ಆಫೀಸ್ ಡ್ರೆಸ್‌ನಲ್ಲಿ ಉತ್ತಮವಾಗಿ ಕಂಡು ಬರುವುದರಿಂದ ಹೊಗಳಿಕೆ ಮಾತ್ರ ಸಿಗುವುದಲ್ಲ, ಜೊತೆಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಇಂಥ ಡ್ರೆಸ್‌ಗಳು ಸ್ಮಾರ್ಟ್, ಸ್ಟೈಲಿಶ್ ಆಗಿದ್ದು ನಿಮ್ಮ ಆಫೀಸ್ ಕೆಲಸಕ್ಕೆ ಪೂರಕವಾಗಿರಬೇಕು.
ಆಗ ಮಾತ್ರ ನಿಮ್ಮದು ಟ್ರೆಂಡಿ ಪರ್ಸನಾಲಿಟಿ ಎಂದೆನಿಸುತ್ತದೆ. ಹಿಂದೆಲ್ಲ ಹೆಂಗಸರು ಕೇವಲ ಸೀರೆ ಅಥವಾ ಸಲ್ವಾರ್ ಸೂಟ್ ಧರಿಸಿ ಆಫೀಸಿಗೆ ಹೋಗುತ್ತಿದ್ದರು, ಆದರೆ ಈಗ ಆಫೀಸ್ ವೇರ್‌ಗಾಗಿ ಬಗೆಬಗೆಯ ಪ್ರಯೋಗ ನಡೆಸಲು ಬಯಸುತ್ತಾರೆ. ಪ್ರೊಫೆಶನ್ ಜೊತೆ ಸ್ಟೈಲಿಶ್ ಗ್ಲಾಮರಸ್ ಆಗಿ ಕಂಗೊಳಿಸಲು ಈ ಸಲಹೆಗಳನ್ನು ಅನುಸರಿಸಿ :
ನಿಮ್ಮ ಆಫೀಸಿನಲ್ಲಿ ಜೀನ್ಸ್ ಧರಿಸಲು ಅನುಮತಿ ಇದ್ದರೆ, ವೈಟ್ ಶರ್ಟ್ ಜೊತೆ ಬ್ಲೂ ಜೀನ್ಸ್ ಹಾಗೂ ಬ್ಲ್ಯಾಕ್ ಬ್ಲೇಝರ್ ಧರಿಸಿರಿ. ಹೈ ಹೀಲ್ ಯಾ ಪೀಪಲ್ ಟೋಸ್‌ನಿಂದ ಬಲು ಸ್ಮಾರ್ಟ್ ಆಗಿ ಕಾಣುವಿರಿ. ಇದರಿಂದ ಕ್ಯಾಶ್ಯುಯೆಲ್ ಪ್ರೊಫೆಶನಲ್ ಎರಡೂ ತರಹದ ಲುಕ್ಸ್ ಸಿಗುತ್ತದೆ.
ಪ್ಲೇನ್ ಬ್ಲೌಸ್ ಜೊತೆ ಸ್ಟ್ರೈಪ್ ಪ್ಲಾಜೋ ಬಲು ಸೊಗಸಾಗಿ ಒಪ್ಪುತ್ತದೆ. ಸಿಂಗಲ್ ಕಲರ್‌ನ ಪ್ಲಾಜೋ ಧರಿಸ ಬಯಸಿದರೆ ಅದನ್ನು ಪ್ರಿಂಟೆಡ್ ಬ್ಲೌಸ್ ಜೊತೆ ಧರಿಸಿರಿ. ಇಂಪಾರ್ಟೆಂಟ್ ಮೀಟಿಂಗ್ ಯಾ ಪ್ರೆಸೆಂಟೇಶನ್ ಇರುವಾಗಲೂ ಸಹ ಪ್ಲಾಜೋ ಪ್ಯಾಂಟ್ ಬ್ಲೌಸ್ ಧರಿಸಬಹುದು.
ನೀವು ಪರ್ಫೆಕ್ಟ್ ಕಾರ್ಪೊರೇಟ್ ಲುಕ್ಸ್ ಬಯಸಿದರೆ, ವೈಟ್ ಶರ್ಟ್ ಜೊತೆ ಬ್ಲ್ಯಾಕ್ ಸೂಟ್ ಟ್ರೈ ಮಾಡಿ, ಆಗ ಅಪ್ಪಟ ಬಿಸ್‌ನೆಸ್ ವುಮನ್ ಎನಿಸುವಿರಿ. ಇದರ ಫ್ಯಾಷನ್ ಎಂದೂ ಮುಗಿಯುವಂಥದ್ದಲ್ಲ.
ಫಾರ್ಮಲ್ ಲುಕ್ಸ್ ಗಾಗಿ ಉತ್ತಮ ಫಾರ್ಮಲ್ ಟಾಪ್ ಜೊತೆ ಪ್ಯಾಂಟ್ ಧರಿಸಿರಿ. ತೆಳು ಲೆದರ್ ಬೆಲ್ಟ್ ಹೈಹೀಲ್ಸ್ ಜೊತೆ ಬಲು ಸೊಗಸಾಗಿ ಕಾಣಿಸುತ್ತದೆ.
