ಹಿಂದಿನ ಕಾಲದಲ್ಲಿ ಪ್ಲಸ್‌ ಸೈಜ್‌ ಉಡುಗೆ ಧರಿಸಿದ ಗಂಡಸರು, ಹೆಂಗಸರನ್ನು ಕಂಡು ವ್ಯಂಗ್ಯವಾಗಿ ಕಿಸಿಯುತ್ತಿದ್ದರು. ಅಂಥವರಿಗೆ ಆರಿಸಿ ಧರಿಸುವ ಆಯ್ಕೆ ಇಲ್ಲದೆ, ಸೈಜ್‌ಗೆ ತಕ್ಕಂತೆ ವಿಧಿಯಿಲ್ಲದೆ ಕೊಳ್ಳಬೇಕಿತ್ತು. ತಮ್ಮ ಎತ್ತರ, ಗಾತ್ರದಿಂದ ಅವರು ಸಾರ್ವಜನಿಕವಾಗಿ ಬಹಳ ಕುಗ್ಗಿಹೋಗುತ್ತಿದ್ದರು. ಹೇಗಾದರೂ ತಮ್ಮ ಸ್ಥೂಲತೆ ಕರಗಿಸಬೇಕೆಂದು ಜಿಮ್, ಡಯೆಟ್‌ ಇತ್ಯಾದಿಗಳ ಮೊರೆಹೋಗುತ್ತಿದ್ದರು.

ಆದರೆ ಈಗ ಕಾಲ ಬದಲಾಗಿದೆ. 10 ಮಂದಿ ಹೆಂಗಸರು ಒಂದು ಕಡೆ ಸೇರಿದರೆ, ಅವರಲ್ಲಿ ಕನಿಷ್ಠ ಇಬ್ಬರು, ದಪ್ಪಗಿದ್ದು ಪ್ಲಸ್‌ ಸೈಜ್ ಉಡುಗೆ ಧರಿಸುವವರಾಗಿರುತ್ತಾರೆ. ಇದು ಇಂದಿನ ಜೀವನಶೈಲಿ, ಊಟೋಪಚಾರಗಳ ಪರಿಣಾಮ ಆಗಿದೆ. ಇಂದು ಹೆಚ್ಚು ಮಹಿಳೆಯರು ಮನೆಯ ಆಹಾರ ಅವಲಂಬಿಸುವುದರ ಬದಲು ಜಂಕ್‌ ಫುಡ್‌ ಸೇವಿಸುತ್ತಾರೆ. ಆ ಕಾರಣ ಅವರುಗಳು ಚಿಕ್ಕ   ವಯಸ್ಸಿನಲ್ಲೇ ಪ್ಲಸ್‌ ಸೈಜ್‌ನವರಾಗಿ ಬಿಡುತ್ತಾರೆ. ಈಗಂತೂ ಮಾರುಕಟ್ಟೆಯಲ್ಲಿ ಪ್ಲಸ್‌ ಸೈಜ್‌ನ ಬಗೆಬಗೆಯ ಫ್ಯಾಷನೆಬಲ್ ಸೆಕ್ಸಿ ಡ್ರೆಸೆಸ್‌ ಸುಲಭವಾಗಿ ಲಭ್ಯವಿವೆ. ಆಧುನಿಕ ಡಿಸೈನರ್ಸ್‌ ಅಂತೂ ದಿನನಿತ್ಯ ಹೊಸ ಹೊಸ ಬಗೆಯ ಪ್ಲಸ್‌ ಸೈಜ್‌ ಡ್ರೆಸೆಸ್‌ನ್ನು ಮಾರುಕಟ್ಟೆಗೆ ಬಿಡುತ್ತಲೇ ಇದ್ದಾರೆ.

