ಭಾರತೀಯ ಸುಸಂಸ್ಕೃತಿಯ ಪ್ರತೀಕವಾದ ಸೀರೆ ಸರ್ವ ಕಾಲಕ್ಕೂ ಹೆಣ್ಣಿನ ಮೊದಲ ಆಯ್ಕೆ ಎನಿಸಿದೆ. ಉ.ಭಾರತದಲ್ಲಿ ಬನಾರಸ್‌ ಸೀರೆಯ ವರ್ಚಸ್ಸು ಹೆಚ್ಚಿದ್ದರೆ ದ. ಭಾರತದಲ್ಲಿ ಕಾಂಜೀವರಂ ರೇಷ್ಮೆ ಸೀರೆಗೆ ಸರಿಸಾಟಿ ಮತ್ತೊಂದಿಲ್ಲ. ಭಾರತೀಯ ಸಿನಿಮಾಗಳಲ್ಲಿ ಅಂದಿನ ಕಾಲದ ಹೇಮಾ, ಶ್ರೀದೇವಿಯವರಿಂದ ಇಂದಿನ ರಮ್ಯಾ, ರಾಧಿಕಾ ಪಂಡಿತ್‌ವರೆಗೂ ಸೀರೆಯಲ್ಲಿ ಮಿಂಚದ ನಾಯಕಿಯರಿಲ್ಲ.

ರೇಷ್ಮೆ ಸೀರೆಗಳ ಭಾರಿ ಸೆರಗಿನ ಬೆಡಗು ಒಂದೆಡೆಯಾದರೆ, ಕಾಟನ್‌ ಸೀರೆಗಳ ಸರಳ ರಮ್ಯತೆ ಮತ್ತೊಂದೆಡೆ. ಇಷ್ಟಲ್ಲದೆ ಪೂ. ಭಾರತದ ಟ್ಯಾಂಜೈಲ್‌, ಬಂಗಾಳಿ ಸೀರೆ, ಅದರಲ್ಲಿನ ಕಾಂತಾ ವರ್ಕ್‌, ಗುಜರಾತ್‌ನ ಘರ್‌ ಚೋಲಾ ಅಥವಾ ಪಾಟ್ನಾದ ಪಟೋಲ ಸೀರೆಗಳ ಐಸಿರಿಯ ಕುರಿತು ಏನೆಂದು ಹೇಳುವುದು? ತಾಯಿಯಿಂದ ಮಗಳಿಗೆ ಸಾಂಪ್ರದಾಯಿಕ ಪರಂಪರೆಯ ಉಡುಗೊರೆಯಾಗಿ ಸಿಗುವ ರೇಷ್ಮೆ ಸೀರೆಗಳು ರೂಪುಗೊಳ್ಳಲು ಕೆಲವು ತಿಂಗಳು ಮಾತ್ರವಲ್ಲ ಒಮ್ಮೊಮ್ಮೆ 12 ವರ್ಷಗಳೇ ಬೇಕಾಗುತ್ತವೆ.

ಭಾರತದಲ್ಲಂತೂ ಸೀರೆ ಎಂಬುದು ಒಂದೇ, ಆದರೆ ಅದರ ರೂಪ ಅತಿ ವಿಶಿಷ್ಟ, ಅನೇಕ. ಇದನ್ನು ಒಪ್ಪ ಓರಣದಿಂದ ನಾಜೂಕಾಗಿ ಉಡುವ ಕ್ರಮ ಸೀರೆಯಲ್ಲಿನ ಸರಿಸಾಟಿಯಿಲ್ಲದ ಬೆಡಗಿಗೆ ಸಾಕ್ಷಿ.

ಆಧುನಿಕ ರೆಡಿಮೇಡ್‌ ಸೀರೆ

ಇದನ್ನು ಅಂಗವಸ್ತ್ರ, ಪಂಚೆಯಂತೆ ಉಡುವ ಕ್ರಮ ಇರುವಂತೆಯೇ, ಸೆರಗು ಇಳಿಬಿಟ್ಟು, ಬ್ರೊಕೇಡ್‌ ಸಿಗಿಸುವ ನಯನಾಜೂಕು ಸಹ ಉಂಟು. ಸದಾ ಹಿಂಭಾಗದಲ್ಲಿ ಸೆರಗನ್ನು ಇಳಿ ಬಿಡುವುದು ಸಾಮಾನ್ಯವಾದರೆ, ಕೆಲವು ಕಡೆ ಮುಂಭಾಗದಲ್ಲೂ ಇರುತ್ತದೆ. ಒಮ್ಮೊಮ್ಮೆ 2 ಬಟ್ಟೆಗಳನ್ನು ಹೊಲಿದು ಸಿದ್ಧಪಡಿಸಿರುವುದೂ ಉಂಟು. ಇತ್ತೀಚಿನ ಆಧುನಿಕ ಟ್ರೆಂಡ್‌ಗೆ ತಕ್ಕಂತೆ ರೆಡಿಮೇಡ್ ಸೀರೆಗಳೂ ದೊರೆಯುತ್ತಿವೆ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ನಿರ್ವಹಿಸುವ ಎಗ್ಸಿಕ್ಯೂಟಿವ್ಸ್ ಸಹ, ಅಫಿಶಿಯಲ್ ಸೂಟ್‌ ತರಹ ಬಲು ನಾಜೂಕಾಗಿ 5 ಗಜದ ಫೋಲ್ಡ್‌ ಸ್ಟಿಚ್ಡ್ ಸೀರೆಯನ್ನು ರೆಡಿಮೇಡ್‌ ಪ್ಯಾಂಟ್‌ ತರಹ ಬಳಸುತ್ತಿದ್ದಾರೆ. ಉಡಲು ಬಳಸಲು ಬಲು ಆರಾಮದಾಯಕ ಎನಿಸುವ ಈ ಸೀರೆ, ಯಾವುದೇ ರಗಳೆ ಇಲ್ಲದೆ ಕಂಫರ್ಟೆಬಲ್ ಎನಿಸುತ್ತದೆ. ಕಾರ್ಪೊರೇಟ್‌ ಜಗತ್ತು ಇದಕ್ಕೆ ಒಂದು ಹೊಸ ಸ್ವರೂಪವನ್ನೇ ನೀಡಿದೆ. ಇದರ ಮೂಲ ರೂಪ ಸೀರೆಯ ತರಹವೇ ಇದ್ದರೂ, ತುಸು ಕ್ರಿಯೇಟಿವ್ ‌ಬದಲಾವಣೆಗಳು ಅಗತ್ಯವಾಗಿವೆ. ಇದರಲ್ಲಿ ಜಿಪ್‌ ಆನ್‌ ಸೀರೆ, ಜೀನ್ಸ್ ಮೇಲೆ ಸೀರೆ, ಸೀರೆ ವಿತ್‌ ಜ್ಯಾಕೆಟ್‌ ಇತ್ಯಾದಿ ವಿಶಿಷ್ಟವೆನಿಸುತ್ತವೆ.

ಸೀರೆ ವಿತ್‌ ಜ್ಯಾಕೆಟ್‌ನಲ್ಲಿ, ಸೀರೆ ಪ್ಲೇನ್‌ ಬಣ್ಣದ್ದಾಗಿದ್ದರೆ.... ಅದರ ಮೇಲಿನ ಜ್ಯಾಕೆಟ್‌ ಕಾಂಟ್ರಾಸ್ಟ್ ಬಣ್ಣದ್ದು. ಪಾಕೆಟ್‌ನಲ್ಲಿ ಬಟನ್‌ಅಥವಾ ಪ್ಲೇವರ್‌ ಫ್ರಂಟ್‌ ಇರುತ್ತದೆ. ಎಲ್ಲಕ್ಕೂ ಮೇಲೆ ಕುತ್ತಿಗೆಯಲ್ಲಿ ಪ್ಲೇವರ್‌ ಸ್ಕಾರ್ಫ್‌ ಉಂಟು. ಇದರಲ್ಲಿ ಮುಂಭಾಗದಿಂದ ಕ್ಲೋಸ್‌ ಆಗಿರುವ ಜ್ಯಾಕೆಟ್‌ ಮತ್ತು ಬಟನ್‌ವುಳ್ಳ ಜ್ಯಾಕೆಟ್‌ ಸಹ ಉಂಟು.

ಇಂಡೋವೆಸ್ಟರ್ನ್‌ ಫ್ಯೂಷನ್‌ ಕಾರ್ಪೊರೇಟ್‌ ಜಗತ್ತು ಸೀರೆಗೆ ಕೊಟ್ಟಿರುವ ಮತ್ತೊಂದು ವಿಕಲ್ಪ ಎಂದರೆ, ಸೀರೆಗೆ ಸೆರಗನ್ನು ಬೇರೆಯಾಗಿ ಜೋಡಿಸುವ ಅವಕಾಶ! ಇದು ಒಂದು ವಿಧದಲ್ಲಿ ಕ್ಲಾಸಿಕ್‌ ಬಿಸ್‌ನೆಸ್‌ ಜ್ಯಾಕೆಟ್‌ಸ್ಕರ್ಟ್‌ನ ಕಾಂಬಿನೇಷನ್‌ ಆಗಿದೆ. ಇದರಲ್ಲಿ ಮುಂಭಾಗದಿಂದ ಸೆರಗನ್ನು ಎಡ ಭುಜದ ಕಡೆಗೆ ಬರುವಂತೆ ಮಾಡಲಾಗಿದೆ. ಇಂಡೋವೆಸ್ಟರ್ನ್‌ ಫ್ಯೂಷನ್‌ವುಳ್ಳ ಈ ಸೀರೆಗಳನ್ನು ಕರೋಲ್‌ ಬಾಗ್‌ ಸ್ಯಾರಿ ಹೌಸ್‌ ಮಳಿಗೆಯು ಕಾರ್ಪೊರೇಟ್‌ ಜಗತ್ತಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