- ಪ್ರಭಾ ಮಾಧವ್
ಚಳಿಗಾಲದಲ್ಲಿ ತಣ್ಣನೆಯ ಗಾಳಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಸ್ಟೈಲಿಶ್ ಉಲ್ಲನ್ ಡ್ರೆಸ್‌ಗಳನ್ನಂತೂ ತೆಗೆದು ಕೊಂಡಿದ್ದೀರಿ. ಆದರೆ ನಿಮ್ಮ ಒಳಗಿನ ಸುರಕ್ಷತೆ ಬಗ್ಗೆ ಯೋಚಿಸಿದ್ದೀರಾ? ಚಳಿಗಾಲದಲ್ಲಿ ಶರೀರವನ್ನು ಬೆಚ್ಚಗಿಡಲು ಥರ್ಮಲ್ ವೇರ್ ಬಾಡಿ ವಾರ್ಮರ್ ಧರಿಸುವುದು ಅಗತ್ಯ. ಅದರ ಆಯ್ಕೆ ಮಾಡುವುದು ಹೇಗೆಂದು ತಿಳಿಯೋಣ ಬನ್ನಿ......
ಫ್ಯಾಬ್ರಿಕ್
ಮಾರುಕಟ್ಟೆಯಲ್ಲಿ ಹಲವು ರೀತಿಯ ಫ್ಯಾಬ್ರಿಕ್‌ನ ಥರ್ಮಲ್ ವೇರ್ ಲಭ್ಯವಿವೆ. ಆದರೆ ಯಾವಾಗಲೂ ಬ್ರ್ಯಾಂಡೆಡ್ ಥರ್ಮಲ್ ವೇರ್‌ನ್ನೇ ಆರಿಸಿಕೊಳ್ಳಿ. ಅದರ ಒಳಗಿನ ಪದರ ಸಾಫ್ಟ್ ಕಾಟನ್‌ನದ್ದು ಹಾಗೂ ಮೇಲಿನ ಪದರ ಉಲ್ಲನ್‌ದಾಗಿರಬೇಕು. ಅಂತಹ ಥರ್ಮಲ್ ವೇರ್‌ನ ಒಳಗಿನ ಪದರ ತೇವಾಂಶವನ್ನು ದೂರ ಮಾಡುತ್ತದೆ. ಹೊರಗಿನ ಪದರ ಉಷ್ಣತೆಯನ್ನು ಸ್ಥಿರವಾಗಿಡುತ್ತದೆ. ಅದರಿಂದ ನಿಮ್ಮ ತ್ವಚೆ ಸುಲಭವಾಗಿ ಉಸಿರಾಡಬಹುದು. ರಾಶೆಸ್ ಉಂಟಾಗುವ ಅಪಾಯ ಇರುವುದಿಲ್ಲ. ಇವು ಸಾಫ್ಟ್, ಕಂಫರ್ಟೆಬಲ್ ಮತ್ತು ಸ್ಕಿನ್ ಫ್ರೆಂಡ್ಲಿ ಕೂಡ ಆಗಿರುತ್ತದೆ.
ಡ್ರೆಸ್‌ಗೆ ಅನುಗುಣವಾಗಿರಲಿ
ನೀವು ಥರ್ಮಲ್ ವೇರ್‌ನ್ನು ನಿಮ್ಮ ಡ್ರೆಸ್‌ಗೆ ಅನುಗುಣವಾಗಿ ಆಯ್ಕೆ ಮಾಡಬಹುದು. ಈಗ ಟೂ ಪೀಸ್ ಥರ್ಮಲ್ ವೇರ್ ಬೇರೆ ಬೇರೆ ಡಿಸೈನ್‌ಗಳಲ್ಲಿ ಲಭ್ಯವಿವೆ. ಮೇಲಿನ ಭಾಗದ ಡಿಸೈನ್‌ನಲ್ಲಿ ಸ್ಲೀವ್ ಲೆಸ್, ಹಾಫ್ ಸ್ಲೀವ್ಸ್, ಫುಲ್ ಸ್ಲೀವ್ಸ್ ನೊಂದಿಗೆ ಡೀಪ್ ರೌಂಡ್ ನೆಕ್, ವೀನೆಕ್ ಅಲ್ಲದೆ ಸ್ಪೆಗೆಟಿ ಸ್ಟೈಲ್ ಕೂಡ ಚಾಲನೆಯಲ್ಲಿದೆ. ಕೆಳಗೆ ಲೆಗಿಂಗ್, ಪ್ಯಾಂಟ್ ಸ್ಟೈಲ್ ಮತ್ತು ಕೇಪ್ರಿ ಸ್ಟೈಲ್ ರೂಢಿಯಲ್ಲಿದೆ. ಅವನ್ನು ನಿಮ್ಮ ಡ್ರೆಸ್‌ಗೆ ಅನುಸಾರವಾಗಿ ಸುಲಭವಾಗಿ ಕ್ಯಾರಿ ಮಾಡಬಹುದು ಮತ್ತು ಸ್ಟೈಲಿಶ್ ಆಗಿ ಕಾಣಬಹುದು.
