ಮಳೆಗಾಲದಲ್ಲಿ ಫ್ಯಾಷನ್‌ ಆದಷ್ಟೂ ಸಿಂಪಲ್ ಆಗಿದ್ದರೆ ಉತ್ತಮ. ಅಂದರೆ ನಾವು ಧರಿಸುವ ಉಡುಗೆ ಆದಷ್ಟು ಗಾಳಿಗೆ ಹೊಡೆದುಕೊಳ್ಳುವಂತಿರಬಾರದು, ಮಾಮೂಲಿಗಿಂತ ತುಸು ಬಿಗಿ ಆಗಿದ್ದರೂ ಸರಿ. ಇಲ್ಲದ್ದಿದರೆ ಅವು ಬೇಗ ಕೊಳಕಾಗುತ್ತವೆ. ಹಾಗಾದರೆ ಎಂಥ ಡ್ರೆಸ್‌ ಆರಿಸಬೇಕು?

– ಈ ದಿನಗಳಲ್ಲಿ ನೀವು ನಿಮ್ಮ ವಾರ್ಡ್‌ರೋಬ್‌ನಲ್ಲಿ ಕೆಂಪು, ಹಳದಿ, ಹಸಿರು, ಕಿತ್ತಳೆ, ಕಪ್ಪು ಇತ್ಯಾದಿ ಸೇರಿಸಿ.

– ಈ ಸೀಸನ್‌ನಲ್ಲಿ ಇಂಡೋವೆಸ್ಟರ್ನ್‌ ಲುಕ್ಸ್ ಕ್ಯಾರಿ ಮಾಡಿ. ಕಾಲೇಜ್‌ ಹುಡುಗಿಯರು ಕೇಪ್ರಿ/ಶಾರ್ಟ್‌ ಪ್ಯಾಂಟ್ಸ್ ಜೊತೆ ಕಲರ್‌ಫುಲ್  ಸ್ಟೈಲಿಶ್‌ ಟಾಪ್ಸ್ ಧರಿಸಬಹುದು.

– ಮಳೆಗಾಲದಲ್ಲಿ ಅಧಿಕ ಫ್ಲೀಟ್ಸ್ ವುಳ್ಳ ಡ್ರೆಸೆಸ್‌ ಬ್ಯೂಟಿಫುಲ್ ಎನಿಸುತ್ತದೆ. ಕಾಲೇಜು ಕಿಶೋರಿಯರು ಮುಖ್ಯವಾಗಿ ಅಧಿಕ ಫ್ಲೀಟ್ಸ್ ನ ಸಲ್ವಾರ್ ಸೂಟ್, ಕುರ್ತಿ, ಟ್ಯೂನಿಕ್‌ ಇತ್ಯಾದಿ ಆರಿಸಬಹುದು.

– ಸೀರೆ ಉಡಬೇಕಿದ್ದರೆ, ಫ್ಲೀಟ್ಸ್ ಹೆಚ್ಚಿರುವಂತೆ ಮಾಡರ್ನ್‌ ಸ್ಟೈಲ್ ಬ್ಲೌಸ್‌ ಧರಿಸಿರಿ. ಪ್ಲೇನ್‌ ಸೀರೆ ಜೊತೆ ಭಾರಿ ಕಸೂತಿಯುಳ್ಳ ಬ್ಲೌಸ್‌ ಸಹ ಟ್ರೈ ಮಾಡಬಹುದು.

– ಮಳೆಯಲ್ಲಿ ಹೊರಗೆ ಹೊರಡಬೇಕಿದ್ದರೆ, ಅಧಿಕ ಡಾರ್ಕ್‌ ಕಲರ್‌ ಬಟ್ಟೆ ಧರಿಸಬೇಡಿ, ಅವು ಬಣ್ಣ ಬಿಡಬಹುದು.

– ಮಳೆಗಾಲದ ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆ ಇರುತ್ತದೆ. ಇದನ್ನು ತಪ್ಪಿಸಲು ದೇಹಕ್ಕೆ ಅಂಟದಂಥ ಡ್ರೆಸ್‌ ಧರಿಸಿರಿ. ಈ ಸೀಸನ್‌ನಲ್ಲಿ ವೈಟ್‌ ವೆಲ್ವೆಟ್, ಸ್ಟ್ರೆಚೆಬಲ್ ಲೈಕ್ರಾ, ಕಾಟನ್‌ ಉಡುಗೆಗಳಿಗೆ ಆದ್ಯತೆ ನೀಡಿ. ಪಾಲಿಯೆಸ್ಟರ್‌, ಸಿಂಥೆಟಿಕ್‌ ಉಡುಗೆಗಳನ್ನು ಧರಿಸಲೇಬೇಡಿ.

– ಈ ಸೀಸನ್‌ನಲ್ಲಿ ಉಡುಗೆಗೆ ಹೊಂದುವ ಆ್ಯಕ್ಸೆಸರೀಸ್‌ನ್ನೇ ಧರಿಸಿರಿ. ಆಫೀಸಿಗೆ ಅಥವಾ ಕಾಲೇಜಿಗೆ ಹೊರಟಿರುವಾಗ, ಪಾಷ್  ಆ್ಯಕ್ಸೆಸರೀಸ್‌ ಧರಿಸಬಹುದು.

