ಸ್ನೇಹಾ ತನ್ನ ಮದುವೆ ಆರತಕ್ಷತೆಗೆಂದು ಬಹಳ ಬ್ಯೂಟಿಫುಲ್ ಆಗಿ ಮಿಂಚುತ್ತಿದ್ದಳು. ಅವಳ ಈ ಬೆಡಗಿಗೆ ಮುಖ್ಯ ಕಾರಣ ಅವಳ ಅದ್ಭುತ ರೇಷ್ಮೆ ಸೀರೆ ಮತ್ತು ಮೇಕಪ್ ಆಗಿತ್ತು. ಮದುವೆಯ ಹಲವು ಕಾರ್ಯಕ್ರಮಗಳಿಗಾಗಿ ಅವಳು ಭಾರಿ ಬಜೆಟ್‌ನ ಹೆವಿ ಸೀರೆಗಳನ್ನು ಆಗಾಗ ಬದಲಾಯಿಸುತ್ತಲೇ ಇದ್ದಳು. ಮದುವೆಯಾದ ವಾರದ ನಂತರ ಅವಳ ಗಂಡನ ಜೊತೆ ಫ್ರೆಂಡ್ಸ್ ಪಾರ್ಟಿಗೆ ಹೋಗಬೇಕಿತ್ತು. ಅಲ್ಲಿಗೆ ಅವಳು ತನ್ನ ಹೆವಿ ಲುಕ್ಸ್ ಇರುವ ಭಾರಿ ರೇಷ್ಮೆ ಸೀರೆ ಉಟ್ಟುಕೊಂಡೇ ಹೊರಟಳು. ಆದರೆ ಸ್ವತಃ ಅವಳಿಗೆ ಅದರಿಂದ ಕಂಫರ್ಟೆಬಲ್ ಎನಿಸಲಿಲ್ಲ.
ಮತ್ತೊಮ್ಮೆ ಅವಳ ಪತಿಯ ಆಫೀಸ್‌ನವರು ಪಾರ್ಟಿ ನೀಡಿದಾಗ ಅಲ್ಲಿಗೆ ವೆರಿ ಸಿಂಪಲ್ ಪ್ಲೇನ್ ಸೀರೆ ಉಟ್ಟು ಹೊರಟಳು. ಅವಳನ್ನು ಆ ಗೆಟಪ್‌ನಲ್ಲಿ ಕಂಡವರಿಗೆ ಇವಳು ಹೊಸ ಮದುಣಗಿತ್ತಿ ಎಂದೆನಿಸಲು ಸಾಧ್ಯವೇ ಇರಲಿಲ್ಲ. ಇದರಿಂದಾಗಿ ಜನರ ಮುಖದ ಮೇಲಿನ ಪ್ರಶ್ನಾರ್ಥಕ ಚಿಹ್ನೆ ಗುರುತಿಸಿ ಅವಳಿಗೆ ಮುಜುಗರವಾಯಿತು. ಸ್ನೇಹಾ ತರಹವೇ ಬಹಳಷ್ಟು ನವ ವಧುಗಳು ಈ ಡ್ರೆಸ್ ಕಾರಣ ಕಸಿವಿಸಿಗೆ ಒಳಗಾಗುತ್ತಾರೆ.
