ಬೇಸಿಗೆ ಅಥವಾ ಮಳೆಗಾಲದ ಋತುವಿಗೆ ತಕ್ಕಂತೆ ಫ್ಯಾಷನ್ ಬದಲಾಗುತ್ತದೆ. ಬೇಸಿಗೆಯಿಂದ ಪ್ರತಿಯೊಬ್ಬರೂ ತೊಂದರೆಗೆ ಒಳಗಾಗುತ್ತಾರೆ. ಈ ದಿನಗಳಲ್ಲಿ ಏನನ್ನು ಧರಿಸುವುದು ಎಂಬುದೇ ದೊಡ್ಡ ಚಿಂತೆಯಾಗುತ್ತದೆ. ಅದು ಸ್ಟೈಲಿಶ್ ಆಗಿಯೂ ಇರಬೇಕು, ಬಿಸಿಲಿನ ಝಳ ಕಾಡಬಾರದು. ಬೇಸಿಗೆಯ ದಿನಗಳಲ್ಲಿ ಕಾಟನ್ ಉಡುಗೆಗಳು ಎಲ್ಲಕ್ಕಿಂತ ಬೆಸ್ಟ್ ಎಂಬುದರಲ್ಲಿ ಎರಡು ಮಾತಿಲ್ಲ. ಇದು ಬೆವರನ್ನು ಹೀರಿಕೊಂಡು, ಬಿಸಿಲಿನ ಉಷ್ಣತೆಯಿಂದ ರಕ್ಷಣೆ ನೀಡುತ್ತದೆ. ಬಿಸಿಲು ಹೆಚ್ಚಾಗಿರುವ ದಿನಗಳಲ್ಲಿ ಫ್ಯಾಷನ್‌ಗೆ ತಕ್ಕಂತೆ ಡ್ರೆಸ್ ಆರಿಸುವುದೇ ಒಂದು ಸವಾಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ. ಜನ ಹೊರಗಿನ ಸುತ್ತಾಟ ಪಿಕ್ನಿಕ್, ಪ್ರವಾಸ ಎಂದು ಪ್ಲಾನ್ ಮಾಡುತ್ತಾರೆ. ಇಂಥ ಸಮಯದಲ್ಲಿ ಬಿಸಿಲಿನ ಝಳದಿಂದ ತಪ್ಪಿಸಿಕೊಂಡು ಹಿತಕರ ಎನಿಸುವ ಉಡುಗೆ ಧರಿಸಬೇಕಾದುದು ಅತ್ಯವಶ್ಯಕ.
ಈ ಕುರಿತಾಗಿ ಇಲ್ಲಿವೆ ಕೆಲವು ಸಲಹೆಗಳು :
- ಬಿಸಿಲಿನ ಧಗೆಯನ್ನು ಪರಾವರ್ತಿತಗೊಳಿಸಿ, ಉಷ್ಣತೆಗೆ ಪರಿಹಾರ ನೀಡುವಂಥ ಉಡುಗೆ ಧರಿಸಿ.
- ಈ ಬಿಸಿಲಿನ ದಿನಗಳಲ್ಲಿ ನ್ಯಾಚುರಲ್ ಫ್ಯಾಬ್ರಿಕ್ ಆದ ಕಾಟನ್, ಖಾದಿ, ಮಕ್ಮಲ್, ವಾಯಲ್ ನಂಥವೇ ಸರಿ.
- ಫ್ಯಾಬ್ರಿಕ್ ನಂತರ ಬಣ್ಣಗಳ ಆಯ್ಕೆಯಲ್ಲಿ ಜಾಣ್ಮೆ ಇರಲಿ. ಆ್ಯಕ್ವಾ ಬ್ಲೂ, ಬೇಜ್, ಪೀಚ್ ಬಣ್ಣಗಳನ್ನು ಆರಿಸಿ. ಈ ಬಣ್ಣಗಳು ಮಾನಸಿಕ ರೂಪದಲ್ಲೂ ತಂಪು ನೀಡುತ್ತವೆ. ಈ ಸೀಸನ್‌ನಲ್ಲಿ ಕಪ್ಪು ಅಥವಾ ಅತಿ ಡಾರ್ಕ್ ಬಣ್ಣ ಬಳಸಬೇಡಿ.
- ಡ್ರೆಸ್‌ಗಳು ಅತಿ ಟೈಟ್ ಆಗಿರುವುದು ಬೇಡ. ದೇಹಕ್ಕೆ ಬಿಗಿಯಾದ ಬಟ್ಟೆ ಧರಿಸುವುದರಿಂದ ಬೆವರು ಹರಿಯುವುದು ಮಾತ್ರವಲ್ಲ, ಬಟ್ಟೆ ದೇಹಕ್ಕೆ ಅಂಟಿಕೊಳ್ಳುವುದರಿಂದ ಅಸಹ್ಯವಾಗಿಯೂ ಕಾಣುತ್ತದೆ. ಹೀಗಾಗಿ ಲೂಸ್ ಫಿಟಿಂಗ್‌ನ ಉಡುಗೆಗಳನ್ನೇ ಧರಿಸಿರಿ.
