- ರಾಘವೇಂದ್ರ ಅಡಿಗ ಎಚ್ಚೆನ್.

ಕಾಂತಾರ ಪ್ರೀಕ್ವೆಲ್ ಸಿನಿಮಾದ ಟ್ರೈಲರ್​ ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲಿ ಇಂದು ಬಿಡುಗಡೆಯಾಗಿದೆ. ಟ್ರೈಲರ್ ಅದ್ಧೂರಿಯಾಗಿದ್ದು ರಿಷಭ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರು ಅದ್ಭುತವಾಗಿ ಅಭಿನಯ ಮಾಡಿದ್ದಾರೆ. ಇದರ ಖುಷಿಯಲ್ಲಿರುವ ಚಿತ್ರತಂಡ ಇಂದು ಕಾಂತಾರ ಪ್ರೀಕ್ವೆಲ್ ಸಿನಿಮಾ ನಿರ್ಮಾಣ ಮುಗಿದ ಮೇಲೆ ಇದೇ ಮೊದಲ ಬಾರಿಗೆ ಮಾಧ್ಯಮಗೋಷ್ಠಿ ನಡೆಸಿತು.

ಧೂಮಪಾನ, ಮದ್ಯಪಾನ ಹಾಗೂ ಮಾಂಸಹಾರ ಸೇವನೆ ಮಾಡಿ ಕಾಂತಾರ ಪ್ರೀಕ್ವೆಲ್ ಸಿನಿಮಾ ನೋಡಬಾರದು ಎನ್ನುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸಂಬಂಧ ಮಹಿಳೆಯೊಬ್ಬರು ಕೇಳಿದ ಪ್ರಶ್ನೆಗೆ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿದ ರಿಷಭ್ ಶೆಟ್ಟಿ ಅವರು, ಊಟೋಪಾಚಾರಗಳು, ಅವರವರ ಅಭ್ಯಾಸಗಳು, ಯಾವುದನ್ನೂ ಯಾರೂ ಪ್ರಶ್ನೆ ಮಾಡುವಂತ ಅಧಿಕಾರ ಇರಲ್ಲ. ಈ ಎಲ್ಲವೂ ಅವರವರ ಸ್ವಂತಕ್ಕೆ, ಅವರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಯಾರೋ ಫೇಕ್ ಫೋಸ್ಟ್ ಹಾಕಿದ್ದಾರೆ. ಈ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಈ ಸಂಬಂಧ ಅವರ ಬಳಿ ಹೋಗಿ ಮಾತನಾಡುವುದು ಕಷ್ಟ. ಆ ಮೇಲೆ ಅವರೇ ಪೋಸ್ಟ್ ಅನ್ನು ಡಿಲೇಟ್ ಮಾಡಿ, ಕ್ಷಮೆ ಕೂಡ ಕೇಳಿದರು ಎಂದು ರಿಷಭ್ ಶೆಟ್ಟಿ ಅವರು ಹೇಳಿದ್ದಾರೆ.

ಈ ಪೋಸ್ಟ್ ನಮ್ಮ ಪ್ರೊಡಕ್ಷನ್​ ಹೌಸ್​ಗೆ ಯಾವುದೇ ಸಂಬಂಧ ಇಲ್ಲ. ಇದನ್ನು ನೋಡಿದಾಗ ನನಗೆ ಫುಲ್ ಶಾಕ್ ಆಯಿತು. ನನಗೆ ಯಾರೋ ಕಳುಹಿಸಿದಾಗ ಪ್ರೊಡಕ್ಷನ್​ ಹೌಸ್​ಗೆ ಯಾಕೆ ಇದು ಮಾಡುತ್ತಿದ್ದಾರೆ, ಯಾರು ಮಾಡುತ್ತಿದ್ದಾರೆ ಎಂದು ಕೇಳಿದೆ. ಜನರು ಈ ಬಗ್ಗೆ ಏನು ಅಂದುಕೊಳ್ಳುತ್ತಾರೆ?. ಪ್ರತಿಯೊಬ್ಬರಿಗೆ ಅವರವರ ಬದುಕಿನ ಶೈಲಿ, ಹಕ್ಕು, ಅವರ ವಿವೇಚನೆಗೆ ಬಿಟ್ಟದ್ದು. ಇದನ್ನ ಪ್ರಶ್ನೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ರಿಷಭ್ ಶೆಟ್ಟಿ ಅವರು ಹೇಳಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