ಹಬ್ಬ ಹರಿದಿನಗಳಿರಲಿ ಅಥವಾ ಶುಭ ಸಮಾರಂಭ, ಭಾರತೀಯ ಪರಿಸರಕ್ಕೆ ಅದು ಬಲು ವಿಶಿಷ್ಟ ಎನಿಸುತ್ತದೆ. ಪ್ರತಿಯೊಬ್ಬ ಹೆಣ್ಣೂ ತಾನು ಇಂಥ ಹಬ್ಬಗಳಲ್ಲಿ ಇತರರಿಗಿಂತ ವಿಶಿಷ್ಟವಾಗಿ ಕಾಣಿಸಬೇಕೆಂದು ಬಯಸುತ್ತಾಳೆ. ಎಲ್ಲರ ಪ್ರಶಂಸೆಯ ನೋಟ ತನ್ನತ್ತಲೇ ಇರಲಿ ಎಂದು ಆಶಿಸುತ್ತಾಳೆ. ಆದರೆ ಎಗ್ಸೈಟ್‌ಮೆಂಟ್‌ನಲ್ಲಿ ಹಬ್ಬದ ನೆಪದಲ್ಲಿ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬುದಷ್ಟೇ ಮುಖ್ಯವಲ್ಲ, ಕೊಳ್ಳುವ ಉಡುಗೆ ಕಂಫರ್ಟೆಬಲ್ ಆಗಿಯೂ ಇರಬೇಕೆಂಬುದು. ನಿಮ್ಮ ಹೊಸ ಡ್ರೆಸ್‌ ಹೇಗಿರಬೇಕು ಎಂದರೆ, ನೀವು ಸುಲಭವಾಗಿ ಎಲ್ಲಾ ಗಡಿಬಿಡಿಯ ಓಡಾಟ ಮಾಡುವಂತೆ, ಸಂಪ್ರದಾಯ ಫಾಲೋ ಮಾಡುವಂತೆ, ಗಾರ್ಜಿಯಸ್‌ ಲುಕ್ಸ್ ಜೊತೆ ಪರ್ಫೆಕ್ಟ್ ಫೆಸ್ಟಿವ್‌ ದೀವಾ ಸಹ ಆಗಿರಬೇಕು.

ಹೀಗಿರುವಾಗ ಇಂಡಿಯನ್‌ ಎಥ್ನಿಕ್‌ ಡ್ರೆಸ್‌ ಧರಿಸುವುದರಿಂದ ಸಿಗುವ ಆನಂದ ಬೇರಾವುದರಿಂದಲೂ ಸಿಗುವುದಿಲ್ಲ. ಹಾಗಾದರೆ ಈ ಸಲದ ಹಬ್ಬಗಳಲ್ಲಿ ನಾವೇಕೆ ಈ ಸಂಪ್ರದಾಯವನ್ನು ಎಥ್ನಿಕ್‌ ಫ್ಯಾಷನ್‌ ಜೊತೆ ಸೆಲೆಬ್ರೇಟ್‌ ಮಾಡಬಾರದು? ಈ ಕುರಿತಾಗಿ ಫ್ಯಾಷನ್‌ ತಜ್ಞರು ಹೀಗೆ ಸಲಹೆ ಕೊಡುತ್ತಾರೆ, ಇತ್ತೀಚೆಗಂತೂ ಬಹಳಷ್ಟು ಎಥ್ನಿಕ್‌ ಫ್ಯಾಷನ್‌ ಲಭ್ಯವಿದೆ. ಎಥ್ನಿಕ್‌ವೇರ್‌ನ ಎಷ್ಟೋ ವಿಭಿನ್ನ ಶೈಲಿಗಳುಂಟು. ಉದಾ : ಸೌತ್‌ ಟ್ರೆಡಿಷನಲ್, ಗುಜರಾತಿ ಎಥ್ನಿಕ್‌ ವೇರ್‌, ರಾಜಸ್ಥಾನಿ, ಪಂಜಾಬಿ, ಮರಾಠಿ, ಇಸ್ಲಾಮಿಕ್‌ ಇತ್ಯಾದಿ. ಅವರ ಈ ಸಲಹೆ ಅನುಸರಿಸಿ ನಿಮ್ಮ ಹಬ್ಬದ ಸಡಗರ ಸಂಭ್ರಮ ಹೆಚ್ಚಿಸಿಕೊಳ್ಳಿ.

ಮಿನಿಮಂ ಲುಕ್‌ : ಹಬ್ಬಗಳ ಗಡಿಬಿಡಿಯಲ್ಲಿ ನಾವು ಮನೆಗೆ ಬಂದಿರುವ ಅತಿಥಿಗಳ ಆದರೋಪಚಾರದಲ್ಲಿ ಬಿಝಿ ಆಗಿಬಿಡುತ್ತೇವೆ. ಹೀಗಿರುವಾಗ ಹೆವಿ ಕಸೂತಿಯ ರೇಷ್ಮೆ ಡ್ರೆಸೆಸ್‌ ಸಲೀಸಾಗಿ ಕೆಲಸ ಮಾಡಲು ಅವಕಾಶ ನೀಡದು. ಹೀಗಾಗಿ ಪ್ರಿಂಟೆಡ್‌ ಸೀರೆ ಸ್ಟೇಟ್‌ಮೆಂಟ್‌, ಪ್ರಿಂಟೆಡ್‌ ಶ್ರಗ್‌ ಜೊತೆ ಉತ್ತಮ ಆಯ್ಕೆಯಾಗಿದೆ. ಈ ಡ್ರೆಸ್‌ ನಿಮಗೆ ಎಥ್ನಿಕ್‌ ಮಾಡರ್ನ್‌ ಎರಡೂ ಆಗಿದೆ.

