ತರುಣಿಯರು ಬ್ರಾ ಆರಿಸುವಾಗ ನೂರಾರು ವಿಷಯ ಚಿಂತಿಸುತ್ತಾರೆ, ಇದನ್ನು ಧರಿಸುವುದರಿಂದ ಅನೇಕ ಲಾಭಗಳಿವೆ. ಆದರೆ ಸರಿಯಾದ ಸೈಜ್‌ನ ಬ್ರಾ ಧರಿಸುವುದೇ ಅತಿ ಅವಶ್ಯಕ. ನಿಮಗಿದನ್ನು ತಿಳಿದು ಆಶ್ಚರ್ಯವಾಗಬಹುದು, 10 ರಲ್ಲಿ 8 ಮಂದಿ ಹೆಂಗಸರು ತಪ್ಪಾದ ಬ್ರಾ ಆರಿಸುತ್ತಾರೆ! ದೇಹದಲ್ಲಿ ಬ್ರಾ ಸರಿಯಾಗಿ ಫಿಟ್‌ ಆಗದಿದ್ದರೆ, ನೀವು ಎಂಥ ಸ್ಟೈಲಿಶ್‌ ಬ್ರಾ ಧರಿಸಿದರೂ ಅದು ನಿಮಗೆ ಚೆನ್ನಾಗಿ ಒಪ್ಪಲ್ಲ.

ಬ್ರೆಸ್ಟ್ ಗಾತ್ರಕ್ಕೆ ಅನುಸಾರವಾಗಿಯೇ ಬ್ರಾ ಧರಿಸಬೇಕು. ಎಷ್ಟೋ ಸಲ ಹೆಂಗಸರು ದೊಡ್ಡದು ಅಥವಾ ಚಿಕ್ಕ ಸೈಜಿನ ಬ್ರಾವನ್ನೇ ಧರಿಸುತ್ತಾರೆ. ಇದರಿಂದ ಬ್ರೆಸ್ಟ್ ಸಡಿಲ ಆಗತೊಡಗುತ್ತದೆ ಹಾಗೂ ಆಕಾರದಲ್ಲಿ ಬದಲಾವಣೆ ತಲೆದೋರುತ್ತದೆ. ಟೈಟ್‌ ಬ್ರಾ ಧರಿಸುವುದರಿಂದ ಉಸಿರಾಟದ ತೊಂದರೆ ಜೊತೆ ಸ್ಕಿನ್‌ ಅಲರ್ಜಿಯೂ ಆಗುತ್ತದೆ. ಫ್ಯಾಷನ್‌ ತಜ್ಞೆಯರ ಸಲಹೆಯಂತೆ ನವ ವಧು ಈ ರೀತಿ ಬ್ರಾ ಆರಿಸಬೇಕು :

ಬ್ರಾದ ಸೂಕ್ತ ಅಳತೆ ಇದನ್ನು ತೆಗೆದುಕೊಳ್ಳುವುದಕ್ಕಾಗಿ ಅಗತ್ಯ ಇಂಚ್‌ ಟೇಪ್‌ ಬಳಸಿಕೊಳ್ಳಿ. ಬ್ರಾ ಸೈಜ್‌ಗಾಗಿ ಬ್ಯಾಂಡ್‌ ಸೈಜ್ ಕಪ್‌ ಸೈಜ್‌ನ ಅಳತೆ ತೆಗೆದುಕೊಳ್ಳಬೇಕು.

ಬ್ಯಾಂಡ್‌ ಸೈಜ್‌ ಅಳತೆ ಇದಕ್ಕಾಗಿ ಬ್ರೆಸ್ಟ್ ನ ಕೆಳಭಾಗದಿಂದ ಸುತ್ತಲಿನ ಉದ್ದಳತೆ ಮೆಶರ್‌ ಮಾಡಿ. ಭುಜಗಳನ್ನು ಕೆಳಭಾಗದತ್ತ ಇಳಿಬಿಟ್ಟಿರಬೇಕು ಎಂಬುದನ್ನು ಮರೆಯದಿರಿ. ನಿಮ್ಮ ಬ್ಯಾಂಡ್‌ ಸೈಜ್‌ ಆಡ್‌ (ಬೆಸ ಸಂಖ್ಯೆ) ನಂಬರ್‌ಗಳಲ್ಲಿ ಬಂದರೆ ಅದಕ್ಕೆ 1 ಸೇರಿಸಿ. ಉದಾ: ನಿಮ್ಮ ಬ್ಯಾಂಡ್‌ ಸೈಜ್‌ 29 ಆಗಿದ್ದರೆ ಅದಕ್ಕೆ 1 ಕೂಡಿಸಿ 30 ಅಂದುಕೊಳ್ಳಿ.

