- ಲಲಿತಾ ಗೋಪಾಲ್
ಜ್ಯೂವೆಲರಿ ಒಡವೆಗಳು ಪ್ರತಿಯೊಬ್ಬ ಹೆಣ್ಣಿನ ಮೊದಲ ಆಯ್ಕೆ. ಹೀಗಾಗಿಯೇ ಬಾಲ್ಯದಿಂದ ಅಮ್ಮ, ಅಜ್ಜಿಯರ ಸೀರೆ ಒಡವೆಗಳನ್ನು ಉಟ್ಟುತೊಟ್ಟು ನೋಡುವ ಕುತೂಹಲ ಇರುತ್ತದೆ. ತಮ್ಮನ್ನು ತಾವು ಬ್ಯೂಟಿಫುಲ್ ಸ್ಟೈಲಿಶ್ ಆಗಿ ತೋರ್ಪಡಿಸುವ ಇಷ್ಟ ಯಾರಿಗೆ ತಾನೇ ಇರುವುದಿಲ್ಲ? ಹಾಗಾಗಿ ಅವಳು ಮತ್ತಷ್ಟು ಮಾಡ್ ಬ್ಯೂಟಿ, ಲೇಟೆಸ್ಟ್ ಫ್ಯಾಷನ್, ಜ್ಯೂವೆಲರಿಗಳಿಗೆ ಮೊರೆಹೋಗುತ್ತಾಳೆ. ಇವೆರಡರ ಹೊರತಾಗಿ ಮ್ಯಾಚಿಂಗ್ ಸ್ಟೈಲಿಶ್ ಜ್ಯೂವೆಲರಿ ಜೊತೆ ತಮ್ಮನ್ನು ಟೀಮ್ ಅಪ್ ಮಾಡಿಕೊಂಡು ತನ್ನ ಸೌಂದರ್ಯಕ್ಕೆ ವಿಶೇಷ ಟಚ್ ನೀಡಿ, ಹೆಚ್ಚು ಗ್ಲಾಮರಸ್ ಆಗಿರಲು ಬಯಸುತ್ತಾಳೆ. ವಿವಿಧ ಬಗೆಯ ಡ್ರೆಸ್‌ಗಳ ಜೊತೆ ಎಂತೆಂಥ ಜ್ಯೂವೆಲರಿ ಧರಿಸಿ ಅಪ್‌ಡೇಟ್ ಆಗಬಹುದೆಂದು ನೋಡೋಣವೆ?
ಇಯರ್‌ರಿಂಗ್ಸ್ : ಸಮರ್ಪಕ ಡ್ರೆಸ್ ಜೊತೆ ಧರಿಸಿದ ಮ್ಯಾಚಿಂಗ್ ಜ್ಯೂವೆಲರಿ ಹೆಣ್ಣಿಗೆ ಕಂಪ್ಲೀಟ್ ಲುಕ್ ಕೊಡುತ್ತದೆ, ಜೊತೆಗೆ 100% ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಜ್ಯೂವೆಲರಿಯಲ್ಲಿ ಇಯರ್ ರಿಂಗ್ಸ್ ವಿಷಯ ತೆಗೆದುಕೊಂಡರೆ ಪ್ರೆಶಿಯಸ್ ಮೆಟಲ್ಸ್ ಆದ ಗೋಲ್ಡ್, ಸಿಲ್ವರ್, ಡೈಮಂಡ್ ಮಾತ್ರವಲ್ಲದೆ ಸಾದಾ ಮೆಟಲ್, ಫೈಬರ್, ಪೇಪರ್, ಪ್ಲಾಸ್ಟಿಕ್, ಲೆದರ್ ಇತ್ಯಾದಿ ಅನೇಕ ವೆರೈಟಿ ಲಭ್ಯವಿವೆ. ಇದರಲ್ಲಿ ಮಹಿಳೆಯರು ತಮಗೆ ಬೇಕಾದ್ದನ್ನು ಅಗತ್ಯ ಹಾಗೂ ಬಜೆಟ್‌ಗೆ ತಕ್ಕಂತೆ ಆರಿಸಬಹುದು, ಡ್ರೆಸ್‌ಗೆ ಮ್ಯಾಚ್ ಮಾಡಿಕೊಳ್ಳಬಹುದು.
