ದುಪಟ್ಟಾದ ಈ ವಿಭಿನ್ನ ಬಗೆಯ ‌ಸ್ಟೈಲ್ ನ್ನು ನಿಮ್ಮದಾಗಿಸಿಕೊಂಡು, ನೀವು ಸಹ ಸ್ಟೈಲ್‌  ದೀವಾ ಏಕಾಗಬಾರದು…..?

ಏನೇ ಇರಲಿ, ಇಂದಿನ ಹುಡುಗಿಯರು ವೆಸ್ಟರ್ನ್‌ ಔಟ್‌ಫಿಟ್‌ನೆಸ್ ಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದರೂ ಸಹ, ನಮ್ಮ ಇಂಡಿಯನ್‌ ಔಟ್‌ಫಿಟ್‌ನೆಸ್ ನ್ನು ಅವರು ದೂರ ತಳ್ಳುತ್ತಿಲ್ಲ! ಇದಕ್ಕೆ ಮುಖ್ಯ ಕಾರಣವೆಂದರೆ, ಸಾಮಾನ್ಯವಾಗಿ  ಭಾರತೀಯ ಉಡುಗೆಗಳು ಓಪನ್‌ ಆಗಿರುವ ಕಾರಣದಿಂದ ಕೂಲ್ ಅಂಡ್ ಕಂಫರ್ಟೆಬಲ್ ಅನಿಸುತ್ತವೆ. ಇಂಥ ಉಡುಗೆಗಳಲ್ಲಿ ಒಂದು, ಸರಳತೆಯೇ ಮೂರ್ತಿವೆತ್ತ ದುಪಟ್ಟಾ! ಇದನ್ನು ಕಾಲೇಜು ಕಿಶೋರಿಯರಿಂದ ಹಿಡಿದು ಉದ್ಯೋಗಸ್ಥ ವನಿತೆಯರವರೆಗೂ ಬಳಸುವುದನ್ನು ಗಮನಿಸಿದ್ದೇವೆ. ದುಪಟ್ಟಾಗಾಗಿ ಬಳಸಲಾಗುವ ವಸ್ತ್ರಗಳು ಬೇರೆ ಬೇರೆ ಮೂಲದ್ದೇ ಆಗಿರಬಹುದು….. ಅಂದರೆ ಕಾಟನ್‌, ಗ್ಲೇಸ್‌ ಕಾಟನ್‌, ಸಿಲ್ಕ್ ಜಾರ್ಜೆಟ್‌, ಶಿಫಾನ್‌, ಕಾಟನ್‌ ನೆಟ್‌ ಇತ್ಯಾದಿ. ಆದರೆ ಬೇಸಿಗೆಯಲ್ಲಿ ಅತ್ಯಧಿಕ ಡಿಮ್ಯಾಂಡ್‌ ಎಂದರೆ ಕಾಟನ್‌ ಹಾಗೂ ಗ್ಲೇಸ್‌ ಕಾಟನ್‌ನದು.

ಬನ್ನಿ, ದುಪಟ್ಟಾದ ಹೊಸ ಟ್ರೆಂಡ್ಸ್ ಬಗ್ಗೆ ವಿವರವಾಗಿ ತಿಳಿಯೋಣ :

ಲಹರಿಯಾ : ಇಂಥ ಪ್ರಿಂಟ್ಸ್ನ ದುಪಟ್ಟಾಗಳು ಸಾಮಾನ್ಯವಾಗಿ ಶಿಫಾನ್‌ದೇ ಆಗಿರುತ್ತವೆ. ಇದರ ಮೇಲೆ ಉದ್ದುದ್ದನೆ ಪಟ್ಟಿಗಳು ಕಾಣಿಸುತ್ತವೆ. ವೈವಿಧ್ಯಮಯ ಬಣ್ಣಗಳಲ್ಲಿ ಲಭಿಸುವ ಇವು ಲೈಟ್‌ ಪ್ಲೇನ್‌ ಕಲರ್‌ನ ಸೂಟ್‌ ಜೊತೆ ಬಹಳ ಆಕರ್ಷಕವಾಗಿ ಕಾಣುತ್ತವೆ. ಅದರಲ್ಲೂ ಮುಖ್ಯವಾಗಿ ಲೈಟ್‌ ಡ್ರೆಸ್‌ಗಳ ಜೊತೆ . ಇವು ತೂಕದಲ್ಲೂ ಬಹಳ ಹಗುರ. ಇವಕ್ಕೆ ತುಸು ಹೆವಿ ಲುಕ್‌ ನೀಡುವುದಕ್ಕಾಗಿ, ಅವುಗಳ ಅಂಚಿನಲ್ಲಿ ಮುತ್ತು, ಕ್ರೋಶಿಯಾ ಲೇಸ್‌, ಗೋಟಾ, ಗಂಟು ಇತ್ಯಾದಿಗಳನ್ನು ಬಳಸಲಾಗುತ್ತದೆ.

