ಬಾಡಿ ಸಪೋರ್ಟ್‌ಗಾಗಿ ಪ್ರತಿಯೊಬ್ಬರೂ ಇನ್ನರ್‌ವೇರ್‌ ಧರಿಸುವುದು ಅಗತ್ಯವಾಗಿರುತ್ತದೆ. ಆದರೆ ಮಹಿಳೆಯರಿಗೆ ಫ್ಯಾಷನ್‌ ದೃಷ್ಟಿಯಿಂದಲೂ ಇನ್ನರ್‌ವೇರ್‌ನ ಬಾಳಿಕೆ ಅತ್ಯಗತ್ಯ.

ಆದರೆ ಬೇಸಿಗೆಯ ಕಾಲದಲ್ಲಿ ಶರೀರದಿಂದ ಹರಿಯುವ ಬೆವರು ಹಿಂಸೆಯನ್ನುಂಟು ಮಾಡುತ್ತದೆ. ಇನ್ನರ್‌ವೇರ್‌ನ ಬಿಗಿತ ಚರ್ಮ ಸಂಬಂಧಿ ಕಾಯಿಲೆಗಳಿಂದ ಬೆವರು ಸಾಲೆ, ರಾಶೆಸ್‌ ಮುಂತಾದವನ್ನು ಉಂಟುಮಾಡುತ್ತದೆ. ಹೀಗಾಗದಿರಲು ಬೇಸಿಗೆ ಕಾಲಕ್ಕಾಗಿ ಸೂಕ್ತವಾದ ಇನ್ನರ್‌ವೇರ್‌ನ್ನು ಆರಿಸಿಕೊಳ್ಳುವುದು ಅಗತ್ಯವಾಗುತ್ತದೆ. ಈ ಕಾಲದಲ್ಲಿ ಮಹಿಳೆಯರು ಎಂತಹ ಇನ್ನರ್‌ವೇರ್‌

ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಯೋಣ ಬನ್ನಿ.

ಸೂಕ್ತ ಫ್ಯಾಬ್ರಿಕ್‌ ಆಯ್ಕೆ : ಬೇಸಿಗೆ ಕಾಲದಲ್ಲಿ ಸೂಕ್ತ ಫ್ಯಾಬ್ರಿಕ್ಸ್ ನ ಅಂಡರ್‌ ಗಾರ್ಮೆಂಟ್ಸ್ ಆರಿಸಿಕೊಳ್ಳುವುದು ಬಹಳ ಮುಖ್ಯ. ಕೆಲವು ಮಹಿಳೆಯರು ಚಳಿಗಾಲದಲ್ಲಿ ಧರಿಸುವ ಇನ್ನರ್‌ವೇರ್‌ಗಳನ್ನೇ ಬೇಸಿಗೆಯಲ್ಲೂ ಬಳಸುತ್ತಾರೆ. ಆದರೆ ಈ ಎರಡು ಕಾಲಗಳಲ್ಲಿ ಬೇರೆ ಬೇರೆ ಫ್ಯಾಬ್ರಿಕ್‌ನ ಇನ್ನರ್‌ವೇರ್‌ ಧರಿಸಬೇಕು. ಚಳಿಗಾಲದಲ್ಲಿ ಬಳಸುವ ನೈಲಾನ್‌ ಅಥವಾ ಸಿಂಥೆಟಿಕ್‌ಫ್ಯಾಬ್ರಿಕ್‌ನ ಇನ್ನರ್‌ವೇರ್‌ನ್ನು ಬೇಸಿಗೆಯಲ್ಲಿ ಧರಿಸಿದರೆ, ದೇಹದಲ್ಲಿ ಬೆವರು ಹೆಚ್ಚಾಗುತ್ತದೆ. ಇದರಿಂದ ಬೆವರು ಗುಳ್ಳೆಗಳು ಏಳುವ ಸಂಭವವಿರುತ್ತದೆ. ಬೇಸಿಗೆಯಲ್ಲಿ ಕಾಟನ್‌, ಲೈಕ್ರಾ ಅಥವಾ ನೆಟ್‌ನ ಅಂಡರ್‌ ಗಾರ್ಮೆಂಟ್ಸ್ ನ್ನು ಧರಿಸುವುದರಿಂದ ಚರ್ಮಕ್ಕೆ ಸಾಕಷ್ಟು ಆ್ಯಕ್ಸಿಜನ್‌ ಸಿಗುತ್ತದೆ.

ಪ್ಯಾಡೆಡ್‌ ಇನ್ನರ್‌ವೇರ್‌ ಬೇಡ : ಇಂದಿನ ದಿನಗಳಲ್ಲಿ ಪ್ಯಾಡೆಡ್‌ ಇನ್ನರ್‌ವೇರ್‌ನ ಕ್ರೇಜ್‌ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ ಬೇಸಿಗೆಯಲ್ಲಿ ಇದು ಚರ್ಮದ ಆರೋಗ್ಯಕ್ಕೆ ಖಂಡಿತ ಸೂಕ್ತವಲ್ಲ. ಅಂತಹದನ್ನು ಹಾಕಲೇಬೇಕಾದಾಗ ಹತ್ತಿಯಿಂದ ತಯಾರಾದುದನ್ನು ಮಾತ್ರ ಬಳಸಿ.

