ಬೇಕ್ಡ್ ನೂಡಲ್ಸ್

ಸಾಮಗ್ರಿ : 2-3 ಮೊಟ್ಟೆ, 1 ಕಪ್‌ ಬೆಂದ ನೂಡಲ್ಸ್, ಅರ್ಧರ್ಧ ಕಪ್‌ ಬೆಂದ ಹಸಿ ಬಟಾಣಿ, ಬೀನ್ಸ್, ಹೆಚ್ಚಿದ ಹೂಕೋಸು, ಎಲೆಕೋಸು, ತುರಿದ ಕ್ಯಾರೆಟ್‌, ಚೀಸ್‌, 2-2 ಈರುಳ್ಳಿ, ಟೊಮೇಟೊ, 3-4 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ, ಅರ್ಧ ಸೌಟು ಎಣ್ಣೆ, ಒಗ್ಗರಣೆ ಸಾಮಗ್ರಿ.

ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ಕರಿಬೇವು ಹಾಕಿದ ನಂತರ ಹೆಚ್ಚಿದ ಈರುಳ್ಳಿ, ಆಮೇಲೆ ಹಸಿಮೆಣಸು ಹಾಕಿ ಬಾಡಿಸಿ. ನಂತರ ಸಣ್ಣಗೆ ಹೆಚ್ಚಿದ ಎಲೆಕೋಸು, ಹೂಕೋಸು, ಕ್ಯಾರೆಟ್‌ ಇತ್ಯಾದಿಗಳನ್ನು ಒಂದೊಂದಾಗಿ ಸೇರಿಸುತ್ತಾ ಬಾಡಿಸಿ. ಆಮೇಲೆ ಟೊಮೇಟೊ ಸೇರಿಸಿ ಬಾಡಿಸಬೇಕು. ಅಷ್ಟರಲ್ಲಿ ಪಕ್ಕದ ಒಲೆಯಲ್ಲಿ ಸಣ್ಣ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ. ಇದಕ್ಕೆ ಒಡೆದು ಗೊಟಾಯಿಸಿದ ಮೊಟ್ಟೆ ಹಾಕಿ ಬೇಗ ಬೇಗ ಕೈಯಾಡಿಸುತ್ತಾ ಭುರ್ಜಿ ತಯಾರಿಸಿ. ಇದನ್ನು ಪಕ್ಕದ ಬಾಣಲೆಗೆ ಹಾಕಿ, ಬೆಂದ ಬೀನ್ಸ್, ಬಟಾಣಿ ಸಹ ಸೇರಿಸಿ. ಕೊನೆಯಲ್ಲಿ ಉಪ್ಪು, ಮೆಣಸು, ಬೆಂದ ನೂಡಲ್ಸ್ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ಇದಕ್ಕೆ ನಿಂಬೆಹಣ್ಣು ಹಿಂಡಿಕೊಂಡು, ಮೇಲೆ ಚೀಸ್‌ ತುರಿದು ಹಾಕಿ. ಓವನ್‌ ಪ್ರೂಫ್‌ ಡಿಶ್‌ನಲ್ಲಿ ಇದನ್ನಿರಿಸಿ, ಚೀಸ್‌ ಕರಗುವಂತೆ ಬೇಕ್‌ ಮಾಡಿ ಸವಿಯಲು ಕೊಡಿ.

cookry-2

ಕ್ರೀಮೀ ಎಗ್‌ ಡಿಲೈಟ್‌

ಸಾಮಗ್ರಿ : 1 ಕಪ್‌ ಕ್ರೀಂ, 4 ಚಮಚ ಚೀಸ್‌, ಒಂದಿಷ್ಟು ಹೆಚ್ಚಿದ ಎಲೆಕೋಸು, ಕ್ಯಾರೆಟ್‌, ಕ್ಯಾಪ್ಸಿಕಂ, ಈರುಳ್ಳಿ, ಟೊಮೇಟೊ, 2 ಬೆಂದ ಮೊಟ್ಟೆ, 1-2 ಬ್ರೆಡ್‌ ಸ್ಲೈಸ್‌, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.

