ಫ್ಯಾಷನ್‌ ಎಂದರೇನೇ ಕೂಲ್‌, ಹಾಟ್‌ ಮತ್ತು ಸೆಕ್ಸಿಯಾಗಿ ಕಾಣಿಸಿಕೊಳ್ಳುವುದು! ನಿಮ್ಮನ್ನು ನೀವು ಕೂಲ್‌, ಹಾಟ್‌, ಸೆಕ್ಸಿಯಾಗಿ ತೋರ್ಪಡಿಸಿಕೊಳ್ಳಲು ಅತ್ಯಗತ್ಯ ಎಂದರೆ ಸಮರ್ಪಕ ಆಧುನಿಕ ಉಡುಗೆಗಳ ಆಯ್ಕೆ ಮತ್ತು ಅವನ್ನು ಸರಿಯಾಗಿ ಧರಿಸುವ ಸ್ಟೈಲ್!

ಫ್ಯಾಷನ್‌ ಲೋಕದಲ್ಲಿ ಡೆನಿಂಗೆ ತನ್ನದೇ ಆದ ಪ್ರತ್ಯೇಕ ಸ್ಥಾನಮಾನಗಳಿವೆ. 90ರ ದಶಕದ ಸಿನಿಮಾಗಳಲ್ಲಿ ಧರಿಸಲಾಗುತ್ತಿದ್ದ ಬೂಟ್‌ ಕಟ್‌ ಜೀನ್ಸ್, ಮತ್ತೊಮ್ಮೆ ಇಂದಿನ ಫ್ಯಾಷನ್‌ ಜಗತ್ತಿನಲ್ಲಿ ಎಂಟ್ರಿ ಪಡೆದುಕೊಂಡಿದೆ. ಕರೀನಾ, ಕರಿಶ್ಮಾ, ಮಾಧುರಿ, ಕಾಜೋಲ್‌, ರವೀನಾರಂಥ ಬಾಲಿವುಡ್‌ ನಟಿಯರು ಮಾತ್ರವಲ್ಲದೆ ದಕ್ಷಿಣದ ಬಹುತೇಕ ಖ್ಯಾತ ನಟಿಯರೆಲ್ಲ 90ರ ದಶಕದಲ್ಲಿ ಇಂಥ ಬೂಟ್‌ ಕಟ್‌ ಜೀನ್ಸ್ ಧರಿಸಿ ಮೆರೆದಿದ್ದನ್ನು ನೀವು ನೆನಪಿಸಿಕೊಳ್ಳಿ. ಅದೇ ಬೂಟ್‌ ಕಟ್‌ ಜೀನ್ಸ್ ಇದೀಗ ಮತ್ತೆ ಫ್ಯಾಷನ್‌ನಲ್ಲಿ ಹೊಸದಾಗಿ ಮಿಂಚುತ್ತಿದೆ. ಬೂಟ್‌ ಕಟ್‌ ಜೀನ್ಸನ್ನು ಬೆಲ್‌ಬಾಟಂ ಮತ್ತು ಸ್ಕಿನ್ನಿ ಫ್ಲೇಯರ್ಡ್‌ ಜೀನ್ಸ್ ಎಂದೂ ಹೇಳುತ್ತಾರೆ. ಈ ಜೀನ್ಸ್ ನ ವೈಶಿಷ್ಟ್ಯವೆಂದರೆ, ನೀವು ಇದನ್ನು ಫಾರ್ಮಲ್ ಕ್ಯಾಶ್ಯುಯೆಲ್‌ ಎರಡೂ ವಿಧದಲ್ಲಿ ಧರಿಸಬಹುದಾಗಿದೆ.

ಸಿನಿಮಾಗಳಲ್ಲಿ ಬೂಟ್‌ಕಟ್‌ ಫ್ಯಾಷನ್‌

ಫ್ಯಾಷನ್ನಿನ ಬದಲಾವಣೆಯಲ್ಲಿ ಫ್ಯಾಷನ್‌ ಡಿಸೈನರ್ಸ್‌ ಜೊತೆ ಜೊತೆಯಲ್ಲೇ ಸಿನಿಮಾ ನಟಿಯರ ಮಹತ್ವಪೂರ್ಣ ಸಹಯೋಗ ಇರುತ್ತದೆ. ಮುಖ್ಯವಾಗಿ ದಕ್ಷಿಣದ ಚಿತ್ರಗಳೂ ಸಹ ಈ ನಿಟ್ಟಿನಲ್ಲಿ ಬಾಲಿವುಡ್‌ ಟ್ರೆಂಡ್‌ನ್ನೇ ಅನುಸರಿಸುತ್ತವೆ ಎಂದರೆ ಉತ್ಪ್ರೇಕ್ಷೆಯಲ್ಲ. ಹೊಸ ಚಿತ್ರ ರಿಲೀಸ್‌ ಆಗಿ ಹಿಟ್‌ ಆದುದೇ ತಡ, ಆ ಚಿತ್ರದ ಫ್ಯಾಷನ್‌ ಟ್ರೆಂಡ್‌ ನಮ್ಮ ಆಧುನಿಕ ಫ್ಯಾಷನ್‌ ಸ್ಟೇಟ್‌ಮೆಂಟ್‌ ಎನಿಸುತ್ತವೆ. `ಬಂಧನ’ ಸೀರೆಗಳನ್ನು ನೆನೆಪಿಸಿಕೊಳ್ಳಿ, ಈಗಲೂ ಅವು ಪ್ರಭಾಶಾಲಿ!