ಉಡುಗೆಗಳ ಸಮರ್ಪಕ ಆಯ್ಕೆ

ಪ್ಲಸ್‌ ಸೈಜ್‌ ಹೆಂಗಸರಿಗಾಗಿ ಪರ್ಫೆಕ್ಟ್ ಡ್ರೆಸ್‌ ಆಯ್ಕೆ ಮಾಡಬೇಕಾದುದು ಅತ್ಯಗತ್ಯ, ಆಗ ಮಾತ್ರ ಅವರು ಸುಂದರವಾಗಿ ಕಾಣಿಸಬಲ್ಲರು. ಈ ಕುರಿತಾಗಿ ತಜ್ಞರು ಹೇಳುವುದೆಂದರೆ, ಪ್ಲಸ್‌ ಸೈಜ್‌ ಎಂದ ಮಾತ್ರಕ್ಕೆ ಏನೂ ತಪ್ಪಿಲ್ಲ, ಅವಮಾನದ ಪ್ರಶ್ನೆಯೇ ಇಲ್ಲ. ಆದರೆ ತಮ್ಮ ಆಕಾರಕ್ಕೆ ಸೂಕ್ತವಾಗುವಂಥ ಸಮರ್ಪಕ ಉಡುಗೆಗಳನ್ನೇ ಅವರು ಆರಿಸಬೇಕು, ಆಗ ಅದು ಗುಡ್‌ ಲುಕ್ಸ್ ನೀಡುತ್ತದೆ. ಆದ್ದರಿಂದ ಡ್ರೆಸ್‌ ಖರೀದಿಸುವಾಗ ಈ ವಿಷಯಗಳನ್ನು ನೆನಪಿಡತಕ್ಕದ್ದು :

ಫ್ಲೇರ್‌ ಪ್ರಿಂಟ್‌ ಹಾಗೂ ಪ್ಲೇನ್‌ ಇರುವ ಯಾವುದೇ ಬಣ್ಣದ ಉಡುಗೆಗಳನ್ನು ಸುಲಭವಾಗಿ ಧರಿಸಬಹುದು. ಆದರೆ ಪರ್ಫೆಕ್ಟ್ ಫ್ಯಾಬ್ರಿಕ್‌ ಕಲರ್‌ ಆಯ್ಕೆ ಸರಿಯಾಗಿರಬೇಕು. ಆ ಉಡುಗೆ ಧರಿಸಲು ಆರಾಮದಾಯಕ, ಸರಿಯಾದ ಶೇಪ್‌, ದೀರ್ಘ ಬಾಳಿಕೆ ಬರುವಂಥದ್ದಾಗಿರಬೇಕು.

ನ್ಯಾಚುರಲ್ ಫ್ಯಾಬ್ರಿಕ್‌, ಸಿಲ್ಕ್, ಸಾಫ್ಟ್ ಕಾಟನ್‌, ಲಿನೆನ್‌, ನೈಲಾನ್‌, ಲೈಕ್ರಾ ಇತ್ಯಾದಿ.

ಸದಾ `' ಶೇಪ್‌ ಉಡುಗೆಗಳನ್ನೇ ಕೊಳ್ಳಲು ಯತ್ನಿಸಿ. ಇವನ್ನು ಧರಿಸಿ ನೀವು ಸ್ಮಾರ್ಟ್‌ ಆಗಿ ಕಾಣುವಿರಿ. ಟ್ಯೂನಿಕ್‌ ವಿತ್‌ ಲೆಗಿಂಗ್‌, ಟಾಪ್‌ ವಿತ್‌ ಜೀನ್ಸ್ ಸಹ ಗುಡ್‌ ಲುಕ್ಸ್ ಕೊಡುತ್ತವೆ.

ಲೇಯರಿಂಗ್‌ವುಳ್ಳ ಉಡುಗೆಗಳು ಸಹ ಪ್ಲಸ್‌ ಸೈಜ್‌ ಹೆಂಗಸರಿಗೆ ಚೆನ್ನಾಗಿ ಹೊಂದುತ್ತವೆ. ಇದರಲ್ಲಿ ಲೇಸ್‌, ಅಂಚಿನಲ್ಲಿ ಸೂಕ್ಷ್ಮ ಎಂಬ್ರಾಯಿಡರಿ ಬಹಳ ಉತ್ತಮ ಎನಿಸುತ್ತದೆ.

