- ಎನ್. ಅಂಕಿತಾ
ಹೊಸ ವರ್ಷ ಬಂದಿದೆ ಎಂದಾಗ ಹೊಸ ಕ್ಯಾಲೆಂಡರ್ ಖರೀದಿಸಿ ನೇತುಹಾಕಿದರೆ ಮುಗಿಯಲಿಲ್ಲ. ಬದಲಿಗೆ ಹೊಸ ಫ್ಯಾಷನ್, ಹೊಸ ಟ್ರೆಂಡ್ಸ್ ಕೂಡ ಬರುತ್ತವೆ. ಇವನ್ನು ಫಾಲೋ ಮಾಡಿ ನೀವು ಟ್ರೆಂಡಿ ಕ್ಯೂಟ್ ಎನಿಸಬಹುದು. ನಿಮಗೆ ಫ್ಯಾಷನೆಬಲ್ ಆಗಿರುವುದು ಸೊಗಸೆನಿಸಿದರೆ, ಈ ಹೊಸ ವರ್ಷ ನಿಮಗೆ ಸ್ಪೆಷಲ್ ಎನಿಸುತ್ತದೆ. ಏಕೆಂದರೆ ಈ ವರ್ಷ ಫ್ಯಾಷನ್ ಟ್ರೆಂಡ್ಸ್ ನಲ್ಲಿ ಹಲವು ಬಗೆಯ ಡ್ರೆಸೆಸ್, ಕಲರ್, ಪ್ಯಾಟರ್ನ್ಸ್ ಶಾಮೀಲಾಗುತ್ತಿವೆ. ಇವು ನಿಮ್ಮ ಪರ್ಸನಾಲಿಟಿಗೆ ಹೆಚ್ಚಿನ ಸ್ಮಾರ್ಟ್‌ನೆಸ್ ಕೊಡುತ್ತವೆ.
ಎಥ್ನಿಕ್ ಔಟ್‌ಫಿಟ್
- ಎಥ್ನಿಕ್ ವೇರ್ ತಜ್ಞರು ಹೇಳುವುದೆಂದರೆ, ಈ ಫ್ಯಾಷನೆಬಲ್ ಡ್ರೆಸ್ ಧರಿಸುವುದಕ್ಕಿಂತ ಹೆಚ್ಚಾಗಿ ನೀವು ಅದರಲ್ಲಿ ನಿಮ್ಮದೇ ಆದ ಸ್ಟೈಲ್ ಕ್ರಿಯೇಟ್ ಮಾಡಿ. ಫ್ಯಾಷನ್ ಟ್ರೆಂಡ್‌ಗೆ ತಕ್ಕಂತೆ ಎಲ್ಲರೂ ಹೊಸ ಬಟ್ಟೆಬರೆ ಧರಿಸುವುದು ಇದ್ದೇ ಇದೆ. ಆದರೆ ನಾಲ್ವರಲ್ಲಿ ಎದ್ದು ಕಾಣಬೇಕೆಂದರೆ ಆ ಗುಂಪಿನಲ್ಲಿ ನೀವು ಎಲ್ಲರಿಗಿಂತ ಡಿಫರೆಂಟ್ ಸ್ಟೈಲ್ ಹೊಂದಿರಬೇಕು.
- ಈ ಬಾರಿ ಎಥ್ನಿಕ್‌ನಲ್ಲಿ ಅನಾರ್ಕಲಿ ಸೂಟ್ ಔಟ್ ಆಫ್ ಫ್ಯಾಷನ್ ಎನಿಸಲಿದೆ. ಆದ್ದರಿಂದ ಈ ಬಾರಿಯೂ ನೀವು ನ್ಯೂ ಇಯರ್ ಪಾರ್ಟಿಗೆ ಅನಾರ್ಕಲಿ ಸೂಟ್ ಧರಿಸ ಬಯಸಿದ್ದರೆ, ಅದರಲ್ಲಿ ತುಸು ಮಾರ್ಪಾಡುಗಳನ್ನು ಮಾಡಿ ಇದರ ಫ್ಯಾಷನ್‌ನ್ನು ಉಳಿಸಿಕೊಳ್ಳಬಹುದು. ಇತ್ತೀಚೆಗೆ ಅನಾರ್ಕಲಿ ಜಾಗಕ್ಕೆ ಪ್ಲೇರ್ ಲೆಂಥ್ ಸೂಟ್ ಫ್ಯಾಷನ್‌ನಲ್ಲಿದೆ. ಇದನ್ನು ಗೌನ್ ಅಥವಾ ಸೂಟ್ ತರಹ ಧರಿಸಬಹುದು. ಸೂಟ್‌ನಲ್ಲಿ ಈ ಬಾರಿ ಸಲ್ವಾರ್ ಸೂಟ್, ಜ್ಯಾಕೆಟ್ ಸ್ಟೈಲ್ ಸೂಟ್ ಇನ್ ಆಗಲಿವೆ. ಚೂಡೀದಾರ್ ಮತ್ತು ಸಿಂಪಲ್ ಪಾಜಾಮಾ ಜಾಗದಲ್ಲಿ ಪ್ಲಾಜೋ, ಶರಾರಾ ಮತ್ತು ಪ್ಯಾಂಟ್‌ಗಳ ಫ್ಯಾಷನ್ ಹೆಚ್ಚಲಿದೆ.
