ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಅಂತಿಮ ಘಟ್ಟ ತಲುಪಿದ್ದು ಫಿನಾಲೆ ಏಪ್ರಿಲ್ 11 ಶನಿವಾರ ಸಂಜೆ 7 ರಿಂದ 9 ಗಂಟೆಯವರೆಗೆ, 12 ರಂದು ಸಂಜೆ 7 ರಿಂದ 9:30 ರವರೆಗೆ ಪ್ರಸಾರವಾಗಲಿದೆ.

ಸೆಲೆಬ್ರಿಟಿ ಸ್ಪರ್ಧಿಗಳು ಮತ್ತು ಡ್ಯಾನ್ಸರ್ ಗಳು ಜೋಡಿಯಾಗಿ ಪರ್ಫಾರ್ಮೆನ್ಸ್ ನೀಡಿದ ಈ ಶೋನಲ್ಲಿ ವಿವಿಧ ಬಗೆಯ ನೃತ್ಯ ಪ್ರಕಾರಗಳು, ಥೀಮ್ ಗಳಿದ್ದಿದ್ದು ಮಾತ್ರವಲ್ಲದೆ ಈ ಕಾರ್ಯಕ್ರಮ ಕಳೆದ ಕೆಲವು ವಾರಗಳಿಂದ ಚಾನೆಲ್‌ನ ವೀಕೆಂಡ್ ಕಾರ್ಯಕ್ರಮಗಳಲ್ಲಿ ಪ್ರಮುಖ ಭಾಗವಾಗಿತ್ತು.

ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್, ರಚಿತಾ ರಾಮ್, ಅರ್ಜುನ್ ಜನ್ಯ ಮತ್ತು ವಿಜಯ್ ರಾಘವೇಂದ್ರ ಡಾನ್ಸ್ ಕರ್ನಾಟಕ ಡಾನ್ಸ್ ಶೋನ ತೀರ್ಪುಗಾರಾಗಿದ್ದರು. ಅನುಶ್ರೀ ನಿರೂಪಿಸಿದ್ದು, ತೀರ್ಪುಗಾರರು ಸ್ಪರ್ಧಿಗಳ ಪರ್ಫಾಮನ್ಸ್,  ಪ್ರೆಸೆಂಟೇಷನ್ ಗಳನ್ನು  ನೋಡಿ ತಮ್ಮ ತೀರ್ಪು ನೀಡಲಾಗಿದೆ.

ಈ ಶೋನಲ್ಲಿ ನೃತ್ಯದ ಮೂಲಕ ಕಥೆ ಹೇಳುವುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇಲ್ಲಿ ಶಾಸ್ತ್ರೀಯ, ಜಾನಪದ ಮತ್ತು ಸಿನಿಮಾ ಶೈಲಿಯ ನೃತ್ಯಗಳನ್ನು ವಿಷಯ ಅಥವಾ ಕಥೆಯ ಆಧಾರದ ಮೇಲೆ ಪ್ರದರ್ಶಿಸಲಾಗಿದ್ದು, ಇದು ವೀಕ್ಷಕರಿಗೆ ಭಾವನಾತ್ಮಕವಾಗಿ ಮತ್ತಷ್ಟು ಹತ್ತಿರವಾಗಿತ್ತು.

ಪೂಜಾ ಮತ್ತು ಅನೂಪ್, ಸಿದ್ದೇಗೌಡ್ರು ಮತ್ತು ದೀಶಲ್, ಮೋಹಿತ್ ಮತ್ತು ಅನನ್ಯ, ಹರ್ಷ ಮತ್ತು ನಂದು ಹಾಗೂ ಶಿಕ್ಷಿತ್ ತಾಪಾ ಮತ್ತು ಸಂಜನಾ ಫೈನಲಿಸ್ಟ್ ಗಳಾಗಿದ್ದು ಇವರುಗಳ ನಡುವೆ ಗ್ರಾಂಡ್ ಫಿನಾಲೆಯಲ್ಲಿ ಪೈಪೋಟಿ ನಡೆಯಲಿದೆ. ವಿಭಿನ್ನ ಶೈಲಿಯ ನೃತ್ಯಗಳನ್ನು ಅದ್ಭುತವಾಗಿ ಪ್ರದರ್ಶಿಸಿದ ಎಲ್ಲಾ ಜೋಡಿಗಳು ಈಗ ಅಂತಿಮ ಸುತ್ತನ್ನು ತಲುಪಿದ್ದಾರೆ. ಫಿನಾಲೆ ಎಪಿಸೋಡ್ ನಲ್ಲಿ ಎಲ್ಲಾ ಜೋಡಿಗಳು ಪರ್ಫಾರ್ಮ್ ಮಾಡಿದ ನಂತರ ಈ ಸೀಸನ್ ನ ವಿಜೇತರು ಯಾರು ಅಂತ ಘೋಷಣೆ ಮಾಡಲಾಗುತ್ತದೆ. ಇನ್ನು ಡಾನ್ಸ್ ಕರ್ನಾಟಕ ಡಾನ್ಸ್ ಈ ಸೀಸನ್ ನ ವಿಜೇತರು ಯಾರಾಗಲಿದ್ದಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

ಸೀಸನ್ ಈಗ ಅಂತಿಮ ಹಂತಕ್ಕೆ ಬಂದಿದ್ದು ಸ್ಪರ್ಧೆ ಮತ್ತಷ್ಟು ಕಠಿಣಗೊಂಡಿದೆ. ಫಿನಾಲೆಯಲ್ಲಿ ಪ್ರತಿ ಜೋಡಿಯು ಅದ್ಭುತವಾಗಿ ಪ್ರದರ್ಶನ ನೀಡುತ್ತಿರುವುದರಿಂದ ಗೆಲ್ಲುವವರು ಯಾರು ಎಂದು ಹೇಳುವುದು ಕಷ್ಟ. ಈ ಅಂತಿಮ ಸಂಚಿಕೆಗಳಲ್ಲಿ ವಿಜೇತರು ಯಾರೆಂದು ತಿಳಿಯಲಿದ್ದು, ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