ವರ್ಟಿಕಲ್ ಸ್ಟ್ರೈಪ್ಸ್ ವುಳ್ಳ ಉಡುಗೆ, ಪ್ಲಸ್‌ ಸೈಜ್‌ ಹೆಂಗಸರಿಗೆ ಸರಿಯಾಗಿರುತ್ತದೆ. ಇಂಥದರಲ್ಲಿ ಅವರು ತುಸು ಸ್ಲಿಮ್ ಹಾಗೂ ಹೈಟ್‌ ಇರುವಂತೆ ಕಾಣಿಸುತ್ತಾರೆ.

ಡಾರ್ಕ್‌ ಕಲರ್‌ ಹಾಗೂ ಸಣ್ಣ ಪ್ರಿಂಟ್ಸ್ ವುಳ್ಳ ಉಡುಗೆಗಳನ್ನೇ ಹೆಚ್ಚಾಗಿ ಧರಿಸಿರಿ.

ಪ್ಯಾಂಟ್‌ ಖರೀದಿಸುವಾಗ ಡೆನಿಮ್, ರೆಯಾನ್‌, ಕಾಟನ್‌ ಫ್ಯಾಬ್ರಿಕ್ಸ್ ಆರಿಸಿ.

ನಮ್ಮ ದೇಶ ಅಥವಾ ವಿದೇಶೀ ಇರಲಿ, ಇತ್ತೀಚೆಗೆ ಪ್ಲಸ್‌ ಸೈಜ್‌ ಉಡುಗೆಗಳ ಡಿಮ್ಯಾಂಡ್‌ ಹೆಚ್ಚುತ್ತಲೇ ಇದೆ. ಇದೀಗ ಡಿಸೈನರ್ಸ್‌ಗೆ ಎದುರಾಗಿರುವ ದೊಡ್ಡ ಸವಾಲು ಎಂದರೆ, ಬೇರೆ ಬೇರೆ ಬಣ್ಣ ಮತ್ತು ಡಿಸೈನ್‌ಗಳಲ್ಲಿ ಈ ಪ್ಲಸ್‌ ಸೈಜ್‌ ಉಡುಗೆಗಳನ್ನು ಇಳಿಸುವುದು ಹೇಗೆ ಎಂಬುದು. ಲ್ಯಾಕ್ಮೆ ಫ್ಯಾಷನ್‌ ವೀಕ್‌ಗಾಗಿ, ಸುಮಾರು 330 ಪ್ಲಸ್‌ ಸೈಜ್‌ನ ಮಾಡೆಲ್ಸ್ ರಾಂಪ್‌ಗೆ ಬಂದರು. ಅವರಲ್ಲಿ 17 ಜನ ವಿವಿಧ ಜಾಹೀರಾತುಗಳಿಗಾಗಿ ಬುಕ್‌ ಆದರು. ಈ ಸಂದರ್ಭದಲ್ಲಿ ಡಿಸೈನರ್‌ ವಿ. ರಾಡ್ರಿಗ್ಸ್ ಹೇಳುತ್ತಾರೆ, ``ಪ್ರತಿಯೊಬ್ಬ ಹೆಣ್ಣೂ ತಾನು ಸುಂದರವಾಗಿಯೇ ಕಾಣಿಸಬೇಕು ಎಂದು ಬಯಸುತ್ತಾಳೆ, ಅದವಳ ಹಕ್ಕು! ಈ ಕಾರಣಕ್ಕಾಗಿಯೇ ನಾನು ಮಹಿಳೆಯರಿಗೆಂದೇ ಹೆಚ್ಚಿನ ಉಡುಗೆಗಳನ್ನು ವಿನ್ಯಾಸಗೊಳಿಸುತ್ತೇನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