- ಎಥ್ನಿಕ್ ವೇರ್‌ಗಳಲ್ಲಿ ಸದಾ ಡಾರ್ಕ್ ಕಲರ್ಸ್ ಫ್ಯಾಷನ್‌ನಲ್ಲಿದೆ. ಈ ಬಾರಿ ಪೀಚ್ ಕಲರ್ ಇನ್ ಆಗಿದೆ. ಪೀಚ್ ಕಲರ್‌ನಿಂದ ನೀವು ಸೋಬರ್ ಲುಕ್ ಪಡೆಯುವಿರಿ.
- ಇತ್ತೀಚೆಗೆ ಮಿಕ್ಸ್ ಮ್ಯಾಚ್ ಚಾಲನೆಯಲ್ಲಿದೆ. ನೀವು ಮಿಕ್ಸ್ ಮ್ಯಾಚ್ ಮಾಡುವುದಕ್ಕಾಗಿ ಕುರ್ತಿ ಜೊತೆ ಡೆನಿಮ್, ವೆಸ್ಟರ್ನ್ ಟಾಪ್ ಜೊತೆ ಏ ಲೈನ್ ಸ್ಕರ್ಟ್ ಅಥವಾ ಪ್ಲಾಜೋವನ್ನು ಟ್ರೈ ಮಾಡಿ ನೋಡಿ. ಇತ್ತೀಚೆಗೆ ಕುರ್ತಿ ಜೊತೆ ಸ್ಕರ್ಟ್ ಕೂಡ ಫ್ಯಾಷನ್‌ನಲ್ಲಿದೆ.
- ಎಥ್ನಿಕ್ ಡ್ರೆಸೆಸ್‌ನಲ್ಲಿ ಸದಾ ಅದರ ಫ್ಯಾಬ್ರಿಕ್ ಕಡೆ ಗಮನ ಕೊಡಿ. ಫ್ಯಾಬ್ರಿಕ್ಸ್ ನಿಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವಂತಿರಬೇಕು. ನೀವು ಎಥ್ನಿಕ್ ಡ್ರೆಸ್ ಧರಿಸಿದಾಗ, ನಿಮ್ಮ ಆ್ಯಕ್ಸೆಸರೀಸ್ ಮತ್ತು ಫುಟ್‌ವೇರ್ ಸಹ ಎಥ್ನಿಕ್ ಆಗಿರಬೇಕು. ನೀವು ಎಥ್ನಿಕ್ ಕುರ್ತಿ ಧರಿಸಿದಾಗ, ಅದರ ಜೊತೆ ಫಾರ್ಮಲ್ ಸ್ಯಾಂಡಲ್ಸ್ ಧರಿಸಿ. ಆಗ ನಿಮ್ಮ ಲುಕ್ಸ್ ಇನ್ನಷ್ಟು ಆಕರ್ಷಕ ಎನಿಸುತ್ತದೆ.
ವೆಸ್ಟರ್ನ್ ಔಟ್‌ಫಿಟ್
- ಫ್ಯಾಷನ್ ತಜ್ಞರ ಪ್ರಕಾರ, ವೆಸ್ಟರ್ನ್ ಔಟ್‌ಫಿಟ್ಸ್ ನಿಮ್ಮ ಮೊದಲ ಆಯ್ಕೆಯಾದರೆ, ಮಿಡಿ/ಮ್ಯಾಕ್ಸಿ ಸ್ಕರ್ಟ್ ಜೊತೆ ಟ್ಯೂನಿಕ್ ಟಾಪ್ ಧರಿಸಿ, ಈ ಸೀಸನ್‌ನಲ್ಲಿ ನೀವು ಹಾಟ್ ಆಗಿ ಕಾಣಬಹುದು.