– ಈ ಸೀಸನ್‌ನಲ್ಲಿ ಫ್ಯಾಷನೆಬಲ್ ಆಗಿ ಕಂಡುಬರಲು, ಈಗೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ತೆಳು ಕಾಂಬಿನೇಶನ್ನಿನ ಕಲರ್‌ಫುಲ್ ಸ್ಕಾರ್ಫ್‌, ಬಂಧೇಜ್‌ ಸ್ಟೈಲ್ ಸ್ಕಾರ್ಫ್‌ ಬಳಸಿರಿ.

– ಸಲ್ವಾರ್‌ ಕುರ್ತಿ ಧರಿಸುವ ಹಾಗಿದ್ದರೆ ಸಿಂಥೆಟಿಕ್‌ ಮೆಟೀರಿಯಲ್ ಆಗಿರಲಿ.

– ಬಾಟಮ್ ಡ್ರೆಸೆಸ್‌ ಡಾರ್ಕ್‌ ಕಲರ್‌ನದೇ ಆಗಿದ್ದರೆ ಒಳ್ಳೆಯದು. ಇವು ಪಾರದರ್ಶಕ ಆಗಿರುವುದಿಲ್ಲ, ಕಲೆಯೂ ಕಾಣಿಸುವುದಿಲ್ಲ. ಇದರ ಜೊತೆ ಟಾಪ್ಸ್ ಗಾಗಿ ಬ್ರೈಟ್‌ ಫಂಕಿ ಕಲರ್ಸ್‌ ಆರಿಸಿ. ಆರೆಂಜ್‌, ಪಿಂಕ್‌, ಟರ್ಕಾಯ್ಸ್, ಲೆಮನ್‌ ಯೆಲ್ಲೋ, ಬ್ಲೂ, ಗ್ರೀನ್‌ ಇತ್ಯಾದಿ ಬಣ್ಣಗಳು ನಿಮ್ಮ ಮೂಡ್‌ನ್ನು ಎನ್‌ಹ್ಯಾನ್ಸ್ ಮಾಡುತ್ತವೆ. ಫ್ಲೋರಲ್ ಸ್ಟ್ರಿಪ್ಸ್ ಸಹ ಧರಿಸಬಹುದು.

– ಫ್ಯಾಬ್ರಿಕ್ಸ್ ವಿಷಯಕ್ಕೆ ಬಂದಾಗ, ಈ ಸೀಸನ್‌ನಲ್ಲಿ ಲೈಕ್ರಾ ಅವಾಯ್ಡ್ ಮಾಡಿ. ಇದು ದೇಹಕ್ಕೆ ಅಂಟಿಕೊಳ್ಳುತ್ತದೆ, ಹ್ಯುಮಿಡಿಟಿ ಹೆಚ್ಚಿಸುತ್ತದೆ. ಇದರ ಬದಲು ಕಾಟನ್‌ ನೆಟ್‌, ಸಿಲ್ಕ್, ಪಾಲಿನೈಲಾನ್‌, ಕಾಟನ್‌ ಬ್ಲೆಂಡ್ಸ್ ಬಳಸಬಹುದು. ಇವು ಬೇಗ ಕ್ರಶ್‌ ಆಗುವುದಿಲ್ಲ.

– ಕಾಟನ್‌ ಪಾಲಿಯೆಸ್ಟರ್‌ ಬೇಡ. ಇವು ಬೇಗ ಕ್ರಶ್‌ ಆಗುತ್ತವೆ.

– ಲೆದರ್‌ ಶೂಸ್‌ ಅಥವಾ ಹ್ಯಾಂಡ್‌ಬ್ಯಾಗ್‌ ಇರಲಿ, ಮಳೆಗಾಲದಲ್ಲಿ ಒದ್ದೆಯಾಗಿ ಬೇಗ ಹಾಳಾಗುತ್ತವೆ. ಆದ್ದರಿಂದ ಇವು ಬೇಡ. ಇವನ್ನೂ ಬಳಸಿಕೊಳ್ಳಿ