ಯಾವ ತರಹ ಹಳೆಯ ಚಿತ್ರ, ಹಾಡುಗಳು ಮತ್ತೆ ರೀಮೇಕ್‌ ಆಗಿ ಹೊಸ ಚಿತ್ರಗಳಲ್ಲಿ ಕಾಣಿಸುತ್ತವೆಯೋ ಅದೇ ರೀತಿ ಫ್ಯಾಷನ್‌ ಸಹ ಮತ್ತೆ ರಿಪೀಟ್‌ ಆಗುತ್ತದೆ. ಪ್ಲಾಜೋ, ಕ್ರಾಪ್‌ಟಾಪ್‌, ಲಾಂಗ್‌ಸ್ಕರ್ಟ್‌, ಹೈ ವೇಯ್ಸ್ಟ್ ಜೀನ್ಸ್ ಇತ್ಯಾದಿಗಳೆಲ್ಲ 90ರ ದಶಕದಲ್ಲಿ ಅತಿ ಜನಪ್ರಿಯವಾಗಿತ್ತು. ಇದೀಗ ಇವೆಲ್ಲ ಮತ್ತೆ ಫ್ಯಾಷನ್‌ ಲೋಕಕ್ಕೆ ಮರಳಿವೆ. 90ರ ದಶಕದ ಚಿತ್ರಗಳ ಹಲವು ನಟಿಯರು ಬೂಟ್‌ಕಟ್‌ ಜೀನ್ಸ್ ನಲ್ಲಿ ಕಾಣಿಸಿಕೊಂಡಿದ್ದರು. 90ರ ದಶಕದಲ್ಲಿ ಲಾಂಗ್‌ ಟೈಂ ನಡೆಯುತ್ತಿದ್ದ ಫ್ಯಾಷನ್‌ ಇದೀಗ ಮತ್ತೆ ನಮ್ಮ ಹೊಸ ಚಿತ್ರ ನಟಿಯರಿಂದ ಜೀವ ಪಡೆದಿವೆ.

ಹೊಸದಾಗಿ ಮದುವೆಯಾದ ಫ್ಯಾಷನ್‌ ಕ್ವೀನ್‌ ಸೋನಂ ಕಪೂರ್‌ ಬೂಟ್‌ ಕಟ್‌ ಸ್ಟೈಲ್‌ನಲ್ಲಿ ಬೇಕಾದಷ್ಟು ಸಲ ಕಾಣಿಸಿದ್ದಾಳೆ. ಈ ಬ್ಲೂ ಕಲರ್‌ ಡ್ರೆಸ್‌ನಲ್ಲಿ ಆಕೆ ಬಹಳಷ್ಟು ಕ್ಲಾಸಿಕ್‌ ಎಲಿಗೆಂಟ್‌ ಎನಿಸುತ್ತಾಳೆ.

ಬಾಲಿವುಡ್‌ನ `ಸ್ಟೂಡೆಂಟ್‌ ಆಫ್‌ ದಿ ಇಯರ್‌’ ಚಿತ್ರದಲ್ಲಿ ತನ್ನ ಕೆರಿಯರ್‌ ಆರಂಭಿಸಿದ ಆಲಿಯಾ ಭಟ್‌, ತನ್ನನ್ನು ತಾನು ಫ್ಯಾಷನ್‌ ಲೈನ್‌ನಿಂದ ದೂರವಿರಿಸಿಲ್ಲ. ಬ್ಲೂ ಡೆನಿಂ ಬೂಟ್‌ ಕಟ್‌ ಜೀನ್ಸ್ ಜೊತೆ ಲೈಟ್‌ ಟೀಶರ್ಟ್‌ನಲ್ಲಿ ಆಲಿಯಾ ತನ್ನ ಫ್ರೆಂಡ್ಸ್ ಜೊತೆ ಲಂಚ್‌ಗೆ ಹೊರಡುವ ದೃಶ್ಯ ಎಲ್ಲರಿಗೂ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆಲಿಯಾಳ ಈ ಲುಕ್ಸ್ ಬಲು ಡೀಸೆಂಟ್‌ ಸಿಂಪಲ್ ಎನಿಸಿತ್ತು.