ಹೀಗೆ ಕೆಲಸ ಮಾಡುತ್ತದೆ
ಬಾಡಿ ವಾರ್ಮರ್ ಇನ್ಸುಲೇಷನ್ ಟೆಕ್ನಿಕ್‌ನಿಂದ ಕೆಲಸ ಮಾಡುತ್ತದೆ. ಇದರಲ್ಲಿ ಉಪಯೋಗಿಸಲಾಗುವ ಫ್ಯಾಬ್ರಿಕ್ ಶರೀರದ ತೇವಾಂಶದ ಕೊಂಚ ಭಾಗ ಹೀರಿಕೊಂಡು ಅದನ್ನು ಒಣಗಿಸುತ್ತದೆ. ಶರೀರ ಮತ್ತು ಬಟ್ಟೆಯ ನಡುವಿನ ಇನ್ಸುಲೇಟಿಂಗ್ ಲೇಯರ್‌ನಲ್ಲಿ ಗಾಳಿಯ ಅಗತ್ಯ ಸಂಚಾರ ಇರುವಂತೆ ನೋಡಿಕೊಳ್ಳುತ್ತದೆ.
ಇದರ ಜೊತೆ ಜೊತೆಗೆ ಇದು ಎಷ್ಟು ಚೆನ್ನಾಗಿ ನೇಯಲ್ಪಟ್ಟಿರುತ್ತದೆ ಎಂದರೆ ಶರೀರದ ಪ್ರಾಕೃತಿಕ ಉಷ್ಣತೆಯನ್ನು ಒಳಗೇ ಇರುವಂತೆ ಮಾಡುತ್ತದೆ. ಉಲ್ಲನ್ ಥರ್ಮಲ್ ವೇರ್‌ನ ವಿಶೇಷತೆಯೆಂದರೆ ಅದು ಕೊಂಚ ತೇವಾಂಶ ಹೀರಿಕೊಂಡ ನಂತರ ಶರೀರದ ಉಷ್ಣತೆಯನ್ನು ಕಾಪಾಡುತ್ತದೆ.
ಹೇಗೆ ಸ್ವಚ್ಛಗೊಳಿಸುವುದು?
ಥರ್ಮಲ್ ವೇರ್‌ನ ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಕೊಡಿ. ಏಕೆಂದರೆ ಇದು ನೇರವಾಗಿ ನಿಮ್ಮ ಶರೀರಕ್ಕೆ ಅಂಟಿಕೊಂಡಿರುತ್ತದೆ. ಇದರ ಸ್ವಚ್ಛತೆಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಉಲ್ಲನ್ ಡಿಟರ್ಜೆಂಟ್ ಲಿಕ್ವಿಡ್‌ನ್ನೇ ಉಪಯೋಗಿಸಿ. ಬಿಸಿನೀರಿನಲ್ಲಿ ತೊಳೆಯುವುದರಿಂದ ಥರ್ಮಲ್ ವೇರ್ ಸಡಿಲವಾಗುವ ಅಪಾಯ ಇರುತ್ತದೆ. ಇದನ್ನು ಸ್ವಲ್ಪಕಾಲ ಉಲ್ಲನ್ ಲಿಕ್ವಿಡ್ ಡಿಟರ್ಜೆಂಟ್ ಇರುವ ತಣ್ಣೀರಿನಲ್ಲಿ ಡಿಪ್ ಮಾಡಿಡಿ. ನಂತರ ಕೈಗಳಲ್ಲಿ ಚೆನ್ನಾಗಿ ಉಜ್ಜಿ ನೀರಿನಿಂದ ಚೆನ್ನಾಗಿ ತೊಳೆಯಿರಿ. ಅದರಿಂದ ಡಿಟರ್ಜೆಂಟ್ ಪೂರ್ತಿಯಾಗಿ ಹೋಗಬೇಕು. ನಂತರ ಅದನ್ನು ಆ್ಯಂಟಿಸೆಪ್ಟಿಕ್ ಡ್ರಾಪ್ ಇರುವ ನೀರಿನಲ್ಲಿ ಡಿಪ್ ಮಾಡಿ ತೆಗೆಯಿರಿ. ಅದರಿಂದ ಇದು ಕೀಟಾಣುರಹಿತಾಗುತ್ತದೆ. ವಾಷಿಂಗ್ ಮೆಷಿನ್‌ನ ಡ್ರೈಯರ್‌ನಲ್ಲಿ ಒಣಗಿಸಿದ ನಂತರ ಇದನ್ನು ಬಿಸಿಲಿನಲ್ಲಿ ಒಣಗಿಸಿ. ಅದರಿಂದ ಇದರ ತೇವಾಂಶ ಪೂರ್ತಿಯಾಗಿ ಹೋಗುತ್ತದೆ.