black_heavy_kantha_stole_full_length_1_4

ಕ್ಯಾರಿ ವಿತ್‌ ಸ್ಟೈಲ್‌ : ದುಪಟ್ಟಾ ಜೊತೆ ನೀವು ಧಾರಾಳವಾಗಿ ಹೊಸ ಹೊಸ ಪ್ರಯೋಗ ಮಾಡಬಹುದು, ಇದರಿಂದ ಹೆಚ್ಚಿನ ಸ್ಟೈಲಿಶ್‌ ಲುಕ್ಸ್ ಗಳಿಸಬಹುದು. ಇದನ್ನು ಧರಿಸುವ ಎಲ್ಲಕ್ಕೂ ಕಾಮನ್‌ ಸ್ಟೈಲ್ ಎಂದರೆ ಮುಂಭಾಗದಲ್ಲಿ ಎರಡೂ ಭುಜಗಳ ಮೇಲೆ ಹೊದೆಯುವಿಕೆ. ಆದರೆ ಇದನ್ನು ಒನ್‌ ಸೈಡ್‌ ಮಾತ್ರ ಹೊದೆಯುವುದರಿಂದ ಬ್ಯಾಕ್‌ನಿಂದ ಎರಡೂ ಭುಜಗಳ ಮೇಲೆ ಆಕರ್ಷಕ ಲುಕ್ಸ್ ಕೊಡುತ್ತದೆ. ಇಷ್ಟಲ್ಲದೆ ಇದನ್ನು ಮಫ್ಲರ್‌ ಸ್ಟೈಲ್‌ನಲ್ಲೂ ಕ್ಯಾರಿ ಮಾಡಬಹುದಾಗಿದೆ. ಇತ್ತೀಚೆಗೆ ದುಪಟ್ಟಾವನ್ನು ಸ್ಟೈಲಾಗಿ ಹೊದೆಯುವುದು ಮಾತ್ರವಲ್ಲದೆ, ಬಿಸಿಲಿನಿಂದ ತಲೆಯನ್ನು ರಕ್ಷಿಸಿಕೊಳ್ಳಲು, ಮುಖಕ್ಕೆ ಬಿಸಿಲ ಝಳ ತಾಕದಂತಿರಲು ಸಹ ಬಳಸತೊಡಗಿದ್ದಾರೆ. ಅಂದರೆ ಸ್ಟೈಲ್‌ ಜೊತೆ ಸೇಫ್ಟಿ ಕೂಡ!

plain

ಬಾಂಧ್ನಿ ಮತ್ತು ಟೈ-ಡೈ ವರ್ಕ್‌ : ಬಾಂಧ್ನಿ ಅಥವಾ ಬಂಧೇಜ್‌ ವರ್ಕ್‌ನ ದುಪಟ್ಟಾ ತಯಾರಿಸಲು ರೇಷ್ಮೆ ಎಳೆಗಳನ್ನು ಬಳಸುತ್ತಾರೆ. ತುಸು ತುಸು ಅಂತರದಲ್ಲಿ ಎಳೆಗಳಿಂದ ದುಪಟ್ಟಾವನ್ನು ಗಂಟು ಹಾಕಿ, ಅದನ್ನು ಸ್ವಲ್ಪ ಹೊತ್ತು ಬಣ್ಣದಲ್ಲಿ ಅದ್ದಿಡಲಾಗುತ್ತದೆ. ನಂತರ ಅದನ್ನು ಬಣ್ಣದಿಂದ ಹೊರತೆಗೆದು, ಎಳೆಗಳನ್ನು ಬಿಡಿಸಿ ಒಣಗಿಸಲಾಗುತ್ತದೆ. ಇದರ ಕಾರಣ ಗಂಟುಹಾಕಲಾಗಿದ್ದ ಜಾಗಗಳಲ್ಲಿ ಬ್ಯೂಟಿಫುಲ್ ಡಿಸೈನ್‌ ಮೂಡುತ್ತದೆ. ಇಂಥ ದುಪಟ್ಟಾಗಳು 2-3 ಬಣ್ಣಗಳಲ್ಲಿ ರೂಪುಗೊಳ್ಳುತ್ತವೆ. ಇದಕ್ಕೆ ಹೆವಿ ಲುಕ್ಸ್ ನೀಡುವುದಕ್ಕಾಗಿ ಮುತ್ತು, ಗಾಜು, ನೆಕ್ಕಿಗಳಿಂದ ಸಿಂಗರಿಸಲಾಗುತ್ತದೆ.

ಬಾಟಿಕ್‌  ಬ್ಲಾಕ್‌ ಪ್ರಿಂಟ್‌ : ಬಾಟಿಕ್‌ ಪ್ರಿಂಟ್‌ಗಾಗಿ ಗ್ಲೇಸ್‌ ಕಾಟನ್‌  ಸಿಲ್ಕ್ ಸ್ಟಫ್‌ ಬಳಸಲಾಗುತ್ತದೆ. ಇದರ ಮೇಲೆ ಬ್ಯಾಕ್‌ಲೇಸ್ ನೆರವಿನಿಂದ ಡಿಸೈನ್‌ ಮಾಡಲಾಗುತ್ತದೆ. ಇದು ಸಿಂಪಲ್  ಸೋಬರ್‌ ಲುಕ್‌ ನೀಡುತ್ತದೆ.