ವಿಧಾನ : ತುರಿದ ಚೀಸ್‌ಗೆ ಕ್ರೀಂ ಬೆರೆಸಿ ಗೊಟಾಯಿಸಿ. ಈ ಮಿಶ್ರಣದ ಬಟ್ಟಲಿಗೆ ಹೆಚ್ಚಿದ ಎಲ್ಲಾ ತರಕಾರಿ, ಉಪ್ಪು, ಮೆಣಸು ಸೇರಿಸಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ. ಒಂದೆರಡು ಬಟ್ಟಲಿಗೆ ಇದನ್ನು ಹಾಕಿರಿಸಿ, ಮೇಲೆ ತುಂಡರಿಸಿದ ಬೆಂದ ಮೊಟ್ಟೆ ಇರಿಸಬೇಕು. ಬಟ್ಟಲಿನ ಬದಿಯಲ್ಲಿ ಬ್ರೆಡ್‌ ಸ್ಲೈಸ್‌ ಇರಿಸಬೇಕು. ಪೋರ್ಕ್‌ ಜೊತೆ ಸವಿಯಲು ಕೊಡಿ.

ಸೆಮೋಲೀನಾ ಫ್ರೂಟ್‌ ಕೇಕ್‌

 

ಸಾಮಗ್ರಿ : 1-1 ಕಪ್‌ ಮೈದಾ, ಸಣ್ಣ ರವೆ, ಬೆಣ್ಣೆ, ಗೋಡಂಬಿ, ಪಿಸ್ತಾ, ಬಾದಾಮಿ, ದ್ರಾಕ್ಷಿ, ಏಪ್ರಿಕಾಟ್‌ ಚೂರು (ಒಟ್ಟಾಗಿ), 3 ಮೊಟ್ಟೆ, 2 ಕಪ್‌ ಸಕ್ಕರೆ, ಅರ್ಧ ಸಣ್ಣ ಚಮಚ ವೆನಿಲಾ ಎಸೆನ್ಸ್, 2 ಚಮಚ ಕೋಕೋ ಪೌಡರ್‌, 1 ಸಣ್ಣ ಚಮಚ ಬೇಕಿಂಗ್‌ ಪೌಡರ್.

ವಿಧಾನ : ಸಕ್ಕರೆಯನ್ನು ಪುಡಿ ಮಾಡಿಕೊಂಡು ಅದಕ್ಕೆ ಬೆಣ್ಣೆ ಬೆರೆಸಿ ಚೆನ್ನಾಗಿ ಬೀಟ್‌ ಮಾಡಿ. ನಂತರ ಚೆನ್ನಾಗಿ ಗೊಟಾಯಿಸಿದ ಮೊಟ್ಟೆ ವೆನಿಲಾ ಎಸೆನ್ಸ್ ನ್ನು ಇದಕ್ಕೆ ಬೆರೆಸಿರಿ. ಆಮೇಲೆ ಒಟ್ಟಿಗೆ ಜರಡಿಯಾಡಿದ ರವೆ, ಮೈದಾ, ಬೇಕಿಂಗ್‌/ಕೋಕೋ ಪೌಡರ್‌ನ್ನು ಇದಕ್ಕೆ ಬೆರೆಸಿಕೊಳ್ಳಿ. ಆಮೇಲೆ ಗೋಡಂಬಿ, ದ್ರಾಕ್ಷಿಯ ಚೂರು ಸೇರಿಸಿ ಮೃದು ಮಿಶ್ರಣ ಕಲಸಿಡಿ. ಇದನ್ನು ಜಿಡ್ಡು ಸವರಿದ ಓವನ್‌ ಡಿಶ್ಶಿಗೆ ರವಾನಿಸಿ, ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 180 ಡಿಗ್ರಿಯಲ್ಲಿ 25-30 ನಿಮಿಷ ಬೇಕ್‌ ಮಾಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