- ರಾಘವೇಂದ್ರ ಅಡಿಗ ಎಚ್ಚೆನ್.
ಸ್ಯಾಂಡಲ್ ವುಡ್ ನ ಯಂಗ್ ಅಂಡ್ ಆಕ್ಟಿವ್ ಹೀರೋ ವಿರಾಟ್ ಅಭಿನಯದ ಮೂರನೇ ಚಿತ್ರ "ಹರ್ಕ್ಯುಲಸ್". ಈ ಸಿನಿಮಾದ ಫಸ್ಟ್ ಲುಕ್ ಅದ್ದೂರಿಯಾಗಿ ರಿಲೀಸ್ ಆಗಿದೆ. ವಿಶೇಷವಾಗಿ ಬೆಂಗಳೂರಿನ ಕೋಣನಕುಂಟೆ ಬಳಿ ಇರುವ ಫೋರಂ ಮಾಲ್ ಆವರಣದಲ್ಲಿ ನಾಯಕ ವಿರಾಟ್ ನ ಖಾದರ್ ಲುಕ್ ಇರುವ ಸುಮಾರು 200 ಅಡಿಯ ಬೃಹತ್ ಟೈಟಲ್ ಪೋಸ್ಟರನ್ನು ಮಾಧ್ಯಮದವರ ಸಮ್ಮುಖದಲ್ಲಿ ಬಿಲ್ಡಿಂಗ್ ಮುಂಭಾಗದಲ್ಲಿ ರಿವೀಲ್ ಮಾಡಲಾಯಿತು. ಈಗಾಗಲೇ ಬಾಲಿವುಡ್ ಚಿತ್ರಗಳಲ್ಲಿ ಚಾಟ್ GPT ಯೊಂದಿಗೆ ಹಲವು ಚಿತ್ರಗಳು ಹೊರ ಬಂದಿದೆ. ಮೊದಲ ಬಾರಿಗೆ ಕನ್ನಡದಲ್ಲಿ ಹರ್ಕುಲಸ್ ಚಿತ್ರದ ಜೊತೆ ಕೊಲಾಬರೇಷನ್ ಆಗಿರುವುದು ಮತ್ತೊಂದು ವಿಶೇಷ.

ಬೆಳ್ಳಿ ಪರದೆಯ ಮೇಲೆ "ಕಿಸ್" ಚಿತ್ರದ ಮೂಲಕ ನಾಯಕನಾಗಿ ಎಂಟ್ರಿಕೊಟ್ಟ ಯುವ ನಟ ವಿರಾಟ್ , ಎರಡನೇ ಚಿತ್ರದಲ್ಲಿ "ರಾಯಲ್" ಆಗಿ ಮಿಂಚಿದ್ದು ಈಗ "ಹರ್ಕ್ಯುಲಸ್" ಆಗಿ ಮಾಸ್ ಎಂಟ್ರಿ ಕೊಡುತ್ತಿದ್ದಾರೆ.
ಈ ಹರ್ಕ್ಯುಲಸ್ ಚಿತ್ರಕ್ಕೆ ಯುವ ಪ್ರತಿಭೆ ಭಗೀರಥ ಕಥೆ , ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. Aahana ಫಿಲಂಸ್ ಮೂಲಕ ಈ ಒಂದು ಚಿತ್ರ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಈ ಚಿತ್ರದ ಫಸ್ಟ್ ಲುಕ್ ಹಾಗೂ ಚಿತ್ರದ ಕುರಿತು ಮಾಹಿತಿಯನ್ನು ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತು.
ಈ ಚಿತ್ರದ ನಿರ್ದೇಶಕ ಭಗೀರಥ ಮಾತನಾಡುತ್ತ 'ಹರ್ಕ್ಯುಲಸ್' ಎಂದರೆ ಸೈಕಲ್ ಅಲ್ಲ, ಇದು ಒಬ್ಬ ವಾರಿಯರ್ ಹೆಸರು ಎಂದು ಟೈಟಲ್ ಬಗ್ಗೆ ಸ್ಪಷ್ಟನೆ ನೀಡಿದರು. ಇದು ನನ್ನ 12 ವರ್ಷಗಳ ಜರ್ನಿ , ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ನಿರ್ದೇಶಕ ಶ್ರೀನಿವಾಸರಾಜು ಬಳಿ ಬಹಳಷ್ಟು ಕಲ್ತಿದ್ದೇನೆ. ರೈಟಿಂಗ್ ನನ್ನ ಹವ್ಯಾಸ. ಹಾಗಾಗಿ ವೆಬ್ ಸೀರೀಸ್ ಗಾಗಿ ಅಮೀಬಾ ಎಂಬ ಕಥೆ ಬರೆದಿದ್ದೆ. ಸಿನಿಮಾನೇ ನನ್ನ ಜೀವನ , ಹಾಗಾಗಿ ನನ್ನ ಮೊದಲ ಪ್ರಯತ್ನವಾಗಿ ನಮ್ಮ ಹರ್ಕುಲಸ್ ಚಿತ್ರದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ಕಥೆ ಬಗ್ಗೆ ಹೇಳೋದಾದರೆ ಇದು ಸೋಲನ್ನೇ ಕಾಣದ ವಾರಿಯರ್ ಒಬ್ಬನ ಹೆಸರು. ನಮ್ಮ ಚಿತ್ರದಲ್ಲಿ ನಾಯಕನ ಕ್ಯಾರೆಕ್ಟರ್ ಅದೇ ರೀತಿ ಇರುತ್ತದೆ. ಇದೊಂದು ಆಕ್ಷನ್ ಲವ್ ಕಂಟೆಂಟ್ ಇರುವ ಸಿನಿಮಾ. ಈ ಚಿತ್ರದ ಮೂಲಕ ವಿರಾಟ್ ಅವರನ್ನ ಬೇರೆಯದೇ ರೀತಿಯಲ್ಲಿ ತೋರಿಸಬೇಕೆಂದು ಪ್ರಯತ್ನಿಸುತ್ತಿದ್ದೇವೆ. ನಮ್ಮ ಚಿತ್ರದಲ್ಲಿ ಬಹಳಷ್ಟು ಪ್ರಮುಖ ಪಿಲ್ಲರ್ ಗಳಿದ್ದಾರೆ. ನಮ್ಮ ಚಿತ್ರಕ್ಕೆ ಕರುಣಾಕರ್ ಛಾಯಾಗ್ರಹಣ ಮಾಡುತ್ತಿದ್ದು, ಹರಿಕೃಷ್ಣ ರವರ ಸುಪುತ್ರ ಆದಿ ಹರಿ ನಮ್ಮ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ದೀಪು. ಎಸ್. ಕುಮಾರ್ ಸಂಕಲನ ಇದೆ. ಇನ್ನು ಈ ಚಿತ್ರದ ನಾಯಕಿ ನಮ್ಮ ಕನ್ನಡದವರೇ ಆಗಿದ್ದು , ಸದ್ಯದಲ್ಲೇ ತಿಳಿಸುತ್ತೇವೆ. ನವೆಂಬರ್ ನಲ್ಲಿ ಚಿತ್ರದ ಶೂಟಿಂಗ್ ಆರಂಭಿಸಿ ಮಾರ್ಚ್ ಏಪ್ರಿಲ್ ವೇಳೆಗೆ ಸಿನಿಮಾ ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಹಂತ ಹಂತವಾಗಿ ಎಲ್ಲಾ ಅಪ್ಡೇಟ್ ಮುಂದಿನ ದಿನಗಳಲ್ಲಿ ನೀಡುತ್ತೇವೆ. ನಮ್ಮ ತಂಡಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.