ಕಪ್‌ ಸೈಜ್‌ನ ಅಳತೆ

ಇದಕ್ಕಾಗಿ ಇಂಚ್‌ ಟೇಪ್‌ನ್ನು ಬ್ರೆಸ್ಟ್ ನ ಸೆಂಟರ್‌ ಪಾಯಿಂಟ್‌ ಮೇಲಿರಿಸಿ ಅಳೆಯಿರಿ. ಕಪ್‌ ಸೈಜ್‌ ಸದಾ ಬ್ಯಾಂಡ್‌ ಸೈಜ್‌ಗಿಂತ ಹೆಚ್ಚಿರುತ್ತದೆ. ನಿಮ್ಮ ಕಪ್‌ ಸೈಜ್‌ 32 ಹಾಗೂ ಬ್ಯಾಂಡ್‌ ಸೈಜ್‌ 30 ಆದರೆ, ಇದರಲ್ಲಿ 2 ಇಂಚಿನ ವ್ಯತ್ಯಾಸವಿದೆ. 2 ಇಂಚಿನ ಅಂತರದ ಅರ್ಥ, ‌ಕಪ್‌, ಅಂದ್ರೆ ನಿಮ್ಮ ಬ್ರಾ ಸೈಜ್‌ 32 ‌. ಒಂದು ಪಕ್ಷ ನಿಮ್ಮ ಕಪ್‌ ಸೈಜ್‌ಬ್ಯಾಂಡ್‌ ಸೈಜ್‌ನಲ್ಲಿ 1 ಇಂಚಿನ ಅಂತರವಿದ್ದರೆ, ಇದರರ್ಥ ಕಪ್‌. ನೀವು ಮುಂದಿನ ಸಲ ಅಂಗಡಿಗೆ ಹೋದಾಗ ಅಥವಾ ಆನ್‌ ಲೈನ್‌ ಶಾಪಿಂಗ್‌ ಮಾಡುವಾಗ ಈ ರೀತಿ ಅಳತೆ ಮಾಡಿ, ಸುಲಭವಾಗಿ ನಿಮ್ಮ ಬ್ರಾ ಸೈಜ್‌ ಪ್ರಕಾರ ಆರಿಸಿ!

ಗಮನಿಸತಕ್ಕ ಸಲಹೆಗಳು

ಸಾಮಾನ್ಯವಾಗಿ ಟೀನೇಜರ್ಸ್‌ ಅಥವಾ ವಿವಾಹಿತ ಹೆಂಗಸರೇ ಇರಲಿ, ಯಾವುದೇ ಸಾಧಾರಣ ಬ್ರಾವನ್ನು ಎಲ್ಲಾ ಬಗೆಯ ಡ್ರೆಸ್‌ಗಳ ಜೊತೆಗೂ ಧರಿಸುತ್ತಾರೆ. ಆದರೆ ಕೆಲವು ಬಗೆಯ ಉಡುಗೆಗಳಿಗೆ ವಿಶೇಷವಾಗಿ ಬ್ರಾ ಡಿಸೈನ್‌ಗೊಂಡಿರುತ್ತವೆ. ನೀವು ಆಯಾ ಬಗೆಯ ಉಡುಗೆಗಳೊಂದಿಗೆ ಸೂಕ್ತ ಬ್ರಾ ಧರಿಸಿದರೆ, ಆಗ ನೀವು ಪರ್ಫೆಕ್ಟ್  ಬೆಸ್ಟ್ ಲುಕ್ಸ್ ಹೊಂದುವಿರಿ. ಯಾವ ಉಡುಗೆ ಜೊತೆ ಎಂಥ ಬ್ರಾ ಧರಿಸಬೇಕೆಂದು ತಿಳಿಯೋಣವೇ?

ಪುಶ್‌ ಅಪ್‌ ಬ್ರಾ : ಸಾಮಾನ್ಯವಾಗಿ ಚಿಕ್ಕ ಸೈಜ್‌ನ ಬ್ರೆಸ್ಟ್ ವುಳ್ಳ ಹೆಂಗಸರು ಇಂಥ ಬ್ರಾ ಧರಿಸಬೇಕು. ಎಷ್ಟೋ ಸಲ ಇಂಥವರು ಟೈಟ್‌ ಬಟ್ಟೆ ಧರಿಸಿದಾಗ, ಇತರರಿಗೆ ಬ್ರಾ ಲೈನ್‌ ಗೊತ್ತಾಗಿ ಹೋಗುತ್ತದೆ. ಆದರೆ ಪುಶ್‌ಅಪ್‌ ಬ್ರಾ ಧರಿಸಿದಾಗ ಹಾಗಾಗುವುದಿಲ್ಲ. ಇದರ ಮತ್ತೊಂದು ದೊಡ್ಡ ಲಾಭವೆಂದರೆ, ಇದನ್ನು ಯಾವುದೇ ಉಡುಗೆಯೊಂದಿಗೂ ಧರಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