ಫ್ಯಾಷನ್‌ ಟ್ರೆಂಡ್‌ ಯಾವಾಗಲೂ ಬದಲಾಗುತ್ತಾ ಇರುತ್ತದೆ. ಜನರು ಕೇವಲ ಈ ಬದಲಾವಣೆಯನ್ನಷ್ಟೇ ಅನುಸರಿಸುವುದಿಲ್ಲ, ತಮ್ಮನ್ನು ತಾವು ಅಪ್‌ಡೇಟ್‌  ಆಗಿಟ್ಟುಕೊಳ್ಳಲು ಹೊಸ ಪ್ರಯೋಗ ಕೂಡ ಮಾಡುತ್ತಾರೆ. ಯಾವ ಫ್ಯಾಷನ್‌ ಇನ್‌ ಆಗುತ್ತದೆ, ಯಾವುದು ಔಟ್‌ ಆಗುತ್ತದೆ ಎಂಬುದರ ಬಗ್ಗೆ ತಿಳಿಯಬೇಕು.

ಕಾಲಕ್ಕೆ ತಕ್ಕಂತೆ ಫ್ಯಾಷನ್‌ ಕೂಡ ಬದಲಾಗುತ್ತಾ ಇರುತ್ತದೆ. ಪ್ರತಿಯೊಬ್ಬರೂ ಅದಕ್ಕೆ ತಕ್ಕಂತೆ ತಮ್ಮನ್ನು ತಾವು ಅಪ್‌ಡೇಟ್‌ ಆಗಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಯಾವ ಡ್ರೆಸ್‌ನಲ್ಲಿ ನೀವು ಕಂಫರ್ಟಬಲ್ ಎಂದು ಅನುಭೂತಿ ಮಾಡಿಕೊಳ್ಳುತ್ತೀರೊ, ಅಂಥದೇ ಡ್ರೆಸ್‌ನ್ನು ಧರಿಸಿ. ಆದರೂ ಸದ್ಯ ಏನು ಚಾಲ್ತಿಯಲ್ಲಿದೆ ಎಂದು ತಿಳಿದುಕೊಳ್ಳುವುದು ಅತ್ಯವಶ್ಯಕ. ಭವಿಷ್ಯದಲ್ಲಿ ವಾರ್ಡ್‌ರೋಬ್‌ ಸೆಕ್ಸಿ ಲುಕ್‌ ಜೊತೆ ಜೊತೆಗೆ ಸೊಫಿಸ್ಟಿಕೇಟೆಡ್‌ ಲುಕ್ಸ್ ನ್ನು ಪ್ರೆಸೆಂಟ್‌ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಉದ್ಯೋಗಸ್ಥ ಮಹಿಳೆ ತನ್ನ ಉದ್ಯೋಗಕ್ಕೆ ಅನುಗುಣವಾದ ಡ್ರೆಸ್‌ ಧರಿಸುವುದು ಅನಿವಾರ್ಯವಾಗುತ್ತದೆ. ಇದೇ ಕಾರಣದಿಂದಾಗಿ ಫೆಮಿನೈನ್‌ ಟಚ್‌ ಜೊತೆಗೆ ಸೀಥ್ರೂ ಬೋಲ್ಡ್ ಡ್ರೆಸೆಸ್‌ ಕೂಡ ಫ್ಯಾಷನ್‌ನಲ್ಲಿ ಇವೆ. ಟ್ರಾನ್ಸ್ ಪರೆಂಟ್‌ ಲುಕ್‌ ಫ್ಯಾಷನ್‌ ಜಗತ್ತಿನ ದೀರ್ಘಕಾಲಿಕ ಭಾಗವಾಗಿ ಉಳಿಯುತ್ತದೆ. ಎಥ್ನಿಕ್‌ ಲುಕ್‌ ಕಡಿಮೆಯಾಗುತ್ತದೆ ಮತ್ತು ವೇಷಭೂಷಣಗಳ ಡಿಸೈನಿಂಗ್‌ನ ಮಟ್ಟ ಕೂಡ ಕಡಿಮೆಯಾಗುತ್ತದೆ. ಧರಿಸಲು ಆರಾಮದಾಯಕ ಮತ್ತು ಬೆಲೆ ಕೈಗೆಟುಕುವಂತಿರುವ ಡ್ರೆಸ್‌ಗಳು ಯಾರಿಗಾದರೂ ಇಷ್ಟವಾಗುತ್ತವೆ.

