ಶರತ್ ಚಂದ್ರ
ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ ಸಾಹಸಸಿಂಹ ವಿಷ್ಣುವರ್ಧನ್ ಅವರ ಒಂದಷ್ಟು ಎಲ್ಲ ರೆಕಾರ್ಡ್ಗಳನ್ನು ಮುರಿದಿರುವ ಯಜಮಾನ ಚಿತ್ರ ಇದೇ ನವೆಂಬರ್ 7 ನೇ ತಾರೀಕಿಗೆ ಮರು ಬಿಡುಗಡೆಯಾಗಲಿದೆ.
ಚಿತ್ರವನ್ನು 4K 7.1 DTS ಆಧುನಿಕ ತಂತ್ರಜ್ಞಾನದೊಂದಿಗೆ ಹೊಸದಾಗಿ ಬಿಡುಗಡೆ ಮಾಡುತ್ತಿದ್ದು, ಅಪ್ಪು ಕ್ರಿಯೇಷನ್ ಎಂಬ ಹೊಸ ವಿತರಕರು ಈ ಒಂದು ಹೊಸ ತಂತ್ರಜ್ಞಾನ ಬಳಸಿ ತಯಾರಿಸಿರುವ ಯಜಮಾನ ಚಿತ್ರ, ವಿಷ್ಣುವರ್ಧನ್ ಅಭಿಮಾನಿ ಬಳಗಕ್ಕೆ ರಾಜ್ಯೋತ್ಸವದ ಕೊಡುಗೆಯಾಗಿ ಚಿತ್ರ ವನ್ನು ನೀಡಲಿದ್ದಾರೆ.
ನಿಮಗೆಲ್ಲ ಗೊತ್ತಿರುವಂತೆ ತಮಿಳಿನ ಸೂಪರ್ ಸ್ಟಾರ್ ವಿಜಯಕಾಂತ್ ದ್ವಿಪಾತ್ರದಲ್ಲಿ ನಟಿಸಿರುವಂತಹ ‘ವಾನತ್ತೆ ಪೋಲ ” ಎನ್ನುವ ಸೂಪರ್ ಹಿಟ್ ತಮಿಳು ಚಿತ್ರದ ರಿಮೇಕನ್ನು ಚಿತ್ರದುರ್ಗ ಮೂಲದ ನಿರ್ಮಾಪಕ ‘ಹುಚ್ಚ’ ಸಿನಿಮಾ ಖ್ಯಾತಿಯ ಹೆಚ್. ಎ ತಮ್ಮ ಪತ್ನಿ ಯ ಹೆಸರಿನಲ್ಲಿ ಆಸ್ಕರ್ ಮೂವೀಸ್ ಲಾಂಛನ ದಲ್ಲಿ ಎಚ್. ಎ ರೆಹಮಾನ್ ನಿರ್ಮಿಸಿದ್ದರು.
ಒಬ್ಬ ಜವಾಬ್ದಾರಿತಯುತ ಅಣ್ಣನಾಗಿ ಕುಟುಂಬ ದ ಒಳಿತಿಗಾಗಿ ತ್ಯಾಗ ಮಾಡುವ, ತಮ್ಮಂದಿರನ್ನು ಸ್ವಂತ ಮಕ್ಕಳಂತೆ ಬೆಳೆಸುವ ವಿಷ್ಣುವರ್ಧನ್ ಅವರ ಅದ್ಭುತ ಅಭಿನಯ ಮೂಲ ಚಿತ್ರವನ್ನು ಮೀರಿಸುವಂತಿತ್ತು. ತಮ್ಮನ ಪಾತ್ರದಲ್ಲೂ ಕೂಡ ವಿಷ್ಣು ಉತ್ತಮ ವಾಗಿ ನಟಿಸಿದ್ದು ಎರಡು ಪಾತ್ರಗಳಲ್ಲಿ ವಿಜೃಂಭಿಸಿದ್ದರು.
ಈ ಸಿನಿಮಾ ನೋಡಿದ ನಂತರ ಎಷ್ಟೋ ಕುಟುಂಬಗಳಲ್ಲಿ ಜಗಳವಾಡಿ ಬೇರೆ ಬೇರೆಯಾಗಿದ್ದ ಅಣ್ಣ ತಮ್ಮಂದಿರು ಒಂದುಗೂಡಿದ ಘಟನೆಗಳು ನಡೆದಿವೆಯಂತೆ
ಇಂದಿನ ದಿನಗಳಲ್ಲಿ ಒಂದಷ್ಟು ಕೋಟಿ ಕೋಟಿ ಕಲೆಕ್ಷನ್ ಮಾಡುವ ಚಿತ್ರಗಳನ್ನು ನೋಡುತ್ತಿದ್ದೇವೆ. ಆದರೆ ಕಡಿಮೆ ಟಿಕೆಟ್ ಬೆಲೆ ಇದ್ದಂತಹ ಅಕಾಲಕ್ಕೆ 42 ಕೋಟಿ ಗಳಿಸಿದ್ದು ಒಂದು ದಾಖಲೆಯೇ ಸರಿ.