ಲೇಯರ್ಡ್‌ ಅಂಡರ್‌ ಗಾರ್ಮೆಂಟ್ಸ್ ಬೇಡ : ಕೆಲವು ಬಾರಿ ಮಹಿಳೆಯರು ಅನಗತ್ಯವಾಗಿ ಒಂದರ ಮೇಲೊಂದು ಇನ್ನರ್‌ವೇರ್‌ಧರಿಸುವುದುಂಟು. ಉದಾಹರಣೆ ಬ್ರಾ ಮೇಲೆ ಸ್ಪೆಗೆಟಿ ಧರಿಸುವುದು ಅಥವಾ ಪ್ಯಾಂಟೀಸ್‌ ಮೇಲೆ ಶೇಪ್‌ ವೇರ್‌ ಧರಿಸುವುದು ಇತ್ಯಾದಿ. ಇದರಿಂದ 2 ರೀತಿಯ ನಷ್ಟವಿರುತ್ತದೆ. ಮೊದಲನೆಯದು, ಬಿಸಿಲು ಕಾಲದಲ್ಲಿ ಇದು ಶರೀರವನ್ನು ಮತ್ತಷ್ಟು ಬಿಸಿಯಾಗಿರುತ್ತದೆ ಮತ್ತು ಎರಡನೆಯದೆಂದರೆ ಇವುಗಳ ಬಿಗಿತದಿಂದ ಒಂದು ಬಗೆಯ ಹಿಂಸೆಯಾಗುತ್ತದೆ.

ಸ್ಟ್ರಾಪೀ ಮತ್ತು ಸೀವಿ್‌ಸ್‌ ಪ್ಯಾಟರ್ನ್‌ : ಇತ್ತೀಚೆಗೆ ಕೆಲವು ಬ್ರಾಂಡ್‌ಗಳು ಸ್ಟ್ರಾಪೀ ಮತ್ತು ಸ್ಲೀವ್ ಲೆ‌ಸ್ ಅಂಡರ್‌ ಗಾರ್ಮೆಂಟ್ಸ್ ಗಳನ್ನು ತಯಾರಿಸುತ್ತಿದ್ದಾರೆ. ಇವು ಬೇಸಿಗೆ ಕಾಲಕ್ಕೆ ಬಹು ಉಪಯೋಗವಾಗಿರುತ್ತವೆ. ಇವುಗಳ ಆರಾಮದಾಯಕ ಫಿಟಿಂಗ್‌ ಶರೀರಕ್ಕೆ ಸರಿಯಾದ ಶೇಪ್‌ ನೀಡುತ್ತದೆ ಮತ್ತು ಸ್ಟ್ರಾಪೀ ಡಿಸೈನ್‌ನಿಂದ ಗಾಳಿಯು ಚರ್ಮದವರೆಗೆ ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ.

ಬ್ರಾ ಕೊಳ್ಳುವಾಗ ಗಮನಿಸಿ

ಬೇಸಿಗೆಯಲ್ಲಿ ಅಂಡರ್‌ವೇರ್‌ ಇಲ್ಲದಿರುವ ಬ್ರಾಗಳನ್ನೇ ಧರಿಸಿ. ಟೀಶರ್ಟ್‌ ಬ್ರಾ ಈ ಕಾಲಕ್ಕೆ ಉತ್ತಮ ಆಯ್ಕೆ. ಇದು ಒಳ್ಳೆಯ ಫಿಟಿಂಗ್‌ನ ಜೊತೆಗೆ ಆರಾಮದಾಯಕ ಆಗಿರುತ್ತದೆ. ಯಾವುದೇ ಟಾಪ್‌ನೊಂದಿಗೆ ಇದನ್ನು ಧರಿಸಬಹುದಾಗಿರುತ್ತದೆ.

ಈ ಕಾಲದಲ್ಲಿ ಡೀಪ್‌ ಬ್ಯಾಕ್‌ ಕಟ್‌ ಡ್ರೆಸ್‌ನೊಂದಿಗೆ ಬ್ಯಾಕ್‌ಲೆಸ್‌ ಬ್ರಾ ಧರಿಸಬಹುದು. ಬ್ಯಾಕ್‌ಲೆಸ್‌ ಬ್ರಾವನ್ನು ಕೇವಲ ಒಂದು ಬಾರಿ ಮಾತ್ರ ಧರಿಸಲು ಸಾಧ್ಯ ಎಂದು ಮಹಿಳೆಯರು ಭಾವಿಸುತ್ತಾರೆ. ಆದರೆ ಅದು ಹಾಗಲ್ಲ,  ಒಂದು ಬ್ಯಾಕ್‌ಲೆಸ್‌ ಬ್ರಾವನ್ನು 50 ಸಲ ಬಳಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