ಶೈನಿಂಗ್‌ ಸಿಲ್ಕ್ : ಸಿಂಪಲ್ ಲೈಟ್‌ ಸಿಲ್ಕ್ ನಲ್ಲಿ ನೀವು ಯಾವುದೇ ಎಥ್ನಿಕ್‌ ಡ್ರೆಸ್‌ ಧರಿಸಿದರೂ ಬ್ಯೂಟಿಫುಲ್ ಎನಿಸುವಿರಿ.  ಇತ್ತೀಚೆಗಂತೂ ಬಹಳಷ್ಟು ಫ್ಯಾಷನ್‌ ಡಿಸೈನರ್ಸ್‌ ಈ ಬಗ್ಗೆ ಕೆಲಸ ಮಾಡಿದ್ದಾರೆ. ಅಪ್ಪಟ ದ.ಭಾರತ ಶೈಲಿ ಅಥವಾ ಬನಾರಸಿ, ಇಂದಿನ ಫ್ಯಾಷನ್‌ನಲ್ಲಿ ಟಾಪ್‌ ಎನಿಸಿದೆ. ನೀವು ರೇಷ್ಮೆ ಬ್ಲೌಸ್‌, ಘಾಘ್ರಾ ಯಾ ಸೀರೆಯಲ್ಲಿ ಮಿಂಚಬಹುದು.

ಅನಾರ್ಕಲಿ ಚೂಡೀದಾರ್‌ನ ಕ್ಲಾಸಿಕ್‌ ಕಾಂಬೋ : ಡ್ರಾಮಾ & ಗ್ಲಾಮರ್‌ ಅನಾರ್ಕಲಿ ಸೂಟ್‌ನ ಒಂದೇ ನಾಣ್ಯದ 2 ಮುಖಗಳಾಗಿವೆ. ಇದನ್ನು ಚೂಡೀದಾರ್‌ ಜೊತೆ ಧರಿಸಬಹುದು. ಇದರಲ್ಲಿ ಕಸೂತಿ ಅಥವಾ ಸಿಲ್ಕ್ ವರ್ಕ್‌ ಇರಲಿ, ಬೇರೆ ಇತರ ಪ್ಯಾಟರ್ನ್‌ನಲ್ಲಿ ಭಾರತೀಯ ಎಥ್ನಿಕ್‌ ವೇರ್‌ನ ಈ ಶೈಲಿ ಆಯ್ಕೆಯ ರೂಪದಲ್ಲಿ ನಂ.1 ಎನಿಸಿದೆ.

ಟ್ರೆಡಿಷನ್‌ ವಿತ್‌ ಮಾಡರ್ನ್‌ ಲುಕ್‌ : ಬಾಲಿವುಡ್‌ ಸ್ಟಾರ್ಸ್ ತಮ್ಮ ಈ ಪರಿಯ ಲುಕ್‌ನ ಪೋಷಾಕಿಗೆ ಖ್ಯಾತರು. ಸೀರೆ, ಲಹಂಗಾ, ಸೂಟ್‌ ಇತ್ಯಾದಿ ಎಲ್ಲದರಲ್ಲೂ ತುಸು ಮಾಡರ್ನ್‌ ಲುಕ್‌ ಬಳಸಿಕೊಂಡು ನೀವು ಎಥ್ನಿಕ್‌ನಲ್ಲೂ ಎಲ್ಲರಿಗಿಂತ ವಿಭಿನ್ನ ಎನಿಸುವಿರಿ. ತಜ್ಞರು ಈ ಕುರಿತು ವಿವರಿಸುತ್ತಾ, ನಮ್ಮ ದೇಶ ಬಹು ಸಂಸ್ಕೃತಿಗೆ ಖ್ಯಾತವಾಗಿದೆ. ವರ್ಷವಿಡೀ ದೇಶದ ಯಾವುದಾದರೊಂದು ಭಾಗದಲ್ಲಿ ಏನೋ ಒಂದು ಹಬ್ಬ ನಡೆಯುತ್ತಿರುತ್ತದೆ. ಆದರೆ ವಿಶೇಷ ಹಬ್ಬಗಳು ಆಂಗ್ಲ ವರ್ಷದ ಮಧ್ಯಭಾಗದಿಂದ ಶುರುವಾಗಿ ಹಾಗೇ ಮುಂದುವರಿಯುತ್ತವೆ. ಹೀಗಾಗಿ ಹೆಂಗಸರು ಈ ಸಂದರ್ಭದಲ್ಲಿ ಧಾರಾಳ ಶಾಪಿಂಗ್‌ ಮಾಡಿ ವಸ್ತ್ರಒಡವೆ ಖರೀದಿಸುತ್ತಾರೆ, ಹೆಚ್ಚು ಸುಂದರವಾಗಲು ಪ್ರಯತ್ನಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