130 ಚಿತ್ರಮಂದಿಗಳಲ್ಲಿ ನೂರು ದಿನಗಳನ್ನು ಪೂರೈಸಿದ ಏಕೆ ಕನ್ನಡ ಚಿತ್ರ ಯಜಮಾನ. ಕನ್ನಡ ಚಿತ್ರರಂಗದಲ್ಲಿ 51 ಚಿತ್ರಮಂದಿರಗಳಲ್ಲಿ ರಜತ ಮಹೋತ್ಸವವನ್ನು ಪೂರೈಸಿದ ದಾಖಲೆ ಕೂಡ ಈ ಚಿತ್ರ ಬರೆದಿದೆ.
35 ಚಿತ್ರಮಂದಿರಗಳಲ್ಲಿ 35 ವಾರ ಓಡಿದ ದಾಖಲೆ ಕೂಡ ಚಿತ್ರಕ್ಕೆ ಇದೆ.
ಚಿತ್ರದುರ್ಗ ಮತ್ತು ಹುಬ್ಬಳ್ಳಿಯಲ್ಲಿ ಒಂದು ವರ್ಷ ಓಡಿದ ಈ ಚಿತ್ರ ಸಾರ್ವಕಾಲಿಕ ದಾಖಲೆಯನ್ನು ಮಾಡಿದೆ.
ಚಿತ್ರದಲ್ಲಿ ನಟಿಸಿರುವ ಪ್ರೇಮಾ, ಅಭಿಜಿತ್, ಶಶಿಕುಮಾರ್, ಅವಿನಾಶ್, ಟೆನ್ನಿಸ್ ಕೃಷ್ಣ, ಎಂ.ಎನ್ ಲಕ್ಷ್ಮಿ ದೇವಿ, ಪವಿತ್ರ ಲೋಕೇಶ್ ಮುಂತಾದ ನಟ ನಟಿಯರ ಅಭಿನಯ ಕೂಡ ಚಿತ್ರಕ್ಕೆ ಮೆರುಗು ನೀಡಿತ್ತು.
ಮೂಲ ಚಿತ್ರದ ಎಸ್. ಎ. ರಾಜ್ ಕುಮಾರ್ ಸಂಯೋಜಿಸಿದ ಟ್ಯೂನ್ ಗಳನ್ನು ಯಥಾವತ್ತಾಗಿ ರಾಜೇಶ್ ರಾಮನಾಥ್ ಬಳಸಿದ್ದರೂ ಕೂಡ, ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದು ಹಾಡುಗಳು ಇವತ್ತಿಗೂ ಕನ್ನಡಿಗರ ಜನ ಮಾನಸದಲ್ಲಿ ಅಚ್ಚಳಿಯದೆ ನಿಂತಿದೆ.
ಸಪ್ಟಂಬರ್ ತಿಂಗಳಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜನ್ಮದಿನೋತ್ಸವದಂದು ಯಜಮಾನ ಚಿತ್ರವನ್ನು ಮರು ಬಿಡುಗಡೆ ಮಾಡುವ ಪ್ಲಾನ್ ನ್ನು ವಿತರಕರು ಹಾಕಿ ಕೊಂಡಿದ್ದರು. ಹೊಸ ತಂತ್ರಜ್ಞಾನ ಅಳವಡಿಕೆ ಕೆಲಸದಿಂದಾಗಿ ನವಂಬರ್ ತಿಂಗಳಿಗೆ ಬಿಡುಗಡೆಯ ದಿನಾಂಕ ಮುಂದೂಡಲಾಗಿತ್ತು. ಒಟ್ಟಿನಲ್ಲಿ ವಿಷ್ಣು ಅವರಿಗೆ ಕರ್ನಾಟಕ ರತ್ನ ಬಂದಿರುವ ಖುಷಿಯಲ್ಲಿರುವ ದಾದಾ ಅಭಿಮಾನಿಗಳು ಯಜಮಾನ ಚಿತ್ರದ ಮರು ಬಿಡುಗಡೆಯನ್ನು ಹಬ್ಬವಾಗಿ ಆಚರಿಸಲು ತಯಾರಾಗಿದ್ದಾರೆ.