ಭಾರತೀಯ ಹಬ್ಬಗಳು ಇದೀಗ ಸಾಂಪ್ರದಾಯಿಕತೆಗಿಂತ ಹೆಚ್ಚಾಗಿ ಆಧುನಿಕ ಸ್ಟೈಲ್‌‌ನತ್ತ ಬಾಗತೊಡಗಿವೆ. ವರ್ಷವಿಡೀ ತಮ್ಮ ದೈನಂದಿನ ಉಡುಗೆಗಳನ್ನು ಎಂದಿನಂತೆ ಸಾಧಾರಣ ಇರಿಸಿಕೊಳ್ಳುವ ಮಹಿಳೆಯರು, ಹಬ್ಬಗಳ ಸಂದರ್ಭದಲ್ಲಿ ವಿಶೇಷ ಸ್ಟೈಲ್‌ನಲ್ಲಿ ಮಿಂಚಲು ಬಯಸುತ್ತಾರೆ. ಫೆಸ್ಟಿವ್‌ ಸೀಸನ್‌ ಸಡಗರ ಎಂದರೆ ಹಾಗೇ ಅಲ್ಲವೇ?

ಈ ಸಲದ ಸೀಸನ್‌ಗೆ ರೆಡ್‌, ಮೆಜೆಂತಾ, ಆರೆಂಜ್‌, ರಾಯಲ್ ಬ್ಲೂ, ಪಿಸ್ತಾ ಗ್ರೀನ್‌ ಮೊದಲಾದ ಕಲರ್ಸ್‌ ಶಿಮರ್‌ ಎಲಿಮೆಂಟ್ ಜೊತೆ ಜನಪ್ರಿಯವಾಗುತ್ತಿದೆ.

ಈ ಕುರಿತಾಗಿ ಡ್ರೆಸ್‌ ಡಿಸೈನರ್ಸ್‌ ಹೇಳುವುದೆಂದರೆ, ಫೆಸ್ಟಿವ್ ಡ್ರೆಸೆಸ್‌ನಲ್ಲಿ ಗುಂಪಿನಿಂದ ತಮ್ಮನ್ನು ಡಿಫರೆಂಟ್‌ ಆಗಿ ತೋರಿಸುವಂಥ ಡ್ರೆಸ್‌ಗಳೇ ಬೇಕೆಂದು ಎಲ್ಲರೂ ಬಯಸುತ್ತಾರೆ. ಡ್ರೆಸ್‌ನಲ್ಲಿ ಟ್ರೆಡಿಶನ್‌ ಲುಕ್ಸ್ ಜೊತೆ ಮಾಡರ್ನ್‌ ಸ್ಟೈಲ್‌ನ ವೇರ್ ಜನರ ಅಭಿರುಚಿ ಬದಲಿಸುತ್ತಿದೆ. ಹೆಂಗಸರು ಮಾತ್ರವಲ್ಲ, ಗಂಡಸರೂ ಸಹ ತಮ್ಮ ಉಡುಗೆಗಳಲ್ಲಿ ಬದಲಾವಣೆ ಬಯಸುತ್ತಾರೆ. ಇಂಡಿಯನ್‌ ಡ್ರೆಸ್‌ ಮೇಲೆ ಇಂಡೋವೆಸ್ಟರ್ನ್‌ ಡ್ರೆಸ್‌ ಬಹಳ ಗಾಢ ಪ್ರಭಾವ ಬೀರುತ್ತಿದೆ. ಪ್ರತಿಯೊಬ್ಬರೂ ಈ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ.

ಫೆಸ್ಟಿವ್‌ ಸೀಸನ್‌ನಲ್ಲಿ ಲಹಂಗಾ ಮತ್ತು ಟಾಪ್‌ಗಳ ಪ್ರಯೋಗ ಕ್ರಿಯೇಟಿವ್ ಎನಿಸಿದೆ. ಇದು ಒಂದು ಬಗೆಯ  ಎವರ್‌ ಗ್ರೀನ್‌ ಡ್ರೆಸ್. ಇದರಿಂದ ಕಲರ್‌, ಫ್ಯಾಬ್ರಿಕ್‌, ಡಿಸೈನ್‌, ಕಸೂತಿ, ಸ್ಟೈಲ್‌‌ಗಳ ಕುರಿತಾಗಿ ಎಲ್ಲಾ ವಿಧದ ಪ್ರಯೋಗಗಳೂ ನಡೆಯುತ್ತಿವೆ.