ಇಷ್ಟು ಮಾತ್ರವಲ್ಲದೆ, ಗುಲಾಬಿ, ಕಿತ್ತಳೆ, ಪೀಚ್‌ ಇತ್ಯಾದಿ ಬ್ರೈಟ್‌ ಬಣ್ಣಗಳನ್ನು ಈ ಸೀಸನ್‌ನಲ್ಲಿ ಬಳಸಿಕೊಳ್ಳಬಹುದು. ಪಾರದರ್ಶಕ, ರಂಗುರಂಗಿನ ರೇನ್‌ಕೋಟ್‌, ಕಲರ್‌ಫುಲ್ ಸ್ಪೋರ್ಟ್‌ ಶೂಸ್‌, ಲೆಜಿಸ್‌, ಗಮ್ ಬೂಟ್ಸ್ ಈ ಸೀಸನ್‌ನಲ್ಲಿ ಅತ್ಯಗತ್ಯ ಎನಿಸುತ್ತದೆ. ಪೋಲ್ಕಾ ಡಾಟ್ಸ್, ಜ್ಯಾಮಿಟ್ರಿಕ್‌ ಪ್ರಿಂಟ್ಸ್, ಫ್ಲೋರಲ್ ಪ್ರಿಂಟ್ಸ್ ಇತ್ಯಾದಿಗಳ ವೈಭವವನ್ನು ಈ ಕಾಲದಲ್ಲಿ ಕಾಣಬಹುದು. ಫ್ಯಾಷನ್‌ಪ್ರಿಯರಿಗೆ ಇದು ಸುಗ್ಗಿಯೇ ಸರಿ. ಡ್ರೆಸ್‌ಗೆ ಹೊಂದುವಂಥ ಫ್ಯಾಷನೆಬಲ್ ಕಲರ್‌ಫುಲ್ ಸ್ಲಿಪರ್ಸ್‌ ಕೂಡ ಆರಿಸಿಕೊಳ್ಳಿ.

ಜೀನ್ಸ್ ಟೀಶರ್ಟ್‌ಗೆ ಅಗಲದ ಬದಲು ತೆಳು ಬೆಲ್ಟ್ ಬಳಸಿರಿ. ಹುಡುಗಿಯರಿಗೆ ನೀಲೆಂಥ್‌ ಫ್ರಾಕ್‌, ಫ್ಲೋರಲ್ ಪ್ರಿಂಟ್‌ ಸ್ಕರ್ಟ್‌ ಇತ್ಯಾದಿ ಮಾನ್‌ಸೂನ್‌ನ ಬೆಸ್ಟ್ ಡ್ರೆಸೆಸ್‌ ಎನಿಸಿವೆ. ಕಾಟನ್‌, ಶಿಫಾನ್‌ ಉಡುಗೆಗಳು ಯುವ ಜನತೆಗೆ ಭಾರಿ ಇಷ್ಟ. ಕಂಗಳ ಸುರಕ್ಷೆ, ಸುಸ್ತಿನಿಂದ ಬಚಾವಾಗಲು ತಂಪು ಕನ್ನಡಕಗಳನ್ನು ಈ ಕಾಲದಲ್ಲೂ ಬಳಸಬಹುದು. ಉಡುಗೆ ಜೊತೆ ಕೂದಲಿಗೆ ಹೊಸ ಲುಕ್ಸ್ ಕೊಡಲು ಮರೆಯಬೇಡಿ.

– ದೀಪ್ತಿ ರಾಜೇಶ್‌

ಫುಟ್‌ವೇರ್‌

ಈ ಮಳೆಗಾಲದಲ್ಲಿ ಮಾರುಕಟ್ಟೆಯಲ್ಲಿ ಅನೇಕ ಬಗೆಯ ಫುಟ್‌ವೇರ್‌ ಸಿಗುತ್ತವೆ. ಇದು ಮಳೆಗಾಲದಲ್ಲಿ ನಿಮ್ಮ ಪಾದಗಳಿಗೆ ಸುರಕ್ಷೆ ಜೊತೆಗೆ  ಸ್ಟೈಲ್  ಗ್ಲಾಮರ್‌ ಸಹ ನೀಡುತ್ತದೆ. ಕಲರ್‌ಫುಲ್ ಫ್ಲಿಪ್‌ಫ್ಲಾಪ್‌, ಪ್ಲೇಟರ್‌, ರೇನ್‌ ಬೂಟ್ಸ್, ಪ್ಲಾಸ್ಟಿಕ್‌ ಚಪ್ಪಲಿಗಳು ಹಸಿರು, ಕಪ್ಪು ಇತ್ಯಾದಿ ಎಲ್ಲಾ ಬಣ್ಣಗಳಲ್ಲೂ ಲಭ್ಯ. ಇವು ಫ್ಲವರ್‌ಪ್ರಿಂಟ್ಸ್ ಹಾಗೂ ಇನ್ನಿತರ ಆಕರ್ಷಕ ಡಿಸೈನ್‌ಗಳಲ್ಲೂ ಲಭ್ಯ. ಮಾನ್‌ಸೂನ್‌ ಸೀಸನ್‌ನಲ್ಲಿ ನೀವು ಬೇರೆಯವರಿಗಿಂತ ವಿಭಿನ್ನವಾಗಿ ಕಂಡುಬರಲು ಇವು ಸಹಕಾರಿ. ಇವನ್ನು ಖರೀದಿಸುವಾಗ ಸ್ಟೈಲ್‌, ಫ್ಯಾಷನ್‌ ಮಾತ್ರವಲ್ಲದೆ, ಮುಖ್ಯವಾಗಿ ಪಾದಗಳಿಗೆ ಆರಾಮದಾಯಕ ಆಗಿರಬೇಕು ಎಂಬುದರತ್ತ ಆದ್ಯತೆ ಕೊಡಿ.

Tags:
COMMENT