ಇತ್ತೀಚೆಗೆ ಯುವತಿಯರು ಫಿಟೆಡ್‌ ಸ್ಲಿಟ್ಸ್ ನ್ನೇ ಇಷ್ಟಪಡುತ್ತಾರೆ. ಏಕೆಂದರೆ ಒಂದು ಪರ್ಫೆಕ್ಟ್ ಫಿಗರ್‌ಗೆ ಅಂಥವು ಬೇಕೇಬೇಕು. ಸ್ಲಿಟ್ಸ್ ಸಾಮಾನ್ಯವಾಗಿ ವೆಸ್ಟರ್ನ್‌ ಆಗಿರುತ್ತವೆ. ಆದರೆ ಟ್ರೆಡಿಶನಲ್ ಪ್ರಿಂಟ್‌, ಕಟ್‌ವರ್ಕ್‌, ಸೀಕ್ವೆನ್ಸ್ ಮತ್ತು ಬೀಡ್ಲ್ ಸುರಿಮಳೆ ಆಗಿರುವುದು ಕಂಡುಬರಲಿದೆ. ಕ್ಲೌನ್‌ ಪ್ಯಾಂಟ್‌, ಬ್ಯಾಟ್‌ವಿಂಗ್‌ ಸ್ಲೀವ್ಸ್, ಮಿನಿಸ್ಕರ್ಟ್‌ ಶಾರ್ಟ್‌ ಪ್ಯಾಂಟ್‌, ಟ್ಯೂನಿಕ್‌ ಕಫ್ತಾನ್‌, ಗೌನ್‌, ರಫ್ಡ್ ಸ್ಕರ್ಟ್‌ ಜೊತೆ ಜೊತೆಗೆ ಜ್ಯಾಕೆಟ್‌ ಕೂಡ ಎಲ್ಲರ ಗಮನ ಸೆಳೆಯುತ್ತದೆ.

ನ್ಯಾರೊ ಟ್ರೌಸರ್‌, ವೆಲ್ವೆಟ್‌ ಪ್ಯಾಂಟ್‌, ಫ್ಲೇಯರ್ಡ್‌ ಡ್ರೆಸೆಸ್‌, ಫ್ಲೀಟೆಡ್‌ ಸ್ಕರ್ಟ್‌, ಪಫ್ಡ್ ಸ್ಲೀವ್ಸ್, ಬಾಂಬರ್‌ ಜಾಕೆಟ್‌, ಲೋ ಸೈಜ್‌ ಮತ್ತು ಹೈವೇಸ್ಟ್ ಟ್ರೌಸರ್‌ ಪ್ರತಿಯೊಂದು ಬಗೆಯ ಮಹಿಳೆಯರಿಗೂ ಇಷ್ಟವಾಗುತ್ತದೆ.

ಕ್ಯಾಶುವಲ್‌ ವೇರ್‌ನಲ್ಲಿ ವಾಲ್ಯೂಮ್ ಅಥವಾ ಸುತ್ತಳತೆ ಅಥವಾ ಸಡಿಲ ಬಟ್ಟೆಗಳು ಹೆಚ್ಚು ಚಾಲ್ತಿಯಲ್ಲಿರುತ್ತವೆ. ಬಾಹುಗಳು, ಕಾಲರ್‌, ಸ್ಕರ್ಟ್‌ ಮತ್ತು ಜ್ಯಾಕೆಟ್‌ನಲ್ಲಿ ನೋಡಲು ಸಿಗುತ್ತವೆ. ಫುಲ್ಲರ್‌ ಬೆಲೂನ್‌ ಸ್ಲೀವ್ ಮತ್ತು ಶಾರ್ಟ್‌ ಫುಲರ್‌ ಬೆಲ್‌ ಸ್ಲೀವ್ ಸ್ಕರ್ಟ್‌ ಚಾಲ್ತಿಯಲ್ಲಿರುತ್ತವೆ. ಹೈವೇಸ್ಟ್ ಸ್ಕರ್ಟ್‌ ಸಾಕಷ್ಟು ವರ್ಷಗಳ ತನಕ ಟೀನ್‌ ಏಜರ್‌ಗಳ ನಡುವೆ ಹಾಟ್‌ ಟ್ರೆಂಡ್‌ನ ಹಾಗೆ ಪ್ರತ್ಯಕ್ಷವಾಗುತ್ತದೆ. ಅದನ್ನು ಶಾರ್ಟ್‌, ಸಾಟಿನ್‌ ಟಾಪ್‌ ಹಾಗೂ ಕ್ರೌನ್‌ನೆಕ್‌ ಸ್ವೆಟರ್‌ನ ಜೊತೆಗೆ ಧರಿಸಬಹುದು.

ಇವು ಕ್ಲಾಸಿಕ್‌, ಸ್ಟ್ರೇಟ್‌ ಪೆನ್ಸಿಲ್ ಕಟ್‌ನಲ್ಲೂ ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ. ಅದರಲ್ಲಿ ಹಿಂಭಾಗದಲ್ಲಿ ಸ್ಲಿಟ್‌ ಕೂಡ ಇರುತ್ತದೆ. ಜೊತೆಗೆ ಫಿಟಿಂಗ್‌ ಇರುವ ಸ್ಟ್ರ್ಯಾಪ್‌ಲೆಸ್‌ ಬ್ಲೌಸ್‌ ಕೂಡ ಇಷ್ಟವಾಗುತ್ತವೆ. ಅದರ ಮೇಲೆ ಚಳಿಗಾಲದಲ್ಲಿ ಬೆಚ್ಚಗಿನ ಸ್ಟೋಲ್ ಮತ್ತು ಬೇಸಿಗೆಯಲ್ಲಿ ಕಾಟನ್‌ನ ಸ್ಟೋಲ್ ಹಾಕಿಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