`ಮುನ್ನಿ ಬದ್‌ನಾಮ್ ಹುಯಿ….’ ಐಟಂ ಸಾಂಗ್‌ನಿಂದ ಎಲ್ಲರನ್ನೂ ಕುಣಿಸಬಲ್ಲ ಮಲೈಕಾ ಅರೋರಾ, ಸದಾ ತನ್ನ ಲುಕ್ಸ್  ಡ್ರೆಸ್ಸಿಂಗ್‌ ಸೆನ್ಸ್ ಕುರಿತಾಗಿ ಮೀಡಿಯಾದಲ್ಲಿ ಮಿಂಚುತ್ತಿರುತ್ತಾಳೆ. ತನ್ನ ಇನ್‌ಸ್ಟ್ರಾಗ್ರಾಮ್ ಅಕೌಂಟ್‌ನಲ್ಲಿ ಸದಾ ಆ್ಯಕ್ಟಿವ್‌ ಆಗಿರುವ ಈಕೆ, ತನ್ನ ರೀಸೆಂಟ್‌ ಪೋಸ್ಟ್ ನಲ್ಲಿ ವೆರಿ ಕ್ಯೂಟ್‌ ಫ್ಯಾಷನೆಬಲ್ ಕೂಲ್‌ ಲುಕ್ಸ್ ನಲ್ಲಿ ಮಿಂಚುತ್ತಿದ್ದಳು. ಬ್ಲೂ ಡೆನಿಂ ಬೂಟ್‌ ಜೀನ್ಸ್ ಜೊತೆ ಲಾಂಗ್‌ ಫೆದರ್‌ ಜ್ಯಾಕೆಟ್‌ ಬ್ಲ್ಯಾಕ್‌ ಶೇಡ್‌ನ ಅವಳ ಲುಕ್ಸ್ ಸಾಕಷ್ಟು ಕಾಲ ಚರ್ಚೆಯಲ್ಲಿತ್ತು.

ನಟಿಯಾಗಿ ಸದಾ ನಂ.1 ಎನಿಸಿರುವ ಮಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಒಬ್ಬ ಬಹು ಜನಪ್ರಿಯ, ಸಮರ್ಥ ನಟಿ ಮಾತ್ರವಲ್ಲದೆ ಫ್ಯಾಷನ್‌ ದೀವಾ ಸಹ ಎನಿಸಿದ್ದಾಳೆ. ನಟನೆಯ ಜೊತೆ ಜೊತೆಯಲ್ಲೇ ತನ್ನ ಹಾಟ್‌ ಸೆಕ್ಸಿ ಲುಕ್ಸ್ ನಿಂದ ಸದಾ ಸುದ್ದಿಯಲ್ಲಿರುತ್ತಾಳೆ. ದೀಪಿಕಾ ಸಹ ಈ ಬೂಟ್‌ ಕಟ್‌ ಸ್ಟೈಲ್‌ನ್ನು ಬಹು ಇಷ್ಟಪಡುತ್ತಾಳೆ. ಇತ್ತೀಚಿನ ಚಿತ್ರಗಳಲ್ಲಿ ಬೂಟ್‌ ಕಟ್‌ ಜೀನ್ಸ್ ನಲ್ಲಿ ಕಾಣಿಸಿಕೊಂಡ ದೀಪಿಕಾ, ಹಲವಾರು ಇತರ ಟಿವಿ ಶೋಗಳಲ್ಲಿಯೂ ಇದೇ ಗೆಟಪ್‌ನಲ್ಲಿ ಕಾಣಿಸಿಕೊಂಡು ಮಿಂಚಿದ್ದಾಳೆ.

ಬೂಟ್‌ ಕಟ್‌ ಕ್ಯಾರಿ ಮಾಡುವುದು ಹೇಗೆ?