scarf

ಬ್ಲಾಕ್‌ ಪ್ರಿಂಟ್ಸ್ ಗಾಗಿ ಕಟ್ಟಿಗೆಯ ತುಂಡುಗಳನ್ನು (ಸ್ಟಿಕ್ಸ್) ಬಳಸಲಾಗುತ್ತದೆ. ಇದರ ಮೇಲೆ ವಿಭಿನ್ನ ಬಗೆಯ ಡಿಸೈನ್ಸ್ ಅಂದರೆ ಹೂ, ಬಳ್ಳಿ, ಎಲೆ, ನವಿಲು ಇತ್ಯಾದಿ ಮೂಡಿಸಬಹುದು. ಇಂಥ ವಿಧಾನದಲ್ಲಿ ತಯಾರಾದ ದುಪಟ್ಟಾಗಳ ವೈಶಿಷ್ಟ್ಯವೆಂದರೆ, ಇವುಗಳ ಡಿಸೈನ್‌ ಎಂದೂ ಫೇಡ್‌ ಆಗುವುದಿಲ್ಲ.

ಕಾಂತಾ ವರ್ಕ್‌ : ಇದೊಂದು ತರಹ ಅತಿ ಸೂಕ್ಷ್ಮವಾದ ಕಸೂತಿ. ಇದರಲ್ಲಿ ಸೂಜಿದಾರಗಳ ಸಹಾಯದಿಂದ ಡಿಸೈನ್‌ ಮಾಡಲಾಗುತ್ತದೆ. ಇದರ ಡಿಸೈನ್‌ ಬಲು ನುಣುಪಾಗಿರುತ್ತದೆ, ತಯಾರಿಸುವುದೂ ಬಲು ಕಷ್ಟ. ಪ್ಲೇನ್‌ ದುಪಟ್ಟಾ ಮೇಲೆ ಬಣ್ಣ ಬಣ್ಣದ ಡಿಸೈನ್ಸ್ ನೋಡಲು ಬಲು  ಆಕರ್ಷಕ. ಇವು ರಿಚ್‌ ಲುಕ್ಸ್ ಆದ್ದರಿಂದ, ಸಾಧಾರಣ ದುಪಟ್ಟಾಗಳಿಗಿಂತ ತುಸು ದುಬಾರಿ ಎಂಬುದೂ ನಿಜ.

leafy-love-dupatta-original

ಪ್ಲೇನ್‌ ದುಪಟ್ಟಾ : ಪ್ರಿಂಟೆಡ್‌ ಸೂಟ್‌ ಜೊತೆ ಪ್ಲೇನ್‌ ದುಪಟ್ಟಾ ಬಲು ಸೊಗಸು. ನೀವು ಇದರ ಮೇಲೆ ಏನಾದರೂ ಹೊಸ ಪ್ರಯೋಗ ಮಾಡಬಯಸಿದರೆ, ಇದರ ನಾಲ್ಕೂ ಬದಿಯ ಅಂಚಿಗೆ ಲೇಸ್‌, ಗಂಟು, ನೆಕ್ಕಿ, ಮಣಿ ಇತ್ಯಾದಿ ಜೋಡಿಸಬಹುದು. ನಿಮ್ಮ ಸೂಟ್‌ನಿಂದ ತುಸು ಬಟ್ಟೆ ತೆಗೆದು ಇದಕ್ಕೆ ಪ್ಯಾಚ್‌ವರ್ಕ್‌ ಸಹ ಕೊಡಬಹುದು, ಲೇಸ್‌ ವರ್ಕ್‌ ಆಗಿಯೂ ಬಳಸಬಹುದು ಅಥವಾ ಪ್ರಿಂಟೆಡ್‌ ಬಟ್ಟೆಯನ್ನು ದುಪಟ್ಟಾ ಮೇಲೆ ಆ್ಯಪ್ಲಿಕ್‌ ತರಹ ಬಳಸಬಹುದು.

ಯಾವ ಔಟ್‌ಫಿಟ್‌ಗೆ ಸೂಕ್ತ? : ಪಟಿಯಾಲಾ ಸೂಟ್‌, ಸೆಮಿ ಪಟಿಯಾಲಾ, ಅಫ್ಗಾನೀ ಸಲ್ವಾರ್‌, ಚೂಡೀದಾರ್‌ಗಳ  ಜೊತೆ ದುಪಟ್ಟಾ ಅತ್ಯಾಕರ್ಷಕ ಎನಿಸುತ್ತದೆ. ಈಗೆಲ್ಲ ಮಿಕ್ಸ್  ಮ್ಯಾಚ್‌ನ ಫ್ಯಾಷನ್‌ ಇರುವುದರಿಂದ ಆ ನಿಟ್ಟಿನಲ್ಲಿ ಹ್ಯಾಂಡಿಕ್ರಾಫ್ಟ್ ದುಪಟ್ಟಾವನ್ನು ವಿವಿಧ ಕುರ್ತಾಗಳೊಂದಿಗೆ ಮ್ಯಾಚ್‌ ಮಾಡಿ ಧರಿಸಬಹುದು.

– ಜಿ. ಸೀಮಾ 

COMMENT