ಬನಾರಸ್‌ ದುಪಟ್ಟಾ, ಮಿರರ್‌ ವರ್ಕ್‌, ಫುಲ್ಕಾರಿ ವರ್ಕ್‌ನ ಎಂಬ್ರಾಯಿಡರಿ ಇತ್ಯಾದಿಗಳು ದಿನೇ ದಿನೇ  ಜನಪ್ರಿಯವಾಗುತ್ತಿವೆ. ಸ್ಕರ್ಟ್‌ ಕುರ್ತಿಗಳು ಈ ಫೆಸ್ಟಿವ್‌ ಸೀಸನ್‌ನಲ್ಲಿ ಹೆಚ್ಚು ಚಾಲ್ತಿಯಲ್ಲಿರುತ್ತವೆ.

ಇಂಡೋವೆಸ್ಟರ್ನ್‌ನಲ್ಲಿ ಹೊಸ ಪ್ರಯೋಗ

ಗಂಡಸರ ಸಾಂಪ್ರದಾಯಿಕ ಉಡುಗೆಗಳಲ್ಲಿ ಪಂಚೆ ಅಥವಾ ಧೋತಿಗೆ ಎವರ್‌ ಗ್ರೀನ್‌ ಮಹತ್ವವಿದೆ. ಇದನ್ನೇ ಮಹಿಳೆಯರಿಗೂ ಅಳವಡಿಕೆಯಾಗುವಂತೆ ಮಾಡಿದರೆ ಅದು ಆಧುನಿಕ ಟ್ರೆಂಡ್‌ ಆಗಲಿದೆ. ಇದು ಭಾರತದ ಭೌಗೋಳಿಕ ಪ್ರಾಂತ್ಯಗಳಿಗೆ ತಕ್ಕಂತೆ ಬದಲಾಗುತ್ತಾ ಇರುತ್ತದೆ ಈ ಕಾರಣದಿಂದಲೇ ಪಂಚೆ ಹಾಗೂ ಸೀರೆಗಳು ವಿಭಿನ್ನ ರೂಪದಲ್ಲಿ ಬದಲಾಗುತ್ತದೆ. ಒಂದು ವಿಧದಲ್ಲಿ ನೋಡಿದರೆ, ಕೇವಲ ಹಬ್ಬದ ಸೀಸನ್‌ನಲ್ಲಿ ಮಾತ್ರವಲ್ಲದೆ, ಪಂಚೆಗಳು ನಮ್ಮ ಸಂಸ್ಕೃತಿಯ ಅವಿಚಿನ್ನ ಅಂಗವಾಗಿವೆ. ಇಂಡೋವೆಸ್ಟರ್ನ್‌ ಸ್ಟೈಲ್‌ನಲ್ಲಿ ಇದೇ ಧೋತಿಯನ್ನು ವಿಭಿನ್ನ ಗೆಟಪ್‌ನಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಫ್ಯಾಷನ್ನಿನ ವಿಭಿನ್ನ ಸ್ಟೈಲ್ ರಂಗುಗಳನ್ನು ಧೋತಿ ಮೇಲೆ ಪ್ರಯೋಗಿಸುತ್ತಿದ್ದಾರೆ.

ಇದನ್ನೇ ಧೋತಿ ಸ್ಯಾರಿ ಎನ್ನುತ್ತಾರೆ. ಈ ಧೋತಿ ಡ್ರೇಪ್‌ನಲ್ಲಿ ಉದ್ದನೆಯ ಟಾಪ್‌ ಲೆಗ್ಗಿಂಗ್‌ ಜೊತೆ ಧರಿಸಲಾಗುತ್ತದೆ. ಸೀರೆ  ದುಪಟ್ಟಾ ಎರಡನ್ನೂ ಒಟ್ಟಾಗಿ ತೆಗೆದುಕೊಳ್ಳುತ್ತಾರೆ. ದುಪಟ್ಟಾ ಸೀರೆಯ ಮುಂದುವರಿದ ಭಾಗವಾಗಿ ಕಂಡುಬರುವಂತೆ, ಅದನ್ನು ಸ್ಪೆಷಲ್ ಆಗಿ ಡ್ರೇಪ್‌ ಮಾಡುತ್ತಾರೆ.

