ಶರತ್ ಚಂದ್ರ
ಭಾರತದ ಬಹುನಿರೀಕ್ಷಿತ ಚಿತ್ರ ರಾಮಾಯಣದಲ್ಲಿ ಯಶ್ ರಾವಣನ ಪಾತ್ರ ಮಾಡುವುದರ ಜೊತೆಗೆ ತಮ್ಮ monster mind ಸಂಸ್ಥೆಯ ಮೂಲಕ ಈ ಚಿತ್ರದ ನಿರ್ಮಾಣಕ್ಕೆ ಕೂಡ ಕೈ ಹಾಕಿರುವುದು ನಿಮಗೆಲ್ಲ ಗೊತ್ತಿದೆ.ಈ ವರ್ಷದ ದೀಪಾವಳಿ ಹಬ್ಬದಂದು ಈ ಚಿತ್ರದ ಮೊದಲನೇ ಭಾಗ ಬಿಡುಗಡೆಯಾಗಲಿದ್ದು ಪ್ರಚಾರದ ಕಾರ್ಯ ಅಮೆರಿಕದಿಂದ ಆರಂಭವಾಗಿದೆ.
ಪ್ರತೀ ವರ್ಷ ಅಮೇರಿಕಾದಲ್ಲಿ ನಡೆಯುವ CinemaCon ಟ್ರೀಡ್ ಶೋ ಈ ವರ್ಷ ಲಾಸ್ ವೇಗಸ್ ನಲ್ಲಿ ಈ ತಿಂಗಳ 16 ವರೆಗೆ ನಡೆಯುತ್ತಿದ್ದು ಭಾರತದಿಂದ ರಾಮಾಯಣ ಚಿತ್ರ ತಂಡಕ್ಕೆ ಭಾಗವಹಿಸುವ ಅವಕಾಶ ಸಿಕ್ಕಿದೆ. ಈ ಸಂದರ್ಭದಲ್ಲಿ Fandago ಎನ್ನುವ ಯೂಟ್ಯೂಬ್ ಚಾನೆಲ್, ಚಿತ್ರದ ನಿರ್ದೇಶಕ ನಮಿತ್ ಮಲ್ಹೋತ್ರ ಮತ್ತು ಯಶ್ ಅವರ ಸಂದರ್ಶನವನ್ನು ಮಾಡಿದ್ದಾರೆ.

ಸಂದರ್ಶನದಲ್ಲಿ 'ರಾಮಾಯಣ 'ನಮ್ಮ ದೇಶದ ಸಂಸ್ಕೃತಿಯನ್ನು ಹೇಳುವ ಮಹಾ ಕಾವ್ಯ, ಈ ಮಹಾ ಕಾವ್ಯದ ಆಶಯವನ್ನು ಜಗತ್ತಿಗೆ ಪಸರಿಸುವ ಬಗ್ಗೆ ಯಶ್ ಮಾತಾಡಿದ್ದಾರೆ. ತಾಂತ್ರಿಕವಾಗಿ ಹಾಲಿವುಡ್ ಮಾದರಿಯ ರೀತಿಯಲ್ಲಿ ನಿರ್ಮಿಸಿರುವುದಾಗಿ ತಿಳಿಸಿದ್ದಾರೆ. ತನ್ನ ಪಾತ್ರ ಎರಡನೇ ಭಾಗದಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳುವುದಾಗಿ ತಿಳಿಸಿದ್ದಾರೆ.

ಟಾಕ್ಸಿಕ್ ಸಿನಿಮಾ ಬಗ್ಗೆ ಮಾತಾಡಿರುವ ಯಶ್,ಇದು ಮಾಮೂಲಿ ಗ್ಯಾಂಗ್ ಸ್ಟಾರ್ ಕಥೆಯಲ್ಲ, visual treat ಇರುವ ಸಿನಿಮಾ ಎಂದು ಬಣ್ಣಿಸಿದ್ದಾರೆ. ಇಡೀ ಸಂದರ್ಶನದ ಉದ್ದಕ್ಕೂ ತುಂಬಾ confident ಆಗಿ ಹೇಳಬೇಕಾದ ವಿಷಯ ವನ್ನು ಇಂಗ್ಲಿಷ್ ನಲ್ಲಿ ಸ್ಪಷ್ಟವಾಗಿ ಮಾತನಾಡಿರುವುದು ಯಶ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ಬಗ್ಗೆ ಹೆಮ್ಮೆಯೆನಿಸುತ್ತಿದೆ.

ಅವರ ಚಿತ್ರ ಜೀವನದ ಆರಂಭದ ದಿನಗಳಲ್ಲಿ ನ್ಯೂಸ್ ಚಾನೆಲ್ ಗಳು ಅವರನ್ನು ignore ಮಾಡುತ್ತಿದ್ದಾರಂತೆ. ಚಿಟ್ ಚಾಟ್ ಅಥವಾ ಸಂದರ್ಶನ ಮಾಡುತ್ತಿರಲಿಲ್ಲವಂತೆ. ಆದರೆ ಇಂದು ಅದೇ ಚಾನೆಲ್ ಗಳ ಕೈಗೆ ಸಿಗದೇ ದೇಶ ವಿದೇಶದ ಪ್ರತಿಷ್ಠಿತ ಚಾನಲ್ಗಳಲ್ಲಿ ಸಂದರ್ಶನ ನೀಡುವ ಮಟ್ಟಕ್ಕೆ ಯಶ್ ಬೆಳೆದಿದ್ದಾರೆ!