ಉದ್ಯೋಗಸ್ಥ ವನಿತೆ ಆಗಿದ್ದರೆ, ಆಫೀಸಿನಲ್ಲಿ ಬಿಸ್‌ನೆಸ್ ಡ್ರೆಸ್ ಕೋಡ್ ಇದ್ದರಂತೂ, ಆಕೆ ಲಾರ್ಜ್ ಟ್ರೂಪ್ ಅಥವಾ ಡ್ರಾಪ್‌ನ ಇಯರಿಂಗ್ಸ್ ಬದಲು ಸ್ಮಾಲ್ ಸ್ಟಡ್ಸ್ ಧರಿಸಬೇಕು. ಬಿಸ್‌ನೆಸ್ ಡ್ರೆಸ್ ಕೋಡ್ ಜೊತೆ ಬ್ರೈಟ್ ಸ್ಪಾರ್ಕ್‌ಲಿಂಗ್, ಡೈಮಂಡ್ ಅಥವಾ ದೊಡ್ಡ ಜೆಮ್ಸ್ ಸ್ಟೋನ್ ಸೂಟ್ ಆಗದು. ಟ್ರೌಸರ್ಸ್/ಸ್ಟ್ರೈಪ್ಡ್ ಶರ್ಟ್ ಜೊತೆ ಜ್ಯಾಮೆಟ್ರಿಕ್ ಇಯರಿಂಗ್ಸ್ ಮತ್ತು ಜೀನ್ಸ್ ಜೊತೆ ಕಲರ್‌ಫುಲ್ ಫ್ಲಾರೆಲ್ ಟಾಪ್ ಧರಿಸಿದ್ದರೆ ಅವುಗಳ ಕೂಡ ಮೆಟಲ್ ಇಯರಿಂಗ್ಸ್ ಧರಿಸಬೇಕು. ಇಂಡಿಯನ್ ವೇರ್ ಅಂದ್ರೆ ಲಾಂಗ್ ಕುರ್ತಿ ಜೊತೆ ಹ್ಯಾಂಗಿಂಗ್ ಇಯರಿಂಗ್ಸ್ ಲುಕ್ಸ್ ಗೆ ಕಾಂಪ್ಲಿಮೆಂಟ್ ಆಗಿರುತ್ತವೆ. ಹೆಚ್ಚಿನ ಬ್ಲಿಂಗ್/ಹೊಳೆಹೊಳೆಯುವ ಜ್ಯೂವೆಲರಿಗಳನ್ನು ಮದುವೆಗಳಂಥ ಸಾಂಪ್ರದಾಯಿಕ ಶುಭ ಸಮಾರಂಭಗಳಿಗೆಂದೇ ಇರಿಸಿಕೊಳ್ಳಿ. ವಿವಾಹಿತ ಮಹಿಳೆಯರಿಗೆ ಸ್ಟಡ್ಸ್ ಹೆಚ್ಚು ಸೂಕ್ತ. ಅಗ್ಗದ ಫಂಕಿ ಸ್ಟ್ರೀಟ್ ಇಯರಿಂಗ್ಸ್, ವೆಸ್ಟರ್ನ್ ವೇರ್ ಮತ್ತು ಹ್ಯಾಂಡ್‌ಲೂಮ್, ಖಾದಿ, ಕಾಟನ್ ಸೂಟ್ ಹಾಗೂ ಕುರ್ತಿ ಜೊತೆ ಹೆಚ್ಚು ಒಪ್ಪುತ್ತವೆ. ನೀವು ಸಂಜೆಯ ಪಾರ್ಟಿಗೆ ಹೊರಟಿದ್ದರೆ, ಮಾರುಕಟ್ಟೆಯಲ್ಲಿ ಸಿಗುವ ಇಯರ್‌ಕಫ್ಸ್ ನಿಮ್ಮ ಈವ್ನಿಂಗ್ ಗೌನ್/ಸೀರೆಗಳಿಗ ಚೆನ್ನಾಗಿ ಹೊಂದುತ್ತವೆ.
