿ ಹಿರಿಯ ಹಾಸ್ಯನಟ ಎಂ.ಎಸ್. ಉಮೇಶ್ ಅವರು ಸಮಾಜಕ್ಕೆ ಸಂದೇಶ ಸಾರುವ ಅಂಧ ಗಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇದು ದಿ.ಉಮೇಶಣ್ಣ ಅಭಿನಯದ ಕೊನೇ ಚಿತ್ರವೂ ಹೌದು. ಈ ಚಿತ್ರದಲ್ಲಿ ದಿವಂಗತ ಉಮೇಶಣ್ಣ ಅವರ ಅಭಿನಯದ, ರವೀಂದ್ರ ಸೊರಗಾವಿ ಕಂಠದಲ್ಲಿ ಮೂಡಿಬಂದಿರುವ ‘ಅಂದ ನೋಡಿರಣ್ಣ, ಮನಸಿನ ಚಂದ ನೋಡಿರಣ್ಣ’ ಎಂ‌ಬ ಅರ್ಥಗರ್ಭಿತ ಸಾಹಿತ್ಯ ಇರುವ ಹಾಡು ಇಂದು ಸಂಜೆ 5 ಗಂಟೆಗೆ ಎ2 ಮ್ಯೂಸಿಕ್ ಯುಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆಯಾಗಲಿದೆ.

WhatsApp-Image-2026-01-12-at-9.58.21-AM-1-768x432

ಗಣೇಶ ಚತುರ್ಥಿ, ಸಾಮಾಜಿಕ ಏಕತೆ, ಮತ್ತು ಯುವಜನತೆಯ ಜಾಗೃತಿ ಎಂಬ ಮೂರು ವಿಷಯಗಳನ್ನು ಆಧರಿಸಿ, ನಗರದ ಹಿನ್ನಲೆಯಲ್ಲಿ ಮೂಡಿಬಂದಿರುವ ಈ ಚಿತ್ರವೀಗ ಬಿಡುಗಡೆಗೆ ಸಿದ್ಧವಾಗಿದೆ.
ಲಕ್ಕಿ ಶಂಕರ್, ಕಥೆ ಬರೆದು ಪ್ರಮುಖ‌ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಛಾಯಾಗ್ರಹಣ ಜೈ ಆನಂದ್, ಸಂಗೀತ ಜೆಮ್ಸ್ ಆರ್ಕಿಟೆಕ್ಟ್, ಸಂಕಲನ ಕುಮಾರ್, ನೃತ್ಯ ನಿರ್ದೇಶನ ಕಂಬಿ ರಾಜು ಅವರದಾಗಿದೆ.
ಪ್ರಮುಖ ಪಾತ್ರಗಳಲ್ಲಿ ಲಕ್ಕಿ ಶಂಕರ್, ರಚಿತಾ ಮಹಾಲಕ್ಷ್ಮಿ, ಉಮೇಶ್ ದಾವಣಗೆರೆ, ಮೂಗ್ ಸುರೇಶ್, ಅಮಿತ್ ರಾವ್, ಆಟೋ ನಾಗರಾಜ್, ಸಂಗಮೇಶ್ ಉಪಾಧ್ಯಾಯ, ಅನುಷಾ, ಮಾಸ್ಟರ್ ಅಥರ್ವ, ಮಾಸ್ಟರ್ ಲೋಚನ್, ಮಾಸ್ಟರ್ ಯಶ್, ಬೇಬಿ ಪ್ರೇಕ್ಷಾ, ಭುವನ ಹಾಗೂ ಇತರರು ನಟಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