ಲಾಂಗ್ ಕುರ್ತಿ ಸಿಗರೇಟ್ ಪ್ಯಾಂಟ್ ಟ್ರೈ ಮಾಡಿ. ಇಂಡೋವೆಸ್ಟರ್ನ್ ಫಾರ್ಮಲ್ ಲುಕ್ಸ್ ಬಯಸುವವರು ಈ ಡ್ರೆಸ್ ಮಾಡುವುದು ಲೇಸು. ವೆಸ್ಟರ್ನ್ ಟಚ್ ಹೊಂದಿದ ಈ ಇಂಡಿಯನ್ ಲುಕ್ಸ್ ಬಲು ಬ್ಯೂಟಿಫುಲ್ ಎನಿಸುತ್ತದೆ. ಕೆಲವು ವರ್ಷಗಳಿಂದ ಸಿಗರೇಟ್ ಪ್ಯಾಂಟ್ ಫ್ಯಾಷನ್‌ನಲ್ಲಿದೆ ಹಾಗೂ ಲಾಂಗ್ ಕುರ್ತಿಯಂತೂ ಎವರ್ ಗ್ರೀನ್ ಎನಿಸುತ್ತದೆ.
ಬಿಸ್‌ನೆಸ್ ವುಮನ್ ಲುಕ್ಸ್ ಗಾಗಿ ಫಾರ್ಮಲ್ ಶರ್ಟ್ ಬ್ಲೇಝರ್ ಜೊತೆ ಪೆನ್ಸಿಲ್ ಸ್ಕರ್ಟ್ ಧರಿಸಿ, ಸಂಗಡ ಪೆನ್ಸಿಲ್ ಹೀಲ್ ಪಂಪ್ ಹಾಗೂ ಕನಿಷ್ಠ ಆ್ಯಕ್ಸೆಸರೀಸ್ ಧರಿಸಿರಿ.
ಕ್ಯಾಶ್ಯುಯೆಲ್ ಡೇಗಾಗಿ ಕಲರ್ ಫುಲ್ ಪೋಲೋ ನೆಕ್, ಟೀ ಶರ್ಟ್ ಜೊತೆ ಸಿಂಗಲ್ ಕಲರ್‌ನ ಫಾರ್ಮಲ್ ಟ್ರೌಸರ್ ಧರಿಸಿರಿ. ಬ್ರೈಟ್ ಬಣ್ಣದ ಟೀ ಶರ್ಟ್‌ನ ನಿಮ್ಮ ಔಟ್‌ಫಿಟ್ಸ್ ನ್ನು ಆಕರ್ಷಕಗೊಳಿಸುತ್ತದೆ.
ಇಂದಿನ ದಿನಗಳಲ್ಲಿ ಜೀನ್ಸ್ ಜೊತೆ ಕ್ಯಾಶ್ಯುಯೆಲ್ ಶಾರ್ಟ್ ಕುರ್ತಿ ಯುವ ಜನತೆಗೆ ಬಹಳ ಇಷ್ಟವಾಗುತ್ತದೆ. ಇತ್ತೀಚೆಗೆ ಬಹಳಷ್ಟು ಕಾರ್ಪೊರೇಟ್ ಹೌಸ್‌ಗಳಲ್ಲಿ ಕಂಫರ್ಟೆಬಲ್ ಡ್ರೆಸ್ಸಿಂಗ್‌ಗೇ ಒತ್ತು ನೀಡಲಾಗುತ್ತಿದೆ. ಈ ಇಂಡೋ ವೆಸ್ಟರ್ನ್ ವೇರ್ ಬಲು ಜನಪ್ರಿಯವಾಗುತ್ತಿದೆ. ಇದನ್ನು ಕಾಟನ್ ಸ್ಕಾರ್ಫ್ ಜೊತೆ ನೀವು ಧರಿಸಬಹುದು.
ಸಾಮಾನ್ಯವಾಗಿ ಸಲ್ವಾರ್ ಸೂಟ್‌ನಲ್ಲಿ ಎಲ್ಲಾ ಹೆಂಗಸರೂ ಉತ್ತಮವಾಗಿ ಕಂಡುಬರುತ್ತಾರೆ. ನಿಮ್ಮ ಆಫೀಸಿನ ವಿಶೇಷ ಸಂದರ್ಭಗಳಿಗಾಗಿ ಕೆಲವು ಪೇಸ್ಟಲ್ ಬಣ್ಣದ ಸಲ್ವಾರ್ ಸೂಟ್‌ಗಳನ್ನು ಆರಿಸಿ ಬೇರೆಯಾಗಿ ಇಟ್ಟುಕೊಳ್ಳಿ. ನೀವು ಕಾಟನ್ ಸೂಟ್ ಧರಿಸಿ ಅಥವಾ ರೇಷ್ಮೆಯ ಫ್ಯಾಬ್ರಿಕ್ಸ್, ನೀವು ಖಂಡಿತಾ ಸ್ಮಾರ್ಟ್ ಎನಿಸುವಿರಿ. ಸಾಂಪ್ರದಾಯಿಕ ಇಂಡಿಯನ್ ಹ್ಯಾಂಡ್ ಲೂಮ್ ಪ್ರಿಂಟ್ ಸಹ ಧರಿಸಬಹುದು. ಇದರಲ್ಲಿ ಸ್ಟೈಲಿಶ್ ಪ್ರೊಫೆಷನಲ್ ಆಗಿ ಕಂಗೊಳಿಸುವಿರಿ. ಆಫೀಸ್ ಲುಕ್ಸ್ ಗಾಗಿ ಸೂಕ್ತ ಸಲಹೆಗಳು.