ಬ್ಯಾಂಗಲ್ಸ್ ವಾಚಸ್ : ವಿವಾಹಿತ ಮಹಿಳೆಯರ ಡೇಲಿ ಬಳಕೆಗಾಗಿ ವೆಸ್ಟರ್ನ್ ಡ್ರೆಸ್ ಜೊತೆ ಹ್ಯಾಂಡ್‌ಕಫ್ಸ್, ಮಲ್ಟಿಕಲರ್ಡ್ ಮೆಟಲ್, ಫೈಬರ್, ಪ್ಲಾಸ್ಟಿಕ್, ಲೆದರ್ ಬ್ರೇಸ್ಲೆಟ್ ಧರಿಸಬಹುದು. ಅದರಲ್ಲೂ ಲೆದರ್ ಬ್ರೇಸ್ಲೆಟ್ ನಿಮ್ಮ ಸ್ಕಿನ್ ಜೀನ್ಸನ್ನು ಎನ್‌ಹ್ಯಾನ್ಸ್ ಗೊಳಿಸುತ್ತದೆ. ಒಂದು ಕೈಯಲ್ಲಿ ಬ್ರೇಸ್ಲೆಟ್/ಕಫ್ಸ್ ಜೊತೆ ಮತ್ತೊಂದು ಕೈಲಿ ವಾಚ್ ಕಟ್ಟಿಕೊಂಡು, ಟಿಪ್‌ಟಾಪಾಗಿ ಕಾಣಬಹುದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊಡ್ಡ ಡಯೆಟ್ ಟ್ರೆಂಡಿ ವಾಚಸ್ ಫ್ಯಾಷನ್ ಎನಿಸಿದೆ ಇವನ್ನು ಕಟ್ಟಿಕೊಂಡು ಯುವತಿಯರು ಮಾಡರ್ನ್, ಸ್ಟೈಲಿಶ್, ಎಲಿಗೆಂಟ್ ಆಗಿ ಮಿಂಚಬಹುದು. ಜೊತೆಗೆ ಸಿಲ್ವರ್, ಮೆಟಲ್ ಬೇಸ್ಡ್ ಬ್ರೇಸ್ ಲೆಟ್ಸ್ ಗಳೂ ಪೂರಕ ಆಗಿರುತ್ತವೆ. ಇಂಥ ವಾಚುಗಳನ್ನು ಸೀರೆ, ಸಲ್ವಾರ್ ಕುರ್ತಿ, ಜೀನ್ಸ್ ಇತ್ಯಾದಿಗಳೊಂದಿಗೆ ಧರಿಸಬಹುದು. ಯುವತಿ ಟಾಮ್ಬಾಯ್ ಲುಕ್ ಬಯಸಿದರೆ ಸ್ಪೌಟಿ ಲುಕ್‌ನ ಕಲರ್‌ಫುಲ್ ವಾಚ್‌ನ್ನು ಜೀನ್ಸ್ ಜೊತೆ ಧರಿಸಿ, ಬಾಯ್‌ಕಟ್ ಮಾಡಿಕೊಳ್ಳಬೇಕು. ಹಾಗೆಯೇ ಟ್ರೆಡಿಶನಲ್/ಫಾರ್ಮಲ್ಸ್ ಜೊತೆ ಮೆಟಲ್ ಬೇಸ್ಡ್ ಬ್ರೇಸ್ಲೆಟ್ ಸ್ಟೈಲ್ ವಾಚ್ ಸೂಕ್ತ.