ಮದುವೆಯ ಬ್ರೈಡಲ್ ಡ್ರೆಸ್‌ನ್ನು ಇಂಥ ಪಾರ್ಟಿ, ಸಣ್ಣಪುಟ್ಟ ಸಮಾರಂಭಗಳಿಗೆ ಉಟ್ಟು ಹೋದರೆ ಹೀಗೆ ಕಸಿವಿಸಿಗೆ ಒಳಗಾಗ ಬೇಕಾಗುತ್ತದೆ. ಹೀಗಾಗಿಯೇ ಎಷ್ಟೋ ಹುಡುಗಿಯರು ಭಾರೀ ಎನಿಸುವ ರೇಷ್ಮೆ ಸೀರೆ, ಲೆಹಂಗಾ ಕೊಳ್ಳಲು ಹೋಗುವುದೇ ಇಲ್ಲ. ಮದುವೆ ನಂತರ ವಧು ಏನು ಧರಿಸುತ್ತಾಳೆ ಎಂಬುದರ ಕುರಿತಾಗಿ ಅವಳ ಸಂಗಡ ಬೇರೆಯವರೂ ಚಿಂತಿಸಲು ಹೋಗದೆ ಭಾರಿ ಜವಳಿ ಖರೀದಿಸಿಬಿಡುತ್ತಾರೆ. ಮದುವೆ ಮನೆಯ ಹಲವು ಕಾರ್ಯಕ್ರಮಗಳಾದ ಮೆಹಂದಿ, ಸಂಗೀತ, ಅರಿಶಿನ ಹಚ್ಚುವುದು, ಮಂಗಳ ಮುಹೂರ್ತ, ಹೋಮ..... ಇತ್ಯಾದಿಗಳಿಗೆಂದು ಪಟ್ಟಿ ಮಾಡಿ ಬೇರೆ ಬೇರೆ ಭಾರಿ ಸೀರೆ ಕೊಳ್ಳುತ್ತಾರೆ. ಆದರೆ ಮದುವೆ ನಂತರದ ಹನಿಮೂನ್, ಹೊರಗಿನ ಓಡಾಟ, ಪಾರ್ಟಿ, ಸಮಾರಂಭ ಇತ್ಯಾದಿಗಳಿಗೂ ಹೊಂದುವಂತೆ ಮೊದಲೇ ಫ್ಯಾಷನೆಬಲ್ ಡ್ರೆಸ್ ಖರೀದಿಸಿಬಿಟ್ಟರೆ ಈ ಸಮಸ್ಯೆ ಇರದು. ಹೀಗಾಗಿ ಅವಳು ಮುಂದಿನ ದಿನಗಳ ಕುರಿತು ಚಿಂತಿಸಿ ಮೊದಲೇ ಪ್ಲಾನ್ಡ್ ಶಾಪಿಂಗ್ ಮಾಡುವುದು ಲೇಸು.
ಮದುವೆ ನಂತರದ ಸಮಾರಂಭಗಳಲ್ಲಿ ಅವಳು ಪಾಲ್ಗೊಳ್ಳಬೇಕೆಂದರೆ ತುಸು ಡಿಫರೆಂಟ್ ಆಗಿ, ನವ ವಧು ಎನಿಸುವಂತೆ ಆದರೆ ಭಾರಿ ಗ್ರಾಂಡ್ ಆಗದೆ, ಅದಕ್ಕೇಂತ ಬಿಚ್ಚೋಲೆ ಗೌರಮ್ಮನಾಗಿ ಸಾಧಾರಣ ವಾಯಿಲ್ ಸೀರೆಯಲ್ಲಿ ಕಾಣಿಸಬಾರದು. ಇದಕ್ಕಾಗಿ ಅತಿ ದುಬಾರಿ ಶಾಪಿಂಗ್ ಮಾಡಬೇಕಾದ ಅಗತ್ಯವೇನಿಲ್ಲ. ಫ್ಯಾಷನ್ ತಜ್ಞೆಯರ ಈ ಕೆಳಗಿನ 5 ಸಲಹೆಗಳನ್ನು ಅನುಸರಿಸಿದರೆ ಅವಳು ಈ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು, ಪಾರ್ಟಿಗಳಲ್ಲಿ ವಿಭಿನ್ನ ಲುಕ್ಸ್ ಹೊಂದಬಹುದು.
ಹೆವಿ ಕಸೂತಿಯ ದುಪಟ್ಟಾ ಭಾರಿ ಎನಿಸುವ ರಿಚ್ ಎಂಬ್ರಾಯಿಡರಿ ರೇಷ್ಮೆ ಸೀರೆ ಪ್ರತಿ ಸಣ್ಣಪುಟ್ಟ ಸಮಾರಂಭ, ಪಾರ್ಟಿಗಳಿಗೂ ಸರಿಹೋಗದು. ಇದನ್ನು ಧರಿಸಿ ಸಲೀಸಾಗಿ ಓಡಾಡುವುದು ಸಹ ಸುಲಭವಲ್ಲ. ನಿಮ್ಮನ್ನು ನೀವು ನವಿವಾಹಿತೆಯಾಗಿ ತೋರ್ಪಡಿಸಲು ಹೆವಿ ಕಸೂತಿಯ ದುಪಟ್ಟಾ ಖರೀದಿಸಿದರೆ, ಇದು ಒಳ್ಳೆ ಹೂಡಿಕೆ. ಈ ದುಪಟ್ಟಾವನ್ನು ಯಾವುದೇ ಪ್ಲೇನ್ ಸೀರೆ ಜೊತೆ ಸ್ಟೋಲ್ ಆಗಿ ಬಳಸಿಕೊಳ್ಳಬಹುದು. ಇದರಿಂದ ಸುಮಾರಾದ ಸೀರೆ ಸಹ ಉತ್ತಮ ಲುಕ್ಸ್ ಗಳಿಸುತ್ತದೆ. ಟ್ರೈ ಮಾಡಿ ನೋಡಿ!