ಫ್ಯಾಷನ್‌ ಎಂಥದೇ ಆಗಿರಲಿ, ಅದರಲ್ಲಿ ಎಲಿಗೆನ್ಸಿ ಮತ್ತು ಗ್ಲಾಮರಸ್‌ ಲುಕ್‌ ಹೆಚ್ಚಿನ ಮಹತ್ವ ಹೊಂದಿರುತ್ತದೆ. ಈ ವಿಷಯವನ್ನೇ ಗಮನದಲ್ಲಿರಿಸಿಕೊಂಡು ಡಿಸೈನರ್‌ ಕಪಲ್, ಭೂಮಿಕಾ ಮತ್ತು ಶ್ಯಾಮ್‌ ಶೋಧನ್‌ 2000 ಇಸವಿಯಲ್ಲೇ ತಮ್ಮ `ಶ್ಯಾಮ್‌ಭೂಮಿಕಾ' ಬ್ರಾಂಡ್‌ನ್ನು ಸ್ಥಾಪಿಸಿದರು. ಬಾಲ್ಯದಿಂದಲೇ ಫ್ಯಾಷನ್‌ ಕಡೆ ಅಪಾರ ಆಸಕ್ತಿ ಇದ್ದುದರಿಂದ ಭೂಮಿಕಾ ಮುಂಬೈನ `ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ'ಯಿಂದ ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ ಮಾಡಿದರು. ಈ ಪರ್ಟಿಕ್ಯುಲರ್‌ಬ್ರಾಂಡ್‌ ತನ್ನ ಬ್ರೈಡ್‌ ಕಲೆಕ್ಷನ್‌ಗಾಗಿ ಹೆಚ್ಚು ಹೆಸರುವಾಸಿ. ಭಾರತೀಯ ಡಿಸೈನ್ಸ್, ಎಂಬ್ರಾಯಿಡರಿ ಈ ಬ್ರಾಂಜ್‌ನ ವಿಶಿಷ್ಟ ಹೆಗ್ಗುರುತು. 15 ವರ್ಷಗಳಿಂದ ಈ ಫೀಲ್ಡ್ ನಲ್ಲಿ ಕೆಲಸ ಮಾಡುತ್ತಿರುವ ಈ ಜೋಡಿ, `ಲ್ಯಾಕ್ಮೆ ಫ್ಯಾಷನ್‌ ವೀಕ್‌'ನಲ್ಲಿ ಗಂಡಸರಿಗಾಗಿ ಅನಾರ್ಕಲಿ ಡ್ರೆಸ್‌ನ್ನು ಲಾಂಚ್‌ ಮಾಡಿದಾಗ, ಎಲ್ಲರೂ ಚಕಿತರಾದರು.

ಮೂಲ ಪ್ರೇರಣೆ

ಇದರ ಪ್ರೇರಣೆಯ ಕುರಿತು ವಿಚಾರಿಸಿದಾಗ, ಭೂಮಿಕಾ ನಸುನಗುತ್ತಾ ಉತ್ತರಿಸುತ್ತಾರೆ, ಇಲ್ಲಿಯವರೆಗೂ ಅನಾರ್ಕಲಿ ಡ್ರೆಸ್‌ ಕೇವಲ ಮಹಿಳೆಯರಿಗಾಗಿ ಮಾತ್ರ ಫ್ಯಾಷನ್‌ ಎನಿಸಿತ್ತು. ಮೊಘಲ್ ಸಾಮ್ರಾಜ್ಯದ ರಾಯಲ್ ಹೆರಿಟೇಜ್‌ ಮತ್ತು ಕಾಸ್ಟ್ಯೂಮ್ಸ್ ನಿಂದ ನನಗೆ ಇದರ ಪ್ರೇರಣೆ ಸಿಕ್ಕಿತು. ಮೊಘಲ್ ರ ರಾಜ ರಜವಾಡೆ ಭಾರತಕ್ಕೆ ಬಂದಿದ್ದಾಗ, ಈ ಡ್ರೆಸೆಸ್‌ ಹೆಚ್ಚು ಚಾಲನೆಗೆ ಬಂತು. ಈ ಡ್ರೆಸೆಸ್‌ ಬಲು ಸುಂದರ ಹಾಗೂ ಆರಾಮದಾಯಕ. ಇತ್ತೀಚೆಗೆ ಈ ಡ್ರೆಸೆಸ್‌ ಹೆಚ್ಚಾಗಿ ಮದುವೆ ಹಾಗೂ ಇತರ ಪ್ರಮುಖ ಶುಭ ಸಮಾರಂಭಗಳಲ್ಲಿ, ಅದ್ಧೂರಿ ಈವ್ನಿಂಗ್‌ ಪಾರ್ಟಿ, ಫ್ಯಾಮಿಲಿ ಗೆಟ್‌ ಟು ಗೆದರ್‌ ಫಂಕ್ಷನ್‌ಗಳಲ್ಲಿ ಧರಿಸಬಹುದಾಗಿದೆ. ಸಾಮಾನ್ಯವಾಗಿ ಈ ಡ್ರೆಸ್‌ನ್ನು ಜನರು ಇಷ್ಟಪಟ್ಟು ತಮ್ಮ ಬಜೆಟ್‌ಗೆ ಅನುಸಾರ ಕಸ್ಟಮೈಸೇಷನ್‌ ಮಾಡಿಕೊಳ್ಳುತ್ತಾರೆ. ಈ ಕಾರಣದಿಂದಲೇ ಇದು ಎಲ್ಲರಿಗೂ ಅಚ್ಚುಮೆಚ್ಚು. ಕಸ್ಟಮೈಸೇಷನ್‌ನಲ್ಲಿ ಬಣ್ಣ, ಫ್ಯಾಬ್ರಿಕ್‌, ಡಿಸೈನ್‌, ಎಂಬ್ರಾಯಿಡರಿ ಇತ್ಯಾದಿಗಳೆಲ್ಲವನ್ನೂ ಜನ ತಮ್ಮ ಆಯ್ಕೆಯಂತೆ ಮಾಡಿಕೊಳ್ಳಬಹುದು.