ಇಂದಿನ ಆಧುನಿಕ ತರುಣಿಯರು ತಮ್ಮನ್ನು ತಾವು ಡಿಫರೆಂಟ್‌ ಸ್ಟೈಲಿಶ್‌ ಆಗಿ ತೋರಿಸಿಕೊಳ್ಳುವ ಪ್ರಯತ್ನದಲ್ಲಿ  ಮುಂದಾಗುತ್ತಾರೆ. ಡ್ರೆಸ್ಸಿಂಗ್‌ ಸೆನ್ಸ್ ನ ಅರಿವು ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ, ಆದರೆ ಸರಿಯಾದ ಫ್ಯಾಷನ್‌ ಸೆನ್ಸ್ ನ ಅರಿವು ಬಲು ಕಡಿಮೆ ಜನರಿಗಷ್ಟೇ ಇರುತ್ತದೆ. ಕೇವಲ ಡಿಸೈನರ್‌ ಡ್ರೆಸ್‌ ಧರಿಸಿದ ಮಾತ್ರಕ್ಕೆ ನೀವು ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಅದನ್ನು ಸರಿಯಾದ ರೀತಿಯಲ್ಲಿ ಕ್ಯಾರಿ ಮಾಡಿದಾಗ ಮಾತ್ರ ನೀವು ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಬಲ್ಲಿರಿ. ಕಾಲಕ್ಕೆ ತಕ್ಕಂತೆ ಈ ಮಾಡ್ ಜೀನ್ಸ್ ಟ್ರೆಂಡ್‌ ಬದಲಾಗುತ್ತಲೇ ಇರುತ್ತದೆ. ಒಮ್ಮೆ ಹೈ ವೇಯ್ಸ್ಟ್, ಮತ್ತೊಮ್ಮೆ ಲೋ ವೇಯ್ಸ್ಟ್, ಇನ್ನೊಮ್ಮೆ ಸ್ಕಿನ್ನಿ….. ಹೀಗೆ ಬದಲಾಗುತ್ತಿರುತ್ತದೆ. ಆದರೆ ಈಗ ಟ್ರೆಂಡಿನಲ್ಲಿರುವುದು ಎಂದರೆ ಬೂಟ್‌ ಕಟ್‌ ಜೀನ್ಸ್. ಇದರ ಫ್ಯಾಷನ್‌ ಎಷ್ಟೋ ವರ್ಷಗಳ ಹಿಂದೆಯೂ ಇತ್ತು, ಇದೀಗ ಮತ್ತೆ ಟ್ರೆಂಡಿ ಆಗಿದೆ.

ಈ ಜೀನ್ಸ್ ನ್ನು ಹೇಗೆ ಕ್ಯಾರಿ ಮಾಡುವುದು ಎಂದು ಯೋಚಿಸುತ್ತಿದ್ದೀರಾ? ಅದಕ್ಕಾಗಿ ಸಲಹೆಗಳು:

ನೀವು ಫ್ರೆಂಡ್ಸ್ ಜೊತೆ ಹ್ಯಾಂಗ್‌ ಔಟ್‌ ಪ್ಲಾನ್‌ ಮಾಡಿದ್ದೀರಾ? ಆಗ ನೀವು ಬೂಟ್‌ ಕಟ್‌ ಜೀನ್ಸ್ ಜೊತೆ ಡೆನಿಂ ಜ್ಯಾಕೆಟ್‌ ಯಾ ಪ್ರಿಂಟೆಡ್‌ ಲೈಟ್‌ ಟಾಪ್ ಕ್ಯಾರಿ ಮಾಡಬಹುದು. ಆಗ ನೀವು ಇದರಲ್ಲಿ ಸ್ಟೈಲಿಶ್‌ ಕೂಲ್‌ ಆಗಿ ಕಾಣಿಸುತ್ತೀರಿ.

ನೀವು ಬಾಯ್‌ಫ್ರೆಂಡ್‌ ಜೊತೆ ಡೇಟ್‌ಗೆ ಹೊರಟಿದ್ದೀರಾ? ಆಗ ಬೂಟ್‌ ಕಟ್‌ ಜೀನ್ಸ್ ಜೊತೆ ಕ್ರಾಪ್‌ ಟಾಪ್‌ ಕ್ಯಾರಿ ಮಾಡಿ. ಈ ಲುಕ್ಸ್ ನಲ್ಲಿ ನೀವು ಬ್ಯೂಟಿಫುಲ್ ಜೊತೆ ಹಾಟ್‌ ಆಗಿಯೂ ಕಾಣುವಿರಿ.

ಶಾಪಿಂಗ್‌ ಅಥವಾ ಸಿನಿಮಾ ನೋಡಲು ಹೊರಟಿರಾ? ಆಗ ಬೂಟ್‌ ಕಟ್‌ ಜೀನ್ಸ್ ಸರಿಯಾದ ಆಯ್ಕೆ. ಬೂಟ್‌ ಕಟ್‌ ಜೀನ್ಸ್ ಜೊತೆ ಹಾಟ್‌ ಶರ್ಟ್‌ ಧರಿಸಿ ನೀವು ಪರ್ಫೆಕ್ಟ್ ಆಗಿ ಕಾಣಿಸುವಿರಿ.

– ಮೋನಿಕಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