ಶರತ್ ಚಂದ್ರ
ಸ್ಯಾಂಡಲ್ ವುಡ್ ಗೆ ಕಿರುತೆರೆಯಿಂದ ನಟ ನಟಿಯರು ಎಂಟ್ರಿ ಕೊಡುತ್ತಿರುವುದು ಹೊಸದೇನಲ್ಲ. ಕನ್ನಡ ಚಿತ್ರರಂಗದ ಹೆಚ್ಚಿನ ಟಾಪ್ ನಟ ನಟಿಯರು ಒಂದು ಕಾಲದಲ್ಲಿ ಸೀರಿಯಲ್ ಗಳಲ್ಲಿ ಅಭಿನಯಿಸಿ ಬೆಳ್ಳಿ ಪರದೆಗೆ ಬಂದವರು. ಈ ಪಟ್ಟಿಗೆ ನಾಯಕಿ ಮೌನ ಗುಡ್ಡದ ಮನೆ ಸೇರ್ಪಡೆಯಾಗಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ರಾಮಾಚಾರಿಯಲ್ಲಿ ಚಾರು ಪಾತ್ರದ ಮೂಲಕ ಮನೆ ಮಂದಿಗೆಲ್ಲ ಇಷ್ಟವಾಗಿರುವ ಮೌನ ಈಗ ಬಿಡುಗಡೆಗೆ ಸಿದ್ಧವಾಗಿರುವ ಕುಲದಲ್ಲಿ ಕೀಳ್ಯಾವುದೋ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ.
ಮಂಗಳೂರು ಮೂಲದ ಮೌನ ಗುಡ್ಡೆಮನೆ ಅತಿ ಚಿಕ್ಕ ವಯಸ್ಸಿನಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಶಿಕ್ಷಣದ ಜೊತೆಗೆ ಅಭಿನಯ ಕ್ಷೇತ್ರಕ್ಕೂ ಎಂಟ್ರಿ ನೀಡಿದ್ದರು.
ಕುಲದಲ್ಲಿ ಕೀಳ್ಯಾವುದೋ ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಟೈಲರ್ ನಲ್ಲಿ ಗಮನ ಸೆಳೆದಿದ್ದಾರೆ.
ಯೋಗರಾಜ್ ಭಟ್ ಕತೆ ಮತ್ತು ಸಾಹಿತ್ಯ ಬರೆದಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು ನಾಯಕ ನಾಗಿ ಅಭಿನಯ ಸಿರುವ ಮೌನ ಗೆ ಹಳ್ಳಿಯ ಮುಗ್ದ ಹುಡುಗಿಯ ಪಾತ್ರ ಸಿಕ್ಕಿದೆ.
ಸೋಷಿಯಲ್ ಮೀಡಿಯಾ ದಲ್ಲಿ ಕೂಡ ಆಕ್ಟಿವ್ ಆಗಿರುವ ಮೌನ,ತನ್ನದೇ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಅವರ Vlogs ನೋಡುವ ಫ್ಯಾನ್ಸ್ ಕೂಡ ತುಂಬಾ ಇದ್ದಾರೆ. ಸಮಯ ಸಿಕ್ಕಾಗ ತಾನು ಇಷ್ಟ ಪಡುವ ಜಾಗಕ್ಕೆ ಹೋಗಿ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಅತೀ ಚಿಕ್ಕ ವಯಸಿನಲ್ಲಿ ಕಿರುತೆರೆ ಯಲ್ಲಿ ಸ್ಟಾರ್ ಆಗಿರುವ ಮೌನ ಗುಡ್ಡೆ ಮನೆ ಬೆಳ್ಳಿ ತೆರೆ ಯಲ್ಲೂ ಕೂಡ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಕರ್ನಾಟಕ ದ ಚಿತ್ರ ಪ್ರೇಮಿಗಳನ್ನು ರಂಜಿಸಲಿ.