ವೇರ್‌ ಸ್ಲೀವ್‌ನ ಟ್ರೆಂಡ್‌ ಸಹ ಈ ಸಲದ ಹಬ್ಬದ ಸೀಸನ್‌ನಲ್ಲಿ ಕಾಣಸಿಗುತ್ತದೆ. ಎಥ್ನಿಕ್‌ ಲುಕ್ಸ್ ವುಳ್ಳ ಸ್ಕರ್ಟ್‌ ಜೊತೆಗೆ ಕ್ರಾಪ್ ಟಾಪ್‌ ಧರಿಸತೊಡಗಿದ್ದಾರೆ. ಇದು ಹಬ್ಬದ ಮಧ್ಯೆ ಒಂದು ವಿಭಿನ್ನ ಲುಕ್‌ ಕೊಡುತ್ತದೆ. ಲಾಂಗ್‌ ಕೇಪ್‌ ಒಂದು ತರಹದ ಫ್ರಂಟ್ ಓಪನ್‌ ಜ್ಯಾಕೆಟ್‌ನಂತೆ ಇರುತ್ತದೆ. 3 ಪೀಸ್‌ನಲ್ಲಿ ತಯಾರಾಗುವ ಈ ಡ್ರೆಸ್‌ ಪ್ಯಾಂಟ್‌,  ಸ್ಕರ್ಟ್‌, ಜಂಪ್‌ ಸೂಟ್‌ ಇತ್ಯಾದಿ ಯಾವುದೇ ಕಾಂಬಿನೇಶನ್‌ ಜೊತೆ ಧರಿಸಬಹುದಾಗಿದೆ. ಎಷ್ಟೋ ಸಲ ಪ್ರಸಿದ್ಧ ಸೆಲೆಬ್ರಿಟಿಗಳನ್ನು ನೋಡಿ ಅಥವಾ ಗೆಳತಿಯರನ್ನು ಗಮನಿಸಿ ಜನ ಅವರ ತರಹವೇ ತಮ್ಮ ಲುಕ್ಸ್ ಬದಲಾಯಿಸಿಕೊಳ್ಳಲು ಬಯಸುತ್ತಾರೆ. ಆದರೆ ಈ ಕ್ರಮ ಸರಿಯಲ್ಲ. ಪ್ರತಿಯೊಬ್ಬರ ಫಿಗರ್‌, ಫೇಸ್‌, ಪರ್ಸನಾಲಿಟಿ ಬೇರೆ ಬೇರೆಯೇ ಇರುತ್ತದೆ. ಹಾಗಿದ್ದ ಮೇಲೆ ಡ್ರೆಸ್‌ ಆರಿಸುವಾಗ ಮುಂಜಾಗರೂಕತೆ ವಹಿಸಬೇಕಾದುದು ಅತ್ಯಗತ್ಯ. ಆದ್ದರಿಂದ ನಿಮ್ಮ ಡ್ರೆಸ್‌ ಆರಿಸುವಾಗ ನಿಮ್ಮ ಫಿಗರ್‌, ಕಾಂಪ್ಲೆಕ್ಷನ್‌, ಕಂಫರ್ಟ್‌ಗಳ ಕಡೆ ಹೆಚ್ಚಿನ ಗಮನಕೊಡಿ. ಹಾಗಾಗಿ, ಹಬ್ಬಗಳ ಈ ಸೀಸನ್‌ನಲ್ಲಿ ನೀವು ಸಹ ನಿಮ್ಮ ಮನಮೆಚ್ಚಿದ ಇಂಡೋವೆಸ್ಟರ್ನ್‌ ಡ್ರೆಸ್ ಆರಿಸಿಕೊಳ್ಳಿ ಹಾಗೂ ಆಫ್‌ ಬೀಟ್‌ ಲುಕ್‌ ಗಳಿಸಿ ಎಲ್ಲರನ್ನೂ ಚಕಿತಗೊಳಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