- ಹೊರಗಿನ ಸುತ್ತಾಟಕ್ಕೆ ಫುಲ್ ಸ್ಲೀವ್ಡ್ ಡ್ರೆಸ್ ಟಾಪ್ಸ್ ಆರಿಸಿ. ಇದು ಬೆವರನ್ನು ಸುಲಭವಾಗಿ ಹೀರುತ್ತದೆ.
- ಪ್ರಿಂಟ್‌ವುಳ್ಳ ಉಡುಗೆಗಳಲ್ಲಿ ಡಿಜಿಟಲ್ ಪ್ರಿಂಟ್, ರೋಟರಿ ಪ್ರಿಂಟ್ ಇತ್ಯಾದಿ ಆರಿಸಿ.
- ಈ ಸೀಸನ್‌ನಲ್ಲಿ ಕೇಪ್ರಿ, ಕುರ್ತಾ, ಪ್ಲಾಜೋ ಪ್ಯಾಂಟ್, ಸ್ಕರ್ಟ್ ಇತ್ಯಾದಿ ಗಾಳಿಯಾಡುವಂಥ ಉಡುಗೆಗಳನ್ನೇ ಧರಿಸಿರಿ. ಜೊತೆಗೆ ಸ್ಲೀವ್ ಲೆಸ್ ಟಾಪ್ ಅಥವಾ ಸೀರೆಗೆ ಸ್ಲೀವ್ ಲೆಸ್ ಬ್ಲೌಸ್ ಧರಿಸಿರಿ.
- ಜೀನ್ಸ್ ಬದಲು ಟ್ರೌಸರ್ಸ್ ಧರಿಸಿರಿ. ಲಿನೆನ್ ಟ್ರೌಸರ್ಸ್ ಹೆಚ್ಚು ಆರಾಮದಾಯಕ ಎನಿಸುತ್ತದೆ.
- ಬೇಸಿಗೆಯಲ್ಲಿ ಮೇಕಪ್ ಲೈಟ್ ಆಗಿರಬೇಕು. ಲಿಪ್ ಕಲರ್ ಐ ಲೈನರ್ಸ್ ಬೆಟರ್ ಎನಿಸುತ್ತದೆ. ಅಧಿಕ ಮೇಕಪ್ ಈ ಸಮಯದಲ್ಲಿ ಕರಗಿಹೋಗುತ್ತದೆ, ನಿಮ್ಮ ಸೌಂದರ್ಯಕ್ಕೆ ಚ್ಯುತಿ ತರುತ್ತದೆ. ಸನ್‌ಸ್ಕ್ರೀನ್ ಅಗತ್ಯ ಹಚ್ಚಿಕೊಳ್ಳಿ.
- ಜ್ಯೂವೆಲರಿ ಸಹ ಲೈಟ್ ಆಗಿರಲಿ ಅಥವಾ ಧರಿಸದ್ದಿದರೂ ಸರಿ. ಹ್ಯಾಟ್, ಸನ್‌ಗ್ಲಾಸಸ್ ಈ ಸೀಸನ್‌ಗೆ ಹಿತಕರ ಎನಿಸುತ್ತದೆ.
- ಕ್ಲೋಸ್ಡ್ ಶೂಸ್ ಅಥವಾ ಸ್ಯಾಂಡಲ್ಸ್ ಧರಿಸಬೇಡಿ.
- ಫ್ರೆಶ್ ಕೂಲ್ ಫೀಲ್ ಆಗಲು ಹೈಜೀನ್ ಕಡೆ ಹೆಚ್ಚಿನ ಗಮನ ಕೊಡಿ.
ಹೀಗೆ ಬೇಸಿಗೆ ಕಳೆದ ಮೇಲೆ ಬರುತ್ತದೆ ಮಳೆಗಾಲ. ಬೇಸಿಗೆಯ ಝಳ ಬಿಡಿಸಿ ತುಂತುರು ಹನಿ ತಂಪೇನೋ ನೀಡುತ್ತದೆ, ಆದರೆ ಎಂಥ ಡ್ರೆಸ್ ಧರಿಸುವುದು ಎಂಬುದೇ ಸಮಸ್ಯೆ. ಹೀಗಾಗಿ ಈ ಕೆಳಗಿನ ಸಲಹೆಗಳನ್ನು ನೆನಪಿಡಿ :