ಅನಾರ್ಕಲಿ ಡ್ರೆಸೆಸ್

ಭಾರತ ಮಾತ್ರವಲ್ಲದೆ ಯುಕೆ, ಅಮೆರಿಕಾ, ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಝಿಲೆಂಡ್‌, ಸೌಥ್‌ ಈಸ್ಟ್, ಏಷ್ಯಾ, ಮಿಡಲ್ ಈಸ್ಟ್ ಇತ್ಯಾದಿಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಇದರ ಬೆಲೆ ರೂ.35 ಸಾವಿರದಿಂದ 75 ಸಾವಿರದವರೆಗೂ ಇದೆ. ಲೆಡಿಂಗ್‌ ಡ್ರೆಸ್‌ನ ಬೆಲೆ ರೂ.75 ಸಾವಿರಕ್ಕೂ ಹೆಚ್ಚು. ಒಂದು ಡ್ರೆಸ್‌ ರೆಡಿ ಆಗಲು 13-15 ದಿನ ಬೇಕಾಗುತ್ತದೆ. ಶ್ಯಾಮ್‌ ಹೇಳುವುದೆಂದರೆ, ಅವರು ರಜವಾಡೆ ಲುಕ್ಸ್ ನ್ನು ಬಲು ಶಿಷ್ಟಾಚಾರದಿಂದ ಪ್ರಸ್ತುತಪಡಿಸುತ್ತಾರೆ. ಇದನ್ನು ಎಲ್ಲಾ ವಯೋಮಾನದ ಗಂಡಸರೂ ಇಷ್ಟಪಟ್ಟು ಧರಿಸಲು ಬಯಸುತ್ತಾರೆ.

ಸಾಂಪ್ರದಾಯಿಕ ಉಡುಗೆಗಳತ್ತ ಗಮನ

ಭೂಮಿಕಾ ಹೇಳುವುದೆಂದರೆ, ಈ ಔಟ್‌ಫಿಟ್‌ಗಳ ಡಿಸೈನಿಂಗ್‌ನ್ನು ಸದಾ ಸಂಪ್ರದಾಯದ ಕಡೆ ಗಮನವಿಟ್ಟೇ ತಯಾರಿಸುತ್ತಾರಂತೆ. ಇದರಲ್ಲಿ ಬಳಸಲಾಗುವ ಫ್ಯಾಬ್ರಿಕ್‌, ಸಿಲ್ಕ್ ಮತ್ತು ಬ್ರೊಕೇಡ್‌ ಆಗಿರುತ್ತದೆ. ಇದರ ಹೊಳಪು ವರ್ಷಗಟ್ಟಲೇ ಉಳಿಯುತ್ತದೆ. ಇದಕ್ಕೆ ಬಳಸಲಾಗುವ ಹಸ್ತಕಲೆ ಬಲು ಹೆವಿ ಆಗಿರುತ್ತದೆ. ಈ ಡ್ರೆಸ್‌ಗಳಲ್ಲಿ ಅಸಲಿ ಮೆಟೀರಿಯಲ್‌ನ ಬಳಕೆ ಆಗುತ್ತದೆ, ಹೀಗಾಗಿ ಇವುಗಳ ಬೆಲೆ ಜಾಸ್ತಿ. ಇವುಗಳ ಸಂರಕ್ಷಣೆಯನ್ನೂ ಜೋಪಾನವಾಗಿ ಮಾಡಬೇಕಾಗುತ್ತದೆ. ಇವನ್ನು ಮಖಮಲ್ ಬಟ್ಟೆಯಲ್ಲಿ ಸುತ್ತಿಡಬೇಕು, ಆಗ ಬಹುಕಾಲ ಹೊಳಪಿನೊಂದಿಗೆ ಬಾಳಿಕೆ ಬರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