ಕೋಲ್ಕತಾ, ಚಂಡೀಘಡ ಮತ್ತು ದೆಹಲಿಯ ನಂತರ, ಸ್ಪರ್ಧೆಯ ನಾಲ್ಕನೆ ಹಂತ ಬೆಂಗಳೂರಿನಲ್ಲಿ ಪ್ರಾದೇಶಿಕ ಸುತ್ತಿನೊಂದಿಗೆ ಆರಂಭವಾಯ್ತು. ಈ ಹಿನ್ನೆಲೆಯಲ್ಲಿ ಭಾರತದ ಮುಂದಿನ ಸೂಪರ್‌ ಮಾಡೆಲ್ ‌ಆಗುವ, ಜೀವನದಲ್ಲಿ ಒಮ್ಮೆ ಬರುವ ಅವಕಾಶದಲ್ಲಿ ಭಾಗವಹಿಸಲು ನಗರದ ಯುವಕ ಯುವತಿಯರ ದಂಡು ಇತ್ತೀಚೆಗೆ ಫೀನಿಕ್ಸ್ ಮಾರ್ಕೆಟ್‌ ಸಿಟಿಯಲ್ಲಿ ನೆರೆದಿತ್ತು. `ಫ್ಯಾಷನ್‌ ಹಬ್‌' ಈ ಉತ್ಸಾಹಿ ಯುವ ಸಮುದಾಯದರಿಂದ ತುಂಬಿತ್ತು.

ಮ್ಯಾಕ್ಸ್ ನ ಸಹಯೋಗದೊಂದಿಗೆ ಎಲಿಟ್‌ 18 ರಿಂದ 23 ವರ್ಷ ವಯಸ್ಸಿನ ಸಾವಿರಾರು ಹುಡುಗ ಹಡುಗಿಯರಿಗೆ, ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ ಮತ್ತು ಈ ಮೂಲಕ ತಮ್ಮ ನೆಚ್ಚಿನ ವಿಶ್ವಮಟ್ಟದ ರೂಪದರ್ಶಿಗಳಾದ ಸಿಂಡಿ ಕ್ರಾರ್ಪ್‌, ಸ್ಟೆಫಾನಿ ಸೆಯ್‌ ಮೌರ್‌, ಗಿಸೆಲ್ ‌ಬಂಡ್ಚೆನ್‌, ಸಿಗ್ರಿಡ್‌ ಆಗ್ರೆನ್‌ ಮತ್ತು ಕಾನ್ಸ್ಟೆನ್ಸ್ ಜಂಬ್ಲೊಂಸ್ಕಿಯಂಥವರನ್ನು ಅನುಸರಿಸುವ ಅವಕಾಶ ಒದಗಿಸಿತ್ತು. ಫ್ಯಾಷನ್‌ ಲೋಕದ ದಿಗ್ಗಜರಾದ ಮಾರ್ಕ್‌ ರಾಬಿನ್‌ ಸನ್‌, ಸ್ಯಾಂಡಿನ್‌ಪಿಂಟೊ ಮತ್ತು ಮ್ಯಾಕ್ಸ್ ನ ಕಾರ್ಯನಿರ್ನಾಹಕ ನಿರ್ದೇಶಕ ವಸಂತ್‌ ಕುಮಾರ್‌ ಅವರನ್ನೊಳಗೊಂಡ ಹೆಸರಾಂತ ವ್ಯಕ್ತಿಗಳು ತೀರ್ಪುಗಾರರಾಗಿದ್ದರು. ಸ್ಪರ್ಧಿಗಳ ರಾಂಪ್ ನಡಿಗೆ, ಮೊದಲ ಬಾರಿಯ ಪ್ರಭಾ ಮತ್ತು ಫೋಟೋಜೆನಿಕ್‌ ನೋಟಗಳಂತಹ ಅಂಶಗಳನ್ನು ಆಧರಿಸಿ ಆಯ್ಕೆ ಮಾಡಲಾಯಿತು.

