ದುಪಟ್ಟಾದ ಈ ವಿಭಿನ್ನ ಬಗೆಯ ‌ಸ್ಟೈಲ್ ನ್ನು ನಿಮ್ಮದಾಗಿಸಿಕೊಂಡು, ನೀವು ಸಹ ಸ್ಟೈಲ್‌  ದೀವಾ ಏಕಾಗಬಾರದು.....?

ಏನೇ ಇರಲಿ, ಇಂದಿನ ಹುಡುಗಿಯರು ವೆಸ್ಟರ್ನ್‌ ಔಟ್‌ಫಿಟ್‌ನೆಸ್ ಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದರೂ ಸಹ, ನಮ್ಮ ಇಂಡಿಯನ್‌ ಔಟ್‌ಫಿಟ್‌ನೆಸ್ ನ್ನು ಅವರು ದೂರ ತಳ್ಳುತ್ತಿಲ್ಲ! ಇದಕ್ಕೆ ಮುಖ್ಯ ಕಾರಣವೆಂದರೆ, ಸಾಮಾನ್ಯವಾಗಿ  ಭಾರತೀಯ ಉಡುಗೆಗಳು ಓಪನ್‌ ಆಗಿರುವ ಕಾರಣದಿಂದ ಕೂಲ್ ಅಂಡ್ ಕಂಫರ್ಟೆಬಲ್ ಅನಿಸುತ್ತವೆ. ಇಂಥ ಉಡುಗೆಗಳಲ್ಲಿ ಒಂದು, ಸರಳತೆಯೇ ಮೂರ್ತಿವೆತ್ತ ದುಪಟ್ಟಾ! ಇದನ್ನು ಕಾಲೇಜು ಕಿಶೋರಿಯರಿಂದ ಹಿಡಿದು ಉದ್ಯೋಗಸ್ಥ ವನಿತೆಯರವರೆಗೂ ಬಳಸುವುದನ್ನು ಗಮನಿಸಿದ್ದೇವೆ. ದುಪಟ್ಟಾಗಾಗಿ ಬಳಸಲಾಗುವ ವಸ್ತ್ರಗಳು ಬೇರೆ ಬೇರೆ ಮೂಲದ್ದೇ ಆಗಿರಬಹುದು..... ಅಂದರೆ ಕಾಟನ್‌, ಗ್ಲೇಸ್‌ ಕಾಟನ್‌, ಸಿಲ್ಕ್ ಜಾರ್ಜೆಟ್‌, ಶಿಫಾನ್‌, ಕಾಟನ್‌ ನೆಟ್‌ ಇತ್ಯಾದಿ. ಆದರೆ ಬೇಸಿಗೆಯಲ್ಲಿ ಅತ್ಯಧಿಕ ಡಿಮ್ಯಾಂಡ್‌ ಎಂದರೆ ಕಾಟನ್‌ ಹಾಗೂ ಗ್ಲೇಸ್‌ ಕಾಟನ್‌ನದು.

ಬನ್ನಿ, ದುಪಟ್ಟಾದ ಹೊಸ ಟ್ರೆಂಡ್ಸ್ ಬಗ್ಗೆ ವಿವರವಾಗಿ ತಿಳಿಯೋಣ :

ಲಹರಿಯಾ : ಇಂಥ ಪ್ರಿಂಟ್ಸ್ನ ದುಪಟ್ಟಾಗಳು ಸಾಮಾನ್ಯವಾಗಿ ಶಿಫಾನ್‌ದೇ ಆಗಿರುತ್ತವೆ. ಇದರ ಮೇಲೆ ಉದ್ದುದ್ದನೆ ಪಟ್ಟಿಗಳು ಕಾಣಿಸುತ್ತವೆ. ವೈವಿಧ್ಯಮಯ ಬಣ್ಣಗಳಲ್ಲಿ ಲಭಿಸುವ ಇವು ಲೈಟ್‌ ಪ್ಲೇನ್‌ ಕಲರ್‌ನ ಸೂಟ್‌ ಜೊತೆ ಬಹಳ ಆಕರ್ಷಕವಾಗಿ ಕಾಣುತ್ತವೆ. ಅದರಲ್ಲೂ ಮುಖ್ಯವಾಗಿ ಲೈಟ್‌ ಡ್ರೆಸ್‌ಗಳ ಜೊತೆ . ಇವು ತೂಕದಲ್ಲೂ ಬಹಳ ಹಗುರ. ಇವಕ್ಕೆ ತುಸು ಹೆವಿ ಲುಕ್‌ ನೀಡುವುದಕ್ಕಾಗಿ, ಅವುಗಳ ಅಂಚಿನಲ್ಲಿ ಮುತ್ತು, ಕ್ರೋಶಿಯಾ ಲೇಸ್‌, ಗೋಟಾ, ಗಂಟು ಇತ್ಯಾದಿಗಳನ್ನು ಬಳಸಲಾಗುತ್ತದೆ.

black_heavy_kantha_stole_full_length_1_4

ಕ್ಯಾರಿ ವಿತ್‌ ಸ್ಟೈಲ್‌ : ದುಪಟ್ಟಾ ಜೊತೆ ನೀವು ಧಾರಾಳವಾಗಿ ಹೊಸ ಹೊಸ ಪ್ರಯೋಗ ಮಾಡಬಹುದು, ಇದರಿಂದ ಹೆಚ್ಚಿನ ಸ್ಟೈಲಿಶ್‌ ಲುಕ್ಸ್ ಗಳಿಸಬಹುದು. ಇದನ್ನು ಧರಿಸುವ ಎಲ್ಲಕ್ಕೂ ಕಾಮನ್‌ ಸ್ಟೈಲ್ ಎಂದರೆ ಮುಂಭಾಗದಲ್ಲಿ ಎರಡೂ ಭುಜಗಳ ಮೇಲೆ ಹೊದೆಯುವಿಕೆ. ಆದರೆ ಇದನ್ನು ಒನ್‌ ಸೈಡ್‌ ಮಾತ್ರ ಹೊದೆಯುವುದರಿಂದ ಬ್ಯಾಕ್‌ನಿಂದ ಎರಡೂ ಭುಜಗಳ ಮೇಲೆ ಆಕರ್ಷಕ ಲುಕ್ಸ್ ಕೊಡುತ್ತದೆ. ಇಷ್ಟಲ್ಲದೆ ಇದನ್ನು ಮಫ್ಲರ್‌ ಸ್ಟೈಲ್‌ನಲ್ಲೂ ಕ್ಯಾರಿ ಮಾಡಬಹುದಾಗಿದೆ. ಇತ್ತೀಚೆಗೆ ದುಪಟ್ಟಾವನ್ನು ಸ್ಟೈಲಾಗಿ ಹೊದೆಯುವುದು ಮಾತ್ರವಲ್ಲದೆ, ಬಿಸಿಲಿನಿಂದ ತಲೆಯನ್ನು ರಕ್ಷಿಸಿಕೊಳ್ಳಲು, ಮುಖಕ್ಕೆ ಬಿಸಿಲ ಝಳ ತಾಕದಂತಿರಲು ಸಹ ಬಳಸತೊಡಗಿದ್ದಾರೆ. ಅಂದರೆ ಸ್ಟೈಲ್‌ ಜೊತೆ ಸೇಫ್ಟಿ ಕೂಡ!

plain

ಬಾಂಧ್ನಿ ಮತ್ತು ಟೈ-ಡೈ ವರ್ಕ್‌ : ಬಾಂಧ್ನಿ ಅಥವಾ ಬಂಧೇಜ್‌ ವರ್ಕ್‌ನ ದುಪಟ್ಟಾ ತಯಾರಿಸಲು ರೇಷ್ಮೆ ಎಳೆಗಳನ್ನು ಬಳಸುತ್ತಾರೆ. ತುಸು ತುಸು ಅಂತರದಲ್ಲಿ ಎಳೆಗಳಿಂದ ದುಪಟ್ಟಾವನ್ನು ಗಂಟು ಹಾಕಿ, ಅದನ್ನು ಸ್ವಲ್ಪ ಹೊತ್ತು ಬಣ್ಣದಲ್ಲಿ ಅದ್ದಿಡಲಾಗುತ್ತದೆ. ನಂತರ ಅದನ್ನು ಬಣ್ಣದಿಂದ ಹೊರತೆಗೆದು, ಎಳೆಗಳನ್ನು ಬಿಡಿಸಿ ಒಣಗಿಸಲಾಗುತ್ತದೆ. ಇದರ ಕಾರಣ ಗಂಟುಹಾಕಲಾಗಿದ್ದ ಜಾಗಗಳಲ್ಲಿ ಬ್ಯೂಟಿಫುಲ್ ಡಿಸೈನ್‌ ಮೂಡುತ್ತದೆ. ಇಂಥ ದುಪಟ್ಟಾಗಳು 2-3 ಬಣ್ಣಗಳಲ್ಲಿ ರೂಪುಗೊಳ್ಳುತ್ತವೆ. ಇದಕ್ಕೆ ಹೆವಿ ಲುಕ್ಸ್ ನೀಡುವುದಕ್ಕಾಗಿ ಮುತ್ತು, ಗಾಜು, ನೆಕ್ಕಿಗಳಿಂದ ಸಿಂಗರಿಸಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