ಚಂಡೀಘಡ, ದೆಹಲಿ, ಕೋಲ್ಕತಾ ಹಾಗೂ ಬೆಂಗಳೂರಿನ ನಂತರ, ಈ ಪ್ರಾದೇಶಿಕ ಆಯ್ಕೆಯ ಅಂತಿಮ ಸುತ್ತು ಮುಂಬೈನಲ್ಲಿ ಜರುಗಲಿದೆ. ಈ ಪೈಕಿ ಆಯ್ಕೆಯಾಗುವ 20 ಸ್ಪಧಿಗಳು (10 ಹುಡುಗರು ಮತ್ತು ಹುಡುಗಿಯರು) ಮುಂಬೈನಲ್ಲಿ ನಡೆಯುವ ರಾಷ್ಟ್ರೀಯ ಆಯ್ಕೆಯಲ್ಲಿ ಭಾಗವಹಿಸುವರು. ನಂತರ ಅಂತಿಮ ಸುತ್ತಿಗೆ ಆಯ್ಕೆಯಾದವರು ಫ್ಯಾಷನ್‌ ಲೋಕದ ಗುರುಗಳಾದ ಮಾರ್ಕ್‌ ರಾಬಿನ್‌ ಸನ್‌ ರಂತಹ ಖ್ಯಾತ ರೂಪದರ್ಶಿಗಳೊಂದಿಗೆ `ರಾಷ್ಟ್ರೀಯ ಪೂರ್ವ ತಯಾರಿ ಸಪ್ತಾಹ'ದಲ್ಲಿ ಭಾಗಹಿವಸುತ್ತಾರೆ. ಈ ಸುತ್ತಿನಲ್ಲಿ ಸ್ಪರ್ಧಿಗಳಿಗೆ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ. ವಿಜೇತರು ಚೀನಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಅಂತಿಮ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ ಮತ್ತು ಎಲಿಟ್‌ ಏಜೆನ್ಸಿಯಿಂದ 3 ವರ್ಷಗಳ ಕೆಲಸದ ಒಪ್ಪಂದ ಪಡೆಯಲಿದ್ದಾರೆ. ಈ ಉಪಕ್ರಮದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಮ್ಯಾಕ್ಸ್ ನ ಕಾರ್ಯ ನಿರ್ವಾಹಕ ನಿರ್ದೇಶಕ ವಸಂತ್‌ ಕುಮಾರ್‌, ``ಎಲಿಟ್‌ ಮಾಡೆಲ್ ಲುಕ್‌ ಇಂಡಿಯಾ 2014ರ ಚಾಲನೆಯೊಂದಿಗೆ, `ಮ್ಯಾಕ್ಸ್' ಭಾರತದ ಮಹತ್ವಾಕಾಂಕ್ಷಿ ರೂಪದರ್ಶಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಬೆಂಗಳೂರಿನಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಗಮನಿಸಿದ್ದೇವೆ ಮತ್ತು ಭಾರತದ ಮುಂದಿನ ಸೂಪರ್‌ ಮಾಡೆಲ್‌ಗಾಗಿ ನಡೆಸುತ್ತಿರುವ ಈ ಆಯ್ಕೆಗಳು, ಫ್ಯಾಷನ್‌ ಲೋಕದಲ್ಲಿ ಏಳ್ಗೆಯನ್ನು ನಿರೀಕ್ಷಿಸುತ್ತಿರುವ ಮಹತ್ವಾಕಾಂಕ್ಷಿ ರೂಪದರ್ಶಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ನೆರವಾಗುತ್ತದೆ ಎಂದು ನಂಬಿದ್ದೇವೆ,'' ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಮ್ಯಾಕ್ಸ್ ಇಎಂಎಲ್ ಇಂಡಿಯಾ 2014ರ ಯೋಜನಾ ಮುಖ್ಯಸ್ಥ ಮಾರ್ಕ್‌ ರಾಬಿನ್‌ ಸನ್‌, ``ಫ್ಯಾಷನ್‌ ಕ್ಷೇತ್ರದಲ್ಲಿ 1990ರಲ್ಲಿ ಭಾರತದಲ್ಲಿದ್ದ ಮಹತ್ತರ ಗುರುತು ಇಂದು ಇಲ್ಲ. ಭಾರತ ಸೂಪರ್‌ ಮಾಡೆಲ್‌ಗಳ ಕೊರತೆಯನ್ನು ಎದುರಿಸುತ್ತಿದೆ. ಮ್ಯಾಕ್ಸ್ ಮತ್ತು ಎಲಿಟ್‌ ಮಾಡೆಲ್‌ಗಳಾಗಲು ಬಯಸುತ್ತಿರುವ ಯುವ ಸಮುದಾಯಕ್ಕೆ ಅತ್ಯುತ್ತಮ ಅವಕಾಶ ಒದಗಿಸುತ್ತದೆ,'' ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